ಮಂಗಳೂರು : ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ (ರಿ.) ಮಂಗಳೂರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ‘ಯುವ ಯುಗಳ ನೃತ್ಯ’ ಕಾರ್ಯಕ್ರಮವನ್ನು ದಿನಾಂಕ 21 ಫೆಬ್ರವರಿ 2025ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಸುರತ್ಕಲ್ಲಿನ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿಯ ನಿರ್ದೇಶಕರಾದ ಕರ್ನಾಟಕ ಕಲಾಶ್ರೀ ವಿದ್ವಾನ್ ಕೆ. ಚಂದ್ರಶೇಖರ ನಾವಡ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಅರುಣ ಐತಾಳ್ ಇವರು ಉದ್ಘಾಟನೆ ಮಾಡಲಿದ್ದಾರೆ.
ಸನಾತನ ನಾಟ್ಯಾಲಯದ ಗುರುಗಳಾದ ಶಾರದಾಮಣಿ ಶೇಖರ್ ಮತ್ತು ಶ್ರೀಲತಾ ನಾಗರಾಜ್ ಇವರ ಶಿಷ್ಯೆಯರಾದ ವಿದುಷಿ ಶಾರ್ವರಿ ವಿ. ಮಯ್ಯ ಮತ್ತು ವಿದುಷಿ ವಿಜಿತ ಕೆ. ಶೆಟ್ಟಿ, ನಾಟ್ಯಾರಾಧನಾ ಕಲಾ ಕೇಂದ್ರದ ಗುರು ವಿದುಷಿ ಸುಮಂಗಲಾ ರತ್ನಾಕರ್ ರಾವ್ ಇವರ ಶಿಷ್ಯೆಯರಾದ ಕುಮಾರಿ ವೃಂದಾ ರಾವ್ ಮತ್ತು ಸಮನ್ವಿತ ರಾವ್, ಗಾನ ನೃತ್ಯ ಅಕಾಡೆಮಿಯ ಗುರು ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಷ್ಯೆಯರಾದ ಕುಮಾರಿ ತ್ರಿಷಾ ಶೆಟ್ಟಿ ಮತ್ತು ಕುಮಾರಿ ಮೈತ್ರೇಯಿ ನಾವಡ, ನೃತ್ಯ ಸುಧಾ (ರಿ.) ಇದರ ಗುರು ಸೌಮ್ಯ ಸುಧೀಂದ್ರ ರಾವ್ ಇವರ ಶಿಷ್ಯೆಯರಾದ ಕುಮಾರಿ ನವ್ಯ ಭಟ್ ಮತ್ತು ಕುಮಾರಿ ಕಾವ್ಯ ಭಟ್, ಭರತಾಂಜಲಿ (ರಿ.) ಇದರ ಗುರು ಪ್ರತಿಮಾ ಶ್ರೀಧರ್ ಇವರ ಶಿಷ್ಯೆಯರಾದ ವಿದುಷಿ ಮಾನಸ ಕುಲಾಲ್ ಮತ್ತು ವಿದುಷಿ ಅದಿತಿ ಪೂಜಾರಿ, ಸೌರಭ ಕಲಾ ಪರಿಷತ್ (ರಿ.) ಇದರ ಗುರುಗಳಾದ ಡಾ. ವಿದ್ಯಾಶ್ರೀ ಇವರ ಶಿಷ್ಯೆಯರಾದ ಕುಮಾರಿ ಶ್ರಾವ್ಯ ಕೃಷ್ಣ ಮಯ್ಯ ಮತ್ತು ಕುಮಾರಿ ದೃಶ್ಯ ಬಾಲಕೃಷ್ಣ, ಶಿವಪ್ರಣಾಮ್ ಸ್ಕೂಲ್ ಆಫ್ ಡಾನ್ಸ್ (ರಿ.) ಇದರ ಗುರು ಅನ್ನಪೂರ್ಣ ರಿತೇಶ್ ಇವರ ಶಿಷ್ಯೆಯರಾದ ಕುಮಾರಿ ಹಿತ ಉಮೇಶ್ ಮತ್ತು ಕುಮಾರಿ ಕಾರುಣ್ಯ ಎಸ್., ಸವಿಜೀವನಂ ನೃತ್ಯ ಕಲಾ ಕ್ಷೇತ್ರ ಇದರ ಗುರುಗಳಾದ ಸವಿತಾ ಜೀವನ್ ಇವರ ಶಿಷ್ಯೆಯರಾದ ಕುಮಾರಿ ಧನ್ಯಶ್ರೀ ಕೇಶವ್ ಮತ್ತು ಕುಮಾರಿ ತೃಷಾ ಆರ್.ಬಿ. ಉದ್ಯಾವರ್ ಮತ್ತು ನೃತ್ಯ ಭಾರತಿ (ರಿ.) ಇದರ ಗುರುಗಳಾದ ವಿದುಷಿ ಗೀತಾ ಸರಳಾಯ ಮತ್ತು ವಿದುಷಿ ರಶ್ಮಿ ಚಿದಾನಂದ ಇವರ ಶಿಷ್ಯೆಯರಾದ ವಿದುಷಿ ಶ್ರಾವ್ಯ ಎಂ. ಭಟ್ ಮತ್ತು ಕುಮಾರಿ ದೀಪ್ತಿಶ್ರೀ ಎಸ್. ಜೋಗಿ ಇವರಿಂದ ಯುಗಳ ನೃತ್ಯ ಪ್ರಸ್ತುತಗೊಳ್ಳಲಿದೆ.