Subscribe to Updates

    Get the latest creative news from FooBar about art, design and business.

    What's Hot

    ಡಾ. ವಾಮನ್ ರಾವ್ ಬೇಕಲ್ ಇವರಿಗೆ ಪ್ರತಿಷ್ಠಿತ ‘ಧ್ವನಿ ಕೊಟ್ಟ ಧಣಿ ಪ್ರಶಸ್ತಿ’ ಪ್ರದಾನ

    August 31, 2026

    ಉಡುಪಿಯಲ್ಲಿ ‘ಕಾವ್ಯ ಪ್ರಶಸ್ತಿ’ ಪ್ರದಾನ ಮತ್ತು ‘ಡುಂಡಿ 70’ ಅಭಿನಂದನಾ ಸಮಾರಂಭ | ಸೆಪ್ಟೆಂಬರ್ 06

    August 31, 2026

    ಕ.ಸಾ.ಪ.ದ ನಾಡೋಜ ಡಾ. ಮನು ಬಳಿಗಾರ್ ಗೌರವ ದತ್ತಿ ಪ್ರಶಸ್ತಿಗೆ ಸಾಹಿತಿಗಳ ಆಯ್ಕೆ

    August 31, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಕ.ಸಾ.ಪ.ದ ನಾಡೋಜ ಡಾ. ಮನು ಬಳಿಗಾರ್ ಗೌರವ ದತ್ತಿ ಪ್ರಶಸ್ತಿಗೆ ಸಾಹಿತಿಗಳ ಆಯ್ಕೆ
    Awards

    ಕ.ಸಾ.ಪ.ದ ನಾಡೋಜ ಡಾ. ಮನು ಬಳಿಗಾರ್ ಗೌರವ ದತ್ತಿ ಪ್ರಶಸ್ತಿಗೆ ಸಾಹಿತಿಗಳ ಆಯ್ಕೆ

    August 31, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್ ಇವರು ಸ್ಥಾಪಿಸಿರುವ ಪ್ರತಿಷ್ಠಿತ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ದತ್ತಿ ಪ್ರಶಸ್ತಿಗೆ 2025 ಮತ್ತು 2026ನೇ ಸಾಲಿನ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ. 2025ನೇ ಸಾಲಿನ ಪ್ರಶಸ್ತಿಗೆ ಬೆಂಗಳೂರಿನ ಹಿರಿಯ ವಿಮರ್ಶಕ ಎಸ್.ಆರ್. ವಿಜಯಶಂಕರ ಹಾಗೂ ಹಿರಿಯ ಸಾಹಿತಿ ಡಾ. ಲತಾ ಗುತ್ತಿ ಆಯ್ಕೆಯಾಗಿದ್ದಾರೆ. 2026ನೇ ಸಾಲಿನ ಪ್ರಶಸ್ತಿಗೆ ಬಾಗಲಕೋಟೆಯ ಹಿರಿಯ ಸಾಹಿತಿ ಡಾ. ಶ್ರೀರಾಮ ಇಟ್ಟಣ್ಣವರ ಹಾಗೂ ಬೆಂಗಳೂರಿನ ಹಿರಿಯ ಲೇಖಕಿ ಡಾ. ಪದ್ಮನಿ ನಾಗರಾಜು ಆಯ್ಕೆಯಾಗಿದ್ದಾರೆ.

    ಕನ್ನಡ ನಾಡು-ನುಡಿ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿರುವ, 60 ವರ್ಷ ಪೂರೈಸಿದ ಒಬ್ಬ ಲೇಖಕ ಹಾಗೂ ಒಬ್ಬ ಲೇಖಕಿಗೆ ಪ್ರತಿವರ್ಷ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಪ್ರಶಸ್ತಿಯು ತಲಾ 30 ಸಾವಿರ ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ನಾಡೋಜ ಡಾ. ಮನು ಬಳಿಗಾರ್ ಇವರು ತಮಗೆ ಮಾಸಿಕವಾಗಿ ದೊರೆಯುವ ಗೌರವ ಸಂಭಾವನೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿಯಾಗಿ ಸ್ಥಾಪಿಸಿ, ಅದರ ಮೂಲಕ ಈ ಪ್ರಶಸ್ತಿಯನ್ನು ನೀಡುವ ವ್ಯವಸ್ಥೆ ಮಾಡಿದ್ದಾರೆ. 2021ರಿಂದ ಈ ಗೌರವ ಪ್ರಶಸ್ತಿ ನೀಡಲಾಗುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿ ಕೆ.ಎ. ದಯಾನಂದ ಇವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ 2025 ಹಾಗೂ 2026ನೇ ಸಾಲಿನ ಪ್ರಶಸ್ತಿ ಪುರಸ್ಕೃತರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

    award baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಅಭಿನಯ ಭಾರತಿ ಧಾರವಾಡ ‘ವಜ್ರಸಿರಿ ರಂಗೋತ್ಸವ’
    Next Article ಉಡುಪಿಯಲ್ಲಿ ‘ಕಾವ್ಯ ಪ್ರಶಸ್ತಿ’ ಪ್ರದಾನ ಮತ್ತು ‘ಡುಂಡಿ 70’ ಅಭಿನಂದನಾ ಸಮಾರಂಭ | ಸೆಪ್ಟೆಂಬರ್ 06
    roovari

    Add Comment Cancel Reply


    Related Posts

    ಡಾ. ವಾಮನ್ ರಾವ್ ಬೇಕಲ್ ಇವರಿಗೆ ಪ್ರತಿಷ್ಠಿತ ‘ಧ್ವನಿ ಕೊಟ್ಟ ಧಣಿ ಪ್ರಶಸ್ತಿ’ ಪ್ರದಾನ

    August 31, 2026

    ಉಡುಪಿಯಲ್ಲಿ ‘ಕಾವ್ಯ ಪ್ರಶಸ್ತಿ’ ಪ್ರದಾನ ಮತ್ತು ‘ಡುಂಡಿ 70’ ಅಭಿನಂದನಾ ಸಮಾರಂಭ | ಸೆಪ್ಟೆಂಬರ್ 06

    August 31, 2026

    ಅಭಿನಯ ಭಾರತಿ ಧಾರವಾಡ ‘ವಜ್ರಸಿರಿ ರಂಗೋತ್ಸವ’

    August 31, 2026

    ಆಳ್ವಾಸ್ ಕಾಲೇಜಿನಲ್ಲಿ ಮಣಿಪುರಿ ಭಾಷಾ ದಿನಾಚರಣೆ

    August 31, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.