ಮೈಸೂರು : ಮೈಸೂರಿನ ಪ್ರತಿಷ್ಠಿತ ಮುಖ್ಯಮಂತ್ರಿ ದಿ. ಡಿ. ದೇವರಾಜ್ ಅರಸ್ ಇವರ 111ನೇ ಹುಟ್ಟುಹಬ್ಬದ ಪ್ರಯುಕ್ತ ನೀಡುವ ‘ಧ್ವನಿ ಕೊಟ್ಟ ಧಣಿ’ ಪ್ರಶಸ್ತಿ -2026 ಪ್ರದಾನ ಸಮಾರಂಭವನ್ನು ಕನ್ನಡ ಚುಟುಕು ಸಾಹಿತ್ಯ ಪರಿಷತ್‌ನ ಸಂಸ್ಥಾಪಕ, ಚುಟುಕು ಬ್ರಹ್ಮ ಡಾ. ಎಂ.ಜಿ.ಆರ್. ಅರಸ್ ಅಧ್ಯಕ್ಷರಾಗಿರುವ ಅನ್ವೇಷಣಾ ಟ್ರಸ್ಟಿನ ಪ್ರಾಯೋಜಕತ್ವದಲ್ಲಿ ದಿನಾಂಕ 26 ಆಗಸ್ಟ್ 2026ರಂದು ಆಯೋಜಿಸಲಾಯಿತು.
ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಭವನದ ಮೂಲಕ ನಿರಂತರ ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಖಿಲ ಕರ್ನಾಟಕ ವ್ಯಾಪ್ತಿಯಲ್ಲಿ ಖ್ಯಾತಿ ಹೊಂದಿದ ಹಾಗೂ ಅಶಕ್ತ ಲೇಖಕರ ಬರಹಗಳನ್ನು ಕೃತಿಗಳನ್ನಾಗಿಸಿ ಕವಿ, ಸಾಹಿತಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕನ್ನಡ ಭವನ ಪ್ರಕಾಶನವು ವಿವಿಧ ಪ್ರಾಕಾರಗಳಲ್ಲಿ ಕನ್ನಡ ಸಮ್ಮೇಳನಗಳನ್ನು ನಡೆಸಿದ ಡಾ. ವಾಮನ್ ರಾವ್ ಬೇಕಲ್ ಇವರಿಗೆ ಪ್ರತಿಷ್ಠಿತ ಧ್ವನಿ ಕೊಟ್ಟ ಧಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಸಿ. ಸೋಮಶೇಖರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಡಾ. ಡಿ. ಸತೀಶ್ ಚವಾಣ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಬಿ.ಟಿ. ಕವಿತಾ, ಚುಟುಕು ಯುಗಾಚಾರ್ಯ ಡಾ. ಎಂ.ಜಿ.ಆರ್. ಅರಸ್, ಆರ್ಯ ಅಮರನಾಥ್ ರಾಜೇ ಅರಸ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
