07 ಎಪ್ರಿಲ್ 2023, ಬಾಗಲಕೋಟೆ: ನಟರಾಜ ಸಂಗೀತ ನೃತ್ಯ ನಿಕೇತನ (ರಿ) ವಿದ್ಯಾಗಿರಿ, ಬಾಗಲಕೋಟೆ, ನೃತ್ಯ ಸಂಸ್ಥೆಯ ನಿರ್ದೇಶಕರಾದ, ಹಿರಿಯ ನೃತ್ಯಗುರುಗಳಾದ ವಿದುಷಿ ಶುಭದಾ ದೇಶಪಾಂಡೆ ಅವರು ತಮ್ಮ ವಿದ್ಯಾರ್ಥಿಗಳಿಗಾಗಿ, ಮಂಗಳೂರಿನ ಯುವ ನೃತ್ಯ ಕಲಾವಿದರಾದ ವಿದ್ವಾನ್ ಮಂಜುನಾಥ ಎನ್ ಪುತ್ತೂರು ಅವರನ್ನು ಸಂಪನ್ಮೂಲ ವ್ಯಕ್ತಿಯಾಗಿ ಆಹ್ವಾನಿಸಿ, ಎರಡು ದಿನಗಳ “ತಾಳ ಪ್ರಕ್ರಿಯಾ” ಕಾರ್ಯಗಾರವನ್ನು ಆಯೋಜಿಸಿದ್ದಾರೆ.ಈ ಕಾರ್ಯಗಾರವು ಇದೇ ಎಪ್ರಿಲ್ 8, ಶನಿವಾರ ಮತ್ತು ಎಪ್ರಿಲ್ 9, ಭಾನುವಾರದಂದು ನಟರಾಜ ನೃತ್ಯ ಸಂಸ್ಥೆ,ಬಾಗಲಕೋಟೆ ಇಲ್ಲಿ ಜರುಗಲಿದೆ. ಇದು ಮಂಜುನಾಥ್ ಅವರ 67 ನೇ ಕಾರ್ಯಾಗಾರವಾಗಿದೆ.

