ಮಂಗಳೂರು : ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಹಾಗೂ ಜರ್ನಿ ಥಿಯೇಟರ್ ಗ್ರೂಪ್ ಮಂಗಳೂರು ಸಹಯೋಗದೊಂದಿಗೆ ಕಾಲೇಜಿನ ವಿದ್ಯಾರ್ಥಿಗಳು ಅಭಿನಯಿಸಿದ ‘ಉತ್ಥಾನ ಪರ್ವ’ ನಾಟಕ ಪ್ರದರ್ಶನವು ದಿನಾಂಕ 18-03-2024ರಂದು ಮಂಗಳೂರು ಗಾಂಧೀನಗರದಲ್ಲಿರುವ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಕಲಾಮಂಟಪದಲ್ಲಿ ಪ್ರದರ್ಶನಗೊಂಡಿತು.
ಕಾಲೇಜಿನ ಸಂಚಾಲಕ ಕಾರಂದೂರು ವಸಂತ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಶಿವಭಕ್ತಿ ಯೋಗ ಸಂಘದ ಉಪಾಧ್ಯಕ್ಷ ಶೇಖರ ಪೂಜಾರಿ, ಮಾಜಿ ಡೀನ್ ಡಾ. ಉಮ್ಮಪ್ಪ ಪೂಜಾರಿ, ಪ್ರಾಂಶುಪಾಲೆ ಡಾ. ಆಶಾಲತಾ ಎಸ್. ಸುವರ್ಣ, ಲಲಿತ ಕಲಾ ಸಂಘದ ಸಂಯೋಜಕಿ ಡಾ. ನಿಶಾ ಯುವರಾಜ್, ವಿದ್ದು ಉಚ್ಚಿಲ್, ಜರ್ನಿ ಥೇಟರ್ ಗ್ರೂಪಿನ ಸಾಂಸ್ಕೃತಿಕ ಸಂಚಾಲಕ ಸುನೀಲ್ ಪಲ್ಲಮಜಲು ಮೊದಲಾದವರು ಉಪಸ್ಥಿತರಿದ್ದರು.