Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ವಿಜಯನಗರ ಬಿಂಬದಲ್ಲಿ ಒಂದು ವರ್ಷದ ರಂಗಭೂಮಿ ಡಿಪ್ಲೋಮೋ   

    September 16, 2025

    ಚಿಗುರುಪಾದೆಯಲ್ಲಿ ರಂಜಿಸಿದ ಶ್ರೀಗುರುನರಸಿಂಹ ಯಕ್ಷಬಳಗದ ‘ಯಕ್ಷಚಿಗುರು -2025’

    September 16, 2025

    ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನ ಮತ್ತು ವಿವಿಧ ದತ್ತಿ ಪುರಸ್ಕಾರಗಳ ಪ್ರದಾನ ಕಾರ್ಯಕ್ರಮ | ಸೆಪ್ಟಂಬರ್ 17

    September 16, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ಮಾಯಾಳ ಮಾಂತ್ರಿಕ ಜಗತ್ತು’ ಕೃತಿ ಲೋಕಾರ್ಪಣೆ
    Book Release

    ‘ಮಾಯಾಳ ಮಾಂತ್ರಿಕ ಜಗತ್ತು’ ಕೃತಿ ಲೋಕಾರ್ಪಣೆ

    January 8, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಡಿಕೇರಿ : ಏಳು ವರ್ಷದ ಬಾಲಕಿ ಮಾಯಾ ಅಪ್ಪಚ್ಚು ತನ್ನ ಶಾಲೆಯ ಆರಂಭದ ದಿನಗಳಲ್ಲಿ ಅಲ್ಲಿಯ ಹೊಸ ವಾತಾವರಣದಲ್ಲಿ ತನಗೆ ಉಂಟಾದ ಭಯ, ಆತಂಕ, ಮನಸ್ಸಿನ ಗೊಂದಲಗಳು ಹಾಗೂ ಅದ್ಭುತ ಕಲ್ಪನಾ ಶಕ್ತಿಯನ್ನು ಸ್ವತಃ ತಾನೇ ವಿವರಿಸಿರುವ ‘ಮಾಯಾಳ ಮಾಂತ್ರಿಕ ಜಗತ್ತು’ ಪುಸ್ತಕ ದಿನಾಂಕ 21-12-2023ರಂದು ಬಿಡುಗಡೆಗೊಂಡಿತು.

    ಮಡಿಕೇರಿಯಲ್ಲಿ ಮಾಯಾ ಅಪ್ಪಚ್ಚು ಬರೆದಿರುವ ‘ಮಾಯಾಳ ಮಾಂತ್ರಿಕ ಜಗತ್ತು’ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಮಾಯಾಳ ತಾಯಿ ಸಂಚಿತ್ ಅಪ್ಪಚ್ಚು ತಂದೆ ಕಾರ್ತಿಕ್ ಅಪ್ಪಚ್ಚು ಮಾಯಾಳ ನೆನಪುಗಳನ್ನು ಮೆಲುಕು ಹಾಕಿ, ಅವಳ ಬರಹಗಳನ್ನು ಪುಸ್ತಕ ರೂಪದಲ್ಲಿ ಸಂಗ್ರಹಿಸಿದ ಕೊಡವ ಮಕ್ಕಡ ಕೂಟದ ಸ್ಥಾಪಕ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಅವರಿಗೆ ಕೃತಜ್ಞತೆ ಸಲ್ಲಿಸಿದರು.

    ಕೊಡವ ಮಕ್ಕಡ ಕೂಟದ ಸ್ಥಾಪಕ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಮಾತನಾಡಿ, ಮಾಯಾಳ ಸಾಧನೆ ಇತರ ವಿದ್ಯಾರ್ಥಿಗಳಿಗೆ ಮಾದರಿಯನ್ನಾಗಿಸುವ ನಿಟ್ಟಿನಲ್ಲಿ ಕೊಡಗಿನ ಶಾಲಾ ಕಾಲೇಜುಗಳ ಗ್ರಂಥಾಲಯಗಳಿಗೆ ಪುಸ್ತಕವನ್ನು ನೀಡಲಾಗುವುದೆಂದರು. ಮಾಯಾಳ ಪುಟ್ಟ ಸಹೋದರ ವರುಣ್ ಹಾಜರಿದ್ದರು.

    ಅಮೆರಿಕಾದ ಹೈಕ್ರಾಫ್ಟ್ ಡ್ರೈವ್ ಎಲೆಮೆಂಟ್ರಿ ಸ್ಕೂಲ್‌ನಲ್ಲಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಾಯಾ ಅಪ್ಪಚ್ಚು ಪ್ರತಿಭಾವಂತ ಬಾಲಕಿ, ವಿದ್ಯಾ ಬುದ್ದಿಯ ಜೊತೆಗೆ ಶಾಸ್ತ್ರೀಯ ಸಂಗೀತ, ನಾಟ್ಯಶಾಸ್ತ್ರ, ಚಿತ್ರಕಲೆ, ಸಾಹಿತ್ಯ ರಚನೆ ಇವೆಲ್ಲವೂ ಆಕೆಗೆ ಒಲಿದಿತ್ತು. ಹಾಗಾಗಿ ತನ್ನ ಅಧ್ಯಾಪಕರ, ಸಹಪಾಠಿಗಳ, ನೆರೆಯ ಹೊರೆಯವರ ಮೆಚ್ಚುಗೆಗೆ ಪಾತ್ರವಾಗಿದ್ದ ಮಾಯಾ ಅಪ್ಪಚ್ಚು ತನ್ನ ಜೀವಿತದ ಎಂಟು ವರ್ಷಗಳ ಅವಧಿಯಲ್ಲಿ ಸಾಧನೆಯ ಹಾದಿಯನ್ನು ಹಿಡಿದಿದ್ದಳು.

    ನಕಾರಾತ್ಮಕ ಭಾವನೆಗಳನ್ನು ಜಯಿಸುವ ಗುಟ್ಟನ್ನು ತಿಳಿಯಲು ಅವಳು ಕೈಗೊಂಡ ರೋಮಾಂಚಕ ಪ್ರಯಾಣ ಇತ್ಯಾದಿ ಶೌರ್ಯ ಸಾಹಸಗಳಿಂದ ಕೂಡಿದ ಮಾಂತ್ರಿಕ ಜಗತ್ತನ್ನು ಏಳನೇ ವಯಸ್ಸಿನಲ್ಲಿ ‘ದಿ ಗರ್ಲ್ ಹೂ ಎನಲೈಸ್ಟ್ ಮ್ಯಾಜಿಕ್’ ಎಂಬ ಶೀರ್ಷಿಕೆಯ ಆಂಗ್ಲ ಭಾಷೆಯ ಕಥೆಯನ್ನು ತನ್ನ ಡೈರಿಯಲ್ಲಿ ಚಿತ್ರಗಳ ಸಹಿತ ಬರೆದು ಇಟ್ಟಿದ್ದಾಳೆ. ‘ದಿ ಗರ್ಲ್ ಹೂ ಎನಲೈಸ್ಟ್ ಮ್ಯಾಜಿಕ್’ ಆಂಗ್ಲ ಭಾಷೆಯ ಕೃತಿಯನ್ನು ಕೊಡವ ಮಕ್ಕಡ ಕೂಟದ 78ನೇ ಪುಸ್ತಕವಾಗಿ ಬಿಡುಗಡೆಗೊಂಡಿದೆ.

    ಚಿತ್ರಕಲಾವಿದೆ, ರಂಗ ಕಲಾವಿದೆ, ಕವಯತ್ರಿ, ಗಾಯಕಿ, ಬರಹಗಾರ್ತಿ, ಪತ್ರಕರ್ತೆ ಹಾಗೂ ಸಂಗೀತ ನಿರ್ದೇಶಕಿ, ಕೊಡಗಿನ ‘ಶಕ್ತಿ’ ದಿನಪತ್ರಿಕೆಯ ‘ಚೇತನ’ದ ಉಪ ಸಂಪಾದಕಿಯಾಗಿದ್ದ ಪುಷ್ಪಾ ದೇವಯ್ಯ ಕಂಬೆಯಂಡ ಅವರು ಕನ್ನಡ ಭಾಷೆಗೆ ಅನುವಾದ ಮಾಡಿರುವ ‘ಮಾಯಾಳ ಮಾಂತ್ರಿಕ ಜಗತ್ತು’ 79ನೇ ಪುಸ್ತಕವಾಗಿ ಬಿಡುಗಡೆಗೊಂಡಿದೆ.

    ಆದರೆ ಮಾಯಾ ಇಂದು ಜೀವಂತವಾಗಿಲ್ಲ. ಆಕೆ ತನ್ನ ಎಂಟನೇ ವಯಸ್ಸಿಗೆ ಬಾರದ ಲೋಕಕ್ಕೆ ತೆರಳಿದ ಆಕೆ ಬಿಟ್ಟು ಹೋದ ನೆನಪುಗಳು ಅಪಾರ. ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮಾಯಾ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ. ಮಾಯಾಳ ಅಂಗಾಂಗಗಳನ್ನು ದಾನ ಮಾಡಿದ ಕಾರಣಕ್ಕಾಗಿ ‘ಹಾನರ್ ಬ್ರಿಡ್ಜ್’ ಸಂಸ್ಥೆ ಪೋಷಕರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಮಾಯಾ ನೆನಪಿನಲ್ಲಿ ಅಮೆರಿಕಾ ಹೈಕಾಫ್ಟ್‌ ಡೈವ್ ಎಲೆಮೆಂಟ್ರಿ ಸ್ಕೂಲ್‌ನಲ್ಲಿ ಚೆರ್ರಿ ಗಿಡ ನೆಡುವ ಮೂಲಕ ಸಂತಾಪ ಸೂಚಿಸಿದೆ. ಕಣ್ಣು ದಾನ ಮಾಡಿದಕ್ಕಾಗಿ ‘ಮಿರಾಕಲ್ ಇನ್ ಸೈಟ್ ಸಂಸ್ಥೆ ತನ್ನ ಲಾಂಛನವನ್ನು ಪೋಷಕರಿಗೆ ನೀಡಿದೆ. ಮಾಯಾಳ ತಾಯಿ ಸಂಚಿತ್ ಅಪ್ಪಚ್ಚು, ತಂದೆ ಕಾರ್ತಿಕ್ ಅಪಚ್ಚು ಪುಟ್ಟಿಚಂಡ ಮೂಲತಃ ಕೊಡಗು ಜಿಲ್ಲೆಯರಾಗಿದ್ದು, ಉದ್ಯೋಗದ ನಿಮಿತ್ತ ವಿದೇಶದಲ್ಲಿ ನೆಲೆಸಿದ್ದಾರೆ. ಮೀರ (ಅಮ್ಮ) ಹಾಗೂ ವಿಠಲ್ (ತಾತ), ಅಯ್ಯಪ್ಪ (ಮಾಮಾ) ಕೊಡಾ೦ಗಡ ಹಾಗೂ ಪುಟ್ಟಿಚಂಡ ಅಪ್ಪಯ್ಯ ಮತ್ತು ಜಾನ್ಸಿ ಮೂಲತಃ ಕೊಡಗಿನವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದು, ಮಾಯಾಳ ಮಾಂತ್ರಿಕ ಜಗತ್ತು ಪುಸ್ತಕವನ್ನು ಬಿಡುಗಡೆಗೊಳಿಸುವ ಮೂಲಕ ಮಾಯಾಳ ಕನಸ್ಸನ್ನು ನನಸು ಮಾಡಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಕೃಷ್ಣ ಮಂದಿರದಲ್ಲಿ ಸಾಧನ ಬಳಗದ ‘ಸ್ನೇಹ ಮಿಲನ’ ಕಾರ್ಯಕ್ರಮ
    Next Article ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದಲ್ಲಿ ‘ನೃತ್ಯೋತ್ಕರ್ಷ’ ನೃತ್ಯ ಸಮ್ಮೇಳನ
    roovari

    Add Comment Cancel Reply


    Related Posts

    ಬೆಸೆಂಟ್ ನ್ಯಾಷನಲ್ ಪದವಿ ಪೂರ್ವ ಕಾಲೇಜಿನಲ್ಲಿ ಗಿಳಿವಿಂಡು ಯಾನ.. ಮರಳಿ ಮನೆಗೆ.. ಬಾರಿಸು ಕನ್ನಡ ಡಿಂಡಿಮವ.. ಅರಿವಿನ ವಿಸ್ತರಣೆ ಕಾರ್ಯಕ್ರಮ

    September 16, 2025

    ಗೋಕರ್ಣದ ಹವ್ಯಕ ಮಹಾಮಂಡಲದ ‘ಕೊಡಗಿನ ಗೌರಮ್ಮ’ ಪ್ರಶಸ್ತಿ ಪ್ರಕಟ

    September 15, 2025

    ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಕೊಡಗು ಜಿಲ್ಲಾ ಘಟಕದ ಪದಗ್ರಹಣ

    September 13, 2025

    ವಿವೇಕಾನಂದ ಕಾಲೇಜಿನಲ್ಲಿ “ವಿವೇಕ ಸ್ಮೃತಿ” ಉಪನ್ಯಾಸ ಮಾಲಿಕೆ ಕಾರ್ಯಕ್ರಮ

    September 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.