ಬೆಂಗಳೂರು : ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಹನುಮಗಿರಿ ಮೇಳದವರಿಂದ ದಿನಾಂಕ 05 ಏಪ್ರಿಲ್ 2025ರಿಂದ 08 ಏಪ್ರಿಲ್ 2025ರವರೆಗೆ ಬೆಂಗಳೂರಿನ ವಿವಿಧೆಡೆ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ದಿನಾಂಕ 05 ಏಪ್ರಿಲ್ 2025ರಂದು ಮಧ್ಯಾಹ್ನ 2-00 ಗಂಟೆಗೆ ಬೆಂಗಳೂರಿನ ಯಕ್ಷಗಾನಾಭಿಮಾನಿ ವಕೀಲರು ಇವರ ವತಿಯಿಂದ ತರಳಬಾಳು ಕೇಂದ್ರದ ಸಭಾಂಗಣದಲ್ಲಿ ‘ಕಾಯಕಲ್ಪ ದ್ರೌಪದಿ ಪ್ರತಾಪ’, ದಿನಾಂಕ 06 ಏಪ್ರಿಲ್ 2025ರಂದು ಸಂಜೆ 3-00 ಗಂಟೆಗೆ ಬೆಂಗಳೂರಿನ ಹುಳಿಮಾವು ಸರಸ್ವತೀಪುರಂನ ತ್ರಿಗುಣಾತ್ಮಿಕಾ ಯಕ್ಷ ಬಳಗ ಇವರ ವತಿಯಿಂದ ತ್ರಿಗುಣಾತ್ಮಿಕಾ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಭಾಂಗಣದಲ್ಲಿ ‘ನಮೋ ರಘುವಂಶ ದೀಪ’, ದಿನಾಂಕ 07 ಏಪ್ರಿಲ್ 2025ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಯಕ್ಷಗಾನ ಅಭಿಮಾನಿಗಳು ಇವರ ವತಿಯಿಂದ ಮಲ್ಲೇಶ್ವರಂ ಸರ್ಕಾರಿ ಶಾಲಾ ಮೈದಾನದಲ್ಲಿ ‘ಶನೀಶ್ವರ ಮಹಾತ್ಮೆ’, ದಿನಾಂಕ 08 ಏಪ್ರಿಲ್ 2025ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಯಕ್ಷಗಾನ ಅಭಿಮಾನಿಗಳು ಇವರ ವತಿಯಿಂದ ಮಲ್ಲೇಶ್ವರಂ ಸರ್ಕಾರಿ ಶಾಲಾ ಮೈದಾನದಲ್ಲಿ ‘ಸಾಕೇತ ಸಾಮ್ರಾಜ್ಞಿ’ ಎಂಬ ಪ್ರಸಂಗದ ಯಕ್ಷಗಾನ ಬಯಲಾಟ ನಡೆಯಲಿವೆ.