ಕಟೀಲು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮುಲ್ಕಿ ತಾಲೂಕು ಘಟಕ ಇದರ ವತಿಯಿಂದ ‘ಪೇಜಾವರ ಸದಾಶಿವ ರಾವ್ ನೆನಪು’ ಕಾರ್ಯಕ್ರಮವನ್ನು ದಿನಾಂಕ 26 ಜನವರಿ 2025ರಂದು ಸಂಜೆ 4-00 ಗಂಟೆಗೆ ಪೇಜಾವರ ಸದಾಶಿವ ರಾಯರಿದ್ದ ಕಟೀಲಿನ ಮನೆಯಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ನಾಡಿನ ಪ್ರಸಿದ್ಧ ಬರಹಗಾರರಾದ ಡಾ. ಜನಾರ್ದನ ಭಟ್ ಇವರು ಪೇಜಾವರರ ಕುರಿತು ಮಾತನಾಡಲಿದ್ದಾರೆ. ಶ್ರೀಮತಿ ಶೈಲಜಾ ಇವರಿಂದ ಪೇಜಾವರರ ಕಥೆಯ ಓದು ಮತ್ತು ಶ್ರೀಮತಿ ಜ್ಯೋತಿ ಉಡುಪ ಮತ್ತು ಬಳಗದವರಿಂದ ಪೇಜಾವರರ ಕವಿತೆಗಳ ಗಾಯನ ನಡೆಯಲಿದೆ.