ಮಂಗಳೂರು : ಗಾನನೃತ್ಯ ಅಕಾಡೆಮಿಯ ನಿರ್ದೇಶಕಿ ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಷ್ಠೆ ಹಾಗೂ ಕೆ. ಕೃಷ್ಣ ಭಟ್ ಕದ್ರಿ ಮತ್ತು ಪ್ರೀತಿ ಕೃಷ್ಣ ದಂಪತಿಯ ಸುಪುತ್ರಿ ಕುಮಾರಿ ಶ್ರಾವಣಿ ಕೆ. ಭಟ್ ಇವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ದಿನಾಂಕ 31 ಅಕ್ಟೋಬರ್ 2026ರಂದು ಸಂಜೆ ಗಂಟೆ 5-15ಕ್ಕೆ ಮಂಗಳೂರಿನ ಟಿ.ಎಂ.ಎ. ಪೈ ಕನ್ವೆನ್ಶನ್ ಸೆಂಟರ್ನಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಉಡುಪಿಯ ನೃತ್ಯ ಗುರು ಲಕ್ಷ್ಮಿ ಗುರುರಾಜ್ ಇವರು ದೀಪ ಪ್ರಜ್ವಲನೆ ಮಾಡಲಿದ್ದು, ಪುತ್ತೂರಿನ ವಕೀಲ ಮಹೇಶ್ ಕಜೆ ಭಾಗವಹಿಸಲಿದ್ದಾರೆ. ಹಿಮ್ಮೇಳದಲ್ಲಿ ಹಾಡುಗಾರಿಕೆಯಲ್ಲಿ ಶ್ರೀಕಾಂತ್ ಗೋಪಾಲಕೃಷ್ಣನ್ ಚೆನ್ನೈ, ನಟುವಾಂಗದಲ್ಲಿ ಗುರು ವಿದ್ಯಾಶ್ರೀ ರಾಧಾಕೃಷ್ಣ, ಮೃದಂಗದಲ್ಲಿ ವಿದ್ವಾನ್ ವಿನಯ್ ನಾಗರಾಜ್ ಬೆಂಗಳೂರು, ಕೊಳಲಿನಲ್ಲಿ ವಿದ್ವಾನ್ ನಿತೀಶ್ ಅಮ್ಮಣ್ಣಾಯ, ವೀಣೆಯಲ್ಲಿ ವಿದ್ವಾನ್ ಸೌಂದರ ರಾಜನ್ ತಿರುವನಂತಪುರಂ ಸಹಕರಿಸಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ರಾಧಾಕೃಷ್ಣ ಭಟ್ ತಿಳಿಸಿದ್ದಾರೆ.

