ಮಂಜನಾಡಿ : ಭಾರತಿ ಕಲಾ ಆರ್ಟ್ಸ್ ಪೂಪಾಡಿಕಲ್ಲ್ ಇದರ ಸಂಯೋಜನೆಯಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹ ಮತ್ತು ಯಕ್ಷಗಾನ ಪ್ರದರ್ಶನವನ್ನು ದಿನಾಂಕ 30-06-2024ರಿಂದ 07-07-2024ರವರೆಗೆ ಸಂಜೆ 6-00 ಗಂಟೆಗೆ ಪೂಪಾಡಿಕಲ್ಲ್ ಶ್ರೀ ನಾಗದೇವತಾ ರಕ್ತೇಶ್ವರೀ ಸನ್ನಿಧಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 30-06-2024ರಂದು ಯಕ್ಷಬಳಗ ಹೊಸಂಗಡಿ ಇದರ ಕಲಾವಿದರಿಂದ ತಾಳಮದ್ದಳೆ ‘ಭ್ರಗುಶಾಪ’, ದಿನಾಂಕ 01-07-2024ರಂದು ಶ್ರೀ ಶಂಕರನಾರಾಯಣ ಯಕ್ಷಗಾನ ಪ್ರತಿಷ್ಠಾನ ಕೋಳ್ಯೂರು ಇದರ ಕಲಾವಿದರಿಂದ ತಾಳಮದ್ದಳೆ ‘ಕರ್ಮಬಂದ’, ದಿನಾಂಕ 02-07-2024ರಂದು ಶ್ರೀ ವಿಶ್ವಭಾರತಿ ಯಕ್ಷ ಕಲಾ ಮಿಲನ ಕೋಟೆಕಾರು ಮಡೂರು ಇವರಿಂದ ತಾಳಮದ್ದಳೆ ‘ಪ್ರತಿಸ್ವರ್ಗ’, ದಿನಾಂಕ 03-07-2024ರಂದು ಶ್ರೀ ಮಹಾಲಿಂಗೇಶ್ವರ ಮಹಿಳಾ ಯಕ್ಷಗಾನ ಮಂಡಳಿ, ಕುಂಜತ್ತೂರು ಇವರಿಂದ ತುಳು ತಾಳಮದ್ದಳೆ ‘ಅಂಕದ ಬೂಲ್ಯ’, ದಿನಾಂಕ 04-07-2024ರಂದು ವಿಶ್ವಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ (ರಿ.) ಮುಡಿಪು ಇವರಿಂದ ತಾಳಮದ್ದಳೆ ‘ಶಿವಭಕ್ತ ವೀರಮಣಿ’, ದಿನಾಂಕ 05-07-2024ರಂದು ಇರಾ ಶ್ರೀ ಸೋಮನಾಥೇಶ್ವರ ಯಕ್ಷಗಾನ ಕಲಾ ಸಂಘ ಇರಾ, ಕುಂಡಾವು ಇವರಿಂದ ತಾಳಮದ್ದಳೆ ‘ಕರ್ಣಾರ್ಜುನ’, ದಿನಾಂಕ 06-07-2024ರಂದು ಶ್ರೀ ಭ್ರಾಮರಿ ಕಲಾವೃಂದ ಅಶೋಕನಗರ ಮಂಗಳೂರು ಇದರ ಮಹಿಳಾ ಸದಸ್ಯೆಯರಿಂದ ತಾಳಮದ್ದಳೆ ‘ಜಾಂಬವತಿ ಕಲ್ಯಾಣ’ ಮತ್ತು ದಿನಾಂಕ 07-07-2024ರಂದು ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ‘ತರಣಿಸೇನ-ಇಂದ್ರಜಿತು’ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ.