ಹಾಸನ : ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಕ್ಕಳ ಸಂಸ್ಥೆಯಾದ ಬೆಂಗಳೂರಿನ ರಂಗಕಹಳೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳ್ಳಿ ಇದರ ಮಾರ್ಗದರ್ಶನದಲ್ಲಿ ‘22ನೇ ಕುವೆಂಪು ನಾಟಕೋತ್ಸವ 2023’ ಕುವೆಂಪು ಜನ್ಮದಿನೋತ್ಸವ, ವಿಚಾರ ಸಂಕಿರಣ, ಸಾಧಕರಿಗೆ ಗೌರವಾರ್ಪಣೆ, ಚಲನಚಿತ್ರ ಪ್ರದರ್ಶನ, ಕುವೆಂಪು ಗೀತಗಾಯನಗಳು ದಿನಾಂಕ 28-12-2023ರಿಂದ 31-12-2023ರವರೆಗೆ ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ.
ದಿನಾಂಕ 28-12-2023ರಂದು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಜನಪದ ವಿದ್ವಾಂಸರಾದ ಡಾ. ಹಂಪನಹಳ್ಳಿ ತಿಮ್ಮೇಗೌಡ ಇವರು ವಹಿಸಲಿದ್ದು, ಹಾಸನ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀಮತಿ ಸತ್ಯಭಾಮ ಸಿ. ಇವರು ಉದ್ಘಾಟನೆ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಿ. ಲಕ್ಷ್ಮಣ ಇವರ ನಿರ್ದೇಶನದಲ್ಲಿ ರಂಗಕಹಳೆ ತಂಡದವರಿಂದ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ಮತ್ತು ಓಹಿಲೇಶ ಎಲ್. ನಿರ್ದೇಶನದಲ್ಲಿ ಗೌರಿಶಂಕರ ಸಾಂಸ್ಕೃತಿಕ ಕ್ರೀಡಾದತ್ತಿ ತಂಡದಿಂದ ‘ಮೋಡಣ್ಣನ ತಮ್ಮ’ ನಾಟಕ ಪ್ರದರ್ಶನ, ದಿನಾಂಕ 29-12-2023ರಂದು ಟಿ.ಎಂ. ಬಾಲಕೃಷ್ಣ ನಿರ್ದೇಶನದ ಬೆಂಗಳೂರಿನ ಬಿ.ಎಂ.ಟಿ.ಸಿ. ಸಾಂಸ್ಕೃತಿಕ ಕಲಾ ಕುಠೀರ ಅಭಿನಯಿಸುವ ‘ಯಮನ ಸೋಲು’ ಮತ್ತು ಸಿ. ಲಕ್ಷ್ಮಣ ನಿದರ್ಶನದ ರಂಗಕಹಳೆ ಕ್ರಿಯೇಷನ್ಸ್ ಅರ್ಪಿಸುವ ‘ನನ್ನ ಗೋಪಾಲ’ ಮಕ್ಕಳ ಚಲನ ಚಿತ್ರ ಪ್ರದರ್ಶನವಿದೆ. ದಿನಾಂಕ 30-12-2023ರಂದು ಬಾಲಕ ಕುವೆಂಪು ಕಿರುಚಿತ್ರ ಪ್ರದರ್ಶನ ಮತ್ತು ಮಾಲತೇಶ್ ವಿನ್ಯಾಸ, ನಿರ್ದೇಶನದ ಬೆಂಗಳೂರಿನ ಬಹುರೂಪಿ ತಂಡ ಅಭಿನಯಿಸುವ ‘ಸ್ಮಶಾನ ಕುರುಕ್ಷೇತ್ರ ನಾಟಕ ಪ್ರದರ್ಶನ.
ದಿನಾಂಕ 31-12-2023ರಂದು ಸಮಾರೋಪ ಸಮಾರಂಭವು ಹಾಸನ ಜಿಲ್ಲೆಯ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಶ್ರೀಯುತ ಜಿ. ಎಲ್. ಮುದ್ದೇಗೌಡ ಇವರ ಘನ ಉಪಸ್ಥಿತಿಯಲ್ಲಿ ನಡೆಯಲಿದೆ. ಸಂಜೆ 6 ಗಂಟೆಗೆ ಪ್ರತಿಭಾವಂತ ಮಕ್ಕಳಿಂದ ‘ಶ್ರೀ ಕುವೆಂಪು ಗೀತೆ ನಮನ’, ವಿದುಷಿ ಶ್ರೀಮತಿ ಶೈಲಜಾ ನಿರ್ದೇಶನದಲ್ಲಿ ಚನ್ನರಾಯಪಟ್ಟಣದ ನೃತ್ಯಾಂಜಲಿ ಕಲಾನಿಕೇತನ ತಂಡವರಿಂದ ಶ್ರೀ ಕುವೆಂಪು ಗೀತೆಯ ನೃತ್ಯ ರೂಪಕ ‘ಭೈರವಿ ನಾರಿ’ ಮತ್ತು ಛಾಯಾ ಭಾರ್ಗವಿ ಎಸ್.ಎಚ್. ನಿರ್ದೇಶನದ ಅದಮ್ಯ ರಂಗ ಸಂಸ್ಕೃತಿ ಟ್ರಸ್ಟ್ ತಂಡದವರಿಂದ ‘ಶೂದ್ರ ತಪಸ್ವಿ’ ಎಂಬ ನಾಟಕ ಪ್ರದರ್ಶನ ನಡೆಯಲಿದೆ.