ಮಂಗಳೂರು : ನೃತ್ಯಾಂಗಣ ಪ್ರಸ್ತುತ ಪಡಿಸುವ ಗುರು ರಾಧಿಕಾ ಶೆಟ್ಟಿ ಇವರ ಶಿಷ್ಯೆ ಕುಮಾರಿ ವೈಷ್ಣವಿ ಕೆ. ಪೈ ಇವರ ‘ಭರತನಾಟ್ಯ ರಂಗಪ್ರವೇಶ’ ಕಾರ್ಯಕ್ರಮವನ್ನು ದಿನಾಂಕ 09 ಆಗಸ್ಟ್ 2026ರಂದು ಸಂಜೆ ಗಂಟೆ 4-30ಕ್ಕೆ ಮಂಗಳೂರಿನ ಬಲ್ಮಠ ರೋಡ್, ಡಾನ್ ಬೋಸ್ಕೋ ಹಾಲ್‌ನಲ್ಲಿ ಆಯೋಜಿಸಲಾಗಿದೆ.
‘ನಾಟ್ಯರಾಣಿ ಶಾಂತಲಾ ಪ್ರಶಸ್ತಿ’ ಪುರಸ್ಕೃತ ನೃತ್ಯ ಗುರು ನಾಟ್ಯಾಚಾರ್ಯ ಶ್ರೀ ಉಳ್ಳಾಲ ಮೋಹನ್ ಕುಮಾರ್, ಡಾ. ಕರಾಯಿಕುಡಿ ಎಸ್. ಸುಬ್ರಮಣಿಯನ್ ಮತ್ತು ಕರ್ನಾಟಕ ಕಲಾಶ್ರೀ ಪುರಸ್ಕೃತ ವಿದುಷಿ ಶಾರದಾಮಣಿ ಶೇಖರ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಭರತನಾಟ್ಯ ಕಾರ್ಯಕ್ರಮಕ್ಕೆ ನಟುವಾಂಗದಲ್ಲಿ ಗುರು ರಾಧಿಕಾ ಶೆಟ್ಟಿ, ಹಾಡುಗಾರಿಕೆಯಲ್ಲಿ ಶ್ರೀಮತಿ ವಿದ್ಯಾಶ್ರೀ ರಾಧಕೃಷ್ಣನ್, ಮೃದಂಗದಲ್ಲಿ ಶ್ರೀ ಬಾಲಚಂದ್ರ ಭಾಗವತ್ ಮತ್ತು ಕೊಳಲು ಶ್ರೀ ರಾಜ ಗೋಪಾಲನ್ ವಿ.ಪಿ. ಇವರುಗಳು ಸಹಕರಿಸಲಿದ್ದಾರೆ.

