Author: roovari

ಬಂಟ್ವಾಳ : ದಿನಾಂಕ 29-07-2023 ಶನಿವಾರ ದಿನ ನಮ್ಮ ‘ನಿರತ’ ಆಪ್ತ ರಂಗಮನೆ ವೇದಿಕೆಯಲ್ಲಿ ಗ್ರಹಿಕೆಯನ್ನು ಮೀರಿ ಅದ್ಭುತ ಯಶಸ್ಸಿನ ಪ್ರದರ್ಶನ ‘ಸಂಪೂರ್ಣ ರಾಮಾಯಣ’. ಕ್ರಿಯಾಶೀಲ ಪ್ರತಿಭಾನ್ವಿತ ನೃತ್ಯ ಗುರುಗಳಾದ ವಿದ್ವಾನ್ ಶ್ರೀ ಬಿ. ದೀಪಕ್ ಕುಮಾರ್ ಮತ್ತು ವಿದುಷಿ ಶ್ರೀಮತಿ ಪ್ರೀತಿಕಲಾ ಇವರು ಒಂದು ಗಂಟೆಯ ಅವಧಿಯಲ್ಲಿ ತ್ರೇತಾಯುಗದ ಶ್ರೀ ರಾಮನ ಜೀವನದ ಪ್ರಮುಖ ಘಟನೆಗಳಿಗೆ ಜೀವತುಂಬಿ ಅಭಿನಯಿಸಿದ ಪ್ರತಿಯೊಂದು ದೃಶ್ಯಗಳೂ ಮೈರೋಮಾಂಚನಗೊಳಿಸಿತು. ಈ ಮೊದಲು ಕಾರ್ಯಕ್ರಮವನ್ನು ನೋಡಿದ್ದರೂ ಪ್ರತಿಸಲವೂ ಹೊಸತಾಗುವ ಭಾವ….ಶ್ರೀ ರಾಮನ ಪಟ್ಟಾಭಿಷೇಕದ ಸಂದರ್ಭದಲ್ಲಿ ಮಂಥರೆ..ಕೈಕೇಯಿ..ದಶರಥನ ಪಾತ್ರಗಳು, ಸೀತಾ ಸ್ವಯಂವರ, ರಾಮ ಭರತರ ನಡುವಿನ ಭಾವುಕ ಸನ್ನಿವೇಶ, ಶೂರ್ಪನಖಿಯ ಆಗಮನ, ಮಾರೀಚ-ಸೀತೆ-ರಾಮ-ಲಕ್ಷ್ಮಣ.. ಸೀತಾಪಹರಣದ ಜಟಾಯು, ಹನುಮಂತ-ರಾಮನ ಭೇಟಿ, ಲಂಕಾ ಪ್ರವೇಶದ ಹನುಮಂತನ ಭಾವ.. ಶ್ರೀರಾಮ‌ ಪಟ್ಟಾಭಿಷೇಕ.. ಎಲ್ಲ ದೃಶ್ಯಗಳಿಗೂ ಶ್ರೇಷ್ಠ ಅಭಿನಯ ನೀಡಿ ಸಂಯೋಜಿಸಿದ ನೃತ್ಯ, ಸಾಂದರ್ಭಿಕ ಜತಿಗಳು….ಎಲ್ಲರಿಗೂ ಅರ್ಥವಾಗುವಂತೆ ನಿರೂಪಿಸುವ ಶಕ್ತಿ ಇವರಿಗೆ ಮಾತ್ರ ಸಾಧ್ಯ ಎಂದೆನಿಸಿತು. ಶ್ರೇಷ್ಠ ಕಲಾವಿದರಾಗಿಯೂ ಅಷ್ಟೇ ಸರಳವಾಗಿ ಬೆರೆಯುವ ಮತ್ತು…

Read More

ಸುರತ್ಕಲ್: ಸುರತ್ಕಲ್ ಗೋವಿಂದ ದಾಸ ಪದವಿ ಪೂರ್ವ ಕಾಲೇಜಿನ ಲಲಿತಕಲಾ ಸಂಘದ ಚಟುವಟಿಕೆಗಳ ಉದ್ಘಾಟನೆಯು ದಿನಾಂಕ 31-07-2023ರಂದು ನಡೆಯಿತು. ಈ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಕಾಲೇಜಿನ ಹೆಮ್ಮೆಯ ಹಳೆ ವಿದ್ಯಾರ್ಥಿ ಕನ್ನಡ ಹಾಗೂ ತುಳು ಚಿತ್ರರಂಗದ ಪ್ರಶಸ್ತಿ ವಿಜೇತ ಯುವ ಸಂಕಲನಕಾರ ಶ್ರೀ ರಾಹುಲ್ ವಸಿಷ್ಠರವರು ತಮ್ಮ ತಬಲಾ ವಾದನದ ಮೂಲಕ ಉದ್ಘಾಟನೆಯನ್ನು ನೆರವೇರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. “ಚಲನಚಿತ್ರ ರಂಗದಲ್ಲಿ ಸಣ್ಣಪುಟ್ಟ ಹೆಜ್ಜೆಗಳನ್ನಿಡುತ್ತಾ, ದೊಡ್ಡ ಕನಸಿನ ಬುತ್ತಿಯನ್ನು ಕಟ್ಟಿಕೊಂಡು ಬಂದೆ. ಸತತ ಪ್ರಯತ್ನದ ಫಲವಾಗಿ ಆ ಕನಸುಗಳು ನನಸಾಗಿ ನಾನಿಲ್ಲಿ ನಿಂತಿರುವೆ” ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಲಕ್ಷ್ಮೀ ಪಿ. ಅಧ್ಯಕ್ಷೀಯ ನುಡಿಗಳನ್ನಾಡಿದರು. ಉಪಪ್ರಾಂಶುಪಾಲರಾದ ಶ್ರೀಮತಿ ಸುನೀತಾ ಕೆ., ವಿದ್ಯಾರ್ಥಿ ಕ್ಷೇಮ ಪಾಲಕಿ ಶ್ರೀಮತಿ ಪಲ್ಲವಿ, ಉಪನ್ಯಾಸಕರಾದ ಶ್ರೀಮತಿ ಚೈತ್ರ ಶೆಟ್ಟಿ, ಶ್ರೀಮತಿ ಶೈಲಾಜಾ, ಶ್ರೀಮತಿ ಜಯಂತಿ ಅಮೀನ್ ಹಾಗೂ ಮತ್ತಿತರ ಉಪನ್ಯಾಸಕ ವೃಂದ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಲಲಿತಕಲಾ ಸಂಘದ ಸಂಯೋಜಕರಾದ…

Read More

ಮಂಗಳೂರು : ಶಕ್ತಿ ವಿದ್ಯಾಸಂಸ್ಥೆಯಲ್ಲಿ ಸಾಹಿತ್ಯ ಸಪ್ತಾಹದ ಅಂಗವಾಗಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ದಿನಾಂಕ 02-08-2023ರಂದು ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ಒಂದರಿಂದ ಐದನೇ ತರಗತಿಯ ವಿದ್ಯಾರ್ಥಿಗಳು ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆಗಳ ಅಭಿನಯ ಗೀತೆಗಳನ್ನು, ಕಥಾಕಥನವನ್ನು ಹಾಗೂ ವಿವಿಧ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ.ಸಿ ನಾಯ್ಕ್, “ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪಠ್ಯೇತರ ಚಟುವಟಿಕೆಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಅತ್ಯಂತ ಅನಿವಾರ್ಯ. 1ರಿಂದ 5ನೇ ತರಗತಿಯ ಮಕ್ಕಳು ಹೆಚ್ಚು ಚಟುವಟಿಕೆಗಳ ಮೂಲಕವೇ ವಿಷಯವನ್ನು ಕಲಿಯುತ್ತಾರೆ. ಮಕ್ಕಳನ್ನು ಈ ನಿಟ್ಟಿನಲ್ಲಿ ಪ್ರೋತ್ಸಾಹಿಸುತ್ತಿರುವ ಶಿಕ್ಷಕ -ಶಿಕ್ಷಕಿಯರಿಗೆ, ಶಿಕ್ಷಕೇತರ ಸಿಬ್ಬಂದಿಗಳಿಗೆ ಹಾಗೂ ಪೋಷಕರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಶಕ್ತಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಾ ಬದ್ಧವಾಗಿದೆ” ಎಂದು ನುಡಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಧಾನ ಸಲಹೆಗಾರರಾದ ಶ್ರೀ ರಮೇಶ ಕೆ., ಶಕ್ತಿ ವಸತಿ ಶಾಲೆಯ ಪ್ರಾಂಶುಪಲರಾದ ಶ್ರೀ ರವಿಶಂಕರ್ ಹೆಗಡೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ…

Read More

ಉಡುಪಿ : ಮಹತೋಭಾರ ಶ್ರೀ ಶಂಕರ ನಾರಾಯಣ ದೇವಸ್ಥಾನ ಕೊಡವೂರು ಹಾಗೂ ನೃತ್ಯ ನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ಸೋಮವಾರ ದಿನಾಂಕ 31-07-2023ರಂದು ನಡೆಯಿತು. ಕೊಡವೂರಿನ ಶ್ರೀ ಶಂಕರ ನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿದುಷಿ ರಾಧಿಕಾ ಶೆಟ್ಟಿ ಇವರ ಶಿಷ್ಯೆಯಾದ ಮಂಗಳೂರಿನ ಕುಮಾರಿ ಅದಿತಿ ಲಕ್ಷ್ಮೀ ಭಟ್ ಇವರು ಭರತನಾಟ್ಯ ಪ್ರದರ್ಶಿಸಿದರು. ಅದಿತಿ ಲಕ್ಷ್ಮೀ ಭಟ್ ಇವರು ದೇವಿ ರಾಜರಾಜೇಶ್ವರಿಯನ್ನು ಮನಃ ಪೂರ್ವಕವಾಗಿ ಮೆಚ್ಚಿ ಭಕ್ತಿ ಭಾವದಿಂದ ಹೊಗಳುವ ಅಂಬಾ ಪ್ರಸ್ತುತಿಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಮುಂದೆ ಕನ್ನಡದ ರಾಗಮಾಲಿಕೆಯಲ್ಲಿರುವ ಜನಪ್ರಿಯವಾದ ನೀಲ ಮೇಘ ಶ್ಯಾಮ ಸುಂದರನ ಎಂಬ ವರ್ಣಗಳನ್ನು ಪ್ರಸ್ತುತಪಡಿಸಿದರು. ಇದರಲ್ಲಿ ತನ್ನ ಪ್ರೀತಿಯ ನೀಲ ಮೇಘ ಶ್ಯಾಮ ಸುಂದರನ ಒಂದೇ ಒಂದು ಕಣ್ಣೋಟಕ್ಕಾಗಿ ಹಂಬಲಿಸುವ ಆಕೆಯ ಭಾವವು ವ್ಯಕ್ತವಾಗುತ್ತದೆ. ಭಗವಂತನಾದ ನಾಟರಾಜನ ಸ್ತುತಿಗೆ ನರ್ತಿಸುವ ಮೂಲಕ ಅಂದಿನ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಿದರು.

Read More

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು 2018, 2019, 2020, 2021, 2022 ಹಾಗೂ2023ನೇ ಸಾಲಿನ ʻಡಾ.ಸಿದ್ದಲಿಂಗಯ್ಯ ಸಾಹಿತ್ಯ  ದತ್ತಿ ಪ್ರಶಸ್ತಿʼಯನ್ನು ಪ್ರಕಟಿಸಿದೆ. ದಲಿತ ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿದ ಸಾಹಿತ್ಯ ಸಾಧಕರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಕಳೆದ 6 ವರ್ಷಗಳಿಂದ ಈ ಪ್ರಶಸ್ತಿಯನ್ನು ಪ್ರದಾನ ಮಾಡದೇ ಇರುವುದರಿಂದ ಈ ಬಾರಿ 6 ಜನ ಸಾಧಕರನ್ನು ಈ  ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ತಿಳಿಸಿದ್ದಾರೆ.   2018 ನೇ ಸಾಲಿನ ʻಡಾ. ಸಿದ್ದಲಿಂಗಯ್ಯ ಸಾಹಿತ್ಯ ದತ್ತಿʼ ಪ್ರಶಸ್ತಿಗಾಗಿ ದಲಿತ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿರುವ ಕೋಲಾರದ ಶ್ರೀ ಕೋಟಿಗಾನಹಳ್ಳಿ ರಾಮಯ್ಯ, 2019ರ ಪ್ರಶಸ್ತಿಗೆ ಕಲಬುರಗಿಯ ಡಾ.ಎಚ್.ಟಿ. ಪೋತೆ, 2020ರ ಪ್ರಶಸ್ತಿಗೆ ವಿಜಯಪುರದ ಶ್ರೀಮತಿ ಇಂದುಮತಿ ಲಮಾಣಿ, 2021ರ ಪ್ರಶಸ್ತಿಗೆ  ಬೆಂಗಳೂರಿನ ಡಾ.ಕಾ.ವೆಂ. ಶ್ರೀನಿವಾಸಮೂರ್ತಿ, 2022ರ ಪ್ರಶಸ್ತಿಗಾಗಿ ಗದಗದ ಡಾ.ಅರ್ಜುನ ಗೊಳಸಂಗಿ ಹಾಗೂ 2023ರ ಪ್ರಶಸ್ತಿಗೆ ಹಾಸನದ ಶ್ರೀ ನಾಗರಾಜ ಹೆತ್ತೂರು…

Read More

ಕರಾವಳಿಯ ಪ್ರಸಿದ್ಧ ಸ್ಥಾನವನ್ನು ಪಡೆದ ಕಲೆ “ಯಕ್ಷಗಾನ”. ಕರ್ನಾಟಕದ ಗಂಡು ಕಲೆಯಾಗಿರುವ ಯಕ್ಷಗಾನ ಪಾರ್ತಿಸುಬ್ಬರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜೃಂಭಿಸುತ್ತಿದೆ. ಇಂತಹ ಕಲೆಯಲ್ಲಿ ರಾರಾಜಿಸುತ್ತಿರುವ ಕಲಾವಿದ ಶಿವರಾಜ ಬಜಕೂಡ್ಲು. ಶ್ರೀಯುತ ಮೋಹನ ಹಾಗೂ ಸುಗಂಧಿ ಇವರ ಮಗನಾಗಿ 7.12.1997 ರಂದು ಜನನ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಎಸ್.ಎನ್.ಎಚ್.ಎಸ್ ಪೆರ್ಲ, ಆಳ್ವಾಸ್  ಶಿಕ್ಷಣ ಪ್ರತಿಷ್ಠಾನ ಮೂಡಬಿದಿರೆಯಲ್ಲಿ ಪದವಿಪೂರ್ವ ಮತ್ತು ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿರುತ್ತಾರೆ. ಯಕ್ಷಗಾನ ಕಲಿಯುವುದಕ್ಕೆ ಮೂಲ ಪ್ರೇರಣೆ ತಾಯಿ. ಸಬ್ಬಣಕೊಡಿ ರಾಮಭಟ್ ಇವರ ಯಕ್ಷಗಾನ ಗುರುಗಳು. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ :- ಮೇಳದ ಹಿರಿಯ ಕಲಾವಿದರಲ್ಲಿ ಕೇಳಿ ಮತ್ತು ಭಾಗವತರಲ್ಲಿ ಕೇಳಿ ಸಿದ್ಧತೆಯನ್ನು ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಶಿವರಾಜ. ಅಭಿಮನ್ಯು ಕಾಳಗ, ಇಂದ್ರಜಿತು ಕಾಳಗ, ರಕ್ತರಾತ್ರಿ, ಸುದರ್ಶನ ವಿಜಯ, ತರಣಿಸೇನ ಕಾಳಗ, ಬಬ್ರುವಾಹನ ಕಾಳಗ, ಶ್ರೀನಿವಾಸ ಕಲ್ಯಾಣ ನೆಚ್ಚಿನ ಪ್ರಸಂಗಗಳು. ಅಭಿಮನ್ಯು, ಲಕ್ಷ್ಮಣ, ಅಶ್ವತ್ಥಾಮ, ಸುದರ್ಶನ, ಪರಶುರಾಮ ಇತ್ಯಾದಿ ನೆಚ್ಚಿನ ವೇಷಗಳು. ಯಕ್ಷಗಾನದ…

Read More

ಕುಳಾಯಿ : ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕುಳಾಯಿ ಇಲ್ಲಿನ ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಮಂಡಳಿ ಆಯೋಜಿಸುವ ಮಾಸಿಕ ಹುಣ್ಣಿಮೆ ತಾಳಮದ್ದಳೆ ಕಾರ್ಯಕ್ರಮವು ದಿನಾಂಕ 01-08-2023ನೇ ಮಂಗಳವಾರ ಸಂಜೆ ಶ್ರೀ ದೇವಳದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ‘ಯಕ್ಷಮಿತ್ರರು ಪೊಳಲಿ’ ಇವರಿಂದ ‘ಗರುಡ ಗರ್ವಭಂಗ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು. ಈ ಕಾರ್ಯಕ್ರಮದ ಹಿಮ್ಮೇಳದಲ್ಲಿ ಸರ್ವ ಶ್ರೀಗಳಾದ ಗಜಂತ್ತೋಡಿ ಸುಬ್ರಾಯ ಮಾಸ್ತರ್, ಸರಪಾಡಿ ಶಂಕರನಾರಾಯಣ ಕಾರಂತರು, ರಾಮಹೊಳ್ಳ ತಡಂಬೈಲ್, ವಿನಯ ಕಾರಂತ ಹಾಗೂ ಚಂದ್ರಶೇಖರ್ ಕಾರಂತ ಸಹಕರಿಸಿದರು. ಮುಮ್ಮೇಳದಲ್ಲಿ ಸರ್ವಶ್ರೀಗಳಾದ ಕೃಷ್ಣರಾವ್‌ ನರ್ಲಪದವು, ನೂಯಿ ರಾಜಶೇಖರ ಭಟ್‌, ನಾರಾಯಣ ರಾವ್ ಕದ್ರಿ, ಬಾಂಕೆ ರಮೇಶ್‌, ಜಯಕರ್ ಮಾಸ್ತರ್ ಕೈಕಂಬ, ಪಿ.ಪುರುಷೋತ್ತಮ ರಾವ್ ಕೃಷ್ಣಾಪುರ ಹಾಗೂ ಎನ್.ರಾಮಚಂದ್ರ ಕಾರಂತ್ ಭಾಗವಹಿಸಿದರು.

Read More

ಮಂಗಳೂರು : ದಿನಾಂಕ 03-08-2023ರಂದು ಮಂಗಳೂರಿನ ಶಾರದಾ ಪ.ಪೂ.ಕಾಲೇಜಿನಲ್ಲಿ ಅಂತರ್‌ ತರಗತಿ ಸಾಂಸ್ಕೃತಿಕ ಸ್ಪರ್ಧೆ ‘ಸೌರಭ-2023’ನಡೆಯಿತು. ಶ್ರೀನಿವಾಸ ವಿಶ್ವವಿದ್ಯಾನಿಲಯದ ಸಂಶೋಧನಾ ವಿಭಾಗದ ನಿರ್ದೇಶಕ ಎಂ.ಶಶಿಧರ ಕೋಟ್ಯಾನ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ “ಇಂದಿನ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಹಿಂದೆಂದಿಗಿಂತ ಹೆಚ್ಚು ಸೌಲಭ್ಯ ಮತ್ತು ಅವಕಾಶಗಳು ದೊರೆಯುತ್ತಿರುವುದು ಸಂತೋಷದ ವಿಚಾರ. ಇದನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ತಮ್ಮಲ್ಲಿರುವ ಸುಪ್ತ ಪ್ರತಿಭೆ, ಅಂತಃಶಕ್ತಿಗಳನ್ನು ಹೊರ ಜಗತ್ತಿಗೆ ಪ್ರಸ್ತುತ ಪಡಿಸುವ ದಿಸೆಯಲ್ಲಿ ಕಾರ್ಯ ಪ್ರವೃತ್ತರಾಗಬೇಕು ಹಾಗಾದಾಗ ಮಾತ್ರ ಅವರ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆ ಸಾಧ್ಯ. ಶಿಕ್ಷಣದೊಂದಿಗೆ ಸಂಸ್ಕೃತಿ ಸಂಪನ್ನರಾದ ಯುವಜನಾಂಗ ರೂಪುಗೊಂಡಾಗ ನಮ್ಮ ಸಮಾಜ, ರಾಷ್ಟ್ರ ವಿಶ್ವಮಾನ್ಯವಾಗಬಹುದು.” ಎಂದು ಅಭಿಪ್ರಾಯಪಟ್ಟರು. ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀ ಪ್ರದೀಪ ಕುಮಾರ ಕಲ್ಕೂರ, ಟ್ರಸ್ಟಿಗಳಾದ ಶ್ರೀ ಸುಧಾಕರ ರಾವ್‌ ಪೇಜಾವರ, ಶಿಕ್ಷಕ-ರಕ್ಷಕ ಸಂಘದ ಸದಸ್ಯ ಶ್ರೀ ಪ್ರಕಾಶ್ ಇಳಂತಿಲ, ಶಾರದಾ…

Read More

ಕುಂದಾಪುರ : ಸರಕಾರಿ ಪ್ರೌಢ ಶಾಲೆ ಗುಂಡ್ಮಿ, ಸಾಸ್ತಾನ ಇಲ್ಲಿ ಕುಂದಾಪುರ ವಿಧಾನಸಭಾ ಶಾಸಕರಾದ ಶ್ರೀ ಕಿರಣ್ ಕುಮಾರ್ ಕೊಡ್ಗಿಯವರ ಆಶಯದಂತೆ ಯಕ್ಷಶಿಕ್ಷಣ ಟ್ರಸ್ಟ್ (ರಿ) ಉಡುಪಿ ಇವರ ವತಿಯಿಂದ ವಿದ್ಯಾರ್ಥಿಗಳಿಗೆ ನಡೆಸಲ್ಪಡುವ ಯಕ್ಷಗಾನ ತರಗತಿಯನ್ನು ದಿನಾಂಕ 02-08-2023ರಂದು ಹಿರಿಯ ಯಕ್ಷಗಾನ ಕಲಾವಿದ ಐರೋಡಿ ಶ್ರೀ ಗೋವಿಂದಪ್ಪನವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಾಲಿಗ್ರಾಮ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಸುಲತಾ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮವು ನಡೆಯಿತು. ಮುಖ್ಯ ಅತಿಥಿಗಳಾಗಿ ಯಕ್ಷಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಶ್ರೀ ಮುರಳಿ ಕಡೆಕಾರ್, ಅರ್ಥಧಾರಿಗಳಾದ ಡಾ.ವೈಕುಂಠ ಹೇರ್ಳೆ, ಶಾಲಾಭಿವೃದ್ದಿ ಸಮಿತಿಯ ಗೌರವ ಸದಸ್ಯರಾದ ಶ್ರೀ ಗಣೇಶ್ ಚಲ್ಲಮಕ್ಕಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಶೇರ್ವೆಗಾರ್, ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಶೆಟ್ಟಿಗಾರ್ ಹಾಗೂ ಯಕ್ಷ ಗುರು ಮಂಜುನಾಥ ಕುಲಾಲ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಶ್ರೀ ಕೆ.ಸತೀಶ ಐತಾಳರು ಸ್ವಾಗತಿಸಿ, ಸಹಶಿಕ್ಷಕಿ ಶ್ರೀಮತಿ ಹೆಲೆನ್ ಬಾಂಜ್ ಕಾರ್ಯಕ್ರಮ ನಿರೂಪಿಸಿ, ಸಹಶಿಕ್ಷಕರಾದ ಶ್ರೀ ಪ್ರತಾಪಚಂದ್ರ ಕಿಣಿಯವರು…

Read More

ಪುತ್ತೂರು: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಹಾಗೂ ಶ್ರೀ ರಾಮಸೌಧ, ದರ್ಬೆ, ಪುತ್ತೂರು. ಇವರ ನೇತೃತ್ವದಲ್ಲಿ ‘ಪುಸ್ತಕ ಹಬ್ಬ, ಪುಸ್ತಕದಾನಿಗಳ ಮೇಳ ಮತ್ತು ಸಾಹಿತ್ಯ ವೈಭವ’ವು ಪುತ್ತೂರು ಕೋ ಓಪರೇಟಿವ್ ಟೌನ್‌ ಬ್ಯಾಂಕ್‌ ಸಭಾಂಗಣದಲ್ಲಿ ದಿನಾಂಕ 11-08-2023, 12-08-2023 ಮತ್ತು 13-08-2023ರಂದು ನಡೆಯಲಿದೆ. ಪ್ರಸ್ತುತ ಕಾರ್ಯಕ್ರಮವು ದಿನಾಂಕ 11-08-2023ರಂದು ಸಂಜೆ 4 ಗಂಟೆಗೆ ನಡೆಯಲಿದ್ದು, ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಕ.ಸಾ.ಪ.ದ ಅಧ್ಯಕ್ಷರಾದ ಡಾ.ಎಂ.ಪಿ.ಶ್ರೀನಾಥ್ ವಹಿಸಲಿದ್ದಾರೆ. ಪುತ್ತೂರಿನ ಮಾಜಿ ಶಾಸಕರಾದ ಶ್ರೀ ಸಂಜೀವ ಮಠಂದೂರು ದೀಪ ಪ್ರಜ್ವಲನೆ ಮಾಡಿ, ದ್ವಾರಕಾ ಕನ್ಸ್ ಸ್ಟ್ರಕ್ಷನ್ಸ್ ನ ಶ್ರೀ ಗೋಪಾಲಕೃಷ್ಣ ಭಟ್ ಪುಸ್ತಕ ಮೇಳದ ಉದ್ಘಾಟನೆ ಮಾಡಲಿರುವರು. ಪ್ರಥಮ ಪುಸ್ತಕ ದಾನಿಗಳಾದ ಪ್ರೊ.ಬಿ.ವಿ.ಅರ್ತಿಕಜೆ, ಹಿರಿಯ ವೈದ್ಯರಾದ ಡಾ.ಸುಧಾ ರಾವ್ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಶ್ರೀಮತಿ ಸಂಧ್ಯಾ ದತ್ತಾತ್ರೇಯ ರಾವ್ ಇವರ ‘ಸಕ್ಕರೆ ಗೊಂಬೆ’ (ಮಕ್ಕಳ ಕವನ ಸಂಕಲನ) ಹಾಗೂ ‘ಭಾವ ದ್ಯುತಿ’ (ಕವನ ಸಂಕಲನ) ಕೃತಿಗಳನ್ನು ಹಿರಿಯ ಸಾಹಿತಿಗಳಾದ…

Read More