Subscribe to Updates
Get the latest creative news from FooBar about art, design and business.
Author: roovari
ಧಾರವಾಡ : ರಾಷ್ಟ್ರೀಯ ದೃಶ್ಯಕಲಾ ಅಕಾಡೆಮಿ ವತಿಯಿಂದ ಪ್ರೊ. ಎಸ್.ಸಿ. ಪಾಟೀಲರ 68ನೇ ಜನ್ಮದಿನ ಸಂಭ್ರಮದ ಅಂಗವಾಗಿ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ದಿನಾಂಕ 23-07-2023ರಂದು ಆಯೋಜಿಸಿದ್ದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ, ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಗ್ರಂಥ ಬಿಡುಗಡೆಯ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಹಿರಿಯ ಸಂಶೋಧನಾಧಿಕಾರಿ ಡಾ. ಕೆ. ಪ್ರೇಮಕುಮಾರ್ ಮಾತನಾಡುತ್ತಾ “ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಲಲಿತಕಲಾ ವಿಶ್ವವಿದ್ಯಾಲಯದ ಅವಶ್ಯಕತೆ ಇದೆ. ಸರ್ಕಾರ ಆದಷ್ಟು ಬೇಗ ಈ ವಿಶ್ವವಿದ್ಯಾಲಯ ಸ್ಥಾಪನೆ ಮಾಡಬೇಕು. ಈಗಾಗಲೇ ವಿಶ್ವವಿದ್ಯಾಲಯ ಈ ನಿಟ್ಟಿನಲ್ಲಿ ವಿಶೇಷಾಧಿಕಾರಿಯ ನೇಮಕ ಮಾಡಲಾಗಿದೆ. ಬಾದಾಮಿಯಲ್ಲಿ 430 ಎಕರೆ ಜಾಗ ಗುರುತಿಸಲಾಗಿದೆ. ವಿಶ್ವವಿದ್ಯಾಲಯದ ಕರಡು ಅಧಿನಿಯಮವನ್ನು ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅನುಷ್ಠಾನ ಮಾತ್ರ ಬಾಕಿ ಇದೆ. ಸರ್ಕಾರ ಆ ಕೆಲಸವನ್ನು ಕೂಡಲೇ ಮಾಡಬೇಕು” ಎಂದು ಆಗ್ರಹಿಸಿದರು. ಡಾ.ಪ್ರೇಮಾನಂದ ಲಕ್ಕಣ್ಣವರ ರಚಿಸಿದ ‘ಕರ್ನಾಟಕದ ಚಿತ್ರಕಲಾ ಸಾಹಿತ್ಯ: ಒಂದು ವೈಚಾರಿಕ ಅಧ್ಯಯನ’ ಎಂಬ ಗ್ರಂಥವನ್ನು ಕರ್ನಾಟಕ ವಿಶ್ವವಿದ್ಯಾಲಯದ ಡಾ. ಚಂದ್ರಶೇಖರ…
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುವ ಶಾಸನ ಶಾಸ್ತ್ರ ಡಿಪ್ಲೋಮಾ ತರಗತಿಯ ವಿದ್ಯಾರ್ಥಿಗಳು ಹಮ್ಮಿಕೊಂಡ ಗುರುವಂದನ ಕಾರ್ಯಕ್ರಮ ದಿನಾಂಕ 27-07-2023 ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು “ಕನ್ನಡ ಸಾಹಿತ್ಯ, ಇತಿಹಾಸ, ಸೇರಿದಂತೆ ಭಾಷೆ ಮತ್ತು ಸಂಸ್ಕೃತಿಯ ಮೂಲ ತಿಳಿಯುವ ಅವಶ್ಯಕತೆ ಇದೆ. ಅವುಗಳೆಲ್ಲವೂ ದಾಖಲಾಗಿರುವುದು ನಮ್ಮಲ್ಲಿಯ ಶಾಸನಗಳಲ್ಲಿ. ಅದನ್ನು ಅರಿಯಲು ಕನ್ನಡ ಶಾಸನಗಳ ಅಧ್ಯಯನ ಮುಖ್ಯವಾಗಿದೆ. ಮುಂದಿನ ದಿನಗಳಲ್ಲಿ ಕನ್ನಡ ಶಾಸನಗಳ ಅಧ್ಯಯನ ಹಾಗೂ ಶೋಧ ಕಾರ್ಯಕ್ಕೆ ಪರಿಷತ್ತು ಹೆಚ್ಚಿನ ಒತ್ತು ನೀಡಲಿದೆ. ಕನ್ನಡದ ಮೊದಲ ಶಾಸನವಾಗಿರುವ ಹಲ್ಮಿಡಿ ಶಾಸನದ ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ. ಇತಿಹಾಸ ಸಂಶೋಧನೆಗೆ ಶಾಸನಗಳ ಅಧ್ಯಯನ ತುಂಬಾ ಅಗತ್ಯವಾಗಿದೆ. ಆದ್ದರಿಂದ ಶಾಸನ ಶಾಸ್ತ್ರ ಅಧ್ಯಯನ ವಿದ್ಯಾರ್ಥಿಗಳು ಆ ನಿಟ್ಟಿನಲ್ಲಿ ಮುಂದುವರೆಯಲಿದ್ದಾರೆ ಎನ್ನುವ ಭರವಸೆ ಇದೆ.” ಎಂದು ಅಭಿಪ್ರಾಯ ಪಟ್ಟರು. ಕನ್ನಡ ಸಾಹಿತ್ಯ ಪರಿಷತ್ತಿನ ಶಾಸನ ಶಾಸ್ತ್ರ ಡಿಪ್ಲೋಮಾ…
ಕಾಸರಗೋಡು : ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ಕೃತಿಗಳನ್ನಾಧರಿಸಿದ 14ನೇ ಸಂಗೀತ ಕಛೇರಿ ‘ಮಂಜುನಾದ’ವು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಪ್ರತಿಷ್ಠಾನದ ಸಹಯೋಗದಲ್ಲಿ ದಿನಾಂಕ 29-07-2023ರಂದು ನಡೆಯಿತು. ವಿದ್ವಾನ್ ಕಲ್ಮಾಡಿ ಸದಾಶಿವ ಆಚಾರ್ಯ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ “ಗಡಿನಾಡು ಕಾಸರಗೋಡಿನಲ್ಲಿ ಚಾರಿತ್ರಿಕ ಕಾರ್ಯಕ್ರಮ ಆಯೋಜಿಸಿ ಸಿರಿಬಾಗಿಲು ಪ್ರತಿಷ್ಠಾನದ ಯೋಜನೆ ಯೋಚನೆ ಅದ್ವಿತೀಯ. ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರದ ಬೆಳವಣಿಗೆ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕಾಯಕ ಪ್ರತಿಷ್ಠಾನ ನಡೆಸುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಕೃತಿಗಳನ್ನು ಆಧಾರಿಸಿ ಮಣಿಕೃಷ್ಣ ಸ್ವಾಮಿ ಅಕಾಡಮಿಯು ಇಂತಹ ಅಪೂರ್ವವಾದ ಕೊಡುಗೆ ಸಮಾಜಕ್ಕೆ ನೀಡುತ್ತಿದೆ” ಎಂದರು. ಮಣಿ ಕೃಷ್ಣಸ್ವಾಮಿ ಅಕಾಡಮಿಯ ಕಾರ್ಯದರ್ಶಿ ನಿತ್ಯಾನಂದ ರಾವ್ ಪೇಜಾವರ ಮಾತನಾಡಿ, “ಹಲವು ಕ್ಷೇತ್ರದಲ್ಲಿ ಸಂಗೀತ ಕಾರ್ಯಾಗಾರ ನಡೆಸಿದ್ದೇವೆ. ಯಕ್ಷಗಾನ ಕ್ಷೇತ್ರದ ಪ್ರಧಾನ ಕೇಂದ್ರವಾಗಿರುವ ಗಡಿನಾಡು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಇದೇ ಪ್ರಥಮ” ಎಂದರು. ಧಾರ್ಮಿಕ ಮುಂದಾಳು ವೆಂಕಟ್ರಮಣ ಹೊಳ್ಳ ಕಾಸರಗೋಡು,…
ಪುತ್ತೂರು : ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಪುತ್ತೂರು, ಇದರ ಆಶ್ರಯದಲ್ಲಿ ಅಧಿಕ ಶ್ರಾವಣ ಮಾಸ ಪ್ರಯುಕ್ತ ‘ವಿಶೇಷ ತಾಳಮದ್ದಳೆ ಚತುರ್ಥಿ-2’ ರ ಅಂಗವಾಗಿ ದಿನಾಂಕ 29-07-2023ರಂದು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವತಿಯಿಂದ ‘ಸುಧನ್ವ ಮೋಕ್ಷ’ ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ರಮೇಶ್ ಭಟ್ ಪುತ್ತೂರು, ಚೆಂಡೆ ಮದ್ದಳೆಗಳಲ್ಲಿ ಶ್ರೀ ಪದ್ಯಾಣ ಶಂಕರನಾರಾಯಣ ಭಟ್, ಶ್ರೀ ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಗುಂಡ್ಯಡ್ಕ ಈಶ್ವರ ಭಟ್ (ಸುಧನ್ವ), ಶ್ರೀ ಗುಡ್ಡಪ್ಪ ಬಲ್ಯ (ಅರ್ಜುನ), ಶ್ರೀ ಭಾಸ್ಕರ ಬಾರ್ಯ (ಪ್ರಭಾವತಿ), ಶ್ರೀ ಸುಬ್ಬಪ್ಪ ಕೈಕಂಬ (ಶ್ರೀ ಕೃಷ್ಣ) ಸಹಕರಿಸಿದರು. ದೇವಳದ ಆಡಳಿತ ಮೊಕ್ತೇಸರ ಶ್ರೀ ಅಶೋಕ್ ಪ್ರಭು ಸ್ವಾಗತಿಸಿ, ಸಂಚಾಲಕರಾದ ಶ್ರೀ ಭಾಸ್ಕರ ಬಾರ್ಯ ವಂದಿಸಿದರು. ಶ್ರೀ ದೇವಳದ ಆಡಳಿತ ಸಮಿತಿಯ ಸದಸ್ಯರು, ಅರ್ಚಕರು ಕಲಾವಿದರಿಗೆ ಪ್ರಸಾದ ನೀಡಿ ಗೌರವಿಸಿದರು.
ಜುಲೈ 16ರಂದು N.R. ಕಾಲೋನಿಯ ರಾಮ ಮಂದಿರದಲ್ಲಿ ಕರ್ನಾಟಕ ಗಾನಕಲಾ ಪರಿಷತ್ತು ಸಂಗೀತದಲ್ಲಿ ಅರಳುತ್ತಿರುವ ಪ್ರತಿಭೆಗಳಿಗೆ ಅಪರೂಪದ ರಸಪ್ರಶ್ನೆ ಕಾರ್ಯಕ್ರಮ ಒಂದನ್ನು ಹಮ್ಮಿಕೊಂಡಿತ್ತು. ಬೆಳಗ್ಗೆ 10 ಗಂಟೆಗೆ ಪರಿಷತ್ ನ ಅಧ್ಯಕ್ಷರಾದ ಗಾನಕಲಾ ಭೂಷಣ ವಿ| ಡಾ| R.K. ಪದ್ಮನಾಭ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೊದಲಿಗೆ ಜೂನಿಯರ್ ವಿಭಾಗದಲ್ಲಿ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು ಇದರಲ್ಲಿ ತಲಾ ಇಬ್ಬರ 26 ತಂಡಗಳು ಭಾಗವಹಿಸಿದ್ದವು, ನಂತರ ಸೀನಿಯರ್ ವಿಭಾಗದಲ್ಲಿ 20 ಸಂಗೀತಾರ್ಥಿಗಳು ಭಾಗವಹಿಸಿದ್ದರು. ಇಡೀ ರಸ ಪ್ರಶ್ನೆ ಕಾರ್ಯಕ್ರಮ ಪರಿಪೂರ್ಣವಾಗಿ ಶಾಸ್ತ್ರ ಬದ್ದ ಕರ್ನಾಟಕ ಶಾಸ್ತ್ರೀಯ ಸಂಗೀತದ ಮೇಲೆ ರೂಪುಗೊಂಡಿದ್ದು ಅತ್ಯಂತ ವಿಶೇಷವಾಗಿತ್ತು, ಅಂತ್ಯಾಕ್ಷರಿ, ರಾಗ – ತಾಳಗಳ ಜ್ಞಾನ, ವಾಗ್ಗೇಯಕಾರರು, ರಚನೆಕಾರರು, ಕೃತಿಗಳು, ವರ್ಣ, ವಾದಕರು ಹಾಗೂ ವಾದ್ಯಗಳು ಹೀಗೆ ಸ್ಪರ್ಧಿಗಳ ಸಂಪೂರ್ಣ ಸಂಗೀತ ಜ್ಞಾನಕ್ಕೇ ಒರೆ ಹಚ್ಚಲಾಯಿತು. ಪ್ರೇಕ್ಷಕರನ್ನು ಒಳಗೊಂಡಂತೆ ಬಂದಿದ್ದ ಎಲ್ಲಾ ಮಕ್ಕಳು ಅಪಾರ ಸಂಗೀತ ಜ್ಞಾನವನ್ನು ತಮ್ಮೊಂದಿಗೆ ತೆಗೆದುಕೊಂಡು ಹೋದರು. ಇದನ್ನೇ ಮುಖ್ಯ ಉದ್ದೇಶವಾಗಿ ಇಟ್ಟುಕೊಂಡು ರಸಪ್ರಶ್ನೆ…
ಮಂಗಳೂರು : ಬೆಂಗಳೂರಿನ ರಂಗಪಯಣ ತಂಡ ತನ್ನ ನಿರಂತರ ರಂಗ ಚಟುವಟಿಕೆಗಳ ನಡುವೆ ಈ ಬಾರಿ 31-07-2023 ರಂದು ರಾಜ್ಯದ 31 ಜಿಲ್ಲೆಗಳಲ್ಲಿ ಏಕಕಾಲಕ್ಕೆ 55 ನಿಮಿಷಗಳ ಪ್ರೇಮಕಥೆ ಎಂಬ ಏಕವ್ಯಕ್ತಿ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ಅದರ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಗೋವಿಂದದಾಸ್ ಕಾಲೇಜಿನ ರಂಗಮಂದಿರದಲ್ಲಿ ಶಿವರಾಜ್.ಎನ್ ಅಭಿನಯಿಸಿದ ನಾಟಕ ಪ್ರದರ್ಶನಗೊಂಡಿತು. ಉಸ್ತಾದ್ ಬಿಸ್ಮಿಲ್ಲಾಖಾನ್ ಪ್ರಶಸ್ತಿ ಪುರಸ್ಕೃತ ಕಲಾವಿದ ದಂಪತಿಗಳಾದ ಶ್ರೀ ರಾಜಗುರು ಹೊಸಕೋಟೆ ಹಾಗೂ ಶ್ರೀಮತಿ ನಯನ ಸೂಡ ಇವರ ನೇತೃತ್ವದಲ್ಲಿ ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ರಂಗಪಯಣದ ವಿಶಿಷ್ಟ ದಾಖಲೆಯ ಕಾರ್ಯಕ್ರಮ ಇದಾಗಿತ್ತು. ಕಳೆದ ಹಲವು ವರ್ಷಗಳಿಂದ ತಮ್ಮ ಹೊಸ ನಾಟಕಗಳೊಂದಿಗೆ ಕರಾವಳಿಗೆ ಭೇಟಿ ನೀಡುತ್ತಿರುವ ರಂಗಪಯಣ ಅರೆಹೊಳೆ ಪ್ರತಿಷ್ಠಾನ ಹಾಗೂ ಗೋವಿಂದದಾಸ್ ಕಾಲೇಜುಗಳ ಸಹಯೋಗದೊಂದಿಗೆ ಈ ನಾಟಕವನ್ನು ಆಯೋಜಿಸಿತ್ತು. ಸಂಜು ಎಂಬ ಯುವಕ ಶಾಂತಿ ಎಂಬ ತರುಣಿಯನ್ನು ಮೋಹಿಸಿ ಅವಳನ್ನು ಪಡೆಯಲು ಪ್ರಯತ್ನ ಪಡುವ ಒಂದು ಪ್ರೇಮ ಕಥೆಯೇ ಇದು. ಶಿವರಾಜ್ ನಾಟಕದ ಆರಂಭದಿಂದ ಕಡೆಯವರೆಗೂ…
ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪ್ರಸ್ತುತ ಪಡಿಸುವ ‘ನೃತ್ಯಾಂತರಂಗ’ದ 102ನೇ ಸರಣಿ ಕಾರ್ಯಕ್ರಮವು ದಿನಾಂಕ 15-07-2023ರಂದು ಪುತ್ತೂರಿನ ಶಶಿಶಂಕರ ಸಭಾಂಗಣದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಮಂಗಳೂರಿನ ನೃತ್ಯಾಂಗನ್ ಸಂಸ್ಥೆಯ ನಿರ್ದೇಶಕಿ ವಿದುಷಿ ಶ್ರೀಮತಿ ರಾಧಿಕಾ ಶೆಟ್ಟಿಯವರ ಶಿಷ್ಯೆಯಾದ ಕುಮಾರಿ ಅದಿತಿ ಲಕ್ಷ್ಮೀ ಭಟ್ ಇವರು ಭರತನಾಟ್ಯ ಕಾರ್ಯಕ್ರಮ ನೀಡಿದರು. ಕಾರ್ಯಕ್ರಮದ ಮೊದಲಿಗೆ ಸಂಸ್ಥೆಯ ರೂಢಿಯಂತೆ ಶ್ರೀ ಗಿರೀಶ್ ಕುಮಾರ್ ಇವರಿಂದ ಶಂಖನಾದ ಹಾಗೂ ವಿದುಷಿ ಪ್ರೀತಿಕಲಾ ದೀಪಕ್ ಇವರಿಂದ ಮಂಗಳಮಯ ಓಂಕಾರನಾದ ಹಾಗೂ ಕುಮಾರಿ ದೀಕ್ಷಾ ಇವರಿಂದ ಪ್ರಾರ್ಥನೆ ನಡೆಯಿತು. ಶಮಾ ಚಂದುಕೂಡ್ಲು ಕಾರ್ಯಕ್ರಮದ ನಿರೂಪಣೆಯ ಜೊತೆಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಭ್ಯಾಗತರಾಗಿ ಆಗಮಿಸಿದ ಆಕಾಂಶ ಚಾರಿಟೇಬಲ್ ಟ್ರಸ್ಟಿನ ಪ್ರಧಾನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಯುತ ಶ್ರೀಶ ಭಟ್ ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕುಮಾರಿಯರಾದ ಸೃಷ್ಠಿ ಎಂ.ಬಿ, ಸಿಯಾ ಹಾಗೂ ಜೀವಿಕ ಕಜೆಯವರು ಅಭ್ಯಾಗತ, ಕಲಾವಿದ ಹಾಗೂ ಕಲಾವಿದರ ಗುರುಗಳ ಪರಿಚಯ ಮಾಡಿದ ನಂತರ ಕುಮಾರಿ ಪ್ರಣಮ್ಯ ಹಸ್ತಗಳ ಬಗ್ಗೆ ವಿಷಯ…
ಮಂಗಳೂರು : ಭರತಾಂಜಲಿ (ರಿ.), ಕೊಟ್ಟಾರ, ಮಂಗಳೂರು, ಇವರು ಗಮಕ ಕಲಾ ಪರಿಷತ್, ಮಂಗಳೂರು ಇವರ ಸಹಕಾರದಲ್ಲಿ ತೊರವೆ ನರಹರಿ ಕವಿಯ ತೊರವೆ ರಾಮಾಯಣದ ಆಯ್ದ ಪಾದುಕಾ ಪ್ರದಾನ ಕಥಾಭಾಗದ ‘ಗಮಕ ವಾಚನ ಕಾರ್ಯಕ್ರಮ’ವನ್ನು ದಿನಾಂಕ 04-08-2023ರಂದು ಸಂಜೆ 5:30ಕ್ಕೆ ಭರತಾಂಜಲಿಯ ಮಿನಿ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಶ್ರೀ ಸುರೇಶ್ ರಾವ್, ಅತ್ತೂರು ಇವರು ವಾಚನ ಹಾಗೂ ಶ್ರೀ ಭಾಸ್ಕರ. ರೈ, ಕುಕ್ಕುವಳ್ಳಿ ಇವರು ವ್ಯಾಖ್ಯಾನ ನೀಡಲಿದ್ದಾರೆ. ಶ್ರೀಮತಿ ಪ್ರತಿಮಾ ಶ್ರೀಧರ್ ಇವರು ಈ ಕಾರ್ಯಕ್ರಮಕ್ಕೆ ಸರ್ವರಿಗೂ ಗೌರವದ ಸ್ವಾಗತ ಬಯಸಿದ್ದಾರೆ.
ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ಆಗಸ್ಟ್ ನಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ ನಡೆಯಲಿದೆ. ಪೂರ್ವಭಾವಿಯಾಗಿ ಪ್ರತೀ ಜಿಲ್ಲೆಯಲ್ಲಿ ಕವಿಗೋಷ್ಠಿ ನಡೆಯಲಿದ್ದು, ಆಯ್ಕೆಯಾದವರು ರಾಜ್ಯ ಮಟ್ಟಕ್ಕೆ ಅವಕಾಶ ಪಡೆಯುತ್ತಾರೆ. ರಾಜ್ಯ ಮಟ್ಟದಲ್ಲಿ ಮೊದಲ ಮೂರು ಕವಿತೆಗಳಿಗೆ ಕ್ರಮವಾಗಿ 10, 7 ಮತ್ತು 5 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಆಗಸ್ಟ್ 2ನೇ ವಾರದಲ್ಲಿ ನಡೆಯುವ ದ.ಕ. ಜಿಲ್ಲಾ ಮಟ್ಟದ ಕವಿಗೋಷ್ಠಿಗೆ ‘ಸ್ವರಾಜ್ಯ-ಸುರಾಜ್ಯ’ ವಿಷಯದಲ್ಲಿ 60ರಿಂದ 100 ಶಬ್ದದೊಳಗಿನ ಕವನ ಆಹ್ವಾನಿಸಲಾಗಿದೆ. ‘ಸ್ವರಾಜ್ಯ’ ವಿಷಯದ ಹೊರತಾದ ಕವಿತೆಗಳನ್ನು ಪರಿಗಣಿಸುವುದಿಲ್ಲ. ಯಾವುದೇ ಭಾರತೀಯ ಭಾಷೆಯಲ್ಲಿ ವಾಚನ ಮಾಡಬಹುದು. ಆದರೆ ಅದರ ಕನ್ನಡ ಕವಿತಾ ರೂಪವನ್ನು (ಭಾವಾರ್ಥವಲ್ಲ) ಕಳುಹಿಸಬೇಕು. ವಯೋಮಿತಿ ಇಲ್ಲ. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ದ.ಕ. ಘಟಕದ ಕಾರ್ಯದರ್ಶಿ ಪರಿಮಳಾ ರಾವ್ ಅವರ ವಾಟ್ಸ್ ಆ್ಯಪ್ 81237 16968ಕ್ಕೆ ಆಗಸ್ಟ್ 5ರೊಳಗೆ ಕಳುಹಿಸಬೇಕು.
ಮಂಗಳೂರು : ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಪ್ರಾಯೋಜಕತ್ವದಲ್ಲಿ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ನೇತೃತ್ವದಲ್ಲಿ ರಾಮಕೃಷ್ಣ ತಪೋವನ ಪೊಳಲಿ ಸಹಕಾರದೊಂದಿಗೆ ಏಳು ದಿನಗಳ ತೆಂಗಿನ ಗೆರಟೆಯಲ್ಲಿ ಕರಕುಶಲ ವಸ್ತು ತಯಾರಿಕೆಯ ಉಚಿತ ತರಬೇತಿ ಉದ್ಘಾಟನಾ ಕಾರ್ಯಕ್ರಮ ದಿನಾಂಕ 26-07-2023ರಂದು ಪೊಳಲಿ ತಪೋವನದಲ್ಲಿ ನಡೆಯಿತು. ರಾಮಕೃಷ್ಣ ತಪೋವನದ ಗುರು ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, “ಮಹಿಳೆಯರು ಮನಸು ಮಾಡಿದರೆ ಯಾವುದೂ ಅಸಾಧ್ಯವಲ್ಲ, ಸಂಸಾರ ನಿಭಾಯಿಸಿಕೊಂಡು ಮನೆಯಲ್ಲಿಯೇ ಸ್ವೋದ್ಯೋಗ ಮಾಡಿಕೊಂಡು ಸ್ವಾವಲಂಬಿ ಜೀವನ ಸಾಗಿಸಬೇಕು. ಮಹಿಳಾ ಶಕ್ತಿ ತಮ್ಮ ಜೀವನ ರೂಪಿಸಿಕೊಳ್ಳಲು ಮುಂದಡಿಯಿಡಬೇಕು” ಎಂದರು. ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಸಚಿನ್ ಹೆಗ್ಡೆ ಮಾತನಾಡಿ, ಪ್ರತಿಷ್ಠಾನದ ಕಾರ್ಯಕ್ರಮಗಳ ಬಗ್ಗೆ ಮಹಿಳೆಯರು, ರೈತರು, ಸಮುದಾಯದ ಜನರ ಅಭಿವೃದ್ಧಿಗೆ ಹಮ್ಮಿಕೊಂಡ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಿ.ವಿ.ಮಾಲಿನಿ, ಮಹಿಳಾ ಚಿಂತಕಿ ಮಂಗಳಾ ಭಟ್, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲದ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ, ತರಬೇತುದಾರ…