ಕುಂದಾಪುರ : ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ದಿನಾಂಕ 11 ಅಕ್ಟೋಬರ್ 2026ರಂದು ಯಶಸ್ವಿ ಕಲಾವೃಂದ ಮಕ್ಕಳ ತಂಡವು ಹೂವಿನಕೋಲು ಕಾರ್ಯಕ್ರಮವನ್ನು ಉದ್ಘಾಟಿಸಿಕೊಂಡು ಉಡುಪಿ-ಕುಂದಾಪುರ ತಾಲೂಕಿನಾದ್ಯಂತ ಎರಡು ತಂಡವಾಗಿರಿಸಿಕೊಂಡು ಸುಮಾರು 350 ಮನೆಗಳಲ್ಲಿ ಕಾರ್ಯಕ್ರಮ ನೀಡುತ್ತಾ ದಿನಾಂಕ 21 ಅಕ್ಟೋಬರ್ 2026ರಂದು ಕೊನೆಯ ನವರಾತ್ರಿಯ ಕಾರ್ಯಕ್ರಮವಾಗಿ ಕುಂದಾಪುರದ ಖ್ಯಾತ ಕಲಾ ಪೋಷಕರಾದ ಡಾ. ಆದರ್ಶ ಹೆಬ್ಬಾರ್ ಮನೆಯಲ್ಲಿ ಸಮಾರೋಪಗೊಂಡಿತು.
ಹೂವಿನಕೋಲು ನೆರವೇರಿಸಿಕೊಂಡು ಮಾತನಾಡಿದ ಕಲಾ ಪೋಷಕರಾದ ಡಾ. ಆದರ್ಶ ಹೆಬ್ಬಾರ್ “ಯಕ್ಷಗಾನದ ಕಲಾಪ್ರಕಾರವಾದ ‘ಹೂವಿನಕೋಲು’ ಅಳಿದುಳಿದ ಕಲೆ. ಯಶಸ್ವಿ ಕಲಾವೃಂದ ಕೊಮೆ ಕಳೆದ ಹದಿನೈದು ವರ್ಷಗಳಿಂದ ವೃತವಾಗಿಸಿಕೊಂಡು ಹಲವಾರು ಗಣ್ಯರ ಮನೆಗಳಿಗೆ ಬೇಟಿ ನೀಡುತ್ತಾ ನವರಾತ್ರಿಯ ಕಾರ್ಯಕ್ರಮವಾಗಿಸಿ ಸಾಧನೆಗೈಯುತ್ತಿದೆ. ಈ ಭಾರಿ ಬೆಳೆದ ಪಸಲಿನ ಕದಿರನ್ನು ಮಕ್ಕಳು ಹೂವಿನಕೋಲಾಗಿಸಿಕೊಂಡು ಸುಮಾರು 350ಕ್ಕೂ ಹೆಚ್ಚು ಮನೆ ಸಂಪರ್ಕ ಮಾಡಿ ಶುಭ ನುಡಿದ ಸಂಗತಿ ಅಸಾಧಾರಣವಾದದ್ದು. ಧನಕನಕ ಹೆಚ್ಚಲಿ…, ಆಯುರಾರೋಗ್ಯ ನಿಮಗೀಯಲಿ…, ಸಂತಾನಪ್ರಾಪ್ತಿಯಾಗಲಿ…, ಮಳೆಬೆಳೆಯಾಗಲಿ… ಎಂದು ನಾರಾಯಣ ಸ್ಮರಣೆ ಮಾಡುತ್ತಾ ಕಲಾಸಕ್ತರ ಮನಗಳಿಗೆ ಹಿತವನ್ನು ನೀಡುತ್ತಾ ಸಾಗಿ, ನವರಾತ್ರಿ ಕಳೆದದ್ದು ನಿಜಕ್ಕೂ ಸಮಾಜಕ್ಕೆ ಆರೋಗ್ಯಕರ ಬೆಳವಣಿಗೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತಂಡದಲ್ಲಿ ಮುಖ್ಯ ಗುರುಗಳಾದ ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಕಾರ್ಯದರ್ಶಿ ವೆಂಕಟೇಶ ವೈದ್ಯ, ಹರ್ಷಿತಾ ಅಮೀನ್, ಮನ್ವಿತ್, ಸಿದ್ಧಾರ್ಥ ಗಾಣಿಗ, ರಿಶಾಂಕ್ ಆಚಾರ್ ಉಪಸ್ಥಿತರಿದ್ದರು. ಅನ್ಯ ತಂಡದಲ್ಲಿ ಗಣಪತಿ ಹೆಗಡೆ, ಕೃಷ್ಣ ಗಿಳಿಯಾರು, ಪವನ್ ಆಚಾರ್, ಆರಬಿ ಹೆಗಡೆ, ಪರಿಣಿತ ವೈದ್ಯ, ಕೃಷ್ಣ ಭಟ್, ಆದಿತ್ಯ ಕ್ಯಾದಿಗೆ, ಪ್ರಣಮ್ಯ ಭಟ್, ಸನ್ನಿಧಿ ಹೊಳ್ಳ, ಮನೋಮಯ್ ಕಾರಂತ್, ಭರತ್ ಚಂದನ್, ನವೀನ್ ಆಚಾರ್, ರಾಹುಲ್ ಕುಂದರ್, ರಾಹುಲ್ ಅಮೀನ್, ಸಂಕೇತ ಪೂಜಾರಿ, ವಿಶ್ವನಾಥ ಮಾಸ್ಟರ್ ಉಪಸ್ಥಿತರಿದ್ದರು.
