ಮಂಗಳೂರು : ಮಂಗಳೂರಿನಲ್ಲಿ ನಡೆಯುವ 5ನೇ ರಾಷ್ಟ್ರೀಯ ಕೊಂಕ್ಣಿ ಚಾರೊಳಿ ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯ ಕವಯತ್ರಿಯರಾದ ಮಂಗಳೂರಿನ ಆರುಂಧತಿ ವಿ. ರಾವ್ ಮತ್ತು ಗೋವಾದ ಅನ್ನಿ ದೆ ಕೊಲ್ವಲೆ ಇವರು ಚಾರೊಳಿ ರಾಷ್ಟ್ರೀಯ ಸನ್ಮಾನಕ್ಕೆ ಆಯ್ಕೆಯಾಗಿದ್ದಾರೆ ಎಂದು ಸಮ್ಮೇಳನದ ಅಧ್ಯಕ್ಷ ರೇಮಂಡ್ ಡಿಕುನ್ಹಾ ತಾಕೊಡೆ ತಿಳಿಸಿದರು.
ದಿನಾಂಕ 19 ಜುಲೈ 2026ರಂದು ಒಂದು ದಿನದ ಕೊಂಕಣಿ ಐದನೇ ಚಾರೊಳಿ ಸಾಹಿತ್ಯ ಸಮ್ಮೇಳನ ಮಂಗಳೂರಿನ ಬಲ್ಮಠ ಸಹೋದಯದಲ್ಲಿ ನಡೆಯಲಿದ್ದು, ದೆಹಲಿ, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕಾರವಾರ, ಕೇರಳ ಮತ್ತು ದುಬೈನ ಕವಿಗಳು ನೋಂದಣಿ ಮಾಡಿದ್ದಾರೆ. ಬೆಳಗ್ಗೆ 8-00 ಗಂಟೆಗೆ ರಂಗಭೂಮಿ ತರಬೇತುದಾರ, ಕವಿ ಗೋವಾ ಕಾಣಕೋಣದ ಗೌರೀಶ ವರ್ಣೇಕರ್ ಕವಿಗೋಷ್ಠಿಗೆ ಚಾಲನೆ ನೀಡುವರು. ಬೆಳಗ್ಗೆ 10-00 ಗಂಟೆಗೆ ಮಂಗಳೂರಿನ ಜಿಲ್ಲಾ ಪ್ರಧಾನ ಅಭಿಯೋಜಕ ಎಂ.ಪಿ. ನೊರೊನ್ಹ ಉದ್ಘಾಟಿಸುವರು. ಉದ್ಯಮಿ ವಿನ್ಸೆಂಟ್ ಕುಟಿನ್ಹೊ ಮುಖ್ಯ ಅತಿಥಿಯಾಗಿರುವರು. ಮಧ್ಯಾಹ್ನ ಬಳಕ ವಿದ್ಯಾರ್ಥಿ ಹಾಗೂ ಕವಿಗಳು ಮುಕ್ತವಾಗಿ ಸಾಹಿತ್ಯ, ಕವಿತೆ ಬಗ್ಗೆ ಸಂವಾದ ಒಪನ್ ಹೌಸ್ ನಡೆಸಲಿದ್ದಾರೆ. ಸಮಾರೋಪ ಭಾಷಣವನ್ನು ಗೋವಾದ ಪ್ರಕಾಶಕಿ ಹಾಗೂ ಕೊಂಕಣಿ ಮಾತೃಭಾಷೆ ಶಿಕ್ಷಕಿ ಯೋಗಿತಾ ವರ್ಣೆಕರ್ ಮಾಡಲಿದ್ದು, ಸಮ್ಮೇಳನದ ಆಯೋಜನೆಯ ಗುರ್ಕಾರ್ ಗೌರೀಶ ವರ್ಣೆಕರ್ ಮಡ್ಗಾಂವ್ ಗೋವಾ ಮತ್ತು ಸಮಿತಿ ಸದಸ್ಯರು ಕೇರಳದ ವಿಜಯ್ ಪೈ, ಕರ್ನಾಟಕ ಕಾರವಾರದ ಸಂದೇಶ ಬಾಂದೇಕರ್, ಗೋವಾದ ಅನ್ನಿ ಫೆರ್ನಾಂಡಿಸ್ ತೀವಿಮ್ ಗೋವಾ, ಅನಘಾ ಕಾಮತ್, ಗೋಪಾಲಕೃಷ್ಣ ಪ್ರಭು, ಜಾನೆಟ್ ವಾಸ್ ಆಗಿದ್ದಾರೆ.
