Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಿರಿಯ ಸಾಹಿತಿ, ಚಿಂತಕ, ವಿಮರ್ಶಕ, ಹೋರಾಟಗಾರ ಚಂದ್ರಶೇಖರ ಪಾಟೀಲ್ ಅವರ 84ನೆಯ ಜನ್ಮದಿನದ ಹಿನ್ನೆಲೆಯಲ್ಲಿ ಪುಷ್ಪನಮನ ಕಾರ್ಯಕ್ರಮ ಪರಿಷತ್ತಿನ ಪಂಪ ಸಭಾಂಗಣದಲ್ಲಿ ದಿನಾಂಕ : 19-06-2023ರಂದು ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಮಾತನಾಡುತ್ತಾ “ಕನ್ನಡವನ್ನು ಸದಾ ತಮ್ಮ ಸಂಗಡ ಇಟ್ಟುಕೊಂಡಿದ್ದ ಚಂದ್ರಶೇಖರ ಪಾಟೀಲರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮಹತ್ವದ ಕೊಡುಗೆಯನ್ನು ನೀಡುವುದರ ಜೊತೆ ‘ಕನ್ನಡ ಕನ್ನಡ ಬರ್ರೀ ನಮ್ಮ ಸಂಗಡ’ ಎಂಬ ಕವಿತೆಯನ್ನು ನೀಡುವ ಮೂಲಕ ಸಮಸ್ತ ಕನ್ನಡ ನಾಡನ್ನು ಒಂದಾಗಿಸುವ ಮಹತ್ತರ ಕಾರ್ಯವನ್ನು ಮಾಡಿದ್ದ ಇವರು, ಕನ್ನಡ ನಾಡು, ನುಡಿ ಸಮುದಾಯ ಬಗ್ಗೆ ಅಪಾರ ಅಭಿಮಾನವನ್ನು ಹೊಂದಿದ್ದರು. ತಮ್ಮ ನಿಷ್ಠೂರ ವಾದದ ಮೂಲಕವೇ ಎಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಚಂಪಾರವರು ನೆಲೆ ನಿಂತಿದ್ದ ಚಂಪಾರವರು ಮೈಸೂರಿನಲ್ಲಿ ನಡೆದ 83ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ…
ತೆಂಕಮಿಜಾರು : ಶ್ರೀ ರಾಧಾಕೃಷ್ಣ ಭಜನಾ ಮಂಡಳಿ ನೀರ್ಕೆರೆ ಇದರ ಆಶ್ರಯದಲ್ಲಿ ಕುಣಿತ ಭಜನಾ ಸ್ಪರ್ಧೆ ‘ತಾಳ ನಿನಾದಂ-2023’ ದಿನಾಂಕ 18-06-2023ರಂದು ನೀರ್ಕೆರೆಯ ಜಾರಂದಾಯ ದೈವಸ್ಥಾನದ ಮುಂಭಾಗದ ಶ್ರೀರಾಮಕೃಷ್ಣ ಸಭಾಭವನದಲ್ಲಿ ನೆರವೇರಿತು. ಬೆಳಿಗ್ಗೆ ಕುಡುವಿ ಪಾಳ್ಯ ಪೂಮಾವರದ ಗುರಿಕಾರರಾದ ಸಂಜೀವ ಗೌಡರವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಜಾರಂದಾಯ ಸೇವಾ ಟ್ರಸ್ಟ್ ನೀರ್ಕೆರೆಯ ಗೌರವಾಧ್ಯಕ್ಷರಾದ ಶ್ರೀ ಪೈ. ರಾಧಾಕೃಷ್ಣ ತಂತ್ರಿಯವರು ದೀಪ ಪ್ರಜ್ವಲನೆ ಗೈದು ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಜಾರಂದಾಯ ಸೇವಾ ಟ್ರಸ್ಟ್ ನೀರ್ಕೆರೆಯ ಅಧ್ಯಕ್ಷರಾದ ಶ್ರೀ ಅಜಿತ್ ರಾಜ್ ಜೈನ್, ಮಹಾಲಸಾ ಕ್ಲಿನಿಕ್ ನೀರ್ಕೆರೆಯ ಡಾ. ನಾರಾಯಣ ಪೈ, ಖ್ಯಾತ ಯಕ್ಷಗಾನ ಹಿಮ್ಮೇಳ ವಾದಕರಾದ ಶ್ರೀ ಮೋಹನ ಶೆಟ್ಟಿಗಾರ್ ಮಿಜಾರು ಹಾಗೂ ನೀರ್ಕೆರೆಯ ಭಜನಾ ಮಂಡಳಿ ಅಧ್ಯಕ್ಷರಾದ ಜಯರಾಜ್ ಕುಮಾರ್ ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದ ಬಳಿಕ ನಡೆದ ಭಜನಾ ಸ್ಪರ್ಧೆಯಲ್ಲಿ ದ.ಕ. ಹಾಗೂ ಉಡುಪಿ ಜಿಲ್ಲೆಯ 20 ತಂಡಗಳು ಭಾಗವಹಿಸಿದ್ದವು. ಸಂಜೆ ನಡೆದ ಪ್ರಶಸ್ತಿ…
ಕಾಸರಗೋಡು: ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಸ್ಥೆಯಾದ ರಂಗ ಚಿನ್ನಾರಿ ಇದರ ಅಂಗಸಂಸ್ಥೆಯಾದ ನಾರಿಚಿನ್ನಾರಿಯ 6ನೇ ಸರಣಿ ಕಾಯ೯ಕ್ರಮ ‘ಗಾನಯಾನ’ವು ದಿನಾಂಕ 17-06-2023 ರಂದು ಸಂಗೀತ ಶಿಕ್ಷಕರಾದ ಉಷಾ ಈಶ್ವರ ಭಟ್ ದಂಪತಿಯ ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆಯ ಸಹಯೋಗದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು. ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡಮಿಯ ಮಾಜಿ ವಿಭಾಗ ಮುಖ್ಯಸ್ಥರಾದ ಡಾ. ರೇಖಾ ರೈ “ಇಂದಿನ ದಿನಗಳಲ್ಲಿ ಮಹಿಳೆ ಮತ್ತು ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ವೇದಿಕೆಯನ್ನು ಕಲ್ಪಿಸಿ ಸದಭಿರುಚಿಯ ಕಲೆಯೂ, ಕಲಾವಿದರೂ ಬೆಳೆಯುವಂತೆ ಮಾಡುವ ನಾರಿಚಿನ್ನಾರಿಯ ಪ್ರಯತ್ನ ಶ್ಲಾಘನೀಯ” ಎಂದರು. ಶುಭಾಶಂಸನೆಗೈದ ಖ್ಯಾತ ನೇತ್ರ ತಜ್ಞೆ, ಡಾ.ಸುಮತಿ ಗಣೇಶ್ ಅವರು “ನಾರಿಚಿನ್ನಾರಿ ಸಂಘಟನೆಯ ಭಾಗವಾಗಿರುವುದಕ್ಕೆ ಹಷ೯ವನ್ನು ವ್ಯಕ್ತಪಡಿಸಿ, ಇಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಮತ್ತಷ್ಟು ಬೆಳೆಯಬೇಕು” ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಹಿರಿಯ ಪ್ರಸೂತಿ ತಜ್ಞೆ, ವೈದ್ಯೆ ಡಾ.ಯಶೋದಾ ಅವರನ್ನು ಶಾಲು ಹೊದಿಸಿ, ಫಲಪುಷ್ಪಗಳನ್ನು ಮತ್ತು ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.…
ಮಂಗಳೂರು : ಸನಾತನ ನಾಟ್ಯಾಲಯ ಆಯೋಜಿಸಿದ ಕೀರ್ತಿಶೇಷ ಸ್ವರುಣ್ರಾಜ್ ಸ್ಮರಣೆಯ 10ನೇ ವರ್ಷದ ಕಾರ್ಯಕ್ರಮವು ‘ಸ್ವರುಣ್ ಸ್ಮರಣಾಂಜಲಿ’ ದಿನಾಂಕ 09-06-2023ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮದ ಸಭಾಧ್ಯಕ್ಷ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ.ಮೋಹನ ಆಳ್ವ, ಸ್ವರುಣ್ ರಾಜ್ ಗೆ ನುಡಿನಮನ ಸಲ್ಲಿಸಲಿರುವ ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಶಾಸಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಸ್ವರುಣ್ ರಾಜ್ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಸ್ವರುಣ್ ರಾಜ್ ರವರ ತಂದೆಯವರಾದ ಶ್ರೀ ಸುರೇಶ್ ರಾಜ್, ತಾಯಿ ಶ್ರೀಮತಿ ಮನುರಾಜ್ ಮತ್ತು ರಾಷ್ಟ್ರ ಮತ್ತು ಧರ್ಮ ಜಾಗೃತಿ ಸಂದೇಶ ನೀಡಲು ಆಗಮಿಸಿದ್ದ ಹಿರೇಮಗಳೂರು ಕಣ್ಣನ್ ಇವರೆಲ್ಲರೂ ಸ್ವರುಣ್ರಾಜ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಸನಾತನ ನಾಟ್ಯಾಲಯದ ನಿರ್ದೇಶಕರಾದ ಶ್ರೀ ಚಂದ್ರಶೇಖರ ಕೆ. ಶೆಟ್ಟಿಯವರು ಪ್ರಾಸ್ತಾವಿಕ ನುಡಿಗಳನ್ನಾಡಿ ಸರ್ವರನ್ನೂ ಸ್ವಾಗತಿಸಿದರು. ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ನುಡಿನಮನ ಸಲ್ಲಿಸುತ್ತಾ “ಎಳೆಯ ವಯಸ್ಸಿನಲ್ಲಿಯೇ ಅಪರಿಮಿತ ಜೀವನೋತ್ಸಾಹ, ಸಮಾಜೋನ್ಮುಖ ಕೆಲಸಗಳ ಬಗ್ಗೆ ತುಡಿತ ಮತ್ತು ದೂರದೃಷ್ಟಿಯ…
ಮಂಗಳೂರು : ನಂತೂರು ಶ್ರೀ ಭಾರತಿ ಕಾಲೇಜಿನ ಶಂಕರ ಶ್ರೀ ಸದನದಲ್ಲಿ ತುಳು ಕೂಟದ ವತಿಯಿಂದ ದಿನಾಂಕ : 18-06-2023ರಂದು ಆಯೋಜಿಸಲಾದ ‘ಕುಡ್ಲದ ಬಂಗಾರ್ ಪರ್ಬ’ದ, ಸರಣಿ ಕಾರ್ಯಕ್ರಮ ನಾಲ್ಕರಲ್ಲಿ ಪಾಲ್ಗೊಂಡ ತುಳು ವಿದ್ವಾಂಸ, ಕ.ತು. ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್ ಅವರು ಮಾತನಾಡುತ್ತಾ “ತುಳು ಯಕ್ಷಗಾನದ ಪ್ರಸಂಗ ರಚನೆ ಬಹಳ ಸಾಹಿತ್ಯ ಪೂರ್ಣವಾದುದು. ತುಳು ಯಕ್ಷ ರಂಗಭೂಮಿ ಸಮೃದ್ಧವಾಗಲು ಇದು ಸಹಕಾರಿಯಾಗಿವೆ. ಅದೇ ನಿಟ್ಟಿನಲ್ಲಿ ಕಲಾವಿದರೂ ಕೂಡಾ ಉತ್ತಮ ಸಾಹಿತ್ಯಕ ಭಾಷಾ ಪದಗಳನ್ನೇ ಬಳಸಿ ಕಲೆಯನ್ನು ಶ್ರೀಮಂತಗೊಳಿಸಿದ್ದಾರೆ. ಇದರಲ್ಲಿ ಆಗಿ ಹೋದ ಪ್ರಸಂಗಕರ್ತರು ಮತ್ತು ಈಗಿರುವ ಪಸಂಗಕರ್ತರು ತುಳು ಭಾಷೆಯ ಪ್ರೌಢಿಮೆಯನ್ನು ಮೆರೆದಿದ್ದಾರೆ ಎಂಬುದೇ ನಮಗೆ ಹೆಮ್ಮೆ. ಇಂದಿನ ಯುವ ಪೀಳಿಗೆ ತಮ್ಮ ಶಿಕ್ಷಣದ ಜತೆ ಇದನ್ನೂ ಕಲಿತಾಗ ಅದು ಜೀವನಕ್ಕೆ ನೀಡುವಂತಾಗುತ್ತದೆ. ನಾವು ತುಳು ಭಾಷಿಕರೇ ಈ ಕಾರ್ಯವನ್ನು ಮಾಡಬೇಕು, ಅನ್ಯಭಾಷಾ ಹೊಡೆತಗಳ ಮಧ್ಯೆ ನಮ್ಮ ತೌಳವ ಬದುಕು ಸಾಹಿತ್ಯ, ಆಡುಭಾಷೆ ಸೊರಗಲು ನಾವು…
ಮಂಗಳೂರು : ಕೊಂಕಣಿ ಅಧ್ಯಯನ ಪೀಠ ಮತ್ತು ಕೆನರಾ ಕಾಲೇಜಿನ ವಿವಿಧ ಭಾಷಾ ಸಂಘಗಳ ಆಶ್ರಯದಲ್ಲಿ ‘ಟ್ರಾನ್ಸ್ಲೇಷನ್ ಟುಡೇ ಪ್ರಿನ್ಸಿಪಲ್ಸ್ ಅಂಡ್ ಚಾಲೆಂಜಸ್’ ಎಂಬ ವಿಷಯದಲ್ಲಿ ವಿಚಾರ ಸಂಕಿರಣವು ದಿನಾಂಕ : 07-06-2023ರಂದು ನಡೆಯಿತು. “ಭಾಷಾಂತರ ಇಂದು ತಂತ್ರಜ್ಞಾನವನ್ನು ಬಳಸಿಕೊಂಡು ಮಾಡುವ ಕೆಲಸವಾಗಿದೆ. ಭಾಷೆಗಳು ಮಾನವ ಜನಾಂಗದ ಮಧ್ಯೆ ಅಡ್ಡಗೋಡೆ ಕಟ್ಟುತ್ತವೆ. ಆದರೆ ಭಾಷಾಂತರ ಅವುಗಳನ್ನು ಒಡೆಯುತ್ತವೆ. ನಾವು ಕಲಿಯದ ಭಾಷೆಗಳಲ್ಲಿರುವ ಅಮೂಲ್ಯ ವಿಚಾರಗಳನ್ನು ಭಾಷಾಂತರಗಳ ಮೂಲಕ ಕಲಿಯಬಹುದು. ಇಂದು ಉತ್ತಮ ಭಾಷಾಂತರಕಾರನಿಗೆ ಒಳ್ಳೆಯ ಉದ್ಯೋಗಾವಕಾಶವಿದೆ” ಎಂದು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದು ಶ್ರೀನಿವಾಸ ವಿಶ್ವವಿದ್ಯಾನಿಲಯದ ಸಂಶೋಧನ ವಿಭಾಗದ ಡಾ. ಬಿ. ದೇವದಾಸ್ ಪೈ ಅಭಿಪ್ರಾಯ ಪಟ್ಟರು. ಕೊಂಕಣಿ ಅಧ್ಯಯನ ಕೇಂದ್ರದ ಸಂಯೋಜಕರಾಗಿರುವ ಡಾ. ಜಯವಂತ ನಾಯಕ್ ಮಾತನಾಡಿ ಕೊಂಕಣಿ ಭಾಷೆ ಸಾಹಿತ್ಯ ಹಾಗೂ ಕರಾವಳಿಗೆ ಯು.ಶ್ರೀನಿವಾಸ ಮಲ್ಯ, ಜಾರ್ಜ್ ಫೆರ್ನಾಂಡಿಸ್ ಮುಂತಾದ ದೇಶ ಕಂಡ ನಾಯಕರು ನೀಡಿದ ಕೊಡುಗೆಯನ್ನು ಸ್ಮರಿಸಿದರು. ಕಾಲೇಜಿನ ಆಡಳಿತಾಧಿಕಾರಿ ಡಾ. ದೀಪ್ತಿ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಎಲ್ಲಾ…
ಬೆಂಗಳೂರು: ಕರ್ನಾಟಕ ಕನ್ನಡ ಬರಹಗಾರರ ಸಂಘದ 20ನೇ ವಾರ್ಷಿಕೋತ್ಸವ ಹಾಗೂ 2022ನೇ ಸಾಲಿನ ರಾಜ್ಯಮಟ್ಟದ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ದಿನಾಂಕ 24.06.2023ನೇ ಶನಿವಾರ ಬೆಳಿಗ್ಗೆ ಬೆಂಗಳೂರಿನ ಕುಮಾರ ಪಾರ್ಕ್ ಪೂರ್ವದಲ್ಲಿರುವ ಗಾಂಧಿ ಭವನದ ಮಹದೇವ ದೇಸಾಯಿ ಸಭಾಂಗಣದಲ್ಲಿ ನಡೆಯಲಿರುವುದು. ಗುಲ್ಬರ್ಗಾದ ಡಾ.ಪಿ.ಎಸ್.ಶಂಕರ್ ಅವರು – ‘ಸಾಹಿತ್ಯ ರತ್ನ ಪ್ರಶಸ್ತಿ’, ಹಾಸನದ ಶ್ರೀ ಕೌಶಿಕ್ ಕೂಡುರಸ್ತೆಯವರು ‘ಯುವ ಸಾಹಿತ್ಯ ರತ್ನ ಪ್ರಶಸ್ತಿ’, ಮೈಸೂರಿನ ಪುಸ್ತಕ ಪ್ರಕಾಶನದ ಪ್ರೊ.ಬಿ.ಎನ್.ಶ್ರೀರಾಮ ಅವರು ‘ಪುಸ್ತಕ ರತ್ನ ಪ್ರಶಸ್ತಿ’, ಮೈಸೂರಿನವರೇ ಆದ ಮೈಸೂರ್ ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್ ಹೌಸ್ನ ಶ್ರೀ ಜಿ.ಎಚ್.ಕೃಷ್ಣಮೂರ್ತಿಯವರು ‘ಮುದ್ರಣ ರತ್ನ ಪ್ರಶಸ್ತಿ’ಗಳಿಗೆ ಆಯ್ಕೆಯಾಗಿದ್ದು ಈ ಪ್ರಶಸ್ತಿಯು ಫಲಕ ಹಾಗೂ ರೂಪಾಯಿ 10,000/- ನಗದು ಪುರಸ್ಕಾರವನ್ನು ಒಳಗೊಂಡಿದೆ . ಇದೇ ಸಂದರ್ಭದಲ್ಲಿ ಪ್ರಶಸ್ತಿ ಪ್ರಧಾನ ನೆರವೇರಿಸಿಕೊಡಲು ಆಗಮಿಸುತ್ತಿರುವ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಯವರಾದ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯನವರಿಗೆ “ಗೌರವಾಭಿನಂದನೆಯನ್ನು” ಮಾಡಲಾಗುವುದು. ಸಂಘದ ಅಧ್ಯಕ್ಷರಾದ ಶ್ರೀ ನಿಡಸಾಲೆ ಪುಟ್ಟಸ್ವಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ನಾಡೋಜ ಡಾ.ಹಂಪ…
ಮಂಗಳೂರು : ನಗರದ ಕೊಡಿಯಾಲ್ ಬೈಲ್ ಭಗವತಿ ನಗರದಲ್ಲಿರುವ ಮಹಾಲಸಾ ಕಾಲೇಜ್ ಆಫ್ ವಿಶುವಲ್ ಆರ್ಟ್ ವಾರ್ಷಿಕೋತ್ಸವ ಮತ್ತು ಇನ್ ಸ್ಪೈಯರ್ ಚಿತ್ರಕಲೆ ಪ್ರದರ್ಶನ ದಿನಾಂಕ 14-06-2023ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಶಾಸಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ “ಚಿತ್ರಕಲೆ ಎಂಬುದು ನಮ್ಮ ಮನಸ್ಸಿನ ಭಾವನೆಗಳನ್ನು ಬಣ್ಣ ತುಂಬಿ ಅತ್ಯಂತ ಅದ್ಭುತವಾಗಿ ಜಗತ್ತಿಗೆ ಅರ್ಪಣೆ ಮಾಡುವ ಒಂದು ವಿಶೇಷದ ಕಾಣಿಕೆ. ಇಲ್ಲಿಯ ಕಲಾಕೃತಿಗಳನ್ನು ಗಮನಿಸುವಾಗ ಎಲ್ಲವೂ ಭಾರತೀಯ ಜನ ಜೀವನವನ್ನು ಪ್ರತಿ ಬಿಂಬಿಸುವ ರೀತಿಯಲ್ಲಿ ಚಿತ್ತಾರಗೊಂಡಿದೆ. ಹಾಗಾಗಿ ನಮ್ಮ ಪರಂಪರೆಯನ್ನು ಜ್ಞಾಪಿಸುವ ನಿಮ್ಮೆಲ್ಲರ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಮಹಾಲಸಾ ಸಂಸ್ಥೆಯ ಒಬ್ಬ ವಿದ್ಯಾರ್ಥಿನಿಯು ಮಾಡಿದ ಒಂದು ಕಲಾಕೃತಿ ರಾಷ್ಟ್ರೀಯ ಮಟ್ಟದಲ್ಲಿ ಹೆಮ್ಮೆಯ ಪ್ರಧಾನ ಮಂತ್ರಿಗಳ ಕಚೇರಿಯಲ್ಲಿ ಪ್ರದರ್ಶನಗೊಂಡಿದೆ. ಈ ಸಂಸ್ಥೆ ಸುಪ್ತ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದ್ದರಿಂದಲೇ ಇದು ಸಾಧ್ಯವಾಗಿದೆ” ಎಂದು ಅಭಿಪ್ರಾಯಪಟ್ಟರು. ಹಂಪಿ ಕನ್ನಡ ವಿ.ವಿ.ಯ ಮ್ಯಾನೇಜ್ಮೆಂಟ್ ಸೆಂಟರ್ ಆಫ್ ಆರ್ಟ್ ಕಾಲೇಜಿನ…
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ‘ಡಾ. ಹೆಚ್. ವಿಶ್ವನಾಥ ಮತ್ತು ಶ್ರೀಮತಿ ಎಂ.ಎಸ್. ಇಂದಿರಾ ದತ್ತಿ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 16-06-2023ನೇ ಶುಕ್ರವಾರದಂದು ಪರಿಷತ್ತಿನ ಶ್ರೀ ಕೃಷ್ಣರಾಜ ಮಂದಿರದಲ್ಲಿ ನಡೆಯಿತು. 2023ನೆಯ ಸಾಲಿನ ಈ ಪ್ರಶಸ್ತಿಯನ್ನು ವಿಶೇಷ ದೃಷ್ಟಿ ಚೇತನ ಲೇಖಕರಾದ ಉಡುಪಿಯ ಶ್ರೀಮತಿ ಸೌಮ್ಯ ಪುತ್ರನ್ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ನಾಡೋಜ ಡಾ. ಮಹೇಶ ಜೋಶಿ “ಶೇ 7.5ರಷ್ಟು ದೃಷ್ಟಿ ವೈಕಲ್ಯ ಇರುವ ಸೌಮ್ಯ ಅದರ ನಡುವೆಯೂ ನಿರಂತರವಾಗಿ ಜೀವನ ನಿರ್ವಹಿಸುತ್ತ ಸಾಗಿದ್ದು ಶ್ಲಾಘನೀಯ. ಈಗ ದೃಷ್ಟಿ ವೈಕಲ್ಯದಿಂದಾಗಿ ಸ್ವತಃ ಬರೆಯಲು ಸಾಧ್ಯವಾಗದೆ, ಆಧುನಿಕ ತಂತ್ರಜ್ಞಾನದ ಅನುಸಾರ ಧ್ವನಿ ಮುದ್ರಿಸಿ, ಇನ್ನೊಬ್ಬರಿಂದ ಬರೆಯಿಸಿ, ಮತ್ತೆ ಮತ್ತೆ ಓದಿಸಿ, ಅದನ್ನು ಸರಿಪಡಿಸಿಕೊಳ್ಳುತ್ತಾರೆ. ಈ ಕಾರ್ಯದಲ್ಲಿ ಅವರ ಕಾರ್ಯತತ್ಪರತೆ, ಪರಿಶ್ರಮ, ತಾಳ್ಮೆ, ಸಹನೆಯನ್ನು ಗೌರವಿಸಲೇಬೇಕು” ಎಂದರು. ಪ್ರಶಸ್ತಿ ಪ್ರಧಾನ ಮಾಡಲು ಆಗಮಿಸಿದ ನಿವೃತ್ತ ಐ.ಎ.ಎಸ್. ಅಧಿಕಾರಿಗಳಾದ ಶ್ರೀ ಚಿರಂಜೀವಿ ಸಿಂಗ್ ಮಾತನಾಡಿ “ಕನ್ನಡ…
ಮಂಗಳೂರು: ದಿನಾಂಕ 04-06-2023ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ವಿದುಷಿ ಶ್ರೀಮತಿ ಬಿ. ಸುಮಂಗಲಾ ರತ್ನಾಕರ್ ರಾವ್ ಇವರ ಭರತನಾಟ್ಯ ಮಾರ್ಗದ ಕನ್ನಡ ನೃತ್ಯಬಂಧಗಳಿಗೆ ಸಂಬಂಧಪಟ್ಟಂತೆ ‘ನೃತ್ಯಕಾವ್ಯ’ ಕೃತಿಯ ಲೋಕಾರ್ಪಣೆ ಹಾಗೂ ಆತನ ಭಾವ ಛಾಯೆಗಳಿಗೆ ಸಂಬಂಧಿಸಿದ ‘ಭಾವಸ್ಥ’ ಎಂಬ ಶೀರ್ಷಿಕೆಯಡಿಯಲ್ಲಿ ನೃತ್ಯಗಳ ಪ್ರದರ್ಶನಗೊಂಡಿತು. ಶ್ರೀ ವಿಜಯಕುಮಾರ್ ಎಸ್. ಚೆನ್ನೈ, ಶ್ರೀ ಸಾಗರ್ ಟಿ.ಎಸ್. ತುಮಕೂರು, ಶ್ರೀ ಅನಿಲ್ ಅಯ್ಯರ್ ಬೆಂಗಳೂರು, ಶ್ರೀ ಬಿ. ದೀಪಕ್ ಕುಮಾರ್ ಪುತ್ತೂರು, ಶ್ರೀ ಪ್ರಮೋದ್ ಕುಮಾರ್ ಉಳ್ಳಾಲ, ಶ್ರೀ ಸುಜಯ್ ಶ್ಯಾನುಭಾಗ ಹುಬ್ಬಳ್ಳಿ ಈ ಆರೂ ಮಂದಿ ಭರತನಾಟ್ಯ ಕಲಾವಿದರು ವಿದ್ವಾನ್ ಶ್ರೀಕಾಂತ್ ಗೋಪಾಲಕೃಷ್ಣನ್ ಚೆನ್ನೈ ಇವರ ಅದ್ಭುತ ಕಂಠಸಿರಿಗೆ, ವಿದುಷಿ ಬಿ. ಸುಮಂಗಲಾ ರತ್ನಾಕರ್ ರಾವ್ ಇವರ ನಟುವಾಂಗ, ಶ್ರೀ ಕೇಶವ ಮೋಹನ ಮೈಸೂರು ಇವರ ವಯೋಲಿನ್ ವಾದನ ಹಾಗೂ ಶ್ರೀ ವಿನಯ್ ನಾಗರಾಜ್ ಬೆಂಗಳೂರು ಇವರ ಮೃದಂಗ ವಾದನ, ಈ ಎಲ್ಲಾ ಹಿಮ್ಮೇಳಕ್ಕೆ ಅದ್ಭುತ ನೃತ್ಯ ಪ್ರದರ್ಶನ ನೀಡಿದ್ದಾರೆ. ಹಿರಿಯರಾದ ಕರ್ನಾಟಕ…