Author: roovari

ಬಹುಷ: ನಾವು ಎಂಟನೆಯಲ್ಲಿ ಓದುತ್ತಿದ್ದ ಸಮಯ. ಸದಾನಂದನೆಂಬ ಕಿಲಾಡಿ ಹುಡುಗನೊಬ್ಬ ಒಂದು ದಿನ ವಿಶೇಷ ವಸ್ತುವೊಂದನ್ನು ತಂದ. ಗೋಲಾಕರದ ಸಣ್ಣ ವಿಕ್ಸ್ ಆಕಾರದ ಡಬ್ಬಿಯದು. ಅದಕ್ಕೆ ಮುಚ್ಚಳ ಮುಚ್ಚಿತ್ತು. ಗೆಳೆಯರಿಗೆ ತೋರಿಸಿಯೂ ತೋರಿಸದವನ ಹಾಗೆ ಡಬ್ಬ ಹಿಡಿದುಕೊಂಡು ಡೌಲಿನಿಂದ ಒಡಾಡುತ್ತಿದ್ದ. ನಮಗೆಲ್ಲ ಅಪರಿಮಿತ ಕುತೂಹಲ. ಕೊನೆಗೂ ಸಂಜೆ ಶಾಲೆ ಬಿಟ್ಟ ಮೇಲೆ ಆ ಡಬ್ಬಿಯ ರಹಸ್ಯ ಬಯಲಾಯ್ತು. ಸಂಜೆ ಆಪ್ತ ಗೆಳೆಯರ ಸಮ್ಮುಖದಲ್ಲಿ ಡಬ್ಬಿಯ ಮುಚ್ಚಳ ತೆಗೆಯಲಾಯಿತು. ಒಂಥರಾ ಕಪ್ಪು ಅಂಟಿನಂಥಾ ವಸ್ತು ತುಂಬಿದ ಡಬ್ಬಿ ಅದು. ಅದನ್ನ ‘ಅಂಜನ’ ಅಂತ ಹೇಳ್ತಾರೆ ಅಂತ ಸದಾನಂದ ಹೇಳುತ್ತಿದ್ದ. ಅದರಲ್ಲಿ ಕಣ್ಣಿಟ್ಟು ನೋಡಿದರೆ ಕೋರಿಕೊಂಡದ್ದೆಲ್ಲ ಕಾಣುತ್ತದಂತೆ. ಹಾಗಂತ ಎಲ್ಲರಿಗೂ ಕಾಣೋದಿಲ್ಲ. ಸ್ವತ: ಸದಾನಂದನಿಗೂ ಏನೂ ಕಾಣುತ್ತಿರಲಿಲ್ಲ. ನನಗೂ. ಒಬ್ಬೊಬ್ಬರಾಗಿ ನೋಡುತ್ತ ಹೋದೆವು. ಕೊನೆಗೂ ಹರಿ ಎಂಬ ಹುಡುಗ ‘ನನಗೆ ಕಾಣ್ತದೆ’ ಅಂತ ಚೀರಿದ. ‘ನಮ್ಮಪ್ಪ ಎಲ್ಲಿದಾರೆ’ ಅಂತ ಕೇಳಿದರೆ ‘ಪೇಟೇಲಿ’ ಅಂದ. ಸದಾನ ಅಣ್ಣ ಏನು ಮಾಡುತ್ತಿದ್ದಾನೆ ಅಂತ ಕೇಳಿದರೆ ‘ಸೈಕಲ್ ಹೊಡೀತಿದಾನೆ’…

Read More

ಪುತ್ತೂರು : ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು 2024- 25ನೇ ಸಾಲಿನಲ್ಲಿ ಪ್ರಥಮ ಬಾರಿಗೆ ಯಕ್ಷಗಾನ ಸರ್ಟಿಫಿಕೇಟ್ ಮತ್ತು ಡಿಪ್ಲೋಮಾ ಕೋರ್ಸ್ ಗಳಿಗೆ ಇತ್ತೀಚೆಗೆ ಪರೀಕ್ಷೆಗಳನ್ನು ಬೆಂಗಳೂರಿನಲ್ಲಿ ನಡೆಸಿದ್ದು, ಬೆಂಗಳೂರಿನ ಕಲಾ ಕದಂಬ ಆರ್ಟ್ ಸೆಂಟರ್ ಮೂಲಕ ಪ್ರಥಮ ಸೆಮಿಸ್ಟ‌ರ್ ಡಿಪ್ಲೋಮಾ ಪರೀಕ್ಷೆಗೆ ಹಾಜರಾದ ದಿವಾಕರ ಆಚಾರ್ಯ ಗೇರುಕಟ್ಟೆ ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ (ಎ+) ಉತ್ತೀರ್ಣರಾಗಿರುತ್ತಾರೆ. ದಿವಾಕರ ಆಚಾರ್ಯ ಇವರು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾಗಿದ್ದು, ಹವ್ಯಾಸಿ ಕಲಾವಿದರಾಗಿ ಸಂಘಟಕರಾಗಿ ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಇವರು ಯಕ್ಷಭಾರತಿ (ರಿ.) ಬೆಳ್ತಂಗಡಿ ಕಾರ್ಯದರ್ಶಿಯಾಗಿ, ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ ಅಧ್ಯಕ್ಷರಾಗಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಹವ್ಯಾಸಿ ಕಲಾವಿದರ ಘಟಕದ ಉಪಾಧ್ಯಕ್ಷರಾಗಿ, ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

Read More

ಇಳಕಲ್ : ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ (ರಿ.) ಕಮತಗಿ ಇದರ ವತಿಯಿಂದ 2025ನೇ ಸಾಲಿನ ‘ಮೇಘರತ್ನ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವನ್ನು ದಿನಾಂಕ 21 ಜೂನ್ 2025ರಂದು ಸಂಜೆ 5-00 ಗಂಟೆಗೆ ಇಳಕಲ್ ಸ್ನೇಹರಂಗ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದೆ. ರಂಗ ಸಂಘಟಕರಾದ ಡಾ. ವಿಶ್ವನಾಥ ಕೆ. ವಂಶಾಕೃತಮಠ ಇವರ ಅಧ್ಯಕ್ಷತೆಯಲ್ಲಿ ವಿಶ್ರಾಂತ ನಿರ್ದೇಶಕರಾದ ಎಸ್.ಆರ್. ಮನಹಳ್ಳಿ ಇವರು ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಮಾಡಲಿರುವರು. ಹಿರಿಯ ರಂಗಕರ್ಮಿ ಹಾಗೂ ಕಲಾವಿದರಾದ ಮಹಾಂತೇಶ ಮಹಾಂತಪ್ಪ ಗಜೇಂದ್ರಗಡ ಇವರಿಗೆ ‘ಮೇಘರತ್ನ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಮಹಾಂತಪ್ಪ ವೀರಪ್ಪ ಅದ್ರಸನ್ನವರ್, ಮಹಾಂತೇಶ ಹಳ್ಳೂರ, ಶ್ರೀಮತಿ ರೇಣವ್ವ ನಾಗಪ್ಪ, ಶ್ರೀಮತಿ ನೀಲಮ್ಮ ಬಸನಗೌಡ ಹಿರೇಗೌಡರ, ಕು. ಮಲಿಕ್ ಶಬೀಲ್ ನಾಗನೂರ ಇವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಚಾಮರಾಜ ನೃತ್ಯ ಕಲೆ ಮತ್ತು ಸಾಂಸ್ಕೃತಿಕ ಸಂಘ (ರಿ.) ಇವರಿಂದ ವಚನ ನೃತ್ಯ ಮತ್ತು ಕುಮಾರಿ ಸನ್ನಿಧಿ ಚಂದ್ರ ಶೇಖರ ಕಲ್ಮನಿ ಇವರಿಂದ ಏಕಾ ಪಾತ್ರ…

Read More

ಬೆಳಗಾವಿ : ಶ್ರೀ ಮಹಾರಾಜ ಸಿದ್ದು ಹಳ್ಳೂರ ಇವರ ‘ಎಷ್ಟ ಚಂದಿತ್ತ ಆವಾಗ’ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮವನ್ನು ದಿನಾಂಕ 22 ಜೂನ್ 2025 ರಂದು ಮುಂಜಾನೆ 10-00 ಗಂಟೆಗೆ ಮೂಡಲಗಿ ಶ್ರೀ ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಶ್ರೀ ಮಂಜುನಾಥ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಲಕ್ಷ್ಮಣ ಯ. ಅಡಿಹುಡಿ ಇವರ ಅಧ್ಯಕ್ಷತೆಯಲ್ಲಿ ಮಾಜಿ ಸಚಿವರಾದ ಬಾಲಚಂದ್ರಣ್ಣಾ ಲ. ಜಾರಕಿಹೊಳಿ ಇವರು ಉದ್ಘಾಟನೆ ಮಾಡಲಿದ್ದಾರೆ. ಖ್ಯಾತ ಜಾನಪದ ಗಾಯಕರಾದ ಗುರುರಾಜ ಹೊಸಕೋಟಿ ಇವರು ಕೃತಿ ಲೋಕಾರ್ಪಣೆಗೊಳಿಸಲಿದ್ದು, ಸಾಹಿತಿ ದುರ್ಗಪ್ಪ ದಾಸನ್ನವರ ಇವರು ಕೃತಿ ಪರಿಚಯ ಮಾಡಲಿರುವರು.

Read More

ಬೆಂಗಳೂರು : ಕಲ್ಪವೃಕ್ಷ ಟ್ರಸ್ಟ್ ಸಹಯೋಗದೊಂದಿಗೆ ಅಂತರಂಗ ಬಹಿರಂಗ ತಂಡ ಪ್ರಸ್ತುತ ಪಡಿಸುವ ‘ಬಾಯ್ಬಡ್ಕಿ’ ಹಾಸ್ಯ ನಾಟಕ ಮತ್ತು ‘Mr. ರಾವ್ & ಅಸೋಸಿಯೇಟ್ಸ್’ ಫ್ಯಾಮಿಲಿ ಹಿಟ್ ನಗೆ ನಾಟಕ ಪ್ರದರ್ಶನವನ್ನು ದಿನಾಂಕ 22 ಜೂನ್ 2025ರಂದು ಬೆಂಗಳೂರಿನ ಬಸವನಗುಡಿ ಎನ್.ಆರ್. ಕಾಲೋನಿಯಲ್ಲಿರುವ ಡಾ. ಸಿ. ಅಶ್ವಥ್ ಕಲಾಭವನದಲ್ಲಿ ಆಯೋಜಿಲಾಗಿದೆ. ಸಂಜೆ 4-00 ಗಂಟೆಗೆ ಭೀಷ್ಮ ರಾಮಯ್ಯ ರಚನೆ ಮತ್ತು ನಿರ್ದೇಶನದಲ್ಲಿ ‘ಬಾಯ್ಬಡ್ಕಿ’ ಹಾಸ್ಯ ನಾಟಕ ಹಾಗೂ 7-00 ಗಂಟೆಗೆ ಭೀಷ್ಮ ರಾಮಯ್ಯ ರಚಿಸಿದ್ದು, ಭಾಷ್ ರಾಘವೇಂದ್ರ ನಿರ್ದೇಶನದಲ್ಲಿ ‘Mr. ರಾವ್ & ಅಸೋಸಿಯೇಟ್ಸ್’ ಫ್ಯಾಮಿಲಿ ಹಿಟ್ ನಗೆ ನಾಟಕ ಪ್ರದರ್ಶನಗೊಳ್ಳಲಿದೆ. ಬುಕ್ ಮೈ ಶೋನಲ್ಲಿ ಟಿಕೆಟ್ ಲಭ್ಯವಿದ್ದು, ನೇರ ಬುಕ್ಕಿಂಗ್‌ಗಾಗಿ 86605 47776 ಸಂಖ್ಯೆಯನ್ನು ಸಂಪರ್ಕಿಸಬಹುದು.

Read More

ಮಂಗಳೂರು : ಅಮೃತ ಪ್ರಕಾಶ ಪತ್ರಿಕೆ ಮಂಗಳೂರು ಹಾಗೂ ಬೆಸೆಂಟ್ ಮಹಿಳಾ ಪದವಿಪೂರ್ವ ಕಾಲೇಜು ಇವರ ಜಂಟಿ ಆಶ್ರಯದಲ್ಲಿ 106ನೇ ‘ಸಾಹಿತ್ಯ ಅಭಿರುಚಿ ಕಾರ್ಯಕ್ರಮ’ವನ್ನು ದಿನಾಂಕ 27 ಜೂನ್ 2025ರಂದು ಮಧ್ಯಾಹ್ನ 2-30 ಗಂಟೆಗೆ ಮಂಗಳೂರಿನ ಬೆಸೆಂಟ್ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಸೆಂಟ್ ಮಹಿಳಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ನಾಯಕ್ ರೂಪಸಿಂಗ್ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಜನಪದ ವಿದ್ವಾಂಸ ವಾಗ್ಮಿ ಹಾಗೂ ಲೇಖಕರಾದ ಡಾ. ಗಣೇಶ್ ಅಮೀನ್ ಸಂಕಮಾರ್ ಮತ್ತು ನಿವೃತ್ತ ಪ್ರದ್ಯಾಪಕಿ ಹಾಗೂ ಲೇಖಕಿ ಡಾ. ಮೀನಾಕ್ಷಿ ರಾಮಚಂದ್ರ ಇವರುಗಳು ಮುಖ್ಯ ಸಂಪನ್ಮೂಲ ಅತಿಥಿಗಳಾಗಿ ಭಾಗವಹಿಸಲಿರುವರು.

Read More

ಮಂಡ್ಯ : ಪರಿಚಯ ಪ್ರಕಾಶನದ ವತಿಯಿಂದ ನೀಡಲಾಗುವ ‘ಪರಿಚಯ ಮಕ್ಕಳ ಸಾಹಿತ್ಯ ಪ್ರಶಸ್ತಿ’ಗೆ 2024ನೇ ಸಾಲಿನಲ್ಲಿ ಪ್ರಕಟಗೊಂಡಿರುವ ಮಕ್ಕಳ ಸಾಹಿತ್ಯದ ವಿವಿಧ ಪ್ರಕಾರದ ಕೃತಿಗಳನ್ನು ಲೇಖಕ/ಲೇಖಕಿ ಅಥವಾ ಪ್ರಕಾಶಕರಿಂದ ಆಹ್ವಾನಿಸಲಾಗಿದೆ. ಮಕ್ಕಳ ಸಾಹಿತ್ಯದ ಕಾವ್ಯ, ಕಥೆ, ಕಾದಂಬರಿ, ನಾಟಕ, ವಿಮರ್ಶೆ ಹಾಗೂ ಸಂಶೋಧನಾ ಪ್ರಕಾರಗಳು ಸೇರಿದಂತೆ ಒಟ್ಟಾರೆ ಮಕ್ಕಳಿಗೆ ಸಂಬಂಧಪಟ್ಟ ಕೃತಿಗಳನ್ನು ಕಳುಹಿಸಬಹುದಾಗಿದೆ. ಪ್ರಶಸ್ತಿಯು 10,000/- ನಗದು ಮತ್ತು ಫಲಕವನ್ನು ಹೊಂದಿರುತ್ತದೆ. ಆಸಕ್ತ ಸಾಹಿತಿಗಳು ತಮ್ಮ ಪುಸ್ತಕಗಳ ಮೂರು ಪ್ರತಿಗಳನ್ನು ದಿನಾಂಕ 30 ಜೂನ್ 2025ರೊಳಗೆ ತಲುಪುವಂತೆ ಅಂಚೆ ಮೂಲಕ ಎಂ.ಎನ್. ಶಿವಕುಮಾರ ಆರಾಧ್ಯ, ಸಂಸ್ಥಾಪಕರು, ಪರಿಚಯ ಪ್ರಕಾಶನ ನಂ.181, ಮಂಗಲ ಗ್ರಾಮ ಮತ್ತು ಅಂಚೆ, ಮಂಡ್ಯ ತಾಲ್ಲೂಕು, ಮಂಡ್ಯ ಜಿಲ್ಲೆ – 571478 ಈ ವಿಳಾಸಕ್ಕೆ ಕಳುಹಿಸಿಕೊಡಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 991689441 ಸಂಪರ್ಕಿಸಬಹುದು.

Read More

ಕಾಸರಗೋಡು : ಡಾ. ವಾಮನ್ ರಾವ್ ಬೇಕಲ್ – ಸಂದ್ಯಾ ರಾಣಿ ಟೀಚರ್ ಸಾರಥ್ಯದ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕನ್ನಡ ಭವನ ಪ್ರಕಾಶನ, ಕೇರಳ ರಾಜ್ಯ – ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ, ಕಾಸರಗೋಡು ಇದರ ಪ್ರತಿಷ್ಠಿತ ಅಂತಾರಾಜ್ಯ ಪ್ರಶಸ್ತಿಯಾದ ‘ಕನ್ನಡ ಪಯಸ್ವಿನಿ ಪ್ರಶಸ್ತಿ 2025’ ಮಂಗಳೂರಿನ ಸುಪ್ರಸಿದ್ದ ಕವಯತ್ರಿ, ಲೇಖಕಿ, ಉತ್ತಮ ಸಂಘಟಕಿಯಾಗಿರುವ ಶ್ರೀಮತಿ ಅನಿತಾ ಶೆಣೈ ಇವರಿಗೆ ಲಭಿಸಿದೆ. ಕನ್ನಡ ಭವನ ಪ್ರಶಸ್ತಿ ಆಯ್ಕೆ ಸಮಿತಿಯು ಇವರ ಪ್ರಶಸ್ತಿಯನ್ನು ಘೋಷಿಸಿದ್ದು, ದಿನಾಂಕ 22 ಜುಲೈ 2025ರಂದು ಶ್ರೀಮತಿ ಅನಿತಾ ಶೆಣೈ ಇವರ ನಿವಾಸದಲ್ಲಿ ನಡೆಯಲಿರುವ ಕೇರಳ ರಾಜ್ಯ – ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ, ದಕ್ಷಿಣ ಕನ್ನಡ ಜಿಲ್ಲಾ ಘಟಕ ಹಾಗೂ ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಉದ್ಘಾಟನೆಗೊಳ್ಳಲಿರುವ ‘ಮನೆ ಮನೆ ಕನ್ನಡ ಜಾಗೃತಿ ಅಭಿಯಾನ’ ಮತ್ತು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಸಂಸ್ಥೆಯ…

Read More

ಗೋವಾ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಗೋವಾ ಘಟಕದ ದ್ವಿತೀಯ ವರ್ಷದ ವಾರ್ಷಿಕೋತ್ಸವವನ್ನು 22 ಜೂನ್ 2025ರಂದು ಮಧ್ಯಾಹ್ನ 3-00 ಗಂಟೆಗೆ ಗೋವಾ ಪಣಜಿಯ ಇನ್ಸ್ಟಿಟ್ಯೂಟ್ ಮೆನೆಜಸ್ ಬ್ರಗಾನ್ಸಾ ಸಭಾಗೃಹದಲ್ಲಿ ಹಮ್ಮಿಕೊಳ್ಳಲಾಗಿದೆ. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಗೋವಾ ಘಟಕದ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಇರ್ವತ್ತೂರು ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ರಾಜ್ಯ ಸಚಿವರಾದ ಶ್ರೀಪಾದ್ ನಾಯ್ಕ್ ಇವರು ಉದ್ಘಾಟಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಹಳೆಯಂಗಡಿ ಇವರಿಂದ ‘ಶ್ರೀ ದೇವಿ ಮಹಾತ್ಮೆ’ ಎಂಬ ಪ್ರಸಂಗದ ಯಕ್ಷಗಾನ ಬಯಲಾಟ ನಡೆಯಲಿದೆ.

Read More

ಕಿನ್ನಿಗೋಳಿ : ಕಿನ್ನಿಗೋಳಿಯ ಯಕ್ಷಲಹರಿ ಯುಗಪುರುಷ ಸಂಸ್ಥೆಯಲ್ಲಿ ಕಳೆದ 34 ವರ್ಷಗಳಿಂದ ಯಕ್ಷಗಾನದ ಕೈಕಂರ್ಯ ಕಲಾ ಮಾತೆಯ ಸೇವೆ ನಿರಂತರ ನಡೆಯುತ್ತ ಬಂದಿದೆ, ಇದೀಗ 34 ನೇ ವರ್ಷದ ಕಲಾ ಪರ್ವ ಕರ್ಣಾಟಕ ಬ್ಯಾಂಕ್ ಪ್ರಾಯೋಜಿತ ತಾಳಮದ್ದಲೆ ಸ್ಪರ್ಧೆ ಸಪ್ತಾಹ, ಹಾಗೂ ಯಕ್ಷಲ ಹರಿಯ ವಾರ್ಷಿಕೋತ್ಸವ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸಮ್ಮಾನ ಜು.27 ರಿಂದ ಅ. 3 ರತನಕ ನಡೆಯಲಿದೆ ಎಂದು ಯಕ್ಷಲಹರಿ ಸಂಸ್ಥೆಯ ಅಧ್ಯಕ್ಷ ರಘುನಾಥ ಕಾಮತ್ ಕೆಂಚನಕೆರೆ ತಿಳಿಸಿದರು. ಅವರು ಕಿನ್ನಿಗೋಳಿಯ ದುರ್ಗಾ ರೆಸಿಡೆನ್ಸಿಯ ಸಭಾಭವನ ದಲ್ಲಿ ನಡೆದ ತಾಳಮದ್ದಳೆ ಸ್ಪರ್ಧೆ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿ, 7 ದಿನಗಳಲ್ಲಿ ಆಹ್ವಾನಿತ ಹವ್ಯಾಸಿ ತಂಡಗಳ ತಾಳಮದ್ದಳೆ ಸ್ಪರ್ಧೆ ನಡೆಯಲಿದ್ದು, ವಾರ್ಷಿಕೋತ್ಸವ ಸಂದರ್ಭದಲ್ಲಿ ಪ್ರತಿ ವರ್ಷ ಕಲಾವಿದರ ಸಮ್ಮಾನ ಜತೆಗೆ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಸಹಕಾರ ನೀಡುವ ಯೋಜನೆ ನಡೆಯಲಿದೆ ಎಂದರು. ತಾಳಮದ್ದಳೆ ಸ್ಪರ್ಧಾ ಸಪ್ತಾಹದಲ್ಲಿ ಪ್ರತಿದಿನ ಸಭಾ ಕಾರ್ಯಕ್ರಮದಲ್ಲಿ ಹವ್ಯಾಸಿ ಹಿರಿಯ ಕಲಾವಿದರಿಗೆ ಗೌರವ, ಅಗಲಿದ…

Read More