Subscribe to Updates

    Get the latest creative news from FooBar about art, design and business.

    What's Hot

    ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನದ ಪತ್ರಿಕಾ ಗೋಷ್ಟಿ

    October 29, 2026

    ಯಶಸ್ವಿ ಕಲಾವೃಂದ ಮಕ್ಕಳ ತಂಡದ ಹೂವಿನಕೋಲು ಸಮಾರೋಪ

    October 29, 2026

    ಕುಮಾರಿ ಶ್ರಾವಣಿ ಕೆ. ಭಟ್ ಇವರ ಭರತನಾಟ್ಯ ರಂಗಪ್ರವೇಶ | ಅಕ್ಟೋಬರ್ 31

    October 29, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನದ ಪತ್ರಿಕಾ ಗೋಷ್ಟಿ
    Music

    ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನದ ಪತ್ರಿಕಾ ಗೋಷ್ಟಿ

    October 29, 2026No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : 1986ರಲ್ಲಿ ಆರಂಭವಾದ ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್‌ ಸೊಭಾಣ್‌ ತನ್ನ 40ನೇ ವರ್ಷಾಚರಣೆಯ ಮಾಣಿಕ್ಯೋತ್ಸವವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ವಿಶ್ವದ ಮೂಲೆಗಳಿಂದ ಕೊಂಕಣಿ ಸಮುದಾಯಗಳ ಜನರನ್ನು ಒಗ್ಗೂಡಿಸಿ, ಅದ್ಭುತ ಸಂಗೀತ ಕಾರ್ಯಕ್ರಮ ಸಂಯೋಜಿಸಿ, ಕೊಂಕಣಿ ಪತಾಕೆಯನ್ನು ಜಗದೆತ್ತರಕ್ಕೆ ಹಾರಿಸಿ, ಕೊಂಕಣಿ ಜನಮಾನಸದಲ್ಲಿ ಕೊಂಕಣಿ ಅಭಿಮಾನ ಬೆಳೆಸುವ ಮತ್ತು ಸಂಗೀತದ ಮುಖಾಂತರ ಕೊಂಕಣಿಯ ಶ್ರೀಮಂತ ಪರಂಪರೆಯನ್ನು ಸಂಭ್ರಮಿಸುವ ಉದ್ದೇಶದೊಡನೆ, ದಿನಾಂಕ 03ರಿಂದ 15 ನವೆಂಬರ್‌ 2026ರವರೆಗೆ, ಮಂಗಳೂರಿನ ಪುರಭವನದಲ್ಲಿ ‘ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನ’ವನ್ನು ಆಯೋಜಿಸಲಾಗಿದೆ. ಕೊಂಕಣಿಯ ಎಲ್ಲಾ ಕ್ಷೇತ್ರಗಳಿಗೆ ಪ್ರಮುಖವಾಗಿ ಕೊಂಕಣಿ ಸಂಗೀತಕ್ಕೆ ಮೇರು ಕೊಡುಗೆ ನೀಡಿದ ಮಾಂಡ್‌ ಸೊಭಾಣ್‌ ಗುರಿಕಾರ ದಿ. ಎರಿಕ್‌ ಒಝೇರಿಯೊ ಇವರ ಗೌರವಾರ್ಥ ನಡೆಯುವ ಈ ಮಹಾ ಸಮ್ಮೇಳನದಲ್ಲಿ ವಿವಿಧ ಕಾರ್ಯಕ್ರಮಗಳು ಸಂಯೋಜನೆಗೊಂಡಿವೆ.

    ಈ ಮಹಾ ಸಮ್ಮೇಳನವನ್ನು ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ್‌ ಸಾವಂತ್‌ ಇವರು ದಿನಾಂಕ 03 ನವೆಂಬರ್ 2026ರಂದು ಬೆಳಿಗ್ಗೆ 5-00 ಗಂಟೆಗೆ ಪುರಭವನದಲ್ಲಿ ಉದ್ಘಾಟಿಸಲಿರುವರು. ಮಂಗಳೂರು ಬಿಷಪ್‌ ಅ.ವಂ. ಡಾ. ಪೀಟರ್‌ ಪಾವ್ಲ್‌ ಸಲ್ಡಾನ್ಹಾ ಆಶೀರ್ವಚನ ನೀಡಲಿರುವರು. ಸ್ವಾಗತ ಸಮಿತಿ ಅಧ್ಯಕ್ಷ ಡಾ. ರೊನಾಲ್ಡ್‌ ಕುಲಾಸೊ ಅಧ್ಯಕ್ಷತೆ ವಹಿಸುವರು.

    ದಿನಾಂಕ 03 ನವೆಂಬರ್ 2026 ಮುಂಜಾನೆ 6-00 ಗಂಟೆಯಿಂದ ಮುಂದಿನ 12 ದಿನ, 12 ಗಂಟೆ ಹಾಗೂ 12 ನಿಮಿಷಗಳ, ಅತೀ ದೀರ್ಘ ಅವಧಿಯ, ಸಮೂಹ ಗಾಯನದ ಗಿನ್ನೆಸ್‌ ದಾಖಲೆಯನ್ನು ರಚಿಸಲು ಪ್ರಯತ್ನಿಸಲಾಗುವುದು. ʻಕೊಂಕಣಿ ನಿರಂತರಿ – ಸಂಸಾರ್‌ ಸರಾಸರಿʼ (ಕೊಂಕಣಿ ನಿರಂತರವಾಗಿರಲಿ – ಜಗದ ಕೊನೆತನಕ ಉಳಿಯಲಿ) ಹೆಸರಿನ ಈ ಪ್ರಯತ್ನದಲ್ಲಿ ಭಾರತ, ಆಸ್ಟ್ರೇಲಿಯಾ, ಕುವೇಯ್ಟ್‌, ಓಮನ್‌, ಖತಾರ್‌ ದೇಶಗಳಿಂದ ಕ್ರೈಸ್ತ-ಹಿಂದೂ-ಮುಸ್ಲಿಮ್-ಧರ್ಮಗಳಿಗೆ ಸೇರಿದ ಕ್ರೈಸ್ತ, ಜಿ.ಎಸ್‌.ಬಿ., ಕುಡಾಲ್‌ ದೇಶಸ್ಥ, ಖಾರ್ವಿ, ಕುಡುಮಿ, ಸಿದ್ದಿ, ನವಾಯತಿ, ಸಿರಿಯನ್‌ ಕ್ರೈಸ್ತ ಇತ್ಯಾದಿ ವಿವಿಧ ಕೊಂಕಣಿ ಜನಸಮುದಾಯಗಳು ಹಾಗೂ ಇತರೆ ಭಾಷಿಕ ಜನರು ಭಾಗವಹಿಸಲಿರುವರು. 6789+ ಗಾಯಕರು, 250+ ಸಂಗೀತ ಸಂಯೋಜಕರು ರಚಿಸಿದ, ವಿವಿಧ ಭಾಷಾ ಪ್ರಬೇಧಗಳ 4500+ ಕೊಂಕಣಿ ಹಾಡುಗಳನ್ನು ಹಾಡಲಿರುವರು. ಒಟ್ಟು 300 ತಂಡಗಳು ತಲಾ ಒಂದು ಗಂಟೆ ಹಾಡಿ ಈ ದಾಖಲೆಗೆ ಪ್ರಯತ್ನಿಸಲಿರುವರು. ಇಲ್ಲಿ ಯಾವುದೇ ಹಾಡುಗಾರ ಪುನರಾವರ್ತಿತವಾಗುವುದಿಲ್ಲ. ʻಸಂಗೀತ ಗುರುʼ ಜೊಯೆಲ್‌ ಪಿರೇರಾ ಈ ದಾಖಲೆಯ ಪ್ರಧಾನ ಸಂಗೀತ ನಿರ್ದೇಶಕರಾಗಿದ್ದಾರೆ. ಈಗಾಗಲೇ ಗಿನ್ನೆಸ್‌ ದಾಖಲೆ ಬಗ್ಗೆ ಲಂಡನ್ನಿನ ಕಛೇರಿಯಲ್ಲಿ ನೋಂದಣಿ ಮಾಡಿಕೊಂಡಿದ್ದು, ಅಧಿಕೃತ ಹಿರಿಯ ತೀರ್ಪುಗಾರರು ಭಾಗವಹಿಸಲಿದ್ದಾರೆ.

    ಈ ಸಂಭ್ರಮಕ್ಕೆ ಶೈಕ್ಷಣಿಕ ಮೆರುಗು ಹಾಗೂ ಅಂತರಾಷ್ಟ್ರೀಯ ಆಯಾಮ ನೀಡಲು 12 ವಿಚಾರ ಗೋಷ್ಟಿಗಳನ್ನು ಆಯೋಜಿಸಲಾಗಿದೆ. 1. ಕೊಂಕಣಿ ಭಕ್ತಿ ಸಂಗೀತ – ಗೋವಾ (ಫಾ. ಒನೆಸಿಸ್‌ ಡಿಕ್ರೂಜ್‌) 2. ಕೊಂಕಣಿ ಭಕ್ತಿ ಸಂಗೀತ – ಮಂಗಳೂರು ಮತ್ತು ಇತರೆಡೆ (ಫಾ ಜಯಪ್ರಕಾಶ್‌ ಡಿಸೋಜ) 3. ಕೊಂಕಣಿ ಜನಪದ ಸಂಗೀತ – ಗೋವಾ (ಡಾ. ಕೊಸ್ಮೊ ಫೆರ್ನಾಂಡಿಸ್) 4. ಕೊಂಕಣಿ ಜನಪದ ಸಂಗೀತ – ಮಂಗಳೂರು ಮತ್ತು ಇತರೆಡೆ (ಡಾ. ಪ್ರೀತಿ ಕೀರ್ತಿ ಡಿ’ಸೋಜ) 5. ಆರೋಗ್ಯಕ್ಕಾಗಿ ಸಂಗೀತ (ಅಂಕುಶ್‌ ನಾಯಕ್‌) 6. ಅಂತರರಾಷ್ಟ್ರೀಯ ಸಂಗೀತ (ಡಾ. ಪಾವ್ಲೊ ಪಚಿಯೊಲಾ) 7. ಬಾಯ್ಲಾ ಸಂಗೀತ (ಆಲ್ವಿನ್‌ ಫೆರ್ನಾಂಡಿಸ್‌) 8. ಸಂಗೀತಗಾರರು ಮತ್ತು ಅವರ ರಚನೆಗಳು (ನೀತಾ ರೆಬೆಲ್ಲೊ) 9. ರಂಗಭೂಮಿ ಮತ್ತು ಸಿನೆಮಾ ಸಂಗೀತ (ಕ್ಯಾಜಿಟನ್‌ ಡಾಯಸ್‌) 10. ಮಾಂಡ್‌ ಸೊಭಾಣ್‌ ಸಂಗೀತದ ಪ್ರಭಾವ (ವಂ. ಡಾ. ಆಲ್ವಿನ್‌ ಸೆರಾವೊ) 11. ಬೌದ್ಧಿಕ ಆಸ್ತಿ ಹಕ್ಕುಗಳು (ಡಾ. ಸಾಯೊನಾರಾ ಟೆಲ್ಲೆಸ್‌) 12. ಯಾಂತ್ರಿಕ ಬುದ್ದಿಮತ್ತೆ ಮತ್ತು ಸಂಗೀತ (ವಂ. ಡಾ. ವಿಕ್ಟರ್‌ ಫೆರಾವೊ) ಪ್ರಬಂಧ ಮಂಡಿಸಲಿದ್ದಾರೆ.

    ಕೊಂಕಣಿ ಸಂಗೀತಕ್ಕೆ ಮಹತ್ತರ ಕೊಡುಗೆ ನೀಡಿದ 12 ಹಿರಿಯ ಸಂಗೀತಗಾರರಿಗೆ ʻವಿಶ್ವ ಕೊಂಕಣಿ ಸಂಗೀತ ಸಾಧನಾ ಪುರಸ್ಕಾರʼ ನೀಡಿ ಗೌರವಿಸಲಾಗುವುದು. ಅವರಲ್ಲಿ 5 ಜನರಿಗೆ ಮರಣೋತ್ತರವಾಗಿ ಈ ಗೌರವ ನೀಡಲಾಗುವುದು. ದಿ. ಕ್ರಿಸ್‌ ಪೆರಿ ಗೋವಾ, ಲಾರೆನ್ಸ್‌ ಸಲ್ಡಾನ್ಹಾ ಮುಂಬಯಿ, ಫಾ. ಲಿನೊ ಡೆಸಾ ಗೋವಾ, ದಿ. ವಸಂತಿ ಆರ್‌ ನಾಯಕ್‌ ಮಂಗಳೂರು, ದಿ. ಆಲ್ಫ್ರೆಡ್‌ ರೋಸ್‌ ಗೋವಾ, ಶ್ರೀಧರ್‌ ಖಾರ್ವಿ ಭಟ್ಕಳ, ಮೆಲ್ವಿನ್‌ ಪೆರಿಸ್‌ ಮಂಗಳೂರು, ನೇಮಿರಾಜ ಗೌಡ ಕೊಂಪದವು-ದಕ್ಷಿಣ ಕನ್ನಡ, ದಿ. ಜೆರೊಮ್‌ ಡಿಸೋಜ ಮುಂಬಯಿ, ಮಾಮ್ದು ಇಬ್ರಾಹಿಮ್‌ ಶೀರೂರು, ದಿ. ಉಲ್ಲಾಸ್‌ ಬುಯಾಂವ್‌ ಗೋವಾ ಮತ್ತು ಜುಲಿಯಾನ ಸಿದ್ದಿ ಹಳಿಯಾಳ ಇವರನ್ನು ರಾಜಕೀಯ, ಸಾಂಸ್ಕೃತಿಕ ಕ್ಷೇತ್ರದ ಗಣ್ಯರು ಸನ್ಮಾನಿಸುವರು.

    ಸಮ್ಮೇಳನದಲ್ಲಿ 10-16 ಹರೆಯದ ಮಕ್ಕಳನ್ನೂ ಒಳಗೊಳ್ಳಬೇಕೆಂಬ ಆಶಯದೊಡನೆ ʻಫುಲ್‌ ಫುಲೊತಾʼ (ಹೂವು ಅರಳುತ್ತಿದೆ) ಎಂಬ ಕೊಂಕಣಿ ನಿರಂತರಿ ಶೈಲಿಯ ಸಂಗೀತ ಸಂಜೆ, ನವೆಂಬರ್‌ 13ರಂದು ಪುರಭವನದ ಎದುರುಗಡೆ ಇರುವ ರಾಜಾಜಿ ಪಾರ್ಕಿನ ಬಯಲು ರಂಗ ಮಂದಿರದಲ್ಲಿ ನಡೆಯಲಿದೆ. ಪುರಭವನದ ಹೊರಾಂಗಣದಲ್ಲಿ ಕೊಂಕಣಿ ಸಂಗೀತದ ಬಗ್ಗೆ ಮಾಹಿತಿ ನೀಡುವ, ಕೊಂಕಣಿ ಜನ ಜೀವನ, ಸಂಸ್ಕೃತಿ ಬಿಂಬಿಸುವ ವಸ್ತು ಪ್ರದರ್ಶನ ನಡೆಯಲಿದೆ. ಕೀರ್ತಿ ಮಂದಿರದಲ್ಲಿ ಕೊಂಕಣಿ ಸಂಗೀತಕ್ಕೆ ಹಿರಿಮೆ ತಂದುಕೊಟ್ಟ ಹಿರಿ-ಕಿರಿಯ ಸಂಗೀತಗಾರರ ಬಗ್ಗೆ ಮಾಹಿತಿ ಇರಲಿದೆ. ಕೊಂಕಣಿಯ ವಿವಿಧ ಸಮುದಾಯಗಳ ಖಾದ್ಯ ವೈವಿಧ್ಯಗಳ ಮಾರಾಟ ಮಳಿಗೆಗಳು ಇರಲಿವೆ. ದಿನಾಂಕ 15 ನವೆಂಬರ್‌ 2026ರಂದು ಸಂಜೆ ಗಂಟೆ 6-12ಕ್ಕೆ ಗಿನ್ನೆಸ್‌ ದಾಖಲೆಯ ಗಾಯನ ಅಂತ್ಯವಾಗಲಿದ್ದು, ನಂತರ ಸಭಾ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮಾರೋಪದಲ್ಲಿ ಭಾಗವಹಿಸಲಿದ್ದಾರೆ.

    ಮಹಾಮೇಳದ ಪೂರ್ವ ತಯಾರಿ: 31.08.25ರಂದು ಮಾಂಡ್‌ ಸೊಭಾಣ್‌ ಗುರಿಕಾರ ಎರಿಕ್‌ ಒಝೇರಿಯೊ ಅವರ ಅಂತ್ಯಕ್ರಿಯೆಯ ದಿನ ಈ ದಾಖಲೆಯ ಬಗ್ಗೆ ಸಾರ್ವಜನಿಕ ಘೋಷಣೆ ಮಾಡಲಾಗಿದ್ದು, ನಂತರ ಭರದ ತಯಾರಿ ನಡೆದಿದೆ. ಸಾವಿರಾರು ಹಾಡುಗಳ ಸಂಗ್ರಹ, ಅವುಗಳ ಸಾಹಿತ್ಯದ ದಾಖಲೀಕರಣ, 300 ತಂಡಗಳ ರಚನೆ ಮತ್ತು ಹಾಡುಗಳ ಹಂಚುವಿಕೆ, ತಂಡಗಳು ಅಂತಿಮ ಮಾಡಿ ನೀಡಿದ ಹಾಡುಗಳ ಮೈನಸ್‌ ಟ್ರ್ಯಾಕ್‌ ಮಾಡಿ ಕೊಡುವ ಕೆಲಸ, ಪೂರ್ವಾಭ್ಯಾಸವನ್ನು ಮೇಲ್ವಿಚಾರಣೆ ನಡೆಸಲು 40 ಜನ ಸಹಾಯಕ ಸಂಗೀತ ನಿರ್ದೇಶಕರ ನೇಮಕ, ಅಭ್ಯಾಸದ ಹಾಜರಾತಿಯ ದಾಖಲಾತಿ, ತಂಡಗಳ ಎಲ್ಲಾ ಸದಸ್ಯರುಗಳ ಘೋಷಣಾ ಪತ್ರ ದಾಖಲೀಕರಣ, ತಂಡಗಳಿಗೆ ವಸತಿ, ಪ್ರಯಾಣ ಮತ್ತು ಊಟೋಪಚಾರದ ವ್ಯವಸ್ಥೆ, ಸ್ವಯಂ ಸೇವಕರಿಗೆ ಮಾಹಿತಿ ಮತ್ತು ತರಬೇತಿ ಈ ರೀತಿ ಇಡೀ ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ಬೇಕಾದ ಸಂಪೂರ್ಣ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ಇಡೀ ಕಾರ್ಯಕ್ರಮಕ್ಕೆ ಅಂದಾಜು ಮೂರು ಕೋಟಿ ರೂಪಾಯಿ ಖರ್ಚಾಗಲಿದ್ದು, ಈ ಖರ್ಚು ಕೊಂಕಣಿ ಸಂಗೀತಕ್ಕೆ ಮೆರುಗು ನೀಡುವ, ಕೊಂಕಣಿಯ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಬಂಡವಾಳವಾಗಲಿದೆ. ಸರಕಾರ ಮತ್ತು ಜನತೆ ಕೈ ಜೋಡಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವರು ಎಂಬುದು ನಮ್ಮ ನಂಬಿಕೆ. ತಾವೆಲ್ಲಾ ಮಾಧ್ಯಮ ಮಿತ್ರರು ಪ್ರತಿ ದಿನ ಆಗಮಿಸಿ, ವರದಿ ಮಾಡಿ, ತಮ್ಮ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುವ ಮೂಲಕ ಸಮಾಜದ ಸರ್ವ ವರ್ಗದ ಜನರು, ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿ ಈ ಮಹಾ ಸಮ್ಮೇಳನವನ್ನು ಯಶಸ್ವಿಗೊಳಿಸಲು ಸಹಕಾರ ನೀಡಬೇಕಾಗಿ ತಮ್ಮಲ್ಲಿ ಕೋರಿಕೊಳ್ಳುತ್ತೇವೆ.

    ಮಂಗಳೂರಿನ ಹೊಟೇಲ್‌ ಗೋಲ್ಡ್‌ ಫಿಂಚ್ ಇಲ್ಲಿ ದಿನಾಂಕ 27 ಅಕ್ಟೋಬರ್ 2026ರಂದು ನಡೆದ ಪತ್ರಿಕಾ ಗೋಷ್ಟಿಯಲ್ಲಿ ಭಾಗವಹಿಸಿದವರು : ಲುವಿ ಜೆ. ಪಿಂಟೊ (ಅಧ್ಯಕ್ಷರು, ಮಾಂಡ್‌ ಸೊಭಾಣ್), ರೊಯ್‌ ಕ್ಯಾಸ್ತೆಲಿನೊ (ಅಧ್ಯಕ್ಷರು, ಆರ್ಥಿಕ ಸಮಿತಿ, ಪ್ರ.ವಿ.ಕೊಂ.ಸಂ.ಮ), ಜೊಯೆಲ್‌ ಪಿರೇರಾ (ಪ್ರಧಾನ ಸಂಗೀತ ನಿರ್ದೇಶಕ, ಪ್ರ.ವಿ.ಕೊಂ.ಸಂ.ಮ), ರೊನಾಲ್ಡ್‌ ಕ್ರಾಸ್ತಾ (ಕಾರ್ಯದರ್ಶಿ, ಮಾಂಡ್‌ ಸೊಭಾಣ್), ಮೈಕಲ್‌ ಜೂಡ್‌ ಗ್ರೇಶಿಯಸ್‌ (ಗೋವಾ ಸಂಯೋಜಕರು, ಪ್ರ.ವಿ.ಕೊಂ.ಸಂ.ಮ)

    baikady Music roovari World Record
    Share. Facebook Twitter Pinterest LinkedIn Tumblr WhatsApp Email
    Previous Articleಯಶಸ್ವಿ ಕಲಾವೃಂದ ಮಕ್ಕಳ ತಂಡದ ಹೂವಿನಕೋಲು ಸಮಾರೋಪ
    roovari

    Add Comment Cancel Reply


    Related Posts

    ಯಶಸ್ವಿ ಕಲಾವೃಂದ ಮಕ್ಕಳ ತಂಡದ ಹೂವಿನಕೋಲು ಸಮಾರೋಪ

    October 29, 2026

    ಕುಮಾರಿ ಶ್ರಾವಣಿ ಕೆ. ಭಟ್ ಇವರ ಭರತನಾಟ್ಯ ರಂಗಪ್ರವೇಶ | ಅಕ್ಟೋಬರ್ 31

    October 29, 2026

    ವಿಶೇಷ ಲೇಖನ : ಮಹಿಳಾ ಸಂವೇದನೆ ಮತ್ತು ಸಾಮಾಜಿಕ ಕಳಕಳಿಯ ಲೇಖಕಿ ಏರ್ಯ ಚಂದ್ರಭಾಗಿ ಕೆ. ರೈ

    October 29, 2026

    ಆಲೂರು ತಾಲೂಕು ನಾಲ್ಕನೇ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನ -2026 | ಅಕ್ಟೋಬರ್ 31

    October 29, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.