Author: roovari

ಮಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಬೆಂಗಳೂರಿನ ‘ಕನ್ನಡ ಜಾಣ ಜಾಣೆ’ಯರ ವೇದಿಕೆ ಇವರ ಸಹಯೋಗದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಮೂರು ದಿನಗಳ ಪಿ. ಲಂಕೇಶ್ ಕೃತಿಗಳ ಅಧ್ಯಯನ ಶಿಬಿರಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 2024ರ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಹಾಸನದಲ್ಲಿ ನಡೆಯಲಿರುವ ಈ ಶಿಬಿರಕ್ಕೆ 20 ರಿಂದ 40 ವರ್ಷ ವಯಸ್ಸಿನ ರಾಜ್ಯದ ಎಲ್ಲ ಭಾಗದ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು 17 ಆಗಸ್ಟ್ 2024 ಕೊನೆಯ ದಿನ. ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ ವೆಬ್ಸೈಟ್ : https://karnatakasahithy- aacademy.org ನಮೂನೆ, ವಿವರಗಳನ್ನು ಪಡೆದು ಕೊಳ್ಳು ವಂತೆ ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ತಿಳಿಸಿದ್ದಾರೆ.

Read More

ಸಾಣೇಹಳ್ಳಿ: ಚಿತ್ರದುರ್ಗದ ಸಾಣೇಹಳ್ಳಿಯ ಶಿವಕುಮಾರ ರಂಗಮಂದಿರದಲ್ಲಿ ಸಾಣೇಹಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ 7 ಆಗಸ್ಟ್ 2024ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ “ನಮ್ಮಲ್ಲಿ ಅಡಗಿರುವ ಶಕ್ತಿ ಸಾಮರ್ಥ್ಯವನ್ನು ಹೊರಹೊಮ್ಮಿಸಬೇಕು ಎನ್ನುವ ಅಭೀಷ್ಠೆ ಎಲ್ಲ ಮಗುವಿನಲ್ಲೂ ಇರುತ್ತದೆ. ಅದಕ್ಕೆ ಪೂರಕವಾದ ವಾತಾವರಣ ಸಿಕ್ಕರೆ ಆ ಮಗು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದಲು ಸಾಧ್ಯ. ಯಾವ ಮಕ್ಕಳೂ ಪ್ರತಿಭಾಹೀನರಲ್ಲ. ಎಲ್ಲ ಮಕ್ಕಳಲ್ಲೂ ಪ್ರತಿಭೆ ಅವ್ಯಕ್ತವಾಗಿರುತ್ತದೆ. ಅದನ್ನು ಪ್ರತಿಭಾ ಕಾರಂಜಿಯ ಮೂಲಕ ವ್ಯಕ್ತಪಡಿಸುವಂಥ ಕೆಲಸ ಮನೆಯಲ್ಲಿ, ಶಾಲೆಯಲ್ಲಿ, ಸಮಾಜದಲ್ಲಿ ನಡೆಯಬೇಕು. ಮಕ್ಕಳು ಪ್ರತಿಭಾಹೀನರೆಂದು ಅವಹೇಳನ ಮಾಡದೇ ಸ್ವಲ್ಪ ಅವಕಾಶ ಸಿಕ್ಕರೆ ನಮ್ಮ ಮಕ್ಕಳು ಯಾರಿಗಿಂತಲೂ ಕಡಿಮೆಯಿಲ್ಲ  ಎನ್ನುವುದನ್ನು ಆ ಮಕ್ಕಳ ಮನೋಭೂಮಿಕೆಯಲ್ಲಿ ಬಿತ್ತುವ ಕಾರ್ಯವನ್ನು ಆಯಾ ಶಾಲೆಯ ಶಿಕ್ಷಕರು ಮಾಡಬೇಕಾಗುತ್ತದೆ. ಒಂದೊಂದು ಸಾರಿ ಪ್ರತಿಭಾವಂತರಿಗೆ ಎಲ್ಲ ಅವಕಾಶಗಳನ್ನು ಕೊಟ್ಟು ಉಳಿದವರನ್ನು ಹಿಂದೆ ತಳ್ಳುವ ಕೆಲಸ ಆಗುತ್ತದೆ. ಯಾವ ಮಗುವಿನಲ್ಲಿ ಪ್ರತಿಭೆ ಇಲ್ಲ ಅಂತ ಅಂದುಕೊಂಡು ದೂರ ತಳ್ಳುವಿರೋ ಆ…

Read More

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ತುಳು ನಾಟಕ ಕಲಾವಿದರ ಒಕ್ಕೂಟದ 21ನೇ ವಾರ್ಷಿಕ ಸಂಭ್ರಮ, ‘ತೌಳವ ಪ್ರಶಸ್ತಿ’ ಪ್ರದಾನ ಸಮಾರಂಭ, ಹಿರಿಯ ಕಲಾವಿದರಿಗೆ ಸಮ್ಮಾನ, ಕೀರ್ತಿಶೇಷ ಕಲಾವಿದರ ನೆಂಪು ಕಾರ್ಯಕ್ರಮ ಹಾಗೂ ಅಶಕ್ತ ಕಲಾವಿದರಿಗೆ ಗೌರವಧನ ವಿತರಣಾ ಕಾರ್ಯಕ್ರಮವು 02 ಆಗಸ್ಟ್2024ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ “ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಲು ತುಳು ಎಲ್ಲ ರೀತಿಯ ಅರ್ಹತೆಗಳನ್ನು ಹೊಂದಿದೆ. ಹಾಗಾಗಿ ಅದನ್ನು ಕೇಳುವಲ್ಲಿ ಮತ್ತು ನೀಡುವಲ್ಲಿ ನ್ಯಾಯವಿದೆ. ತುಳುವನ್ನು ರಾಜ್ಯದ ಅಧಿಕೃತಭಾಷೆಯನ್ನಾಗಿ ಘೋಷಿಸುವುದಕ್ಕಾಗಿ ಸರಕಾರ ಕೇಳಿದಂತೆ ಎಲ್ಲ ದಾಖಲೆಗಳೊಂದಿಗೆ ವರದಿಯನ್ನು ಸಲ್ಲಿಸಲಾಗಿದೆ. ಬೇರೆ ಕೆಲವು ರಾಜ್ಯಗಳಲ್ಲಿ ಎರಡು, ಮೂರು ಮತ್ತು ಅದಕ್ಕಿಂತಲೂ ಹೆಚ್ಚಿನ ಭಾಷೆಗಳನ್ನು ಅಧಿಕೃತ ಭಾಷೆಗಳನ್ನಾಗಿ ಘೋಷಿಸಲಾಗಿದೆ. ನಮ್ಮ ರಾಜ್ಯದಲ್ಲಿ ತುಳು ಶೀಘ್ರ ಅಧಿಕೃತ ರಾಜ್ಯ ಭಾಷೆಯಾಗಬೇಕಾಗಿದೆ. ಹಲವು ಹಂತಗಳನ್ನು ದಾಟಿ ಇಂದು ಶ್ರೀಮಂತವಾಗಿ ಬೆಳೆದಿರುವ…

Read More

ಉಡುಪಿ : ವನಸುಮ ಟ್ರಸ್ಟ್ ಕಟಪಾಡಿ ಸಹಭಾಗಿತ್ವದಲ್ಲಿ ಖ್ಯಾತ ವಿದ್ವಾಂಸ ಗುರುರಾಜ ಮಾರ್ಪಳ್ಳಿ ಅವರು ಹುಟ್ಟುಹಾಕಿರುವ ‘ಶಾಸ್ತ್ರೀಯ ಯಕ್ಷ ಮೇಳ ಉಡುಪಿ’ ವತಿಯಿಂದ `ಋತುಪರ್ಣ ‘ ಯಕ್ಷಗಾನ ಪ್ರದರ್ಶನವು 04 ಆಗಸ್ಟ್ 2024ರ ಭಾನುವಾರದಂದು ಉಡುಪಿಯ ಯಕ್ಷಗಾನ ಕಲಾರಂಗದ ಐ. ವೈ. ಸಿ. ಸಭಾ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ಇಂದು ಆಧುನಿಕತೆಯನ್ನು ಮೇಳೈಸಿಕೊಂಡು ವಿಜೃಂಭಿಸುತ್ತಿರುವ ಯಕ್ಷಗಾನ ಪ್ರದರ್ಶನದ ಅಬ್ಬರದ ನಡುವೆ ಶಾಸ್ತ್ರೀಯ ರೀತಿಯಲ್ಲಿ ಯಕ್ಷಗಾನವನ್ನು ಇಂದಿನ ಪೀಳಿಗೆಗೆ ಪರಿಚಯಿಸಲು ಮುಂದಾಗಿರುವ ವಿದ್ವಾಂಸ ಡಾ. ಗುರುರಾಜ ಮಾರ್ಪಳ್ಳಿ ಇವರ ಪ್ರಯತ್ನ ಅನುಕರಣೀಯ. ಯಕ್ಷಗಾನ ಹಿಂದೆ ಹೇಗಿತ್ತು ಎಂಬುದರ ಬಗ್ಗೆ ಇಂದಿನ ಯುವ ಪೀಳಿಗೆಗೆ ಅರಿವಿಲ್ಲ. ಇಂದು ಆಧುನಿಕತೆಯ ಕಾಲಘಟ್ಟದಲ್ಲಿ ಯಕ್ಷಗಾನ ಸಾಕಷ್ಟು ಬದಲಾವಣೆಯನ್ನು ಕಂಡಿದೆ. ಕಲಾವಿದರಿಗೆ ಉತ್ತಮ ಸಂಪಾದನೆಯ ದಾರಿ ನೀಡಿದೆ. ಹಿಂದಿನ ಯಕ್ಷಗಾನವನ್ನು ಕಂಡವರು, ಇಂದಿನ ಬದಲಾವಣೆಗಳನ್ನು ಕಂಡು ವ್ಯಥೆ ಪಟ್ಟಿರುವುದನ್ನು ಕಂಡಿದ್ದೇನೆ. ಈ ಸಂದರ್ಭದಲ್ಲಿ ಯಕ್ಷಗಾನದ ಶಾಸ್ತ್ರೀಯ…

Read More

ಶೇಣಿ : ರಂಗಚಿನ್ನಾರಿ ಕಾಸರಗೋಡು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರಿನ ಸಹಯೋಗದೊಂದಿಗೆ ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ದಿನಾಂಕ 8 ಆಗಸ್ಟ್ 2024ರಂದು ರಂಗ ಸಂಸ್ಕೃತಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ರಂಗಸಂಸ್ಕೃತಿಯ ನಿರ್ದೇಶಕ ಕಾಸರಗೋಡು ಚಿನ್ನಾ “ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಮತ್ತು ಬದುಕಿನ ಕೌಶಲಗಳನ್ನು ಅಭಿವೃಧ್ಧಿ ಪಡಿಸಲು ನಾಟಕವು ಉತ್ತಮ ಹಾದಿಯನ್ನು ನಿರ್ಮಿಸಿ, ತಮ್ಮನ್ನು ತಾವು ಮುಕ್ತವಾಗಿ ಅಭಿವ್ಯಕ್ತ ಪಡಿಸಲು ಸಹಕರಿಸುತ್ತದೆ. ನಾಟಕಕ್ಕೆ ಸಂಬಂಧಿಸಿದ ಚಟುವಟಿಕೆಗಳು ಕಲಾವಿದನಲ್ಲಿ ಭರವಸೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವುದರೊಂದಿಗೆ ಸಂವಹನ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ದೇಹದ ಭಾಷೆ ಮತ್ತು ಭಾವಾಭಿವ್ಯಕ್ತಿಗಳು ನಿರ್ವಹಿಸುವ ನಿರ್ಣಾಯಕ ಪಾತ್ರಗಳ ಬಗ್ಗೆ ತಿಳುವಳಿಕೆಯನ್ನು ನೀಡುತ್ತದೆ” ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಂಗಚಿನ್ನಾರಿ ನಿರ್ದೇಶಕ ಸತೀಶ್ಚಂದ್ರ ಭಂಡಾರಿಯವರು ಮಾತನಾಡಿ “ನಾಟಕವು ನಮಗೆ ವಿಶೇಷ ಅಸ್ತಿತ್ವವನ್ನು ನೀಡುತ್ತದೆ. ವ್ಯಕ್ತಿತ್ವದ ವಿಕಾಸಕ್ಕೆ ಕಾರಣವಾಗುತ್ತದೆ. ಇದಕ್ಕೆ ಅವಿಶ್ರಾಂತ ಶ್ರಮದ ಅಗತ್ಯವಿದೆ”…

Read More

ಮೂಡುಬಿದಿರೆ :  ಮೂಡುಬಿದಿರೆಯ ‘ಯಕ್ಷಸಂಗಮ’ ರಜತ ಸಂಭ್ರಮವನ್ನು ಆಚರಿಸುತ್ತಿದ್ದು ಇದರ ಅಂಗವಾಗಿ 25 ನೇ ವರ್ಷದ ಯಕ್ಷಗಾನ ಮತ್ತು ತಾಳಮದ್ದಳೆ ಕೂಟ ಹಾಗೂ ಸಂಮಾನ ಸಮಾರಂಭವು 10 ಆಗಸ್ಟ್ 2024ರಂದು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಲಿದೆ. ಮೂಡುಬಿದಿರೆಯ ಜೈನಮಠದ ಭಟ್ಟಾರಕ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಒರಿಸ್ಸಾದ ಟಾಟಾ ರಿಫ್ರಾಕ್ಟರೀಸ್ ಲಿಮಿಟೆಡ್ ಇದರ ನಿವೃತ್ತ ಮ್ಯಾನೇಜಿಂಗ್ ಡೈರೆಕ್ಟರ್ ಸಿ. ದೇವದಾಸ್ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಂದು ಸಂಜೆ ಘಂಟೆ 4.30ರಿಂದ ‘ಯಕ್ಷನಿಧಿ’ ಮೂಡುಬಿದಿರೆ ಮಕ್ಕಳ ಮೇಳದಿಂದ ‘ದಕ್ಷಾದ್ವರ’ ಹಾಗೂ ರಾತ್ರಿ ಘಂಟೆ  8.15 ರಿಂದ ‘ಗಿರಿಜಾ ಕಲ್ಯಾಣ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸಂಜೆ ಘಂಟೆ 6.45 ರಿಂದ ಕರ್ನಾಟಕ ರಾಘ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಪ್ರಸಿದ್ಧ ಹಾಸ್ಯಗಾರ ಸೀತಾರಾಮ ಕುಮಾರ್ ಕಟೀಲು ಇವರಿಗೆ ಸಂಮಾನ ನಡೆಯಲಿದೆ. ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್,…

Read More

ಬೆಂಗಳೂರು : ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ (ರಿ.), ಬೆಂಗಳೂರ ನಗರ ಜಿಲ್ಲೆ ಮತ್ತು ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಇದರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದೇಶಭಕ್ತಿ ಮತ್ತು ಪರಿಸರ ಕವಿಗೋಷ್ಠಿಯನ್ನು ದಿನಾಂಕ 11 ಆಗಸ್ಟ್ 2024ರಂದು ಸಂಜೆ 4-00 ಗಂಟೆಗೆ ಭೂಮಿಕಾ ಸೇವಾ ಫೌಂಡೇಷನ್ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಕೆ.ಜೆ.ವಿ.ಎಸ್. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಲಕ್ಷ್ಮೀ ಶ್ರೀನಿವಾಸ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಉದ್ಯಮಿಗಳಾದ ಶ್ರೀ ಶಶಿಕಾಂತ್ ರಾವ್ ಇವರು ಉದ್ಘಾಟಿಸಲಿದ್ದು, ಜಿಲ್ಲಾಧ್ಯಕ್ಷರಾದ ಶ್ರೀ ನಾ. ಶ್ರೀಧರ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಸಭಾ ಕಾರ್ಯಕ್ರಮದ ಬಳಿಕ ಸಾಹಿತಿ ಡಾ. ನಂದಿನಿ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ.

Read More

ಕಾಸರಗೋಡು : ಸಮಾಜ ಸಂಪದ ಅನಂಗೂರ್ ಬಾಲಕೃಷ್ಣ ಮಾಸ್ಟರ್ ಸಂಸ್ಮರಣಾ ಸಭೆಯು ಬಾಲಕೃಷ್ಣ ಮಾಸ್ಟರ್ ಇವರ ಸ್ವಗೃಹ ರಮಾ ನಿಲಯದಲ್ಲಿ ದಿನಾಂಕ 08 ಆಗಸ್ಟ್ 2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಅಧ್ಯಕ್ಷರಾಧ ಕಮಲಾಕ್ಷ ಕಲ್ಲುಗದ್ದೆಯವರು ಅಧ್ಯಕ್ಷೀಯ ಭಾಷಣದಲ್ಲಿ ಸಭೆಯನ್ನುದ್ದೇಶಿಸಿ “ಸಮಾಜ ಸೇವೆಗೆ ತನ್ನ ಜೀವನವನ್ನು ತೇದವರನ್ನು ಸಮಾಜ ಗೌರವಿಸುತ್ತದೆ. ಗೌರವಿಸಬೇಕು. ಅಂತಹ ಗೌರವಾನ್ವಿತರು ಅವರ ಜೀವಿತ ಅವಧಿಯ ನಂತರ ಸಂಸ್ಮರಣಾ ಯೋಗ್ಯರಾಗುತ್ತಾರೆ” ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಂಘ ಗೌರವ ಅಧ್ಯಕ್ಷರಾಧ ನಿರಂಜನ ಕೊರಕ್ಕೊಡು, ಜಿಲ್ಲಾ ಸಂಘ ಪ್ರದಾನ ಕಾರ್ಯದರ್ಶಿ ಸತೀಶ್ ಕುಮಾರ್ ದೋಣಿಬಾಗಿಲು ಉಪಸ್ಥಿತರಿದ್ದರು, ಗೌರವ ಕಾರ್ಯದರ್ಶಿ ಬಿ.ಪಿ. ವೆಂಕಟ್ರಮಣ ಸಂಸ್ಮರಣಾ ಬಾಷಣ ಮಾಡಿದರು. ಸಾಮಾಜಿಕ ಮುಂದಾಳು ಜಗದೀಶ್ ಕೂಡ್ಲು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಬಾಲಕೃಷ್ಣ ಮಾಸ್ಟರ್ ಇವರ ಸುಪುತ್ರ ಸತೀಶ್ ಚಂದ್ರ ಕೆ.ಪಿ. ವಂದಿಸಿದರು.

Read More

ಕುಮಟಾ : ಯಕ್ಷಗಾನ ಸಂಶೋಧನಾ ಕೇಂದ್ರ (ರಿ.) ಮಣಕಿ ಹಾಗೂ ಸತ್ವಾಧಾರ ಫೌಂಡೇಶನ್ (ರಿ.) ಸಂಕೊಳ್ಳಿ ಸಹಯೋಗದಲ್ಲಿ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 11 ಆಗಸ್ಟ್ 2024ರಂದು ಸಂಜೆ 5-00 ಗಂಟೆಗೆ ಕುಮಟಾದ ದೀವಗಿ ಶ್ರೀ ರಾಮಾನಂದ ಸ್ವಾಮೀಜಿ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ಅಮೃತ ಸೋಮೇಶ್ವರ ವಿರಚಿತ ‘ತ್ರಿಪುರ ಮಥನ’ ಎಂಬ ಯಕ್ಷಗಾನ ಪ್ರದರ್ಶನದ ಹಿಮ್ಮೇಳದಲ್ಲಿ ಭಾಗವತರು ಶ್ರೀ ಶಂಕರ ಭಟ್ಟ ಬ್ರಹ್ಮೂರು ಮತ್ತು ಶ್ರೀ ಸರ್ವೇಶ್ವರ ಹೆಗಡೆ ಮೂರೂರು, ಮದ್ದಲೆಯಲ್ಲಿ ಶ್ರೀ ನಾಗರಾಜ ಭಂಡಾರಿ ಹಿರೇಬೈಲು ಮತ್ತು ಚಂಡೆಯಲ್ಲಿ ಶ್ರೀ ಗಜಾನನ ಹೆಗಡೆ ಸಾಂತೂರು ಹಾಗೂ ಮುಮ್ಮೇಳದಲ್ಲಿ ಡಾ. ಜಿ.ಎಲ್ ಹೆಗಡೆ ಕುಮಟಾ, ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ, ಶ್ರೀ ಈಶ್ವರ ನಾಯ್ಕ ಮಂಕಿ, ಶ್ರೀ ಅಶೋಕ ಭಟ್ಟ ಸಿದ್ಧಾಪುರ, ಶ್ರೀ ಗುರುಪ್ರಸಾದ್ ಭಟ್ಟ ಮಾಡಗೇರಿ, ಶ್ರೀ ನಾಗೇಶ ಕುಳಿಮನೆ, ಶ್ರೀ ಸುಬ್ರಹ್ಮಣ್ಯ ಮೂರೂರು, ಶ್ರೀ ರಮಾಕಾಂತ ಮೂರೂರು ಹಾಗೂ ಸಹ ಕಲಾವಿದರು ಸಹಕರಿಸಲಿರುವರು.

Read More

ಬಂಟ್ವಾಳ : ಯಕ್ಷಗಾನದ  ಹಾಸ್ಯ ಕಲಾವಿದ, ಚೆನ್ನೈತ್ತೋಡಿ ಗ್ರಾಮದ ಅಂದ್ರಳಿಕೆ ಅಂತರಗುತ್ತು ನಿವಾಸಿ ಮುನಿರಾಜ ಚೌಟ ಅವರ ಪುತ್ರ ವಿಶಾಲ್ ಜೈನ್ (ವಿ.ಕೆ.ಜೈನ್) ವಾಮದಪದವು ಅವರು ಅಲ್ಪ ಕಾಲದ ಅಸೌಖ್ಯದಿಂದ 04 ಆಗಸ್ಟ್ 2024 ರ ಭಾನುವಾರದಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ 47ವರ್ಷ ವಯಸ್ಸಾಗಿತ್ತು. ವೃತ್ತಿಯಲ್ಲಿ ಚಾಲಕರಾಗಿದ್ದ ವಿಶಾಲ್‌ ಯಕ್ಷಗಾನದ ಹವ್ಯಾಸಿ ಕಲಾವಿದರಾಗಿದ್ದರು. ಬಳಿಕ ಯಕ್ಷಗಾನ ಮೇಳದಲ್ಲಿ ವೃತ್ತಿಪರ ಹಾಸ್ಯ ಕಲಾವಿದರಾಗಿ ಗುರುತಿಸಿಕೊಂಡಿದ್ದರು. ಬೆಂಕಿನಾಥೇಶ್ವರ ಮೇಳ, ಸಸಿಹಿತ್ತು ಮೇಳ, ಸುಂಕದಕಟ್ಟೆ ಮೇಳಗಳಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ಬಪ್ಪನಾಡು ಮೇಳದ ಕಲಾವಿದರಾಗಿದ್ದರು. ಯಕ್ಷಗಾನದ ಜತೆ ರಂಗಭೂಮಿಯಲ್ಲೂ ತನನ್ನು ತೊಡಗಿಸಿಕೊಂಡಿದ್ದ ಇವರು ‘ಮುಕ್ಕಾಲ್ ಮೂಜಿ ಘಳಿಗೆ’ ‘ಒರಿಯೊರಿ ಒಂಜೊಂಜಿ ತರ’ ಮುತ್ತು ‘ಕಂಬುಲದ ಕೋರಿ ಮೊದಲಾದ ನಾಟಕಗಳಲ್ಲಿ ಹಾಸ್ಯ ಪಾತ್ರ ಮಾಡಿದ್ದರು. ‘ಒರಿಯರ್ದ್ ಒರಿ ಅಸಲ್’ ಸಿನಿಮಾದಲ್ಲಿ ದೈವದ ಪಾತ್ರಿಯ ಪಾತ್ರ ನಿರ್ವಹಿಸಿದ್ದ ಇವರು ‘ಪೂರಾ ಪೊಕ್ಕಡೆ’ ಕಿರು ಚಿತ್ರದಲ್ಲಿ ನಟಿಸಿದ್ದರು. ಶ್ರೀಯುತರು ತಂದೆ, ತಾಯಿ, ಪತ್ನಿ ಹಾಗೂ ಪುತ್ರನನ್ನು…

Read More