ತೆಕ್ಕಟ್ಟೆ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಲಕ್ಷ್ಮೀಶ ಪಾವಂಜೆ ಪ್ರಾಯೋಜನೆಯಲ್ಲಿ ಧಮನಿ ಹಾಗೂ ದಿಮ್ಸಾಲ್ ಸಹಯೋಗದೊಂದಿಗೆ ಸಿನ್ಸ್ 1999 ಶ್ವೇತಯಾನದ 12ನೇ ಕಾರ್ಯಕ್ರಮ ತೆಕ್ಕಟ್ಟೆ ಹಯಗ್ರೀವದಲ್ಲಿ ದಿನಾಂಕ 29-03-2024 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ವೇದಮೂರ್ತಿ ಸುಬ್ರಹ್ಮಣ್ಯ ಭಟ್ ತೂಕೂರು ಮಾತನಾಡಿ “ಸಂಸ್ಥೆಯ 25ರ ಸಂಭ್ರಮದಲ್ಲಿ 60 ಸಂವತ್ಸರದ ಸಂಭ್ರಮವನ್ನು ಆಚರಿಸುತ್ತಿರುವುದು ನಿಜಕ್ಕೂ ಸ್ತುತ್ಯರ್ಹ. ತೆಕ್ಕಟ್ಟೆ ಆನಂದ ಮಾಸ್ತರ್ ಯಕ್ಷಗಾನ ಕ್ಷೇತ್ರದಲ್ಲಿ ಅತ್ಯಮೋಘ ಸಾಧನೆ ಸಲ್ಲಿಸಿದವರು. ಅಂತಹ ಕ್ಷೇತ್ರದಲ್ಲಿ ಇಂತಹ ಸಂಸ್ಥೆ ಅತೀವ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಅವರ ಹೆಸರಿಗೆ ಸರಿಸಾಟಿಯಾಗಿ ನಿಂತಿರುವುದು ನಿಜಕ್ಕೂ ಹೆಮ್ಮೆ ಎನಿಸುತ್ತಿದೆ. ಧಾರ್ಮಿಕ ಕಾರ್ಯಕ್ರಮಕ್ಕೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಸಾಮ್ಯತೆ ಇದೆ. ಒಂದನ್ನು ಬಿಟ್ಟು ಇನ್ನೊಂದಿಲ್ಲ. ಕರಾವಳಿ ಭಾಗದಲ್ಲಿ ಯಕ್ಷಗಾನವನ್ನೇ ಪ್ರಧಾನವಾಗಿಸಿಕೊಂಡು ದೇಶವೇ ಗಮನಿಸುವಂತೆ ಮಾಡಿದೆ.”ಎಂದರು. ಇದೇ ಸಂದರ್ಭದಲ್ಲಿ ಶ್ರೀ ಲಕ್ಷ್ಮೀಶ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಟ್ಟಿನ ಮನೆ ವಾದಿರಾಜ ಹತ್ವಾರ್, ಉದ್ಯಮಿ ಗೋಪಾಲ ಪೂಜಾರಿ ಕುಂದಾಪುರ, ಕು. ಹರ್ಷಿತಾ ಅಮೀನ್ ಕೊಮೆ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಸಭಾಕಾರ್ಯಕ್ರಮದ ಬಳಿಕ ಗಾನ ವೈಭವ ಕಾರ್ಯಕ್ರಮ ಪ್ರಸ್ತುತಿಗೊಂಡಿತು.