Subscribe to Updates

    Get the latest creative news from FooBar about art, design and business.

    What's Hot

    ‘ಯಕ್ಷಮಂಜರಿ’ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ ಸಂಭ್ರಮ | ಮಾರ್ಚ್ 01ರಿಂದ 08

    February 25, 2026

    ನಂದಿನಿ ನದಿಯ ಕುದ್ರುವಿನಲ್ಲಿ ಮೂಲ್ಕಿ ತಾಲೂಕು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನ | ಮಾರ್ಚ್ 01

    February 25, 2026

    ಮೇಘಮೈತ್ರಿ ದ್ವಿತೀಯ ಯುವ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಡಾ. ವೆಂಕಟೇಶ ಗುಡೆಪ್ಪನವರ ಆಯ್ಕೆ

    February 25, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮೆಟಾ ಅವಾರ್ಡಿನಲ್ಲಿ ಆಯ್ಕೆಯಾದ “ದಕ್ಲಕಥಾ ದೇವಿಕಾವ್ಯ” ರಂಗಶಂಕರದಲ್ಲಿ | ಜೂನ್ 24ರಂದು
    Awards

    ಮೆಟಾ ಅವಾರ್ಡಿನಲ್ಲಿ ಆಯ್ಕೆಯಾದ “ದಕ್ಲಕಥಾ ದೇವಿಕಾವ್ಯ” ರಂಗಶಂಕರದಲ್ಲಿ | ಜೂನ್ 24ರಂದು

    June 8, 2023Updated:August 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email



    ಬೆಂಗಳೂರು: ಭಾರತದ ಪ್ರತಿಷ್ಠಿತ ನಾಟಕೋತ್ಸವಗಳಲ್ಲಿ ಒಂದಾದ ‘ ಮಹೇಂದ್ರ ಎಕ್ಸಲೆನ್ಸ್ ಇನ್ ಥಿಯೇಟರ್ ಅವಾರ್ಡ್ -2023 ‘ (META)ಗೆ 393 ನಾಟಕಗಳ ಪೈಕಿ ಆಯ್ಕೆಯಾದ 10 ನಾಟಕಗಳಲ್ಲಿ “ದಕ್ಲಕಥಾ ದೇವಿಕಾವ್ಯ” ನಾಟಕವು ಒಂದು. ಮೆಟಾ ಅವಾರ್ಡ್ ನಲ್ಲಿ 10 ವಿಭಾಗಗಳಲ್ಲಿ ಆಯ್ಕೆಯಾದ ಕೆಲವೇ ನಾಟಕಗಳಲ್ಲಿ ಈ ನಾಟಕವು ಒಂದು. ಈ ನಾಟಕದಲ್ಲಿಯ ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಸಂತೋಷ್ ದಿಂಡ್ಗೂರು ಮತ್ತು ಭರತ್ ಡಿಂಗ್ರಿ ಈಗಾಗಲೇ ಪಡೆದಿದ್ದಾರೆ. 29-03-2023ರಂದು ನವದೆಹಲಿಯ ರಂಗದಲ್ಲಿ ಪ್ರದರ್ಶನ ಕಂಡ ಈ ನಾಟಕ ಭಾಷೆಯನ್ನು ಮೀರಿ ನೆರೆದಿದ್ದ ಅಷ್ಟೂ ಜನರನ್ನು ರಂಜಿಸಿ, ಮೆಚ್ಚುಗೆಗೂ ಪಾತ್ರವಾಯಿತು.


    ಕೆ. ಬಿ ಸಿದ್ದಯ್ಯನವರ ಆಯ್ದ ಬರಹಗಳನ್ನು ಆಧರಿಸಿದ ಈ ನಾಟಕವನ್ನು ರಚಿಸಿ ನಿರ್ದೇಶಿಸಿದ್ದು ಲಕ್ಷ್ಮಣ್ ಕೆ. ಪಿ ಯವರು. ಇವರಿಗೆ ಸ್ಕಂದ ಘಾಟೆ ಹಾಗೂ ಶ್ರೀ ಹರ್ಷ ಜಿ. ಎನ್ ಸಹನಿರ್ದೇಶಕರಾಗಿ ಸಹಕರಿಸಿದ್ದಾರೆ. ನಾಟಕದ ಬೆಳಕಿನ ವಿನ್ಯಾಸವನ್ನು ಮಂಜು ನಾರಾಯಣ್ ಮಾಡಲಿದ್ದು, ವಸ್ತ್ರ ವಿನ್ಯಾಸ ಶ್ವೇತಾಮಣಿ ಹೆಚ್.ಕೆ ಅವರದ್ದು. ನಾಟಕದಲ್ಲಿ ಪಾತ್ರಧಾರಿಗಳು ಮತ್ತು ಸಂಗೀತಗಾರರಾಗಿ ಬಿಂದು ರಕ್ಷಿದಿ, ರಮಿಕ ಚೈತ್ರ, ಸಂತೋಷ ದಿಂಡ್ಗೂರು, ನರಸಿಂಹರಾಜು ಬಿ. ಕೆ ಹಾಗೂ ಭರತ್ ಡಿಂಗ್ರಿ ಕಲಾಭಿಮಾನಿಗಳನ್ನು ರಂಜಿಸಲಿದ್ದಾರೆ.
    ಹೊಸ ರಂಗ ಪರಿಭಾಷೆಯನ್ನು ಬಹಳ ಜತನದಿಂದ ಕಟ್ಟಿ, ಯಾವುದೇ ಅಬ್ಬರವಿಲ್ಲದೆ ಹಿತಮಿತವಾದ ಸಂಗೀತ ಹಾಗೂ minimalistic stage design ಈ ನಾಟಕದ ಮೆರಗು. ಕೇವಲ ಆಧ್ಯಾತ್ಮಿಕ ಪುರಾಣ ಕಥೆಗಳಿಗೆ ಜೋತು ಬಿದ್ದಿರುವ ಈ ಸಮಯದಲ್ಲಿ ವಿಶಿಷ್ಟವಾದ ಒಂದು ಕಥೆಯನ್ನು ರಂಗರೂಪಕ್ಕೆ ತಂದಿರುವುದು, ಸಿದ್ಧ ಮಾದರಿಯನ್ನು ಮುರಿದು ನಟರ ಅಭಿವ್ಯಕ್ತಿಗೆ ಹೆಚ್ಚು ಪ್ರಾಶಸ್ತ್ಯವನ್ನು ನೀಡಿ, ನಿರಾಕಾರದಿಂದ ಒಂದು ಆಕಾರವನ್ನು ಸೃಷ್ಟಿಸಿದ ನಿರ್ದೇಶಕರ ಸೃಜನಶೀಲತೆ ಶ್ಲಾಘನೀಯ.
    ಮೇಲು ಕೀಳು ಕೇವಲ ಜನರನ್ನು ಮಾತ್ರ ಅಥವಾ ಒಂದು ಜನಾಂಗವನ್ನು ಮಾತ್ರ ದೂರವಿಟ್ಟಿಲ್ಲ. ಅವರ ಆಚರಣೆ, ಬದುಕು, ಕಥೆ ಹಾಗೂ ಅವರ ಸಂಗೀತ ಪರಿಕರಗಳನ್ನು ದೂರವಿಟ್ಟಿದೆ. ಇಂತಹ ನೆಲ ಮೂಲದ ತಮಟೆ, ಅರೆ ವಾದ್ಯಗಳನ್ನು ರಂಗದ ಮೇಲೆ ತಂದು ಸೂಕ್ಷ್ಮಾತಿಸೂಕ್ಷ್ಮ ನಾದ-ಲಯದೊಂದಿಗೆ ಮನುಷ್ಯನ ವಿಕಾರಗಳನ್ನು, ನೋವು-ಹಸಿವನ್ನು, ಮಣ್ಣು-ಹೆಣ್ಣನ್ನು, ಮುಟ್ಟು-ಹುಟ್ಟನ್ನು ಕೆದಕುವ ಪರಿ ಎಲ್ಲೋ ನಮ್ಮನ್ನೇ ಅಣಕಿಸುವಂತಿದೆ. ಶಿಷ್ಟ ಜಗತ್ತಿನ ಸಾತ್ವಿಕರ ನಡುವೆ ಹಸಿವೆಂಬ ಮಹಾಮಾರಿ ನಮ್ಮೆಲ್ಲರನ್ನು ಆವರಿಸಿಕೊಳ್ಳುವ, ನಾನು, ನನ್ನದು ಎನ್ನುವ ಅಹಂಭಾವವನ್ನು ಕೆಣಕುವಂತಿದೆ.

    24-06-2023 ರಂದು ಬೆಂಗಳೂರಿನ ‘ರಂಗಶಂಕರ’ದಲ್ಲಿ ಮಧ್ಯಾಹ್ನ 3.30ಕ್ಕೆ ಮತ್ತು ಸಂಜೆ 7.30ಕ್ಕೆ ಎರಡು ಪ್ರದರ್ಶನಗಳು ನಡೆಯಲಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ‘ವಿಜಯನಗರ ಬಿಂಬ’ದಲ್ಲಿ ಮಕ್ಕಳಿಗಾಗಿ ರಂಗ ತರಗತಿಗಳು
    Next Article ದುಬೈನಲ್ಲಿ ‘ವಿಶ್ವ ಪಟ್ಲ ಸಂಭ್ರಮ’ | ಜೂನ್ 11ರಂದು
    roovari

    Add Comment Cancel Reply


    Related Posts

    ಬೆಳ್ತಂಗಡಿಯಲ್ಲಿ ‘ಸುವರ್ಣ ರಂಗ ಸಮ್ಮಾನ್’ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ವೈಭವ

    February 24, 2026

    ಬೊಂಡಾಲದಲ್ಲಿ ‘ಬೊಂಡಾಲ ಪ್ರಶಸ್ತಿ’ ಪ್ರದಾನ ಮತ್ತು ಯಕ್ಷಗಾನ ಪ್ರದರ್ಶನ

    February 24, 2026

    ರಂಗ ವಿಮರ್ಶೆ | ಎಳೆ ಪ್ರತಿಭೆಗಳಿಗೆ ಸಾಕ್ಷಿಯಾದ ರಂಗ ಪ್ರಯೋಗಗಳು

    February 23, 2026

    ಕಾಲೇಜಿನ ಸಾಂಸ್ಕೃತಿಕ ರಂಗ ತಂಡದಿಂದ ನಾಟಕ ಪ್ರದರ್ಶನ | ಫೆಬ್ರವರಿ 23

    February 23, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.