ಸಿದ್ಧಾಪುರ : ಗೌತಮ ಹೆಗಡೆ ಮುಗದೂರು ಇವರ ಸಂಯೋಜನೆಯಲ್ಲಿ ದಿಗ್ಗಜ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ಶನೀಶ್ವರ ಮಹಾತ್ಮೆ’ ಅದ್ದೂರಿ ಪೌರಾಣಿಕ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 28 ಏಪ್ರಿಲ್ 2025ರಂದು ಸಂಜೆ 6-00 ಗಂಟೆಗೆ ಸಿದ್ಧಾಪುರದ ಸಿದ್ಧಿ ವಿನಾಯಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ.
ಹಿಮ್ಮೇಳದಲ್ಲಿ ಭಾಗವತರು – ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು, ಮದ್ದಳೆ – ಶ್ರೀ ಪರಮೇಶ್ವರ ಭಂಡಾರಿ ಕರ್ಕಿ, ಚಂಡೆ – ಶ್ರೀ ಗಣೇಶ್ ಗಾಂವ್ಕರ್ ಹಳುವಳ್ಳಿ ಮತ್ತು ಕುಮಾರ ಶ್ರೀವತ್ಸ ಗುಡ್ಡೆದಿಂಬ ಹಾಗೂ ಮುಮ್ಮೇಳದಲ್ಲಿ ಶ್ರೀ ಕೃಷ್ಣಯಾಜಿ ಬಳ್ಕೂರು, ಶ್ರೀ ಅಶೋಕ ಭಟ್ ಸಿದ್ದಾಪುರ, ಶ್ರೀ ಸಂಜಯ ಬೆಳೆಯೂರು, ಶ್ರೀ ಚಂದ್ರಹಾಸ ಗೌಡ ಹೊಸಪಟ್ಟಣ, ಶ್ರೀ ಮಹಾಭಲೇಶ್ವರ ಗೌಡ, ಶ್ರೀ ನಾಗೇಶ ಕುಳಿಮನೆ, ಶ್ರೀ ನಾಗೇಂದ್ರ ಮೂರೂರು, ಶ್ರೀ ಶ್ರೀಧರ ಅಣಲಗಾರ ಮತ್ತು ಸ್ತ್ರೀ ಪಾತ್ರದಲ್ಲಿ ಶ್ರೀ ಶಂಕರ ಹೆಗಡೆ ನಿಲ್ಕೋಡು, ಶ್ರೀ ಶಿವಕುಮಾರ ಶಿರಳಗಿ, ಶ್ರೀ ದೀಪಕ ಭಟ ಕುಂಕೀ ಸಹಕರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀ ಮಹಾಭಲೇಶ್ವರ ಗೌಡ ಹಾರೆಗೋಪ್ಪಾ ಇವರಿಗೆ ಗೌರವ ಸನ್ಮಾನ ಮಾಡಲಾಗುವುದು.