Subscribe to Updates

    Get the latest creative news from FooBar about art, design and business.

    What's Hot

    ‘ಯಕ್ಷಮಂಜರಿ’ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ ಸಂಭ್ರಮ | ಮಾರ್ಚ್ 01ರಿಂದ 08

    February 25, 2026

    ನಂದಿನಿ ನದಿಯ ಕುದ್ರುವಿನಲ್ಲಿ ಮೂಲ್ಕಿ ತಾಲೂಕು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನ | ಮಾರ್ಚ್ 01

    February 25, 2026

    ಮೇಘಮೈತ್ರಿ ದ್ವಿತೀಯ ಯುವ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಡಾ. ವೆಂಕಟೇಶ ಗುಡೆಪ್ಪನವರ ಆಯ್ಕೆ

    February 25, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಗೋವಿಂದ ದಾಸ ಕಾಲೇಜಿನಲ್ಲಿ ‘ಗಾನ ಶಾರದೆಗೆ ನಮನ… ಗುರುವಿಗೊಂದು ನಾಟ್ಯ ನಮನ’ ಕಾರ್ಯಕ್ರಮ
    Bharathanatya

    ಗೋವಿಂದ ದಾಸ ಕಾಲೇಜಿನಲ್ಲಿ ‘ಗಾನ ಶಾರದೆಗೆ ನಮನ… ಗುರುವಿಗೊಂದು ನಾಟ್ಯ ನಮನ’ ಕಾರ್ಯಕ್ರಮ

    January 28, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email



    ಸುರತ್ಕಲ್ : ಶ್ರೀ ಶಾರದಾ ನಾಟ್ಯಾಲಯ ಕುಳಾಯಿ – ಹೊಸಬೆಟ್ಟುವಿನ ವತಿಯಿಂದ ಹಿಂದೂ ವಿದ್ಯಾದಾಯಿನೀ ಸಂಘ (ರಿ), ಸುರತ್ಕಲ್‌ ಇದರ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜಿನ ಲಲಿತಕಲಾ ಸಂಘದ ಸಹಯೋಗದಲ್ಲಿ ಸಂಗೀತ ವಿದುಷಿ ಶೀಲಾ ದಿವಾಕರ್‌ ಇವರಿಗೆ ಅರ್ಪಿಸಿದ ಗಾನ ಶಾರದೆಗೆ ನಮನ… ಗುರುವಿಗೊಂದು ನಾಟ್ಯ ನಮನ ಕಾರ್ಯಕ್ರಮವು ದಿನಾಂಕ 26 ಜನವರಿ 2025ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

    ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕರಾದ ಪ್ರೊ. ಗೋಪಾಲ ಎಂ. ಗೋಖಲೆ ಮಾತನಾಡಿ “ಸಂಗೀತವು ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಒಲಿದು ಬರುವಂತಹ ಕಲೆಯಾಗಿದ್ದು ವಿದುಷಿ ಶೀಲಾ ದಿವಾಕರ್ ಅವರು ತಮ್ಮ ಸುಮಧುರ ಕಂಠದ ಮೂಲಕ ಪ್ರಸಿದ್ಧರಾಗಿದ್ದಾರೆ. ಶ್ರೇಷ್ಠ ಸಂಗೀತಗಾರ್ತಿಯಾಗಿ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ಸಲ್ಲಿಸಿ ಅನೇಕ ಶಿಷ್ಯರನ್ನು ಸಂಗೀತ ಲೋಕಕ್ಕೆ ಅರ್ಪಿಸಿದ ಅವರ ಸಾಧನೆ ಅನನ್ಯವಾದದ್ದು” ಎಂದರು.

    ನುಡಿ ನಮನ ಸಲ್ಲಿಸಿದ ವಿದ್ವಾನ್ ಕೆ. ಮುರಳೀಧರ್ ಉಡುಪಿ ಮಾತನಾಡಿ ”ಶೀಲಾ ದಿವಾಕರ್ ಸಂಗೀತ ಕ್ಷೇತ್ರದಲ್ಲಿ ವಿವಿಧ ಆವಿಷ್ಕಾರಗಳಿಗೆ ಸ್ಪಂದಿಸಿ ಉತ್ತಮ ಶಿಷ್ಯ ವೃಂದದವರನ್ನು ಬೆಳೆಸಿದವರು” ಎಂದರು.
    ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಪಿ. ಕೃಷ್ಣಮೂರ್ತಿ ಮಾತನಾಡಿ “ಗೋವಿಂದ ದಾಸ ಕಾಲೇಜಿನ ಹಳೆ ವಿದ್ಯಾರ್ಥಿನಿಯಾಗಿದ್ದ ವಿದುಷಿ ಶೀಲಾ ದಿವಾಕರ್ ಅವರು ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳು ಸಂಗೀತಾಭ್ಯಾಸಿಗಳಿಗೆ ಪ್ರೇರಣೆಯಾಗಿದೆ” ಎಂದರು.

    ಸಂಗೀತ ನಿರ್ದೇಶಕ ಸತೀಶ್ ಸುರತ್ಕಲ್ ಮಾತನಾಡಿ “ಎಳವೆಯಿಂದಲೇ ಶೀಲಾ ದಿವಾಕರ್ ಅವರ ಬೆಳವಣಿಗೆ ಕಂಡವನಾಗಿದ್ದು ಅವರೊಂದಿಗಿನ ಒಡನಾಟ ವಿಶಿಷ್ಟತರವಾದದ್ದು” ಎಂದರು.

    ಶೀಲಾ ದಿವಾಕರ್ ಅವರ ಪತಿ ಎಲ್. ದಿವಾಕರ್ ಮಾತನಾಡಿ “ಶಿಷ್ಯ ವಾತ್ಸಲ್ಯದ ಶೀಲಾ ದಿವಾಕರ್‌ರವರು ಮಾತೃ ಸ್ವರೂಪಿಣಿಯಾಗಿ ಕಲಾವಿದರನ್ನು ಬೆಳೆಸಿದವರು” ಎಂದರು.

    ಶೀಲಾ ದಿವಾಕರ್ ಅವರ ಶಿಷ್ಯೆಂದಿರಾದ ಕಲಾವತಿ ಕೆ, ಸಂಧ್ಯಾ ಗಣೇಶ್, ಪೂಜಾ ಆಚಾರ್ಯ, ದೀಕ್ಷಾ ಮತ್ತು ಲಹರಿ ಗೀತ ನಮನ ಸಲ್ಲಿಸಿದರು. ಹರೀಶ್ ಮುಲ್ಕಿ ರಿದಂ ಪ್ಯಾಡ್‌ನಲ್ಲಿ, ವಿಜಯ್ ಕುಳಾಯಿ ಕೀಬೋರ್ಡ್ನಲ್ಲಿ ಮತ್ತು ದರ್ಶನ್ ಮುಲ್ಕಿ ತಬಲಾದಲ್ಲಿ ಸಹಕರಿಸಿದರು.

    ಶ್ರೀ ಶಾರದಾ ನಾಟ್ಯಾಲಯದ ಶಿಷ್ಯೆಯರಾದ ವಿದುಷಿ ಪ್ರಣತಿ ಸತೀಶ್, ಅಪೂರ್ವ ರಾವ್, ಮಾಸ್ಟರ್ ತನ್ಮಯ್ ಸುರೇಶ್, ಚಿನ್ಮಯೀ ಸುರೇಶ್, ಚಾರ್ವಿ ಕೆ. ಕುಲಾಲ್, ಸಾಕ್ಷಿ ಆಚಾರ್, ತ್ವಿಷಾ, ಕಶ್ವಿ ಪಿ. ಅಂಚನ್, ಅವನಿ ರಾವ್, ಚಾರ್ವಿ ಟಿ. ಕೊಟ್ಟಾರಿ, ಯಶಿಕಾ ಅಡ್ಯಾರ್, ಹಿರಣ್ಯ ಭಟ್, ಅಂಕಿತ ಬಿ. ಜಿ. ಹಾಗೂ ಅನನ್ಯ ವಿ. ಅಂಚನ್ ಇವರ ನೃತ್ಯ ನಮನಕ್ಕೆ ಹಾಡುಗಾರಿಕೆಯಲ್ಲಿ ರಜನಿ ವರುಣ್ ಗೋರೆ ಬೆಂಗಳೂರು, ಕೊಳಲಿನಲ್ಲಿ ವಿದ್ವಾನ್ ಕೆ. ಮುರಳೀಧರ್, ಮೃದಂಗದಲ್ಲಿ ವಿದ್ವಾನ್ ಕೆ. ಬಾಲಚಂದ್ರ ಭಾಗವತ್ ಮತ್ತು ಪಿಟೀಲಿನಲ್ಲಿ ವಿದ್ವಾನ್ ಪಿ. ಶ್ರೀಧರ್ ಆಚಾರ್ ಸಹಕರಿಸಿದರು.
    ಶ್ರೀ ಶಾರದ ನಾಟ್ಯಾಲಯ ಹೊಸಬೆಟ್ಟು – ಕುಳಾಯಿಯ ನಿರ್ದೇಶಕಿ ವಿದುಷಿ ಭಾರತಿ ಸುರೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಎನ್. ಆರ್. ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಶಾರದಾ ನಾಟ್ಯಾಲಯದ ಸುರೇಶ್ ಉಪಸ್ಥಿತರಿದ್ದರು.

    commemoration dance Music
    Share. Facebook Twitter Pinterest LinkedIn Tumblr WhatsApp Email
    Previous Articleವಿಶೇಷ ಲೇಖನ | ಕೃತಿ ವಿಭೂತಿ ಪುರುಷ ಸಾ.ಶಿ. ಮರುಳಯ್ಯ
    Next Article ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ‘ಭಸ್ಮಾಸುರ ಮೋಹಿನಿ’ ನೃತ್ಯ ರೂಪಕ | ಜನವರಿ 29
    roovari

    Add Comment Cancel Reply


    Related Posts

    ನಂದಿನಿ ನದಿಯ ಕುದ್ರುವಿನಲ್ಲಿ ಮೂಲ್ಕಿ ತಾಲೂಕು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನ | ಮಾರ್ಚ್ 01

    February 25, 2026

    ಬೆಳ್ತಂಗಡಿಯಲ್ಲಿ ‘ಸುವರ್ಣ ರಂಗ ಸಮ್ಮಾನ್’ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ವೈಭವ

    February 24, 2026

    ನಾರಿ ಚಿನ್ನಾರಿಯಿಂದ ಪದ್ಮಗಿರಿ ಕಲಾಕುಟೀರದಲ್ಲಿ ‘ಪ್ರತಿಭಾನಂದಿನಿ’ | ಫೆಬ್ರವರಿ 25

    February 24, 2026

    ಜೋಕ್ಲೆನ ಬಹುಭಾಷಾ ಕವಿಗೋಷ್ಠಿ ಬೊಕ ಕಬಿತೆ ಪುಟ್ಟುನ ಗುಟ್ಟೆಂಚಾ ಕಜ್ಜಕೊಟ್ಯ

    February 23, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.