Subscribe to Updates
Get the latest creative news from FooBar about art, design and business.
Author: roovari
25 ಮಾರ್ಚ್ 2023, ಮಂಗಳೂರು: “ಕಾವ್ಯವು ದೈವೀಕ ನೆಲೆಯ ಒಂದು ಅಭಿವ್ಯಕ್ತಿ. ಕವಿ ತನ್ನ ಕಾವ್ಯದಲ್ಲಿ ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ. ಕಾವ್ಯ ಬರೆಯುವ ಸಂದರ್ಭದಲ್ಲಿ ಆತ ದೇಶ, ಕಾಲ, ಪಂಥ, ಪಂಗಡ, ಧರ್ಮ, ಮತ, ಜಾತಿ ಇಂತಹ ಯಾವ ಕಟ್ಟುಪಾಡುಗಳಿಲ್ಲದೆ ವಿಶ್ವಾತ್ಮಕ ಪ್ರಜ್ಞೆಯಿಂದ ಕಾವ್ಯ ರಚಿಸುತ್ತಾನೆ. ಹಾಗಾಗಿಯೇ ಕಾವ್ಯವು ಸದಾ ಜೀವಂತಿಕೆಯನ್ನು ಮತ್ತು ಆಕರ್ಷಣೆಯನ್ನು ಉಳಿಸಿಕೊಂಡು ಬಂದಿದೆ” ಎಂದು ಪ್ರಸಿದ್ಧ ಕವಿ – ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಅವರು ಹೇಳಿದರು. ಕವಿ ದಾ.ನ.ಉಮಾಣ್ಣ ಅವರ “ದೇವರ ಬೇಸಾಯ” ಕವನ ಸಂಕಲನವನ್ನು ದಿನಾಂಕ 18-03-2023ರಂದು ಮಂಗಳೂರಿನ ಪತ್ರಿಕಾ ಭವನದ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಅವರು ಮಾತಾಡುತ್ತಿದ್ದರು. “ಸಾಮಾಜಿಕವಾದ ಎಲ್ಲ ರೋಗಗಳಿಗೆ ಕಾವ್ಯವು ಔಷಧವಾಗಿದೆ. ಯಾವುದು ಒಳಿತು ಯಾವುದು ಕೆಡುಕು ಎಂಬುದನ್ನು ಕಪ್ಪು-ಬಿಳುಪಿನ ರೀತಿಯಲ್ಲಿ ಚಿತ್ರಿಸುವ ಕಾವ್ಯವು ಮಾನವತೆಗೆ ಸದಾ ಬೆಳಕಿನ ಹಾದಿಯನ್ನು ತೋರಿಸುತ್ತ ಬಂದಿದೆ. ಕವಿ ದಾ.ನ.ಉಮಾಣ್ಣ ಅವರು ಬದುಕಿನಲ್ಲಿ ಕಷ್ಟ ಸಂಕಟಗಳನ್ನು ಅನುಭವಿಸಿದರೂ ಅವರ ಕಾವ್ಯವು ಕಲ್ಮಷದಿಂದ…
25 ಮಾರ್ಚ್ 2023, ಮಂಗಳೂರು: ತುಳು ಕೂಟ ಕುಡ್ಲ ಸಂಸ್ಥೆಯು 50ನೇ ವರ್ಷದ “ಬಂಗಾರ್ ಪರ್ಬ”ದ ನೆನಪಿಗಾಗಿ ಸರಣಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದೆ. ಸರಣಿಯ ಮೊದಲ ಕಾರ್ಯಕ್ರಮ ತುಳು ನರ್ತನ ಭಜನೆ ಸ್ಪರ್ಧೆಯು ” ಮಾ.26ರಂದು ಬೆಳಿಗ್ಗೆ 9.30ರಿಂದ ನಗರದ ಮಂಗಳಾದೇವಿ ದೇವಸ್ಥಾನದಲ್ಲಿ ನಡೆಯಲಿದೆ ಎಂದು ತುಳುಕೂಟದ ಅಧ್ಯಕ್ಷ ದಾಮೋದರ ನಿಸರ್ಗ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತುಳು ಸಾಹಿತ್ಯ, ಸಂಗೀತ, ತಾಳ, ಲಯ, ನರ್ತನ ಆಧರಿಸಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಪ್ರಥಮ ಬಹುಮಾನ ರೂ.7.000, ದ್ವಿತೀಯ ಬಹುಮಾನ ರೂ.5,000 ನಿಗದಿಪಡಿಸಲಾಗಿದೆ. ಪ್ರತಿ ತಿಂಗಳು ತುಳು ಸಾಹಿತ್ಯ ಭಾಷೆಗೆ ಅನುಸಾರವಾಗಿ ಬೇರೆ ಬೇರೆ ಕಾರ್ಯಕ್ರಮಗಳನ್ನು ನಡೆಸಿ, ಡಿಸೆಂಬರ್‌ನಲ್ಲಿ ಮೂರು ದಿನಗಳ ವಿಶೇಷ ಕಾರ್ಯಕ್ರಮಗಳೊಂದಿಗೆ ಸಮಾರೋಪ ಮಾಡಲಾಗುವುದು’ ಎಂದರು. ಧರ್ಮದರ್ಶಿ ಹರಿಕೃಷ್ಣ ಪುನರೂರು, ಮಂಗಳಾದೇವಿ ದೇವಸ್ಥಾನದ ಮೊಕ್ತೇಸರ ಪಿ. ರಮಾನಾಥ್ ಹೆಗ್ಡೆ ಇವರುಗಳ ಗಣ್ಯ ಉಪಸ್ಥಿತಿಯಲ್ಲಿ ಮಾರ್ಚ್ 26ರಂದು ಬೆಳಿಗ್ಗೆ 9.30ಕ್ಕೆ ಅಖಿಲ ಭಾರತ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಸುಮಲತಾ ಎನ್. ಸುವರ್ಣ…
25 ಮಾರ್ಚ್ 2023, ಉಡುಪಿ: ‘ಬಸಂತ್ ಉತ್ಸವ್’ ನ ಅಂಗವಾಗಿ ವಿನಯ್ಸ್ ಅಕಾಡೆಮಿ ಆಯೋಜಿಸಿ ಪ್ರಸ್ತುತ ಪಡಿಸುತ್ತಿರುವ ಸಿತಾರ್-ಬಾನ್ಸುರಿ ಜುಗಲ್‌ಬಂದಿ ಸಂಗೀತ ಕಾರ್ಯಕ್ರಮ ಏಪ್ರಿಲ್ 2ರ ಸಂಜೆ 5.30ರಿಂದ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಸಂಗೀತ ಕ್ಷೇತ್ರದ ಪ್ರಸಿದ್ಧ ಕಲಾವಿದರಾದ ಉಸ್ತಾದ್ ರಫೀಕ್ ಖಾನ್ ಹಾಗೂ ಪಂ. ಪ್ರವೀಣ್ ಗೋಡ್ಖಿಂಡಿ ಅವರು ಸಿತಾರ್-ಬಾನ್ಸುರಿ ವಾದನದಲ್ಲಿ ಜತೆಯಾಗಲಿದ್ದಾರೆ. ಅವರೊಂದಿಗೆ ತಬಲಾ ಪಟು ಮಾಯಾಂಕ್ ಬೇಡೆಕರ್ ತಬಲಾ ಸಾಥ್ ನೀಡಲಿದ್ದಾರೆ. ಸಂಗೀತಾಸಕ್ತರಿಗೆ ಉಚಿತ ಪಾಸ್ ಲಭ್ಯವಿದ್ದು, ಉಡುಪಿಯ ವಿದ್ಯಾ ಸಮುದ್ರ ಮಾರ್ಗದಲ್ಲಿರುವ ವಿನಯ್ಸ್ ಅಕಾಡೆಮಿ ಅಥವಾ ಪ್ರಶಾಂತ್ ಗೋಖಲೆ ಅವರನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
25 ಮಾರ್ಚ್ 2023, ಮಂಗಳೂರು: ಕೆನರಾ ಕಲ್ಚರಲ್ ಅಕಾಡೆಮಿ ಮತ್ತು ‘ಕಲಾಭಿ’ ಕಲಾ ಸಂಸ್ಥೆ ವತಿಯಿಂದ ‘ಅರಳು 2023’ ರಂಗಭೂಮಿ ಕಾರ್ಯಾಗಾರ ಏಪ್ರಿಲ್ 16ರಿಂದ 26ರವರೆಗೆ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಕೊಡಿಯಾಲ್ ಬೈಲ್‌ನ ಕೆನರಾ ಇಂಗ್ಲಿಷ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ 9ರಿಂದ 17 ವರ್ಷದೊಳಗಿನ ಮಕ್ಕಳಿಗಾಗಿ ವೃತ್ತಿಪರ ರಂಗಭೂಮಿ ಕಾರ್ಯಾಗಾರ ನಡೆಯಲಿದೆ. ಭರವಸೆಯ ನಿರ್ದೇಶಕರಾದ ನವೀನ್ ಸಾಣೆಹಳ್ಳಿ, ಬಿಂದು ರಕ್ಷಿದಿ, ಭುವನ್ ಮಣಿಪಾಲ ಮತ್ತು ಉಜ್ವಲ ಯು.ವಿ.ರವರು ಈ ಕಾರ್ಯಾಗಾರದ ನಾಟಕಗಳನ್ನು ನಿರ್ದೇಶಿಸಲಿದ್ದಾರೆ ಎಂದು ಕೆನರಾ ಕಲ್ಚರಲ್ ಅಕಾಡೆಮಿ ಸಂಯೋಜಕ ಡಾ.ಶೃತಕೀರ್ತಿರಾಜ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಲಾಭಿ ಸಂಸ್ಥೆ ಅಧ್ಯಕ್ಷೆ ಡಾ.ಮೀನಾಕ್ಷಿ ರಾಮಚಂದ್ರ ಮಾತನಾಡಿ, ಮಂಗಳೂರಿನಲ್ಲಿ ಕಲೆ, ಕಲಾವಿದ ಮತ್ತು ಕಲಿಕೆ; ಈ ಮೂರನ್ನು ಕೇ೦ದ್ರವಾಗಿರಿಸಿಕೊಂಡು ಕಲೆಗಾಗಿ ಕಲಾವಿದ; ಕಲಾವಿದನಿಗಾಗಿ ಕಲೆ ಎಂಬ ಧ್ಯೇಯದೊಂದಿಗೆ ಕಲಾಭಿ ಸಂಸ್ಥೆ ಅಸ್ತಿತ್ವಕ್ಕೆ ಬಂದಿದೆ. ಮಕ್ಕಳ ಸೃಜನಶೀಲತೆಯನ್ನು ಪೋಷಿಸಲು, ಕಲ್ಪನೆ, ನಟನಾ ಕೌಶಲ್ಯಗಳನ್ನು ಅಭಿವೃದ್ದಿ ಪಡಿಸಲು ಅರಳು ಕಾರ್ಯಾಗಾರ…
25 ಮಾರ್ಚ್ 2023, ಮಂಗಳೂರು: ಸಂಗೀತ ವಿದ್ವಾಂಸರೂ, ಸೌಜನ್ಯದ ಸಾಕಾರಮೂರ್ತಿಯೂ ಆಗಿದ್ದ ಎನ್. ಕೆ. ಸುಂದರಾಚಾರ್ಯರಿಂದ 1983ರಲ್ಲಿ ಸ್ಥಾಪಿಸಲ್ಪಟ್ಟ ಸನಾತನ ನಾಟ್ಯಾಲಯಕ್ಕೆ ಈ ವರ್ಷ ನಲ್ವತ್ತರ ಸಂಭ್ರಮ, ಸುಂದರಾಚಾರ್ಯ ಅವರ ಮಗಳಾದ ಕರ್ನಾಟಕ ಕಲಾಶ್ರೀ ಗೌರವ ಪ್ರಶಸ್ತಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಂದ ಪುರಸ್ಕೃತರಾದ ವಿದುಷಿ ಶ್ರೀಮತಿ ಶಾರದಾಮಣಿ ಶೇಖರ್ ಮತ್ತು ಅವರ ಸೋದರ ಸೊಸೆ ಹಾಗೂ ಹಿರಿಯ ಶಿಷ್ಯೆ, ದೂರದರ್ಶನ ಕಲಾವಿದೆ ವಿದುಷಿ ಶ್ರೀಮತಿ ಶ್ರೀಲತಾ ನಾಗರಾಜ್ ಮುಂದಾಳುತ್ವದಲ್ಲಿ ನಾಟ್ಯಾಲಯವು ಬೃಹತ್ ಶಿಷ್ಯವೃಂದಕ್ಕೆ ಭರತನಾಟ್ಯ ಕಲಿಸುವ ಕೆಲಸ ಮಾಡುತ್ತಿದೆ. ಶಾರದಮಣಿಯವರ ಸುಪುತ್ರಿ ಶುಭಮಣಿ ಚಂದ್ರಶೇಖರ್ (ದೆಹಲಿಯ ರಮಾ ವೈದ್ಯನಾಥನ್‌ರವರ ಶಿಷ್ಯೆ), ಅಂತರಾಷ್ಟ್ರೀಯ ಖ್ಯಾತಿಯ ಭರತನಾಟ್ಯ ಕಲಾವಿದೆಯಾಗಿ ಪ್ರಸಿದ್ಧಿ ಹೊಂದಿರುತ್ತಾರೆ. ಭಾರತೀಯ ಇತಿಹಾಸ ಸಂಸ್ಕೃತಿಯನ್ನು ಪರಿಚಯಿಸುವ ‘ರಾಷ್ಟ್ರದೇವೋ ಭವ’, ‘ಪುಣ್ಯಭೂಮಿ ಭಾರತ’, ‘ಶಬರಿ’, ‘ಸತ್ಯನಾಪುರದ ಸಿರಿ’ ಮುಂತಾದ ಹಲವು ಪ್ರಸ್ತುತಿಗಳು ಸ್ಥಳೀಯವಾಗಿ ಹಾಗೂ ದೇಶದ ವಿವಿಧೆಡೆಗಳಲ್ಲಿ ಮತ್ತು ವಿದೇಶದಲ್ಲಿಯೂ ಪ್ರದರ್ಶನ ಕಂಡಿವೆ. ಸನಾತನದ ವಿದ್ಯಾರ್ಥಿಗಳು ನಾಟ್ಯದ ಪಾಠಕ್ಕೆ…
25 ಮಾರ್ಚ್ 2023, ಮಂಜೇಶ್ವರ: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಯವರ ಸ್ಮಾರಕ ಗಿಳಿವಿಂಡು ಆವರಣದಲ್ಲಿ ಶನಿವಾರ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಆಯೋಜಿಸಿದ್ದ 137ನೇ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಗೋವಿಂದ ಪೈಯವರ ವ್ಯಕ್ತಿತ್ವ ಮತ್ತು ಮನೋಭಾವ ಎಂಬ ವಿಷಯದಲ್ಲಿ ಹಂಪಿ ಕನ್ನಡ ವಿವಿಯ ನಿವೃತ ಕನ್ನಡ ಮುಖ್ಯಸ್ಥ ಪ್ರೊ.ಎ.ವಿ. ನಾವಡ ವಿಶೇಷೋಪನ್ಯಾಸ ನೀಡಿ ಮಾತನಾಡುತ್ತಾ ‘ ಕನ್ನಡದ ಪ್ರಥಮ ರಾಷ್ಟ್ರ ಕವಿ ಮಂಜೇಶ್ವರ ಗೋವಿಂದ ಪೈಯವರ ಒಂದೊಂದು ಕೃತಿಗಳೂ ಅಧ್ಯಯನ ಯೋಗ್ಯವಾಗಿವೆ. ಆದರೆ ಸಾಕಷ್ಟು ಅಧ್ಯಯನ ಈವರೆಗೆ ನಡೆದಿಲ್ಲ. ವಿದ್ವತ್ ಮತ್ತು ಸಾಹಿತ್ಯ ಶ್ರೀಮಂತಿಕೆಯಲ್ಲಿ ಗೋವಿಂದ ಪೈಯವರನ್ನು ಮೀರಿಸುವ ಮತ್ತೊಬ್ಬ ವ್ಯಕ್ತಿ ರಾಷ್ಟ್ರದಲ್ಲೇ ಇಲ್ಲ . ಮಂಜೇಶ್ವರ ಪ್ರದೇಶಕ್ಕೆ ಅಂದೊಂದು ಕಾಲದಲ್ಲಿ ಆಗಮಿಸುತ್ತಿದ್ದ ನೂರಾರು ಅಭಿಮಾನಿಗಳು ಎರಡು ಸಾಗರಗಳನ್ನು ನೋಡಿ ಪುಳಕಿತರಾಗುತ್ತಿದ್ದರು. ಒಂದೆಡೆ ಭೋರ್ಗರೆಯುವ ಅರಬ್ಬೀ ಸಮುದ್ರ ಹಾಗೂ ಸಾಗರದಷ್ಟೇ ಜ್ಞಾನ ಕಡಲಾದ ಗೋವಿಂದ ಪೈಯವರು ಇನ್ನೊಂದೆಡೆ. ಅವರು ಕನ್ನಡ ಸಾರಸ್ವತ ಲೋಕದ ಬೆಳಗುವ ನಕ್ಷ ತ್ರವಾಗಿದ್ದರು’ ಎಂದರು. ಕನ್ನಡ ಸಾಹಿತ್ಯ…
23 ಮಾರ್ಚ್ 2023: ಸಾಹಿತಿ, ಸಂಘಟಕ, ಸ್ವಾತಂತ್ರ್ಯ ಹೋರಾಟಗಾರ ಏರ್ಯ ಲಕ್ಷ್ಮೀನಾರಾಯಣ ಆಳ್ವರು ದಕ್ಷಿಣ ಕನ್ನಡ ಜಿಲ್ಲೆಯ ಮೊಡಂಕಾಪು ಎಂಬ ಊರಿನ ಸಮೀಪವಿರುವ ಏರ್ಯ ಎಂಬಲ್ಲಿ ಮಾವಂತೂರು ಸುಬ್ಬಯ್ಯ ಆಳ್ವ ಮತ್ತು ಸೋಮಕ್ಕ ದಂಪತಿಗಳ ಸುಪುತ್ರನಾಗಿ 19-03-1926ರಂದು ಜನಿಸಿದರು. ತುಳು ಮತ್ತು ಕನ್ನಡ ಭಾಷೆಗಳಲ್ಲಿ ಸಾಹಿತ್ಯ ಕೃಷಿ ಮಾಡಿದ ಧೀಮಂತ. ಇವರ ಕೃತಿಗಳಲ್ಲಿ ಮುಖ್ಯವಾದವುಗಳನ್ನು ಮಥಿಸುವ ಮತ್ತು ಏರ್ಯರ ಕವನಗಳನ್ನು ಹಾಡುವ “ಏರ್ಯ ಸಾಹಿತ್ಯ ಸಂಭ್ರಮ” ಏರ್ಯ ಬೀಡಿನಲ್ಲಿ ದಿನಾಂಕ 02-04-2023ರಂದು ಭಾನುವಾರ ಏರ್ಯ ಆಳ್ವ ಫೌಂಡೇಷನ್ ಆಶ್ರಯದಲ್ಲಿ ನಡೆಯಲಿದೆ. ಪೂರ್ವಾಹ್ನ 9ರಿಂದ 10 ಗಂಟೆವರೆಗೆ ಉಪಹಾರ. 10ರಿಂದ 10-30 ಡಾ. ಬಿ. ಎ. ವಿವೇಕ ರೈಯವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. 10-30ರಿಂದ 1-00 ಗಂಟೆವರೆಗೆ ಏರ್ಯರ ಮುಖ್ಯ ಕೃತಿಗಳ ವಿಶ್ಲೇಷಣೆ ನಡೆಯಲಿದೆ. ಡಾ. ತಾಳ್ತಜೆ ವಸಂತ ಕುಮಾರ್, ಡಾ. ನಾ.ದಾಮೋದರ ಶೆಟ್ಟಿ, ಪ್ರೊ. ಪಿ.ಕೃಷ್ಣ ಮೂರ್ತಿ, ಡಾ. ಯು.ಮಹೇಶ್ವರಿ, ಡಾ. ತುಕಾರಾಮ್ ಪೂಜಾರಿ, ಡಾ. ಸತ್ಯನಾರಾಯಣ ಮಲ್ಲಿಪಟ್ಟಣ, ಡಾ. ಆರ್.ನರಸಿಂಹ ಮೂರ್ತಿ, ಡಾ.…
25 ಮಾರ್ಚ್ 2023, ಉಡುಪಿ: ರಂಗಭೂಮಿ (ರಿ.) ಉಡುಪಿ, ಎಂ.ಜಿ.ಎಂ. ಕಾಲೇಜು ಉಡುಪಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ “ವಿಶ್ವ ರಂಗಭೂಮಿ ದಿನಾಚರಣೆ-2023″ಯು ದಿನಾಂಕ 27.03.2023, ಸೋಮವಾರ ಸಂಜೆ ಸಮಯ: 5.45ಕ್ಕೆ ನೂತನ ರವೀಂದ್ರ ಮಂಟಪ, ಎಂ.ಜಿ.ಎಂ. ಕಾಲೇಜು ಉಡುಪಿ ಇಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಪ್ರೊ. ಜಯಪ್ರಕಾಶ್ ಮಾವಿನಕುಳಿ, ಹಿರಿಯ ನಾಟಕಕಾರರು, ಸಾಹಿತಿ, ರಂಗ ನಿರ್ದೇಶಕರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಡಾ. ತಲ್ಲೂರು ಶಿವರಾಮ ಶೆಟ್ಟಿ, ಅಧ್ಯಕ್ಷರು, ರಂಗಭೂಮಿ (ರಿ.) ಉಡುಪಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ – ಶ್ರೀ ಸಂತೋಷ್ ಕೆ. ಶೆಟ್ಟಿ, ಅಂಗಡಿಗುತ್ತು, ಕಳತ್ತೂರು, ಶ್ರೀ ರಾಮ್ ಶೆಟ್ಟಿ, ರಂಗಕರ್ಮಿ, ಭೂಮಿಕಾ (ರಿ.) ಹಾರಾಡಿ, ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಪ್ರಾಂಶುಪಾಲರು, ಎಂ.ಜಿ.ಎಂ. ಕಾಲೇಜು ಉಡುಪಿ ಇವರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಕೆ.ಪ್ರಭಾಕರ್ ಶೆಟ್ಟಿಗಾರ್, ಪ್ರಭಾಕರ್ ಸೌಂಡ್ಸ್ ಉಡುಪಿ ಮತ್ತು ಶ್ರೀ ಯು.ಎಂ. ಅಸ್ಲಾಮ್ ಹಿರಿಯ ರಂಗನಟ, ರಂಗಭೂಮಿ (ರಿ.) ಉಡುಪಿ ಇವರಿಗೆ “ವಿಶ್ವ ರಂಗಭೂಮಿ” ಪ್ರಶಸ್ತಿಯನ್ನು ನೀಡಿ…
23 ಮಾರ್ಚ್ 2023, ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಪ್ರಾಯೋಜಕತ್ವದಲ್ಲಿ ತುಳುಕೂಟ ಕುಡ್ಲ ನೀಡುವ “ರತ್ನವರ್ಮ ಹೆಗ್ಗಡೆ ಪ್ರಶಸ್ತಿ 2022–23” ಪ್ರಕಟಿಸಲಾಗಿದೆ. ಅಪ್ರಕಟಿತ ಹೊಸ ನಾಟಕ ಕೃತಿಗೆ ಪ್ರತೀ ವರ್ಷ ಪ್ರಥಮ, ದ್ವಿತೀಯ, ತೃತೀಯ ಪ್ರಶಸ್ತಿಗಳನ್ನು ಡಾ. ಹೆಗ್ಗಡೆ ಅವರು ತಮ್ಮ ತೀರ್ಥರೂಪರ ನೆನಪಿಗಾಗಿ ಕಳೆದ 46 ವರ್ಷಗಳಿಂದ ನೀಡುತ್ತಾ ಬಂದಿದ್ದಾರೆ. ಪ್ರಶಸ್ತಿ ಮೊತ್ತವು ಕ್ರಮವಾಗಿ ರೂ.10,000, ರೂ.8,000 ಮತ್ತು ರೂ.6,000 ನಗದು ಬಹುಮಾನವಾಗಿರುತ್ತದೆ. ಈ ಕೆಳಗಿನವರು ಈ ಸಲದ ಪ್ರಶಸ್ತಿ ವಿಜೇತರು. ಪ್ರಥಮ: ದೀಪಕ್ ಎಸ್. ಕೋಟ್ಯಾನ್ ಕುತ್ತೆತ್ತೂರು. (ಮಾಯದಪ್ಪೆ ಮಾಯಂದಾಲ್) ದ್ವಿತೀಯ: ಪರಮಾನಂದ ಸಾಲಿಯಾನ್ ಸಸಿಹಿತ್ಲು (ಪುರ್ಸೆ ಬಿರ್ಸೆ ಶ್ರೀ ರಾಮೆ) ತೃತೀಯ: ಅಕ್ಷಯ ಆರ್. ಶೆಟ್ಟಿ, ಪಡಂಗಡಿ (ಪೆರ್ಗ) ವಿಶ್ರಾಂತ ಪತ್ರಕರ್ತ ಮನೋಹರ ಪ್ರಸಾದ್, ತುಳು-ಕನ್ನಡ ಸಾಹಿತಿ ಮುದ್ದು ಮೂಡುಬೆಳ್ಳೆ ಹಾಗೂ ರಂಗಕರ್ಮಿ ವಿ.ಜಿ.ಪಾಲ್ ಇವರು ಪ್ರಶಸ್ತಿ ಪುರಸ್ಕೃತ ಕೃತಿಗಳ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಏಪ್ರಿಲ್ 15ರಂದು ಶ್ರೀ ಮಂಗಳಾದೇವಿ…
23 ಮಾರ್ಚ್ 2023, ಉಡುಪಿ: ಹಾವಂಜೆಯ ಭಾವನಾ ಕಲಾಶಾಲೆಯ ವಿಂಶತಿ ಸಂಭ್ರಮದ ಈ ಸುಸಂದರ್ಭದಲ್ಲಿ ದೇಶೀಯ ಜನಪದ ಮತ್ತು ಬುಡಕಟ್ಟು ಕಲೆಯ ಪ್ರಚಾರ ಮತ್ತು ಪ್ರೋತ್ಸಾಹಕ್ಕಾಗಿ ಕಲಿಕಾ ಕಾರ್ಯಾಗಾರಗಳನ್ನು ಉಡುಪಿಯ ಬಡಗುಪೇಟೆಯಲ್ಲಿ ಆಯೋಜಿಸಲಾಗುತ್ತಿದೆ. ಭಾರತದಾದಂತ್ಯ ಹರಡಿಕೊಂಡಿರುವ ನಾನಾ ಕಲಾಪ್ರಕಾರಗಳನ್ನು ಉಡುಪಿಗೆ ಪರಿಚಯಿಸುವ ನಿಟ್ಟಿನಲ್ಲಿ ಭಾವನಾ ಫೌಂಡೇಷನ್, ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಆಯೋಜಿಸುವ “ಪಟಚಿತ್ರ” ದಿನಾಂಕ 31 ಮಾರ್ಚ್ 2023 ರಿಂದ 2 ನೇ ಏಪ್ರಿಲ್ 2023ರವರೆಗೆ ನಡೆಯಲಿದೆ. ಪಟಚಿತ್ರವು ಒರಿಸ್ಸಾ, ಪಶ್ಚಿಮ ಬಂಗಾಲ ಹಾಗೂ ಬಾಂಗ್ಲಾದೇಶದ ಕಾಲ ಭಾಗಗಳಲ್ಲಿ ಬಳಕೆಯಲ್ಲಿರುವ ಭಾರತಿಯ ವಿಶಿಷ್ಟ ಸಾಂಪ್ರದಾಯಿಕ ಕಲೆಯಾಗಿದೆ. ಈ ಕಲಾಪ್ರಕಾರದಲ್ಲಿ ಅಭಿವ್ಯಕ್ತಗೊಳ್ಳುವ ಪೌರಾಣಿಕ ನಿರೂಪಣೆಗಳು ಹಾಗೂ ಜಾನಪದೀಯ ಕಥೆಗಳ ಚಿತ್ರಗಳು ಅಂತರಾಷ್ಟ್ರೀಯ ಮುನ್ನಣೆ ಗಳಿಸಿದೆ. ಸಾಮಾನ್ಯವಾಗಿ ರೇಷ್ಮೆ ಮತ್ತು ಹತ್ತಿಯ ಬಟ್ಟೆ ಹಾಗೂ ಮತ್ತು ಕಾಗದಗಳ ಮೇಲೆ ಚಿತ್ರಿಸಲಾಗುವ ಈ ಕಲಾಪ್ರಕಾರವನ್ನು ತಾಳೆಯೋಲೆಯ ಮೇಲೆಯೂ ಗೀರಿ ಮತ್ತು ಕೆತ್ತುವ ಕ್ರಮದಲ್ಲಿ ಕೂಡ ರಚಿಸಲಾಗುತ್ತದೆ. ಇದೊಂದು ಸಾಕಷ್ಟು ವಿವರಣಾತ್ಮಕವಾದ ಸಂಕೀಣ೯ತೆಯಿಂದ ಕೂಡಿದ…