Subscribe to Updates

    Get the latest creative news from FooBar about art, design and business.

    What's Hot

    ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ‘ಸಾಹಿತ್ಯ ಸಂಸ್ಕೃತಿ ಸಿರಿ’ ಕಾರ್ಯಕ್ರಮ | ಅಕ್ಟೋಬರ್ 29

    October 28, 2026

    ಲೇಖನ | ಪ್ರಕೃತಿಯ ಪರಿಕರಗಳೇ ಕಲಾಕೃತಿಯದಾಗ…

    October 28, 2026

    ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ 120ನೇಯ ‘ಸಾಹಿತ್ಯ ಅಭಿರುಚಿ ಕಾರ್ಯಕ್ರಮ’ | ಅಕ್ಟೋಬರ್ 30

    October 28, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಲೇಖನ | ಪ್ರಕೃತಿಯ ಪರಿಕರಗಳೇ ಕಲಾಕೃತಿಯದಾಗ…
    Article

    ಲೇಖನ | ಪ್ರಕೃತಿಯ ಪರಿಕರಗಳೇ ಕಲಾಕೃತಿಯದಾಗ…

    October 28, 2026No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಹಣ್ಣಿನೊಳಗಿನ ಬೀಜ ನೆಲಕ್ಕೆ ಬಿದ್ದು ಮಣ್ಣಿನೊಳಗೆ ಸೇರಿಕೊಂಡು ಮತ್ತೆ ಗಿಡವಾಗಿ, ಮರವಾಗಿ ಹಣ್ಣುಗಳನ್ನು ನೀಡುವುದು ಇದು ಪ್ರಕೃತಿ ನಿಯಮ ಮತ್ತು ನಡತೆ. ಮರ ಗಿಡಗಳು, ಪೊದೆ, ಹುಲ್ಲುಗಳು, ಬೇರು, ಬಳ್ಳಿಗಳು ಈ ಭುವಿಗೆ ರಕ್ಷಣೆಯ ಹಸಿರು ಹೊದಿಕೆ. ಮನುಜರಿಗೆ ಚರ್ಮ ಹೇಗೆ ರಕ್ಷಣೆಯೋ ಅದೇ ರೀತಿ ಈ ಭುವಿಯ ನೆಲಕ್ಕೆ ಹಸಿರು ಚಾದರ ಕೂಡಾ ಭದ್ರವಾದ ರಕ್ಷಣೆ. ಗಿರಿ, ಕಣಿವೆ, ಕಾನನ, ಝರಿ, ತೊರೆ, ನದಿ, ಸಾಗರ, ಭಾನು ಇವೆಲ್ಲವೂ ಪ್ರಕೃತಿ ಎಂಬ ಸಹಜ ಗ್ಯಾಲರಿಯ ಕಲಾಕೃತಿಗಳು. ಒಂದು ಬೀಜ ಮೊಳಕೆ ಒಡೆದು ಗಿಡವಾಗಿ ಹೂ ಬಿಟ್ಟು, ಕಾಯಿಯಾಗಿ, ಕಾಯಿ ಹಣ್ಣಾಗಿ ಹಣ್ಣು ಹಕ್ಕಿಗಳಿಗೆ ಆಹಾರವಾಗಿ, ಹಣ್ಣು ತಿಂದ ಹಕ್ಕಿ ಹಿಕ್ಕೆ ಹಾಕಿ, ಹಿಕ್ಕೆಯ ಮೂಲಕ ಮತ್ತೆ ಗಿಡ ಬೆಳೆದು ಮುಂದುವರಿಯುವ ಈ ಜೀವ ಸಂಕಲೆಯಲ್ಲಿ ಎಲ್ಲವೂ ಒಂದಕ್ಕೊಂದು ಅವಿನಾಭಾವ ಸಂಬಂಧ ಇರುವುದರಿಂದಲೇ ಇಂದು ಈ ಇಳೆ ಜೀವ ಕಳೆ ತುಂಬಿರುವುದು.

    ಗಿಡ ಮರವಾಗಿ ಬೆಳೆದಾಗ ಒಂದಷ್ಟು ಎಲೆಗಳು, ಕಾಯಿಗಳು, ಹಣ್ಣುಗಳು, ಬೀಜಗಳು, ಮರದ ತೊಗಟೆಗಳು, ಕಾಂಡದ ಬಿರುಕು ಸೀಳುಗಳು, ಒಣಗಿದ ಬೀಳು, ಬಳ್ಳಿಗಳು ನೆಲಕ್ಕೆ ಬೀಳುತ್ತವೆ, ನೆಲಕ್ಕೆ ಬಿದ್ದ ಇವೆಲ್ಲವೂ ತ್ಯಾಜ್ಯಗಳಲ್ಲ, ಇವುಗಳು ಮಣ್ಣಿನಲ್ಲಿ ಬೆರೆತು ಮಣ್ಣನ್ನು, ಬೇರುಗಳನ್ನು ಬಲಗೊಳಿಸಿ, ಅಲ್ಲಿನ ನೆಲದ ಜೀವ ಸತ್ವಗಳಾಗಿ ನಿಸರ್ಗ ಸಂರಕ್ಷಣೆಯ ಪಾತ್ರ ವಹಿಸುತ್ತದೆ. ಪ್ರಕೃತಿಯಲ್ಲಿ ಈ ರೀತಿ ಬಿದ್ದ ಎಲೆಗಳನ್ನು, ಬೇರು, ಬಳ್ಳಿಗಳನ್ನು, ಬೀಜ, ಕಾಯಿಗಳನ್ನು ಒಟ್ಟು ಸೇರಿಸಿ, ಒಂದಕ್ಕೊಂದು ಹೊಂದಾಣಿಕೆ ಆಗುವಂತೆ ಜೋಡಿಸಿ ಅದಕ್ಕೊಂದು ಕಲಾ ಸ್ಪರ್ಶ ‘ರೂಪ’ ನೀಡಿದವರು ರೂಪಾ ಆಚಾರ್ಯರವರು.

    ದಕ್ಷಿಣ ಕನ್ನಡ ಜಿಲ್ಲೆಯ ಪಡುಬಿದ್ರಿಯ ರೂಪಾ ಆಚಾರ್ಯರವರಿಗೆ ಪ್ರಕೃತಿ ಎಂದರೆ ಪ್ರೀತಿ, ಮತ್ತು ಒಡನಾಟ. ಮನೆಯ ಎದುರು ಗಿಡ, ಮರಗಳಲ್ಲಿ ಹಕ್ಕಿಗಳು ಹಾರಾಡುವುದು, ಬೀಜ ಮೊಳೆತು ಗಿಡವಾಗುವುದು, ಗಿಡಗಳಿಂದ ಎಲೆ ಉದುರುವುದು, ಹೊಸ ಎಲೆ ಚಿಗುರುವುದು, ಬಳ್ಳಿಗಳು ನೆಲ ಚಾಚುವುದು, ಕಾಂಡದ ಒಣಗಿದ ತುಂಡುಗಳು ನೆಲಕ್ಕೆ ಹರಡಿ ಬೀಳುವುದು, ಕಾಯಿಗಳು ನೆಲಕ್ಕೆ ಬೀಳುವುದು… ಇವೆಲ್ಲವನ್ನೂ ಕಾಣುತ್ತಿದ್ದಂತೆಯೇ ‘ಹೊಸತೆಲ್ಲ ಹೊಳಪಾದರೂ ಹಳೆಯದೆಲ್ಲವೂ ಹುಳುಕಲ್ಲ’ ಎಂದು ಒಂದಷ್ಟು ಪ್ರಕೃತಿಯ ಒಣಗಿದ ಪರಿಕರಗಳನ್ನು ಸೇರಿಸಿ, ಯಾವ ಹಕ್ಕಿ ಹಣ್ಣು ತಿನ್ನುವಲ್ಲಿಂದ ಪ್ರೇರಿತಗೊಂಡರೋ ಅದೇ ಹಕ್ಕಿಯ ಚಿತ್ರಗಳನ್ನು ಮಾಡಲಾರಂಭಿಸಿದರು. ಯಾವುದೇ ಬಣ್ಣ ಹಾಕದೇ ಕೇವಲ ಒಣಗಿದ ಎಲೆ, ಬಳ್ಳಿ, ಹೂ, ಬೀಜ, ಕಾಂಡಗಳನ್ನು ಚಿತ್ರ ವಿನ್ಯಾಸಕ್ಕೆ ಪೂರಕವಾಗಿ ಸೇರಿಸಿದಾಗ ಇವರ ಕಲಾ ಛಾಯೆ ಬಣ್ಣಗಳಿಂದ, ಪ್ರಕೃತಿಯ ವಸ್ತುಗಳಿಗೆ ಪರಿವರ್ತನೆಯಾಯಿತು. ಎಲೆಗಳು ರೆಕ್ಕೆಗಳಾಗಿ, ಬೀಜಗಳು ಕಣ್ಣುಗಳಾಗಿ, ಕಡ್ಡಿಗಳು ಕಾಲುಗಳಾಗಿ, ಬೇರುಗಳು ಕೊಂಬೆಗಳಾಗಿ, ಬೀಳುಗಳು ಶರೀರದ ಭಾಗವಾಗಿ ಸುಂದರ ಹಕ್ಕಿಗಳ ಭಾವರೂಪಗಳು ಅಭಿವ್ಯಕ್ತಗೊಂಡವು.

    ಒಂದು ಕಲಾಕೃತಿ ಮಾಡಿ ಮುಗಿಸಿದ ನಂತರ ಇನ್ನೊಂದು ಕಲಾಕೃತಿ ಮಾಡುವಾಗ ಸಹಜವಾಗಿಯೇ ಪ್ರಕೃತಿಯ ಇನ್ನಷ್ಟು ಪರಿಕರಗಳ ಕಡೆ ಗಮನ ಹರಿಸಿ ಕೃತಿಗಳ ಸಹಜ ಸೌಂದರ್ಯ ಮತ್ತು ಪರಿಣತಿ ವೃದ್ಧಿಯಾಗುತ್ತಲೇ ಬಂದವು. ಕೋಳಿ, ಗಿಳಿ, ನವಿಲು, ಗುಬ್ಬಿ, ಗಿಡುಗ, ಮಂಗಟ್ಟೆ, ಕೊಕ್ಕರೆ, ಪಾರಿವಾಳ ಮುಂತಾದ ಹಕ್ಕಿಗಳು ರೂಪಾರವರ ಹಸ್ತ – ಚಿತ್ತದಲ್ಲಿ ವಿವಿಧ ಭಾವ ಭಂಗಿಗಳಲ್ಲಿ ಕೃತಿಗಳ ಸರದಿ ಸಾಗುತ್ತಲೇ ಇವೆ. ಹಕ್ಕಿಗಳು ಬೀಜ ಪಸರಣ ಕ್ರಿಯೆಯ ಮೂಲಕ ಈ ಭುವಿಗೆ ಬೇಕಾಗಿರುವ ವೃಕ್ಷ ಸಂರಕ್ಷಣೆ ಮಾಡುವುದರಿಂದ ನಮ್ಮ ಬದುಕಿನಲ್ಲಿ ಕೂಡಾ ಅಗೋಚರವಾಗಿ ಹಕ್ಕಿಗಳ ಪಾತ್ರವಿರುತ್ತದೆ. ಯಾವ ಹಕ್ಕಿಗಳು ಈ ಭುವಿಗೆ ಚೇತನಾ ಶಕ್ತಿ ನೀಡುತ್ತವೋ ಅದೇ ಹಕ್ಕಿಗಳ ಭಾವ ರೂಪಗಳನ್ನು ಕಲಾಕೃತಿಯನ್ನಾಗಿ ಮಾಡುವ ರೂಪಾರವರ ಈ ಕಲಾ ಬಹು ರೂಪ ಬೆಳೆಯುತ್ತಿದೆ. ನಿಸರ್ಗದ ಪರಿಕರಗಳನ್ನು ಬಳಸಿಕೊಂಡು, ನಿಸರ್ಗದ ಜೀವಿಗಳನ್ನು ಚಿತ್ರಿಸಿಕೊಂಡು, ಆ ಜೀವಿಗಳ ಅಗತ್ಯ – ಮಹತ್ವಗಳನ್ನು ಅರಿವು, ಜ್ಞಾನ ಮೂಡಿಸುವ ಇವರ ಕಲಾಕೃತಿಗಳು ಅಮೂಲ್ಯವಾದುದು ಮತ್ತು ಪ್ರಕೃತಿ ಸಂರಕ್ಷಣೆಯ ಸಂದೇಶ ಮೂಡಿಸುವಂತವು.

    ಕಲಾಕೃತಿ ಮಾಡುವ ಮೊದಲು ಆ ಪರಿಕರಗಳನ್ನು ಒಣಗಿಸಿ, ಫಂಗಸ್ ಹಿಡಿಯದಂತೆ, ಅಂಟಿಸುವಲ್ಲಿ ಗಮ್ ನ ಅಂಶವು ಉಳಿಯದಂತೆ ಮಾಡುವ ಕಾರಣ ಈ ಕಲಾಕ್ರತಿಗಳು ಶಾಶ್ವತವಾಗಿ ಮನೆಯ ಗೋಡೆಯ ಅಂದವನ್ನು ಹೆಚ್ಚಿಸುತ್ತವೆ. ರೂಪಾರವರು ಈ ಕಲಾ ಪ್ರಕಾರವನ್ನು ಒಂದಷ್ಟು ಶಿಷ್ಯರಿಗೆ ತರಭೇತಿ ನೀಡುತ್ತಿರುವ ಕಾರಣ ಈ ಕಲಾ ಪ್ರಕಾರ ವಿವಿಧ ಕವಲುಗಳಾಗಿ ಬೆಳೆಯುತ್ತಿವೆ ಮತ್ತು ಒಂದಷ್ಟು ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಈ ಕಲಾಕೃತಿ ಮಾಡುವ ಮೂಲಕ ಪ್ರಕೃತಿಯ ಸ್ನೇಹ, ಗೌರವ, ಕಾಳಜಿ ಹೆಚ್ಚಾಗುತ್ತದೆ.

    ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೂಪಾರವರ ಕಲಾಕೃತಿಗಳು ಪ್ರದರ್ಶನಗೊಂಡಿವೆ. ರಾಷ್ಟ್ರಪತಿ ದ್ರೌಪದಿ ಮುರ್ಮುರವರಿಗೆ ಇವರು ಕಲಾಕೃತಿ ನೀಡಿರುತ್ತಾರೆ. ಫ್ರಾನ್ಸ್ ನ ಡೀಪಿ ನಗರದ ಮೇಯರ್ ಸೆಬಸ್ಟಿಯನ್ ಜುಮೆಲ್ ರವರ ಮೇಯರ್ ಭವನದಲ್ಲಿ ಇವರ ಕಲಾಕೃತಿ ಇದೆ. ಹಲವಾರು ರಾಜ್ಯ ಮಟ್ಟದ ರಾಷ್ಟ್ರ ಮಟ್ಟದ ಕಲಾ ಶಿಬಿರಗಳಲ್ಲಿ, ಕರ ಕುಶಲಕಾರ್ಯಗಾರಗಳಲ್ಲಿ ಇವರು ಭಾಗವಹಿಸಿರುತ್ತಾರೆ.

    ವಿಮರ್ಶಕರು : ದಿನೇಶ್ ಹೊಳ್ಳ

    article baikady drawing roovari
    Share. Facebook Twitter Pinterest LinkedIn Tumblr WhatsApp Email
    Previous Articleಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ 120ನೇಯ ‘ಸಾಹಿತ್ಯ ಅಭಿರುಚಿ ಕಾರ್ಯಕ್ರಮ’ | ಅಕ್ಟೋಬರ್ 30
    Next Article ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ‘ಸಾಹಿತ್ಯ ಸಂಸ್ಕೃತಿ ಸಿರಿ’ ಕಾರ್ಯಕ್ರಮ | ಅಕ್ಟೋಬರ್ 29
    roovari

    Add Comment Cancel Reply


    Related Posts

    ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ‘ಸಾಹಿತ್ಯ ಸಂಸ್ಕೃತಿ ಸಿರಿ’ ಕಾರ್ಯಕ್ರಮ | ಅಕ್ಟೋಬರ್ 29

    October 28, 2026

    ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ 120ನೇಯ ‘ಸಾಹಿತ್ಯ ಅಭಿರುಚಿ ಕಾರ್ಯಕ್ರಮ’ | ಅಕ್ಟೋಬರ್ 30

    October 28, 2026

    ನಿಸರ್ಗಧಾಮದಲ್ಲಿ ವಿಶೇಷ ಸಾಹಿತ್ಯಕ ಸಾಂಸ್ಕೃತಿಕ ಸಮಾವೇಶ | ಅಕ್ಟೋಬರ್ 31

    October 28, 2026

    ವಿಶೇಷ ಲೇಖನ | ಸ್ತ್ರೀ ಸಂವೇದನೆಯ ಅಪೂರ್ವ ಸಾಹಿತಿ ನಾಡೋಜ ಡಾ. ಕಮಲಾ ಹಂಪನಾ

    October 28, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.