Subscribe to Updates

    Get the latest creative news from FooBar about art, design and business.

    What's Hot

    ಚಾರೊಳಿ ಸಾಹಿತ್ಯ ಸಮ್ಮೇಳನದಲ್ಲಿ ಆರುಂಧತಿ, ಅನ್ನಿ ಇವರಿಗೆ ‘ಚಾರೊಳಿ’ ಸನ್ಮಾನ

    July 17, 2026

    ಮಲ್ಲ ಕ್ಷೇತ್ರದಲ್ಲಿ ‘ಬಲಿಪ ಭಾಗವತ ಪ್ರಶಸ್ತಿ’ ಪ್ರದಾನ ಸಮಾರಂಭ | ಜುಲೈ 19

    July 17, 2026

    ಹಲಸಂಗಿ ಪ್ರತಿಷ್ಠಾನದ ವಾರ್ಷಿಕ ಗೌರವ ಹಾಗೂ ಯುವ ಪ್ರಶಸ್ತಿ ಪ್ರಕಟ

    July 17, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಹಲಸಂಗಿ ಪ್ರತಿಷ್ಠಾನದ ವಾರ್ಷಿಕ ಗೌರವ ಹಾಗೂ ಯುವ ಪ್ರಶಸ್ತಿ ಪ್ರಕಟ
    Awards

    ಹಲಸಂಗಿ ಪ್ರತಿಷ್ಠಾನದ ವಾರ್ಷಿಕ ಗೌರವ ಹಾಗೂ ಯುವ ಪ್ರಶಸ್ತಿ ಪ್ರಕಟ

    July 17, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ವಿಜಯಪುರ : ಹಲಸಂಗಿ ಗೆಳೆಯರ ಪ್ರತಿಷ್ಠಾನದ ‘ವಾರ್ಷಿಕ ಗೌರವ’ ಹಾಗೂ ‘ಯುವ ಪ್ರಶಸ್ತಿ’ಗಳನ್ನು ಪ್ರತಿಷ್ಠಾನದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಡಾ. ಆನಂದ ಕೆ. ಇವರು ಪ್ರಕಟಿಸಿದ್ದಾರೆ.

    ಪ್ರತಿಷ್ಠಾನದ ವಾರ್ಷಿಕ ಗೌರವ ಪ್ರಶಸ್ತಿಗೆ ಮೂವರನ್ನು ಆಯ್ಕೆ ಮಾಡಲಾಗಿದ್ದು, ಜನಪದ ಕ್ಷೇತ್ರದಲ್ಲಿ 2022ನೇ ವಾರ್ಷಿಕ ಗೌರವ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಡಾ. ಬಿ.ಎ. ವಿವೇಕ ರೈ ಪುರಸ್ಕೃತರಾಗಿದ್ದಾರೆ. ಸಮಗ್ರ ಸಾಹಿತ್ಯ ಕ್ಷೇತ್ರದಲ್ಲಿ 2023ನೇ ವಾರ್ಷಿಕ ಗೌರವ ಪ್ರಶಸ್ತಿಗೆ ಕಲಬುರಗಿ ಜಿಲ್ಲೆಯ ಪ್ರೊ. ಎಚ್.ಟಿ. ಪೋತೆ ಹಾಗೂ ಸಂಶೋಧನೆ ಮತ್ತು ವಿಮರ್ಶಾ ಕ್ಷೇತ್ರದಲ್ಲಿ 2024ರ ವಾರ್ಷಿಕ ಗೌರವ ಪ್ರಶಸ್ತಿಗೆ ಬೆಂಗಳೂರು ಜಿಲ್ಲೆಯ ನೇಮಿಚಂದ್ರ ಇವರು ಪುರಸ್ಕೃತರಾಗಿದ್ದಾರೆ.

    ಪ್ರತಿಷ್ಠಾನದ ಯುವ ಪ್ರಶಸ್ತಿಗೆ ಮೂವರು ಆಯ್ಕೆಯಾಗಿದ್ದು, 2022ನೇ ಸಾಲಿನ ಯುವ ಪ್ರಶಸ್ತಿಗೆ ವಿಜಯಪುರ ಜಿಲ್ಲೆಯ ಡಾ. ವಿನಯ ನಂದಿಹಾಳ, 2023ನೇ ಸಾಲಿನ ಪ್ರಶಸ್ತಿಗೆ ತುಮಕೂರು ಜಿಲ್ಲೆಯ ಡಾ. ಗೋವಿಂದರಾಜು ಕೆ.ಎಂ. ಹಾಗೂ 2024ನೇ ಸಾಲಿನ ಬೆಂಗಳೂರಿನ ವಿಜಯನಗರ ನಿವಾಸಿ ಶಶಿ ತರೀಕೆರೆ ಇವರು ಪುರಸ್ಕೃತರಾಗಿದ್ದಾರೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಷ್ಠಾನದ ಸಭೆಯಲ್ಲಿ ಅರ್ಹರಿಗೆ ಪ್ರಶಸ್ತಿಗಳನ್ನು ಅಂತಿಮಗೊಳಿಸಲಾಗಿದೆ.

    ಪ್ರತಿಷ್ಠಾನದ ಗೌರವ ವಾರ್ಷಿಕ ಪ್ರಶಸ್ತಿಯನ್ನು ಜಾನಪದ ಸಾಹಿತ್ಯ, ಸಮಗ್ರ ಸಾಹಿತ್ಯ ಹಾಗೂ ವಿಮರ್ಶೆ, ಸೃಜನಶೀಲ ಸಾಹಿತ್ಯ ಕ್ಷೇತ್ರದಲ್ಲಿ ಕೃತಿಗಳನ್ನು ಗಣನೀಯ ಸೇವೆ ಸಲ್ಲಿಸಿರುವ ಸಾಹಿತಿಗಳನ್ನು ಹಾಗೂ ಯುವ ಪ್ರಶಸ್ತಿಗೆ ಅತ್ಯುತ್ತಮ ಕೃತಿಗಳನ್ನು ರಚಿಸಿದ ಯುವ ಬರಹಗಾರರನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿದ್ದು, ವಾರ್ಷಿಕ ಗೌರವ ಪ್ರಶಸ್ತಿ ತಲಾ ರೂ.50,000/- ಹಾಗೂ ಯುವ ಪ್ರಶಸ್ತಿಗೆ ತಲಾ ರೂ.10,000/- ನಗದಿನೊಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

    award baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Articleನೃತ್ಯ ವಿಮರ್ಶೆ | ‘ರಕ್ಷಿತಾ – ಸಾಗರ’ ಭಾವ-ವಿಭಾವಗಳ ರಸಸಂಗಮ – ‘ಸಹಯಾತ್ರಾ’
    Next Article ಮಲ್ಲ ಕ್ಷೇತ್ರದಲ್ಲಿ ‘ಬಲಿಪ ಭಾಗವತ ಪ್ರಶಸ್ತಿ’ ಪ್ರದಾನ ಸಮಾರಂಭ | ಜುಲೈ 19
    roovari

    Add Comment Cancel Reply


    Related Posts

    ಚಾರೊಳಿ ಸಾಹಿತ್ಯ ಸಮ್ಮೇಳನದಲ್ಲಿ ಆರುಂಧತಿ, ಅನ್ನಿ ಇವರಿಗೆ ‘ಚಾರೊಳಿ’ ಸನ್ಮಾನ

    July 17, 2026

    ಮಲ್ಲ ಕ್ಷೇತ್ರದಲ್ಲಿ ‘ಬಲಿಪ ಭಾಗವತ ಪ್ರಶಸ್ತಿ’ ಪ್ರದಾನ ಸಮಾರಂಭ | ಜುಲೈ 19

    July 17, 2026

    ನೃತ್ಯ ವಿಮರ್ಶೆ | ‘ರಕ್ಷಿತಾ – ಸಾಗರ’ ಭಾವ-ವಿಭಾವಗಳ ರಸಸಂಗಮ – ‘ಸಹಯಾತ್ರಾ’

    July 17, 2026

    ತುಳು ಸಾಹಿತಿ ಶ್ರೀಮತಿ ಕುಶಲಾಕ್ಷಿ ವಿ. ಕುಲಾಲ್ ಇವರಿಗೆ ಪ್ರಶಸ್ತಿ ಪ್ರದಾನ

    July 16, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.