Subscribe to Updates

    Get the latest creative news from FooBar about art, design and business.

    What's Hot

    ಸಿರಿಬಾಗಿಲು ಪ್ರತಿಷ್ಠಾನದಲ್ಲಿ ವಿಶೇಷ ಚಿಂತನ ಮಂಥನ ಕಾರ್ಯಕ್ರಮ

    July 13, 2026

    ಸಾಲಿಗ್ರಾಮ ಗುರುನರಸಿಂಹ ದೇಗುಲದಲ್ಲಿ ‘ಅರ್ಥಾಂಕುರ-24’ ಸರಣಿ ತಾಳಮದ್ದಳೆ

    July 13, 2026

    ಕನ್ನಡದ ವೈವಿಧ್ಯಮಯ ಸಂಗೀತ ಲೋಕವನ್ನು ತೆರೆದಿಟ್ಟ ‘ಕನ್ನಡ ಗಾನಗುಚ್ಛ’ ಕಾರ್ಯಕ್ರಮ

    July 13, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಸಿರಿಬಾಗಿಲು ಪ್ರತಿಷ್ಠಾನದಿಂದ ‘ಯಕ್ಷಗಾನ ಪ್ರಸಂಗ ರಚನೆ ಕಮ್ಮಟ’ | ಜುಲೈ 12
    Workshop

    ಸಿರಿಬಾಗಿಲು ಪ್ರತಿಷ್ಠಾನದಿಂದ ‘ಯಕ್ಷಗಾನ ಪ್ರಸಂಗ ರಚನೆ ಕಮ್ಮಟ’ | ಜುಲೈ 12

    July 11, 2026Updated:July 13, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ದಿನಾಂಕ 12 ಜುಲೈ 2026ರ ಆದಿತ್ಯವಾರ ಬೆಳಗ್ಗೆ 10-00 ಗಂಟೆಗೆ ಶ್ರೀ ಕೇಶವಾನಂದ ಭಾರತೀ ಸ್ಮೃತಿ ಮಂದಿರದಲ್ಲಿ ಯಕ್ಷಗಾನ ಪ್ರಸಂಗ ರಚನೆ ಕಮ್ಮಟ ಹಾಗೂ ಯಕ್ಷಗಾನ ಪ್ರಸಂಗ ಕಾವ್ಯ ಲೋಕಾರ್ಪಣೆ ನಡೆಯಲಿದೆ.

    ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಫಣಿಗಿರಿ ಪ್ರತಿಷ್ಠಾನ ಶಿರೂರು ಇವರ ಪ್ರಕಾಶನದ ಶ್ರೀ ಶ್ರೀಧರ ಡಿ.ಎಸ್.ರವರ ವೀರ ತಪಸ್ವಿ ಪರಶುರಾಮ ಕಾದಂಬರಿ ಆಧಾರದಲ್ಲಿ ಗಡಿನಾಡು ಕಾಸರಗೋಡಿನ ಹಿರಿಯ ಪ್ರಸಂಗಕರ್ತರಾದ ಶ್ರೀ ಶೇಡಿಗುಮ್ಮೆ ವಾಸುದೇವ ಭಟ್ ವಿರಚಿಸಿದ ‘ವೀರ ತಪಸ್ವಿ ಪರಶುರಾಮ’ ಯಕ್ಷಗಾನ ಪ್ರಸಂಗ ಕಾವ್ಯ ಕೃತಿಯನ್ನು ಕರ್ನಾಟಕ ಸರಕಾರದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಡಾ. ಟಿ. ಶ್ಯಾಮ್ ಭಟ್ ಐ.ಎ.ಎಸ್. ಇವರು ಲೋಕಾರ್ಪಣೆಗೂಳಿಸಲಿದ್ದಾರೆ.

    ಅಧ್ಯಕ್ಷತೆಯನ್ನು ಶ್ರೀ ಶ್ರೀಧರ ಡಿ. ಯಸ್. ಹಿರಿಯ ಪ್ರಸಂಗಕರ್ತರು ವಹಿಸಲಿದ್ದು, ಹಿರಿಯ ಪ್ರಸಂಗಕರ್ತರು. ಸಂಶೋಧಕರು ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹಿರಿಯ ಪ್ರಸಂಗಕರ್ತರು ಶ್ರೀ ಶೇಡಿಗುಮ್ಮೆ ವಾಸುದೇವ ಭಟ್, ಫಣಿಗಿರಿ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಉಮೇಶ ಶಿರೂರು ಇವರು ಉಪಸ್ಥಿತರಿರುತ್ತಾರೆ. ಆ ಬಳಿಕ ಡಾ. ಕಬ್ಬಿನಾಲೆ ವಸಂತ ಭಾರದ್ವಾಜರವರ ಮಾರ್ಗದರ್ಶನದಲ್ಲಿ ಇಡೀ ದಿನ ಯಕ್ಷಗಾನ ಪ್ರಸಂಗ ರಚನೆ ಕಮ್ಮಟ ನಡೆಯಲಿದೆ.

    ಕಮ್ಮಟದ ವಿಶೇಷ ಆಹ್ವಾನಿತರಾಗಿ ಯುವ ಪ್ರಸಂಗಕರ್ತರಾಗಿರುವ ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು, ಚಂದ್ರಹಾಸ ಕಯ್ಯಾರು, ಅಮೋಘ ಶಂಕರ ಉಜಿರೆ, ರಾಜಗೋಪಾಲ್ ಕನ್ಯಾನ, ಉಮೇಶ್ ಶಿರೂರು, ಯೋಗೀಶ್ ರಾವ್ ಚಿಗುರುಪಾದೆ, ದೀವಿತ್ ಪೆರಾಡಿ, ಶ್ರೀಮತಿ ಶುಭಾಶಯ, ಮಯೂರ ನಾಯ್ಕ, ನಾಗೇಂದ್ರ ಹೆಬ್ಬಾರ್ ಮೈಸೂರು, ಡಾ. ಶ್ರೀಕೃಷ್ಣ ಭಟ್ಟ ಸುಣ್ಣಂಗುಳಿ, ಉದಯ ಕುಮಾರ್ ಕುಂಜತ್ತೂರು, ಶ್ರೀ ಗಿರೀಶ ಹೆಗ್ಡೆ ಧರ್ಮಸ್ಥಳ, ಶ್ರೀ ವರ್ಧನ್ ಎಂ. ಸುರತ್ಕಲ್ ಮುಂತಾದವರು ಭಾಗವಹಿಸಲಿದ್ದಾರೆ. ಈ ಅಧ್ಯಯನ ಯೋಗ್ಯ ಕಾರ್ಯಕ್ರಮಕ್ಕೆ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿರಿಬೇಕಾಗಿ ಸಿರಿಬಾಗಿಲು ಪ್ರತಿಷ್ಠಾನವು ತಿಳಿಸಿದೆ.

    baikady roovari workshop yakshagana
    Share. Facebook Twitter Pinterest LinkedIn Tumblr WhatsApp Email
    Previous Articleಕ.ಸಾ.ಪ.ದ ‘ಶ್ರೀವಿಜಯ ಸಾಹಿತ್ಯ ದತ್ತಿ ಪ್ರಶಸ್ತಿ’ಗೆ ಲೇಖಕರ ಆಯ್ಕೆ
    Next Article ‘ನೃತ್ಯಶಂಕರ’ ಸಮೂಹ ನೃತ್ಯಸರಣಿ 13ರಲ್ಲಿ ನೃತ್ಯ ಪ್ರದರ್ಶನ | ಜುಲೈ 13
    roovari

    Add Comment Cancel Reply


    Related Posts

    ಸಿರಿಬಾಗಿಲು ಪ್ರತಿಷ್ಠಾನದಲ್ಲಿ ವಿಶೇಷ ಚಿಂತನ ಮಂಥನ ಕಾರ್ಯಕ್ರಮ

    July 13, 2026

    ಸಾಲಿಗ್ರಾಮ ಗುರುನರಸಿಂಹ ದೇಗುಲದಲ್ಲಿ ‘ಅರ್ಥಾಂಕುರ-24’ ಸರಣಿ ತಾಳಮದ್ದಳೆ

    July 13, 2026

    ಕನ್ನಡದ ವೈವಿಧ್ಯಮಯ ಸಂಗೀತ ಲೋಕವನ್ನು ತೆರೆದಿಟ್ಟ ‘ಕನ್ನಡ ಗಾನಗುಚ್ಛ’ ಕಾರ್ಯಕ್ರಮ

    July 13, 2026

    ಪರಿಚಯ ಪ್ರತಿಷ್ಠಾನದ ನೂತನ ರಂಗ ಮಂದಿರದ ಶಿಲಾನ್ಯಾಸ ಸಮಾರಂಭ

    July 13, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.