Subscribe to Updates
Get the latest creative news from FooBar about art, design and business.
Author: roovari
ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಗೋಣಿಕೊಪ್ಪಲು ಪ್ರೌಢಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಕಲಾವಿದ ದಿ. ವಿ.ಟಿ. ಶ್ರೀನಿವಾಸ್ ನೆನಪು, ಗಾನ ಮತ್ತು ನುಡಿ ನಮನ ಕಾರ್ಯಕ್ರಮವು ದಿನಾಂಕ 11 ಸೆಪ್ಟೆಂಬರ್ 2024ರಂದು ಬೆಳಿಗ್ಗೆ 11-00 ಗಂಟೆಗೆ ಗೋಣಿಕೊಪ್ಪಲು ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್ ವಹಿಸಲಿದ್ದು, ಉದ್ಘಾಟನೆಯನ್ನು ಪೊನ್ನಂಪೇಟೆಯ ನೀನಾದ ಸಂಗೀತ ನೃತ್ಯ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಚೇಂದಿರ ನಿರ್ಮಲ ಬೋಪಣ್ಣ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚಾನಲ್ ಕೂರ್ಗ್ ಇವರ ಸಂಪಾದಕರಾದ ಶ್ರೀಧರ ನೆಲ್ಲಿತಾಯ, ಆಕಾಶವಾಣಿ ಕಲಾವಿದರಾದ ಬಿ.ಎ. ಗಣೇಶ್, ವಿರಾಜಪೇಟೆಯ ಸ್ವರಾರ್ಣವ ಸಂಗೀತ ಶಾಲೆಯ ವ್ಯವಸ್ಥಾಪಕರಾದ ವಿದ್ವಾನ್ ದಿಲಿ ಕುಮಾರ್, ಅದ್ಯಾಪಕರು ಮತ್ತು ಕಲಾವಿದರಾದ ಕೆ. ಚಂದ್ರಶೇಖರ್, ತಬಲ ಕಲಾವಿದರಾದ ಮುರ್ನಾಡಿನ ಚಂದ್ರು, ಪೊನ್ನಂಪೇಟೆ ತಾಲೂಕು ಕನ್ನಡ…
ಆಹ್ಲಾದಕರ ನರ್ತನವೊಂದು ಹೇಗಿರುತ್ತದೆ ಎಂಬುದನ್ನು ಸಾಕ್ಷೀಕರಿಸಿದ ಆರಭಿಯ ಮನಮೋಹಕ ನೃತ್ತ ಲಾಸ್ಯಗಳ – ಶಿಲ್ಪಾತ್ಮಕ ನೃತ್ಯಭಂಗಿಗಳ ಅನನ್ಯತೆ ಕಣ್ಮನ ಸೂರೆಗೊಂಡಿತು. ಇತ್ತೀಚೆಗೆ, ಜಯನಗರದ ಜೆ.ಎಸ್.ಎಸ್. ವೇದಿಕೆಯೆಂಬ ರಂಗೋದ್ಯಾನದಲ್ಲಿ ನಾಟ್ಯಮಯೂರಿಯೊಂದು ಸ್ವಚ್ಚಂದವಾಗಿ ಕುಣಿದಾಡಿ ತನ್ನ ನೃತ್ಯ ಸಾಧನೆಯ ಚೆಂಬೆಳಕನ್ನು ಹೊರಚೆಲ್ಲಿ ಕಲಾರಸಿಕರ ಹೃದಯವನ್ನು ಆಹ್ಲಾದಗೊಳಿಸಿತು. ಉದಯೋನ್ಮುಖ ನೃತ್ಯ ಕಲಾವಿದೆ ಆರಭಿ ಅಂದು ತನ್ನ ರಂಗಾರ್ಪಣೆಯಲ್ಲಿ ನುರಿತ ನರ್ತಕಿಯಂತೆ ಲೀಲಾಜಾಲವಾಗಿ ಪಾದಭೇದಗಳ ಸೌಂದರ್ಯದಲ್ಲಿ, ಭಾವನಿಮಗ್ನತೆಯ ಸುಂದರಾಭಿನಯದಲ್ಲಿ ಎರಡು ಗಂಟೆಗಳ ಕಾಲ ನಿರಾಯಾಸವಾಗಿ ನಗುಮೊಗದಿಂದ ನರ್ತಿಸಿದ್ದು ವಿಶೇಷ. ವಿ. ಪೂರ್ಣಿಮಾ ಗುರುರಾಜರ ಶಿಷ್ಯೆ, ತನ್ನ ಹೆಸರಿಗೆ ಅನ್ವರ್ಥಕವಾದ ಆರಭಿ ರಾಗದ ‘ಶ್ರೀ ಸರಸ್ವತಿ ನಮೋಸ್ತುತೆ’ಯ ನಂತರ, ಗಣಪತಿ ಸ್ತುತಿ- ‘ಆದಿಪೂಜಿತ ಗಣೇಶ ಚರಣಂ’ ನೆನೆಯುತ್ತ ಮೋದಕಪ್ರಿಯನ ವಿವಿಧ ರೂಪ – ಭಂಗಿಗಳನ್ನು ತನ್ನ ಸುಕೋಮಲ ಆಂಗಿಕಾಭಿನಯದಿಂದ ಕಟ್ಟಿಕೊಟ್ಟಳು. ಹದವಾದ ಮೈಕಟ್ಟಿನ ಕಲಾವಿದೆಯ ಸ್ಫುಟವಾದ ಹಸ್ತಮುದ್ರೆ, ಹರಿತ ನೃತ್ತಾವಳಿಗಳು, ‘ಪುಷ್ಪಾಂಜಲಿ’ಯ ಸ್ವರಾವಳಿಗಳ ಖಚಿತ ಹೆಜ್ಜೆಗಳು ನೋಡಲು ಚೆಂದವೆನಿಸಿದವು. ಮೋಹನ ರಾಗದ ‘ಜತಿಸ್ವರ’- ಆಮೋದಪ್ರದವಾಗಿ ಸಾಗುತ್ತ, ಆರಭಿಯ ಅಂಗಶುದ್ದ…
ಕಟೀಲು : ಕಟೀಲು ಕೇತ್ರದ ಸರಸ್ವತಿ ಸಭಾಭವನದಲ್ಲಿ ಏರ್ಪಡಿಸಲಾದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಮಟ್ಟದ ಶಿಕ್ಷಕ ಸಾಹಿತಿಗಳ 7ನೇ ಸಮ್ಮೇಳನವು ದಿನಾಂಕ 05 ಸೆಪ್ಟೆಂಬರ್ 2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು “ಸಾಹಿತ್ಯ ಸಮ್ಮೇಳನಗಳು ಒಳ್ಳೆಯ ಮನಸ್ಸುಗಳನ್ನು ಕಟ್ಟುವ ಕಾರ್ಯ ಮಾಡಬೇಕು. ಸಾಹಿತ್ಯ ಯಾವುದೇ ಪ್ರಕಾರದಲ್ಲಿದ್ದರೂ ಓದುಗರು ಮೆಚ್ಚುವಂತಿರಬೇಕು. ಶಿಕ್ಷಕರು ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಒಳ್ಳೆಯ ವಿಚಾರಗಳನ್ನು ಜನರಿಗೆ ನೀಡಬೇಕು” ಎಂದು ಹೇಳಿದರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಆನುವಂಶಿಕ ಅರ್ಚಕರಾದ ಹರಿನಾರಾಯಣ ಆಸ್ರಣರು ದೀಪಪ್ರಜ್ವಲನೆ ಮಾಡಿ ಸಮ್ಮೇಳನಕ್ಕೆ ಚಾಲನೆ ನೀಡಿದರು. “ಶ್ರೀ ಕ್ಷೇತ್ರದಲ್ಲಿ ಕಲೆ, ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ವಿಶೇಷ ಪ್ರೋತ್ಯಾಹ ನೀಡಲಾಗುತ್ತದೆ. ಶ್ರೀದೇವಿಯ ಅನುಗ್ರಹದಿಂದ ಕ್ಷೇತ್ರದಲ್ಲಿ ಭಕ್ತಾದಿಗಳ ಇಷ್ಟಾರ್ಥವು ನೆರವೇರುತ್ತವೆ” ಎಂದು ಆಶೀರ್ವಚನ ನೀಡಿದರು. ಹೊಸಕೋಟೆಯ ಹಿರಿಯ ಶಿಕ್ಷಕ ಸಾಹಿತಿ ಶ್ರೀಕಾಂತ್ ಕೆ.ವಿ. ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ಕ.ಚು.ಸಾ.ಪ.ರಾಜ್ಯ ಸಂಚಾಲಕ…
ಅಂಕೋಲಾ : ಓಂಕಾರ ಪ್ರಕಾಶನ ಕುಮಟಾ ಮತ್ತು ಡಾ. ಎಮ್.ಆರ್. ನಾಯಕ ಯಕ್ಷ ಪ್ರತಿಷ್ಠಾನ ಹಿಚ್ಕಡ ಇವರ ಸಹಯೋಗದಲ್ಲಿ ಡಾ. ಎಮ್.ಆರ್. ನಾಯಕರು ರಚಿಸಿದ ‘ಯಕ್ಷಲೋಕದ ನಾಡವರು’ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವನ್ನು ದಿನಾಂಕ 15-09-2024ರಂದು ಸಂಜೆ 4-00 ಗಂಟೆಗೆ ಅಂಕೋಲಾದ ನಾಡವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಹೊನ್ನಾವರದ ಜಾನಪದ ವಿದ್ವಾಂಸರಾದ ಡಾ. ಎಮ್.ಆರ್. ನಾಯಕ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಅಂಕೋಲಾದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಕೆ.ವಿ. ನಾಯಕ ಇವರು ಉದ್ಘಾಟನೆ ಮಾಡಲಿರುವರು. ಉತ್ತರ ಕನ್ನಡದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಬಿ.ಎನ್. ವಾಸರೆ ಇವರು ಕೃತಿ ಲೋಕಾರ್ಪಣೆ ಮಾಡಲಿದ್ದು, ಖ್ಯಾತ ಯಕ್ಷಗಾನ ಕಲಾವಿದರಾದ ಡಾ. ಆರ್.ಜಿ. ಗುಂದಿ ಇವರು ಕೃತಿ ಪರಿಚಯ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ‘ವಾಲಿಮೋಕ್ಷ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಮಂಗಳೂರು : ಮಕ್ಕಳ ಸಾಹಿತ್ಯ ಸಂಗಮ (ರಿ.) ಆಯೋಜಿಸುವ ‘ಮಕ್ಕಳಧ್ವನಿ-2024’ ಕಾರ್ಯಕ್ರಮವು 14 ಸೆಪ್ಟಂಬರ್ 2024 ರಂದು ಸುರತ್ಕಲ್ ಇಲ್ಲಿನ ಅನುದಾನಿತ ವಿದ್ಯಾದಾಯಿನೀ ಪ್ರೌಢಶಾಲೆ ಇಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಸರ್ವಾಧ್ಯಕ್ಷರಾಗಿ ಮೂಡಬಿದ್ರಿ ಆಳ್ವಾಸ್ ಕಾಲೇಜಿನ ದ್ವಿತೀಯ ಪಿ. ಯು. ಸಿ. ವಿದ್ಯಾರ್ಥಿ ಪ್ರಹ್ಲಾದ ಮೂರ್ತಿ ಆಯ್ಕೆಯಾಗಿದ್ದಾರೆ. ಅಂದು ನಡೆಯಲಿರುವ ಕವಿ ಗೋಷ್ಠಿಯ ಅಧ್ಯಕ್ಷರಾಗಿ ಕುಂದಾಪುರದ ಕೋಟ ಇಲ್ಲಿನ ವಿವೇಕ ಬಾಲಕಿಯರ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಮಾನಸ. ಜಿ ಹಾಗೂ ಕಥಾಗೋಷ್ಠಿಯ ಅಧ್ಯಕ್ಷರಾಗಿ ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನ ಪ್ರಥಮ ಪಿ. ಯು. ಸಿ. ವಿದ್ಯಾರ್ಥಿನಿಯಾಗಿರುವ ತನ್ವಿತಾ ವಿ. ಆಯ್ಕೆಯಾಗಿದ್ದಾರೆ. …
ಬೆಂಗಳೂರು : ಅಭಿನಯ ತರಂಗ ನಾಟಕ ಶಾಲೆ ಇದರ ವತಿಯಿಂದ ಕರ್ನಾಟಕದಲ್ಲಿ ಬೀದಿ ನಾಟಕ ಪ್ರಾರಂಭಿಸಿದ ಎ.ಎಸ್. ಮೂರ್ತಿ ಇವರ ನೆನಪಿನಲ್ಲಿ ‘ಬೀದಿ ನಾಟಕ ಶಿಬಿರ’ವನ್ನು ದಿನಾಂಕ 23-09-2024ರಿಂದ 08-10-2024ರವರೆಗೆ ಬೆಂಗಳೂರಿನ ಹನುಮಂತ ನಗರ ಬಾಲಾಜಿ ವಿದ್ಯಾ ನಿಕೇತನ್ ಇಲ್ಲಿ ಆಯೋಜಿಸಲಾಗಿದೆ. ಜಯತೀರ್ಥ ಇವರು ಈ ಶಿಬಿರದ ನಿರ್ದೇಶಕರಾಗಿದ್ದು, ಹೆಚ್ಚಿನ ಮಾಹಿತಿಗಾಗಿ 9845825217 ಮತ್ತು 6364522760 ಸಂಪರ್ಕಿಸಿರಿ. ಅಭಿನಯ ತರಂಗ ರಂಗಶಾಲೆಯನ್ನು ಪ್ರಸಿದ್ಧ ಸಾಹಿತಿ, ನಾಟಕಕಾರ, ಪತ್ರಿಕೋದ್ಯಮಿ, ಅಂಕಣಕಾರ, ಆಕಾಶವಾಣಿ ಈರಣ್ಣನೆಂದೇ ಪ್ರಸಿದ್ಧರಾಗಿದ್ದ ಎ.ಎಸ್. ಮೂರ್ತಿಯವರು ಬೆಂಗಳೂರಿನ ಹನುಮಂತನಗರದಲ್ಲಿ 1964ರಲ್ಲಿ ಸ್ಥಾಪಿಸಿದರು. ಸಾಹಿತ್ಯ, ಸಂಸ್ಕೃತಿ ಅಧ್ಯಯನಕ್ಕಾಗಿ ಈ ರಂಗಶಾಲೆಯನ್ನು ಪ್ರಾರಂಭಿಸಲಾಗಿದ್ದು, ಈ ಸಂಸ್ಥೆಯಿಂದ ನಾಟಕರಂಗ, ಟಿ.ವಿ.ಗೆ ಹಲವಾರು ಕಲಾವಿದರ ಕೊಡುಗೆ ದೊರೆತಿದೆ.
ಮಂಗಳೂರು: ಮಂಗಳೂರಿನ ತುಳು ಸಾಹಿತ್ಯ ಅಕಾಡೆಮಿ ಇದರ ಸಿರಿಚಾವಡಿಯಲ್ಲಿ ವಿದ್ವಾಂಸರೊಂದಿಗೆ ಸಮಾಲೋಚನಾ ಗೋಷ್ಠಿ ಕಾರ್ಯಕ್ರಮವು 04 ಸೆಪ್ಟೆಂಬರ್ 2024ರ ಬುಧವಾರದಂದು ನಡೆಯಿತು. ಗೋಷ್ಠಿಯ ಅಧ್ಯಕ್ಷತೆ ವಹಿಸಿದ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಕಾ. ತ. ಚಿಕ್ಕಣ್ಣ ಮಾತನಾಡಿ “ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ನಿರಂತರವಾಗಿ ಕನಕದಾಸರ ಬಗ್ಗೆ ಚಿಂತನ ಜಾಗೃತಿ ಕಾರ್ಯ ನಡೆಯುತ್ತಿದೆ. ಈಗಾಗಲೇ ಬೀದರ್‌ನಿಂದ ಕಾಸರಗೋಡು ವರೆಗೆ 250 ಕಾಲೇಜುಗಳ 50 ಸಾವಿರ ಮಕ್ಕಳಲ್ಲಿ ಕನಕದಾಸರ ಬಗ್ಗೆ ಚಿಂತನ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ. ಕನಕದಾಸ ಹಾಗೂ ತತ್ವಪದಕಾರರ ಅಧ್ಯಯನದ ಭಾಗವಾಗಿ ರಾಜ್ಯಾದ್ಯಂತ ವರ್ಷವಿಡೀ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಾಮಾಜಿಕ ಸಂವೇದನೆ ರೂಪಿಸುವ ಭಾಗವಾಗಿ ‘ಕನಕ ಓದು’ ಎನ್ನುವ ಕಾರ್ಯಕ್ರಮ ನಡೆಸಲಾಗುತ್ತಿದೆ. ತತ್ವಪದಗಳ ಸಂಗ್ರಹ, ಪ್ರಕಾಶನ ನಡೆಯುತ್ತಿದೆ. 250 ತತ್ವಪದಕಾರರ ಪರಿಚಯ ಗ್ರಂಥ ಹೊರತರುವ ಯೋಜನೆ ಹಾಗೂ ಕನಕ ಸಾಹಿತ್ಯ, ಕೀರ್ತನೆ ಸಾಹಿತ್ಯಗಳ ತೌಲನಿಕ ಅಧ್ಯಯನ ಮಾಡುವುದಕ್ಕೂ ಯೋಜನೆ…
ಮೈಸೂರು : ಮೈಸೂರಿನ ಕ್ರಿಯಾಶೀಲ ತಂಡಗಳಲ್ಲಿ ಒಂದಾದ ‘ಪರಿವರ್ತನ ರಂಗ ಸಮಾಜ’ ಇವರು ಪ್ರಸ್ತುತ ಪಡಿಸುವ ‘ಗೆಲಿಲಿಯೋಸ್ ಡಾಟರ್’ ಎಂಬ ಇಂಗ್ಲೀಷ್ ನಾಟಕವು ದಿನಾಂಕ 08 ಸೆಪ್ಟೆಂಬರ್ 2024ರಂದು ಸಂಜೆ 6-30 ಗಂಟೆಗೆ ಮೈಸೂರಿನ ನಟನದಲ್ಲಿ ಪ್ರದರ್ಶನಗೊಳ್ಳಲಿದೆ. ಚಿಂತಕರು ಹಿರಿಯ ರಂಗ ನಿರ್ದೇಶಕರೂ ಆದ ಪ್ರೊಫೆಸರ್ ಎಸ್.ಆರ್. ರಮೇಶ್ ಇವರು ಇದನ್ನು ನಿರ್ದೇಶಿಸಿದ್ದಾರೆ.
ಕುಂದಾಪುರ : ಸಂಗೀತ ಅವಿನಾಶಿ ಪ್ರತಿಷ್ಠಾನ ಮತ್ತು ಹಂಗಾರಕಟ್ಟೆಯ ಯಕ್ಷಗಾನ ಕಲಾಕೇಂದ್ರ ಪ್ರಸ್ತುತ ಪಡಿಸುವ ಅವಿನಾಶ್ ಹೆಬ್ಬಾರ್ ಇವರ ನೆನಪಿನಲ್ಲಿ ‘ಅಜರಾಮರ’ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ದಿನಾಂಕ 14 ಸೆಪ್ಟೆಂಬರ್ 2024ರಂದು ಸಂಜೆ 5-00 ಗಂಟೆಗೆ ಸಾಲಿಗ್ರಾಮದ ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಉಸ್ತಾದ್ ಚೋಟೆ ರಹಿಮತ್ ಖಾನ್ ಇವರಿಂದ ಸಿತಾರ್ ವಾದನ ಮತ್ತು ಮಂಗಳೂರಿನ ಶ್ರೀಮತಿ ದೀಕ್ಷಾ ನಾಯಕ್ ಇವರಿಂದ ಹಾಡುಗಾರಿಕೆ ನಡೆಯಲಿದ್ದು, ಇವರಿಗೆ ಗೋವಾದ ಶ್ರೀ ಉದಯ್ ಕುಲಕರ್ಣಿ ಮತ್ತು ಶ್ರೀ ಪ್ರವೀಣ್ ನಾಯಕ್ ಇವರುಗಳು ತಬಲದಲ್ಲಿ ಮತ್ತು ಕೋಟದ ಶ್ರೀ ಶಂಭು ಭಟ್ ಇವರು ಹಾರ್ಮೋನಿಯಂನಲ್ಲಿ ಸಾಥ್ ನೀಡಲಿದ್ದಾರೆ.
ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 09-09-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ನೃತ್ಯನಿಕೇತನದ ಕಲಾವಿದರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಕಳೆದ 35 ವರುಷಗಳಿಂದ ಉಡುಪಿಯ ಕೊಡವೂರಿನಲ್ಲಿ ನೃತ್ಯನಿಕೇತನ ಕೊಡವೂರು ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಉಡುಪಿಯ ಸುತ್ತಮುತ್ತಲಿನ 7 ಶಾಖೆಗಳ ಮುಖಾಂತರ ಅನೇಕ ನೃತ್ಯ ವಿದ್ಯಾರ್ಥಿಗಳ ನೃತ್ಯತೃಷೆಯನ್ನು ನೀಗಿಸುತ್ತಿದೆ. ಈ ಸಂಸ್ಥೆಯ ಗುರುಗಳಾಗಿ ಕಲಾದಂಪತಿಗಳಾದ ವಿದ್ವಾನ್ ಸುಧೀರ್ ರಾವ್ ಕೊಡವೂರು ಮತ್ತು ವಿದುಷಿ ಮಾನಸಿ ಸುಧೀರ್ ಇವರುಗಳು ಕಾರ್ಯನಿರ್ವಹಿಸುತ್ತಿದ್ದಾರೆ. ವರ್ಷದ ಎಲ್ಲಾ ಋತುವಿನಲ್ಲಿ ಚಟುವಟಿಕೆಗಳಿಂದ ಇರುವ ಈ ಸಂಸ್ಥೆಯ ಕಲಾವಿದರು ಈಗಾಗಲೇ ದೇಶವಿದೇಶಗಳಲ್ಲಿ ಸುಮಾರು 3000ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅನೇಕ ಪ್ರಯೋಗಶೀಲ ನೃತ್ಯಗಳನ್ನು ನೃತ್ಯರೂಪಕಗಳನ್ನು ಕಲಾಭಿಮಾನಿಗಳಿಗೆ ನೀಡಿದ್ದಾರೆ. ಸಂಸ್ಥೆಯ ವತಿಯಿಂದ ಈಗಾಗಲೇ ರಾಜ್ಯದಾದ್ಯಂತದ…