Subscribe to Updates

    Get the latest creative news from FooBar about art, design and business.

    What's Hot

    ತುಳು ಸಾಹಿತಿ ಶ್ರೀಮತಿ ಕುಶಲಾಕ್ಷಿ ವಿ. ಕುಲಾಲ್ ಇವರಿಗೆ ಪ್ರಶಸ್ತಿ ಪ್ರದಾನ

    July 16, 2026

    ಬನಶಂಕರಿ ನಾಣಿ ಅಂಗಳದಲ್ಲಿ ‘ಮಣ್ಣಿನ ಮಗ’ | ಜುಲೈ 19 

    July 16, 2026

    ಮನೆ-ಮನಗಳನ್ನು ಬೆಸೆಯುವ ‘ಗೃಹ ಸಲ್ಲಾಪ’ – ಶ್ರೀ ಎಸ್. ಜೆ. ಪ್ರಸಾದ್

    July 16, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಮಂಗಳೂರು ಚೇತನಾ ಬಾಲವಿಕಾಸ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ
    Yakshagana

    ಮಂಗಳೂರು ಚೇತನಾ ಬಾಲವಿಕಾಸ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ

    December 21, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ವಿಠೋಬಾ ದೇವಸ್ಥಾನ ರಸ್ತೆಯಲ್ಲಿರುವ ವಿಶೇಷ ವಿಕಲಚೇತನ ವಿದ್ಯಾರ್ಥಿಗಳಿಗಾಗಿರುವ ಸೇವಾ ಭಾರತಿ (ರಿ.)ಯ ವತಿಯಿಂದ ನಡೆಸಲ್ಪಡುವ ಚೇತನಾ ಬಾಲವಿಕಾಸ ಕೇಂದ್ರದ ವಿದ್ಯಾರ್ಥಿಗಳಿಂದ ಮಂಗಳೂರಿನ ಪುರಭವನದಲ್ಲಿ ದಿನಾಂಕ 15-12-2023ರಂದು ವಾರ್ಷಿಕೋತ್ಸವದ ಪ್ರಯುಕ್ತ ‘ಜಾಂಬವತಿ ಕಲ್ಯಾಣ’ವು ಪ್ರೇಕ್ಷಕರ ಮನ ಗೆದ್ದು ವಿಜೃಂಭಣೆಯಿಂದ ಜರಗಿತು.

    ವಿಕಲ ಚೇತನ ಮಕ್ಕಳಾದರೂ ಪರಾವಲಂಬನೆ ಇಲ್ಲದೇ ಸ್ವತಂತ್ರರಾಗಿ ನಟಿಸಿ ಪುರಭವನದಲ್ಲಿ ತುಂಬಿ ತುಳುಕಿದ ಕಲಾಪ್ರೇಮಿಗಳನ್ನು ನಿಬ್ಬೆರಗುಗೊಳಿಸಿದರು. ನೃತ್ಯ, ಹಾಡು, ಕುಣಿತ… ಹೀಗೆ ಬೇರೆ ಬೇರೆ ಕಾರ್ಯಕ್ರಮಗಳ ಮಧ್ಯೆಯೂ ಯಕ್ಷಗಾನ ರಂಜಿಸಿತು. ನೃತ್ಯ, ಅಭಿನಯ, ಕಲಾವಿದರ ಹೊಂದಾಣಿಕೆ ಎಲ್ಲೂ ರಾಜಿ ಮಾಡಿಕೊಳ್ಳದೇ ಸಶಕ್ತರಾಗಿ ; ಆತ್ಮಾಭಿಮಾನದಿಂದ ಪಾತ್ರಗಳೇ ಆಗಿ ಮೆರೆದು .. ಸಮಾಜದಲ್ಲಿ ತಮಗೆ ಯಾರದೇ ಅನುಕಂಪ ಬೇಡ; ಪ್ರೋತ್ಸಾಹ ನೀಡಿ ಸಾಕು… ಎನ್ನುವ ಹಾಗೆ ಯಕ್ಷಗಾನವನ್ನು ಕಳೆಗಟ್ಟಿಸಿದರು. ಜಾಂಬವಂತನಾಗಿ – ದೇವೇಶ, ಶ್ರೀಕೃಷ್ಣನಾಗಿ – ಶೀತಲ್, ಬಲರಾಮನಾಗಿ – ಕಿರಣ್, ನಾರದನಾಗಿ – ದಿವ್ಯಜ್ಯೋತಿ ಮತ್ತು ಜಾಂಬವತಿಯಾಗಿ – ಅನುಷಾ ಪಾತ್ರ ನಿರ್ವಹಣೆ ಮಾಡಿದರು.

    ಈ ಸಂಸ್ಥೆಯ ವಿಶ್ವಸ್ಥರಾದ ಶ್ರೀ ವಿನೋದ್ ಶೆಣೈ ಅವರು ಈ ವಿದ್ಯಾರ್ಥಿಗಳ ಬೆನ್ನು ತಟ್ಟಿ ಧೈರ್ಯ ತುಂಬಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಪ್ರೀತಾರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ನಿರ್ದೇಶಕರಾಗಿ ವರ್ಕಾಡಿ ರವಿ ಅಲೆವೂರಾಯರು ಇದ್ದರು. ಸಹಕಾರಿಗಳಾಗಿ ವಿಜಯಲಕ್ಷ್ಮೀ ಯಲ್.ಎನ್., ಶ್ರೀಮತಿ ವಾಣಿ, ಶ್ರೀಮತಿ ಚಂಪಾ, ಶ್ರೀ ನರಸಿಂಹರಾಜು ವಿದ್ಯಾರ್ಥಿಗಳನ್ನು ಮುನ್ನಡೆಸಿದ್ದರು. ಯೂಶಾನ್ ಎ೦. ಪೂಜಾರಿ ವೇಷಭೂಷಣದಲ್ಲಿ ಸಹರಿಸಿದ್ದರು. ಹಿಮ್ಮೇಳ ಕಲಾವಿದರಾಗಿ ಲಕ್ಷೀನಾರಾಯಣ ಹೊಳ್ಳ, ಸ್ಕ೦ದ ಕೊನ್ನಾರ್, ವರ್ಕಾಡಿ ಮಧುಸೂದನ ಅಲೆವೂರಾಯ ಮಕ್ಕಳಿಗೆ ಸಾಥ್ ನೀಡಿದರು.

    ವಿಕಲ ಚೇತನರಾದರೂ ಉಳಿದವರಿಗೆ ಬಿಟ್ಟಿಲ್ಲ… ಇವರಿಗೆ ಸಮಾಜದ ಬೆಂಬಲ ಬೇಕು… ಎಂದು ಜನರಾಡುತ್ತಾ ಸಾಗುವುದು ಕಂಡುಬರುತ್ತಿತ್ತು. ಹೌದು! ಬನ್ನಿ ಬಾಂಧವರೇ ‘ಅವರಿಗಾಗಿ ಮಿಡಿಯೋಣ. ಅವರೇ ಸಿದ್ಧಪಡಿಸಿದ ಗೃಹ ಬಳಕೆಗೆ, ನಿತ್ಯೋಪಯೋಗಕ್ಕಾಗಿ ಬಳಸುವ ವಸ್ತುಗಳನ್ನು ಖರೀದಿಸಿ ಅವರಿಗೆ ಆರ್ಥಿಕ ಬೆಂಬಲ ನೀಡೋಣ. ದೇವರಂತಹಾ ಈ ಮಕ್ಕಳಿಗೆ ದೇವರ ಅನುಗ್ರಹವಿರಲಿ ಎಂದು ಕೋರೋಣ. ದಯವಿಟ್ಟು ಇದನ್ನು ವಿಶೇಷವಾಗಿ ವಿಶೇಷ ಚೇತನ ಮಕ್ಕಳಿಗಾಗಿ ಪ್ರಕಟಿಸಿ… ನಮ್ಮೀ ಅಳಿಲ ಸೇವೆಯನ್ನು ಅರ್ಪಿಸೋಣ.

    Share. Facebook Twitter Pinterest LinkedIn Tumblr WhatsApp Email
    Previous Articleಅಂಕಿತ ಪುಸ್ತಕ ಹಾಗೂ ಬುಕ್ ಬ್ರಹ್ಮ ಸಹಯೋಗದಲ್ಲಿ ಕೃತಿಗಳ ಲೋಕಾರ್ಪಣಾ ಸಮಾರಂಭ
    Next Article ‘ಕೊಗ್ಗ ದೇವಣ್ಣ ಕಾಮತ್‌’ ಪ್ರಶಸ್ತಿಗೆ ಏಳ್ ಜಿತ್ ಸದಾನಂದ ಪ್ರಭು ಆಯ್ಕೆ | ಪ್ರಶಸ್ತಿ ಪ್ರದಾನ ಜನವರಿ 28
    roovari

    Add Comment Cancel Reply


    Related Posts

    ‘ಯಕ್ಷಸಾಧಕ’ ಪ್ರಶಸ್ತಿಗೆ ಪ್ರಸಿದ್ಧ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಆಯ್ಕೆ

    July 16, 2026

    ವಿಶೇಷ ಲೇಖನ | ಬಹುಮುಖ ಪ್ರತಿಭೆಯ ಸಾಹಿತಿ ಕೊಳಂಬೆ ಪುಟ್ಟಣ್ಣ ಗೌಡರು

    July 15, 2026

    ಬೆಂಗಳೂರು ಅಲಯೆನ್ಸ್ ವಿಶ್ವವಿದ್ಯಾನಿಲಯದಲ್ಲಿ ತುಳು ಯಕ್ಷಗಾನ ಕಾರ್ಯಾಗಾರ – ವಿಚಾರಗೋಷ್ಠಿ

    July 15, 2026

    ಯಕ್ಷನಂದನ ವರ್ಷಾಚರಣೆಯಲ್ಲಿ ಆಂಗ್ಲ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನ

    July 15, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.