Author: roovari

ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಮತ್ತು ಸುರತ್ಕಲ್ ನಾಗರಿಕ ಸಲಹಾ ಸಮಿತಿ (ರಿ.) ಈ ಸಂಸ್ಥೆಗಳು ಜಂಟಿಯಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನಡೆಸಿಕೊಂಡು ಬರುತ್ತಿರುವ ‘ಉದಯರಾಗ – 51’ನೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ಸುರತ್ಕಲ್ಲಿನ ಫ್ಲೈ ಓವರಿನ ಕೆಳಗಡೆ ದಿನಾಂಕ 24-03-2024 ಭಾನುವಾರ ಪೂರ್ವಾಹ್ನ ಗಂಟೆ 6ಕ್ಕೆ ನಡೆಯಲಿದೆ. ಸಾರಡ್ಕದ ರೋಶ್ನಿ ಉಪಾಧ್ಯಾಯ ಇವರ ಹಾಡುಗಾರಿಕೆಗೆ ಪುತ್ತೂರಿನ ತನ್ಮಯಿ ಉಪ್ಪಂಗಳ ವಯಲಿನ್ ಮತ್ತು ಮಂಗಳೂರಿನ ಅವಿನಾಶ್ ಬಿ. ಮೃದಂಗದಲ್ಲಿ ಸಹಕರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸುರತ್ಕಲ್ ಇನ್ನರ್ವೀಲ್ ಕ್ಲಬ್ ಇದರ ಅಧ್ಯಕ್ಷರಾದ ಶ್ರೀಮತಿ ಸಾವಿತ್ರಿ ರಮೇಶ್ ಭಟ್ ಇವರು ಭಾಗವಹಿಸಲಿರುವರು. ಮಣಿ ಕೃಷ್ಣಸ್ವಾಮಿ, ಆಕಾಡಮಿಯ ಕಾರ್ಯದರ್ಶಿಯಾದ ಪಿ. ನಿತ್ಯಾನಂದ ರಾವ್ ಹಾಗೂ ಸುರತ್ಕಲ್ ನಾಗರಿಕ ಸಲಹಾ ಸಮಿತಿ ಅಧ್ಯಕ್ಷರಾದ ಡಾ. ಕೆ. ರಾಜಮೋಹನ್ ರಾವ್ ತಮಗೆಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.

Read More

ಮಂಗಳೂರು : ‘ನಿರ್ದಿಗಂತ’ ವತಿಯಿಂದ ‘ನೇಹದ ನೇಯ್ಗೆ’ ನಾಟಕ, ಸಂಗೀತ, ಚಿತ್ರ, ಸಿನೆಮಾ, ಸಾಹಿತ್ಯಗಳ ಸಮ್ಮಿಲನದ ‘ರಂಗೋತ್ಸವ’ ಕಾರ್ಯಕ್ರಮವು ಚಿಕ್ಕಮಗಳೂರಿನ ಕಲಾಮಂದಿರ, ಬಯಲುರಂಗ ಸಂಭ್ರಮ ಮತ್ತು ಹೇಮಾಂಗಣಗಳಲ್ಲಿ ದಿನಾಂಕ 27-03-2024ರಿಂದ 01-04-2024ರ ತನಕ ಆಯೋಜಿಸಲಾಗಿದೆ. ದಿನಾಂಕ 27-03-2024ರಂದು ಗಂಟೆ 5.30ಕ್ಕೆ ಕಲಾಮಂದಿರದಲ್ಲಿ ಕೃಷಿಕರು ಹಾಗೂ ನಟರಾದ ಕಿಶೋರ್ ಇವರಿಂದ ಈ ರಂಗೋತ್ಸವವು ಉದ್ಘಾಟನೆಗೊಳ್ಳಲಿದೆ. ನಿರ್ದಿಗಂತ ರಂಗ ತಂಡದವರಿಂದ ಹಾಡುಗಳ ಪ್ರಸ್ತುತಿ ಮತ್ತು ಗಂಟೆ 7-00ಕ್ಕೆ ಶ್ರವಣ ಹೆಗ್ಗೋಡು ನಿರ್ದೇಶನದಲ್ಲಿ ಮಂಗಳೂರಿನ ಕಲಾಭಿ ಪ್ರಸ್ತುತ ಪಡಿಸುವ ‘ಎ ಫ್ರೆಂಡ್ ಬಿಯಾಂಡ್ ದಿ ಫೆನ್ಸ್’ ನಾಟಕದ ಪ್ರದರ್ಶನ ನಡೆಯಲಿದೆ. ದಿನಾಂಕ 28-03-2024ರಂದು ಗಂಟೆ 9.30ಕ್ಕೆ ಹೇಮಾಂಗಣದಲ್ಲಿ ಸಂವಾದ 1ರಲ್ಲಿ ‘ರಂಗ ಸಂವಾದಗಳು’, ಸಂವಾದ 2ರಲ್ಲಿ ‘ಪ್ರಯೋಗಗೊಂಡ ನಾಟಕದ ಚರ್ಚೆ’ ಮತ್ತು ಶಶಿಧರ ಅಡಪ ಇವರಿಂದ ರಂಗವಿನ್ಯಾಸ ಪ್ರಾತ್ಯಕ್ಷಿಕೆ, 3-00 ಗಂಟೆಗೆ ಅಕ್ಷತಾ ಪಾಂಡವಪುರ ಇವರ ರಚನೆ, ನಿರ್ದೇಶನ ಹಾಗೂ ಅಭಿನಯದಲ್ಲಿ ‘ಲೀಕ್ ಔಟ್’ ನಾಟಕದ ಪ್ರದರ್ಶನ, ಗಂಟೆ 5.30ಕ್ಕೆ ಮೈಸೂರಿನ ರಿದಂ ಅಡ್ಡಾ ಇವರಿಂದ…

Read More

ಕೋಟ :  ಕಳೆದ 50 ವರ್ಷಗಳಿಂದ ಯಕ್ಷಗಾನ ಕ್ಷೇತ್ರಕ್ಕೆ ತನ್ನದೇ ಆದ ಸೇವೆ ಸಲ್ಲಿಸುತ್ತಾ ಬಂದಿರುವ ಹಂಗಾರಕಟ್ಟೆ, ಐರೋಡಿಯ ಯಕ್ಷಗಾನ ಕಲಾಕೇಂದ್ರ ಮಕ್ಕಳಿಗಾಗಿ ‘ನಲಿ- ಕುಣಿ’ ಯಕ್ಷಗಾನ ತರಬೇತಿ ಶಿಬಿರವನ್ನು ಆಯೋಜಿಸುತ್ತಿದೆ. ದಿನಾಂಕ 13-04-2024 ರಿಂದ 28-04-2024ರ ವರೆಗೆ ಬೆಳಿಗ್ಗೆ 9:15ರಿಂದ ಮಧ್ಯಾಹ್ನ 1.15ರ ವರೆಗೆ ಸಾಲಿಗ್ರಾಮದ ಗುಂಡ್ಮಿಯಲ್ಲಿರುವ ಕಲಾಕೇಂದ್ರದ ಸದಾನಂದ ರಂಗ ಮಂಟಪದಲ್ಲಿ ನಡೆಯಲಿರುವ ಈ ಶಿಬಿರದಲ್ಲಿ ಯಕ್ಷಗಾನ ನೃತ್ಯ ಹಾಗೂ ಅಭಿನಯ ತರಬೇತಿಯನ್ನು ನೀಡಲಾಗುವುದು. ಖ್ಯಾತ ಯಕ್ಷಗಾನ ವಿದ್ವಾಂಸರು ಹಾಗೂ ತರಬೇತುದಾರರಾದ ಪ್ರಾಚಾರ್ಯ ಗುಂಡ್ಮಿ ಸದಾನಂದ ಐತಾಳರ ನಿರ್ದೇಶನದಲ್ಲಿ ನಡೆಯುವ ಈ ತರಬೇತಿ ಶಿಬಿರದಲ್ಲಿ ಸಹ ಶಿಕ್ಷಕರಾಗಿ ಗಣೇಶ ಚೇರ್ಕಾಡಿ ಭಾಗವಹಿಸಲಿದ್ದಾರೆ. ತರಬೇತಿ ಶಿಬಿರವನ್ನು ಸೇರಲಿಚ್ಚಿಸುವ ವಿದ್ಯಾರ್ಥಿಗಳ ಪೋಷಕರು ರಾಜಶೇಖರ ಹೆಬ್ಬಾರ್, ಕಾರ್ಯದರ್ಶಿ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ (ದೂರವಾಣಿ ಸಂಖ್ಯೆ 9880605610) ಅಥವಾ ಗುಂಡ್ಮಿ ರಾಮಚಂದ್ರ ಐತಾಳ (ದೂರವಾಣಿ ಸಂಖ್ಯೆ 9448824559) ಅವರನ್ನು ಸಂಪರ್ಕಿಸಿ ದಿನಾಂಕ 10-04-2024ರೊಳಗೆ ಹೆಸರು ನೊಂದಾಯಿಸಿಕೊಳ್ಳಬಹುದು.

Read More

ಕುಡ್ಲ : ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ತುಳುಕೂಟ (ರಿ.) ಸಂಸ್ಥೆಯು ಶ್ರೀಕ್ಷೇತ್ರ ಧರ್ಮಸ್ಥಳದ ಪೂಜ್ಯ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರ ಪ್ರಾಯೋಜಕತ್ವದಲ್ಲಿ ಅಪ್ರಕಟಿತ ತುಳು ನಾಟಕಕ್ಕಾಗಿ ತುಳುಕೂಟ ಸಂಯೋಜಿಸಿದ ಸ್ಪರ್ಧೆಯ ವಿಜೇತರನ್ನು ರತ್ನವರ್ಮ ಹೆಗ್ಗಡೆ 2023-2024ನೇ ಸಾಲಿನ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಅಪ್ರಕಟಿತ ಹೊಸ ನಾಟಕ ಕೃತಿಗೆ ಪ್ರತೀ ವರ್ಷ ಪ್ರಥಮ, ದ್ವಿತೀಯ ಹಾಗೂ ತೃತೀಯ ಪ್ರಶಸ್ತಿಗಳನ್ನು ಡಾ. ಹೆಗ್ಗಡೆಯವರು ತಮ್ಮ ತೀರ್ಥರೂಪರ ಸವಿ ನೆನಪಿನಲ್ಲಿ ಕಳೆದ ನಲುವತ್ತೇಳು ವರ್ಷಗಳಿಂದ ನೀಡುತ್ತಾ ಬರುತ್ತಿದ್ದಾರೆ. ಈ ಕೆಳಗಿನವರು ಪ್ರಶಸ್ತಿ ವಿಜೇತರು: ಪ್ರಥಮ – ಶಶಿರಾಜ್ ಕಾವೂರು ಇವರ ಕೃತಿ : ‘ಛತ್ರಪತಿ ಶಿವಾಜಿ’ ದ್ವಿತೀಯ – ನವೀನ್ ಸುವರ್ಣ ಪಡ್ರೆಯವರ ಕೃತಿ : ‘ಮಾಯದಪ್ಪೆ ಮಂತ್ರದೇವತೆ’ ತೃತೀಯ – ಎಲ್ಲೂರು ಶ್ರೀ ಆನಂದ ಕುಂದರ್ ಇವರ ಕೃತಿ : ‘ದೈವದ ಬಾಲೆಲು’ ಪ್ರಶಸ್ತಿ ಮೊತ್ತವು ಕ್ರಮವಾಗಿ ರೂ.10,000/-, ರೂ.8,000/- ಮತ್ತು ರೂ.6,000/- ನಗದು ಆಗಿರುತ್ತದೆ. ನಾಟಕ ರಂಗ ನಿರ್ದೇಶಕ – ಕದ್ರಿ ನವನೀತ ಶೆಟ್ಟಿ…

Read More

ಮೈಸೂರು : ಅದಮ್ಯ ರಂಗಶಾಲೆಯ ವತಿಯಿಂದ ಮಾತೃ ಮಂಡಲಿ (ರಿ.) ಸಹಯೋಗದೊಂದಿಗೆ 5ರಿಂದ 13 ವರ್ಷದ ಮಕ್ಕಳಿಗಾಗಿ ‘ಬಾಲಂಗೋಚಿ’ ಮಕ್ಕಳ ಬೇಸಿಗೆ ಶಿಬಿರವನ್ನು ದಿನಾಂಕ 07-04-2024ರಿಂದ 05-05-2024ರವರೆಗೆ ಪ್ರತೀ ದಿನ ಬೆಳಿಗ್ಗೆ 10-30ರಿಂದ ಸಂಜೆ 4.30ರವರೆಗೆ ಮೈಸೂರಿನ ಮೊಹಲ್ಲಾದ ಮಾತೃ ಮಂಡಲಿ ವಿದ್ಯಾ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ. ರಂಗಾಟಗಳು, ರಂಗ ಗೀತೆಗಳು, ಜನಪದ ಗೀತೆಗಳು, ಭಾವ ಗೀತೆಗಳು, ದೇಸಿ ಆಟಗಳು, ಚಿತ್ರಕಲೆ, ಮಾಸ್ಕ್ ಮೇಕಿಂಗ್, ಮಕ್ಕಳ ಸಂತೆ, ವಾರ್ಲಿ ಆರ್ಟ್ಸ್, ಮಕ್ಕಳ ಸಿನಿಮಾ, ಪೇಪರ್ ಕ್ರಾಫ್ಟ್, ವಾಯ್ಸ್ ಕಲ್ಟರ್, ಹೋಳಿ, ಕಂಗೀಲು ನೃತ್ಯ, ಮೈಮ್, ಚೆನ್ನು ಕುಣಿತ, ದೊಣ್ಣೆ ವರಸೆ, ಹುಲಿ ಕುಣಿತ, ಲಯನ್ ಡಾನ್ಸ್, ಪೂಜಾ ಕುಣಿತ, ಕಂಸಾಳೆ, ಪಾಶ್ಚಾತ್ಯ ನೃತ್ಯ, ನಾಟಕಗಳು ಇತ್ಯಾದಿ ಶಿಬಿರದ ವಿಶೇಷತೆಗಳು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬ್ರ 8660103141 ಸಂಪರ್ಕಿಸಿರಿ.

Read More

ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 25-03-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ವಿದುಷಿ ಚೈತ್ರಾ ರಾವ್ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಪ್ರತಿಭಾನ್ವಿತ ಕಲಾವಿದೆ ಚೈತ್ರಾ ರಾವ್ ಅವರು ಬೆಂಗಳೂರಿನ ಆಚಾರ್ಯ ಶ್ರೀಮತಿ ಇಂದಿರಾ ಕಡಂಬಿ ಅವರ ಶಿಷ್ಯೆ. ಚೈತ್ರಾ ಅವರು ತಮ್ಮ ಎಂಟನೆ ವಯಸ್ಸಿನಲ್ಲಿ ಗುರುಗಳಾದ ಯಶಾ ರಾಮಕೃಷ್ಣರವರಿಂದ ನೃತ್ಯ ಪ್ರಾರಂಭಿಸಿ ಮುಂದೆ ಶ್ರೀಮತಿ ಚೇತನಾ ರಾಧಾಕೃಷ್ಣ ಅವರ ಮಾರ್ಗದರ್ಶನದಲ್ಲಿ ನೃತ್ಯದಲ್ಲಿ ತಮ್ಮ ಪ್ರವೃತ್ತಿಯನ್ನು ಮುಂದುವರೆಸಿದರು. ಅವರು ದೇಶಾದ್ಯಂತ ಹಲವಾರು ಭಾಗಗಳಲ್ಲಿ ಅನೇಕ ಏಕವ್ಯಕ್ತಿ ಮತ್ತು ಗುಂಪು ಪ್ರದರ್ಶನಗಳನ್ನು ನೀಡಿದ್ದು, ಶ್ರೀ ಬೆಲ್ರಾಜ್ ಸೋನಿ ಅವರ ಬಳಿ ಕಳರಿಪಯಟ್ಟು ತರಬೇತಿ ಪಡೆಯುತ್ತಿದ್ದಾರೆ. ಬೆಂಗಳೂರಿನ ಆಲಯ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್…

Read More

ಬೆಂಗಳೂರು :  ಅದಮ್ಯ ರಂಗ ಸಂಸ್ಕೃತಿ ಟ್ರಸ್ಟ್ ವತಿಯಿಂದ ‘ಚಿಣ್ಣರ ಡ್ರಾಮಾ ಕ್ಯಾಂಪ್’ ದಿನಾಂಕ 15-04-2024ರಿಂದ 01-05-2024ರವರಗೆ ಬೆಳಿಗ್ಗೆ ಗಂಟೆ 10-00ರಿಂದ 1-00ರವರೆಗೆ ದುಬಾಸಿಪಾಳ್ಯ ರಸ್ತೆಯ 4ನೇ ಅಡ್ಡ ರಸ್ತೆ, ರಾಮಜ್ಯೋತಿ ನಗರ, ನಂ.89, ರಂಗ ಸೌಧ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಮಕ್ಕಳ ಬೇಸಿಗೆ ಶಿಬಿರವನ್ನು ಹೆಸರಾಂತ ರಂಗ ನಿರ್ದೇಶಕರಾದ ಮಾಲತೇಶ ಬಡಿಗೇರ ಮತ್ತು ಛಾಯಾ ಭಾರ್ಗವಿ ಇವರುಗಳು ನಡೆಸಿಕೊಡಲಿದ್ದಾರೆ. ಈ ಶಿಬಿರದಲ್ಲಿ ಹಾಡು, ರಂಗಾಟಗಳು, ನೃತ್ಯ, ಡ್ರಾಯಿಂಗ್, ಮುಖವಾಡ ತಯಾರಿಕೆ, ಕ್ರಾಫ್ಟ್ ಹಾಗೂ ಮಕ್ಕಳಿಂದ ನಾಟಕ ಪ್ರದರ್ಶನಗಳನ್ನು ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 7259350865, 9611124454 ಮತ್ತು 9880142532

Read More

ಮಣಿಪಾಲ : ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸ್ ನ ಆಶ್ರಯದಲ್ಲಿ “ನೃತ್ಯ ಮತ್ತು ಶಾಂತಿ – ಕಲಾವಿದೆ ಮತ್ತು ಮನೋವೈದ್ಯೆಯ ಒಳನೋಟ” ಎಂಬ ವಿಷಯದ ಕುರಿತು ಉಪನ್ಯಾಸ-ನೃತ್ಯ ಪ್ರದರ್ಶನ ಕಾರ್ಯಕ್ರಮವು ದಿನಾಂಕ 09-03-2024ರಂದು ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಖ್ಯಾತ ಮನೋವೈದ್ಯೆ, ನೃತ್ಯ ಕಲಾವಿದೆ ಹಾಗೂ ಲೇಖಕಿಯಾದ ಡಾ.ಕೆ.ಎಸ್.ಪವಿತ್ರಾ ಮಾತನಾಡಿ “ನೃತ್ಯ ಕಲೆಯಿಂದ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿ ಮನಃಶಾಂತಿಗೆ ಕಾರಣವಾಗಲು ಸಾಧ್ಯವಾಗುತ್ತದೆ. ಆದಾಗ್ಯೂ, ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕೇವಲ ನೃತ್ಯ ಪ್ರಕಾರದ ಸರಳವಾದ ಮತ್ತು ಯಾಂತ್ರಿಕ ಅನ್ವಯಿಕೆಯನ್ನು ಮಾಡಬಾರದು. ನೃತ್ಯವು ಶಾಂತಿಯ ಮಾಧ್ಯಮವಾಗಬಹುದು, ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಬಹುದು, ಸ್ವಾತಂತ್ರ‍್ಯದ ಅನುಭೂತಿಯನ್ನೂ ಉಂಟುಮಾಡಬಹುದು.” ಎಂದು ತಿಳಿಸಿದರು. ತಾತ್ವಿಕ ಸಾಹಿತ್ಯದ ಚೌಕಟ್ಟನ್ನು ತೆಗೆದುಕೊಂಡು, ಅನ್ನಮಯ, ಆನಂದಮಯ, ಪ್ರಾಣಮಯ, ಮನೋಮಯ ಮತ್ತು ವಿಜ್ಞಾನಮಯ ಕೋಶಗಳ ನಡುವೆ ನೃತ್ಯ ಹೇಗೆ ಆನಂದಕ್ಕೆ ಕಾರಣವಾಗಬಲ್ಲವು ಎಂಬುದನ್ನು ವಿವರಿಸಿದರು. ದ.ರಾ.ಬೇಂದ್ರೆ, ವೈದೇಹಿ, ಕನಕದಾಸರು, ಆದಿಕವಿ ಪಂಪ ಅವರ ಆಯ್ದ ಕಾವ್ಯಕ್ಕೆ…

Read More

ಸುರತ್ಕಲ್ : ಗೋವಿಂದ ದಾಸ ಕಾಲೇಜಿನ ಗ್ರಂಥಾಲಯ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಭಾಗಿತ್ವದಲ್ಲಿ ನಡೆಸುತ್ತಿರುವ ‘ಪುಸ್ತಕ ಪ್ರೀತಿ ಪರಿಚಯ’ ಸರಣಿ ಕಾರ್ಯಕ್ರಮವು ದಿನಾಂಕ 20-03-2024ರಂದು ಗೋವಿಂದ ದಾಸ ಕಾಲೇಜಿನ ಗ್ರಂಥಾಲಯದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅಂತಿಮ ಬಿ. ಬಿ. ಎ. ವಿದ್ಯಾರ್ಥಿನಿ ಪೂರ್ವಿ ಅಶೋಕ ಕುಮಾರ ಇವರು ಖಾಲಿದ್ ಹುಸೇನಿ ಬರೆದ ‘ದಿ ಕೈಟ್ ರನ್ನರ್’ ಎಂಬ ಪುಸ್ತಕವನ್ನು ಪರಿಚಯಿಸಿ “ಸಾಮಾಜಿಕ ಸ್ಥಿತ್ಯಂತರಗಳ ನಡುವೆ ಮಾನವೀಯ ಸಂಬಂಧಗಳ ಚರ್ಚೆಯನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ.” ಎಂದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಿ. ಕೃಷ್ಣಮೂರ್ತಿಯವರು, ಪೂರ್ವಿ ಅಶೋಕ ಕುಮಾರ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ಶ್ರೀದೇವಿ, ಪ್ರಾಧ್ಯಾಪಕರುಗಳಾದ ಡಾ. ಆಶಾಲತಾ ಪಿ., ಡಾ. ಸಂತೋಷ ಆಳ್ವ, ಪುನೀತಾ, ಶಿಲ್ಪಾರಾಣಿ, ಪ್ರತಿಕ್ಷಾ, ದಯಾ ಸುವರ್ಣ, ಗ್ರಂಥಪಾಲಕಿ ಡಾ. ಸುಜಾತಾ ಬಿ., ಗ್ರಂಥಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಅಂತಿಮ ಬಿ. ಬಿ. ಎ. ವಿದ್ಯಾರ್ಥಿನಿ ರಿಯಾ ಸ್ವಾಗತಿಸಿದರು.

Read More

ಕಾರ್ಕಳ : ಕಾರ್ಕಳದ ಕ್ರಿಯೇಟಿವ್‌ ಕಾಲೇಜಿನಲ್ಲಿ ‘ಕ್ರಿಯೇಟಿವ್‌ ನಿನಾದ ಸಂಚಿಕೆ-6’ ಬಿಡುಗಡೆ ಕಾರ್ಯಕ್ರಮವು ದಿನಾಂಕ 16-03-2024 ರಂದು ನಡೆಯಿತು. ಸಂಚಿಕೆ-6ನ್ನು ಬಿಡುಗಡೆಗೊಳಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ಘಟಕದ ಅಧ್ಯಕ್ಷರಾದ ಕೊಂಡಳ್ಳಿ ಪ್ರಭಾಕರ ಶೆಟ್ಟಿ “ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರ ಬೆಳೆಯಬೇಕಾದರೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯದ ಅಧ್ಯಯನ ನಡೆಸಬೇಕು. ಹಿರಿಯರ ಜೀವನ ದರ್ಶನವನ್ನು ಅನುಸರಿಸಬೇಕು. ಆಗ ಬದುಕಿನ ಹೊಸತನಗಳು ತೆರೆದುಕೊಳ್ಳುತ್ತವೆ. ಜೀವನವನ್ನು ಧೈರ್ಯದಿಂದ ಎದುರಿಸುವ ದೃಢತೆ ನಮ್ಮಲ್ಲಿ ಉಂಟಾಗುತ್ತದೆ. ಶಿಕ್ಷಣವಂತ ಸಮಾಜವು ದೇಶದ ಉನ್ನತಿಗೆ ಕಾರಣೀಕರ್ತವಾಗುತ್ತದೆ. ಯುವ ಸಮುದಾಯ ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು.” ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ನೈಋತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್‌ ಸದಸ್ಯ ಶ್ರೀ ಎಸ್‌. ಭೋಜೆಗೌಡ ಮಾತನಾಡಿ “ಸಮಾಜಕ್ಕೆ ಮಾರ್ಗದರ್ಶನ ನೀಡುವ ಶಿಕ್ಷಣದ ಪಠ್ಯಕ್ರಮ ರಚನೆಯಾಗಿ ಮೌಲ್ಯಗಳನ್ನು ಅಳವಡಿಸುವಂತಾಗಲಿ.” ಎಂದು ಆಶಿಸಿದರು. ಕಾರ್ಯಕ್ರಮಾದಲ್ಲಿ ಕ. ಸಾ. ಪ. ದ ವಿವಿಧ ಪದಾಧಿಕಾರಿಗಳು, ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕರಾದ ಅಶ್ವತ್‌ ಎಸ್. ಎಲ್.‌…

Read More