ಹುಬ್ಬಳ್ಳಿ : ಟಿಯೆಸ್ಸಾರ್ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಶ್ರೀ ಸುರೇಂದ್ರ ದಾನಿ ಇವರ ಜನ್ಮ ಶತಮನೋತ್ಸವ ಕಾರ್ಯಕ್ರಮವನ್ನು ದಿನಾಂಕ 27 ಡಿಸೆಂಬರ್ 2025ರಂದು ಮುಂಜಾನೆ 9-30 ಗಂಟೆಗೆ ಹುಬ್ಬಳ್ಳಿ ದೇಶಪಾಂಡೆ ನಗರ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 9-30 ಗಂಟೆಗೆ ಧಾರವಾಡದ ಶ್ರೀಮತಿ ಗೀತಾ ಆಲೂರ ಮತ್ತು ಬೆಂಗಳೂರಿನ ಸುಜ್ಞಾನ ದಾನಿ ಹಾಗೂ ಸಂಗಡಿಗರಿಂದ ‘ಲಘು ಸಂಗೀತ’ ಪ್ರಸ್ತುತಿ. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದ್ಮಶ್ರೀ ಡಾ. ಎಂ.ಎಂ. ಜೋಶಿ ಇವರ ವಹಿಸಲಿದ್ದು, ಸ್ಮರಣ ಸಂಚಿಕೆ ಬಿಡುಗಡೆಗೊಳ್ಳಲಿದೆ. 12-30 ಗಂಟೆಗೆ ಗೋಷ್ಠಿ 1ರಲ್ಲಿ ‘ದಾನಿಯವರ ಪ್ರವೃತ್ತಿ’, 2-30 ಗಂಟೆಗೆ ಗೋಷ್ಠಿ 2ರಲ್ಲಿ ‘ದಾನಿಯವರ ಗಮಕ ಪ್ರೀತಿ’ ವಿಷಯ ಮಂಡನೆ ಮತ್ತು 3-30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.

