Subscribe to Updates

    Get the latest creative news from FooBar about art, design and business.

    What's Hot

    ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ‘ವಿವೇಕಸ್ಮೃತಿ’ ಉಪನ್ಯಾಸ ಕಾರ್ಯಕ್ರಮ

    June 12, 2025

    ವಿಶ್ವಕರ್ಮ ಒಕ್ಕೂಟದಿಂದ ಸಣ್ಣ ಕಥೆ – ಕವನ ಸ್ಪರ್ಧೆ – 2025 | 30 ಜೂನ್ ಕೊನೆಯ ದಿನ

    June 12, 2025

    ಮೈಸೂರಿನಲ್ಲಿ ಪ್ರೇರಣಾ ಕಲಾ ಕಾರ್ಯಾಗಾರ | ಜೂನ್ 28

    June 12, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೇಂದ್ರೆ, ಕುವೆಂಪು ಸಾಹಿತ್ಯಕ್ಕೆ ಹೊಸ ನೆಲೆಗಳನ್ನು ನೀಡಿದ್ದ ನಾಡೋಜ ಡಾ. ಜಿ. ಕೃಷ್ಣಪ್ಪರವರಿಗೆ ನುಡಿ ನಮನ
    Commemoration

    ಬೇಂದ್ರೆ, ಕುವೆಂಪು ಸಾಹಿತ್ಯಕ್ಕೆ ಹೊಸ ನೆಲೆಗಳನ್ನು ನೀಡಿದ್ದ ನಾಡೋಜ ಡಾ. ಜಿ. ಕೃಷ್ಣಪ್ಪರವರಿಗೆ ನುಡಿ ನಮನ

    January 29, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಡಾ. ಜಿ. ಕೃಷ್ಣಪ್ಪನವರಿಗೆ ಶ್ರದ್ದಾಂಜಲಿ ಸಭೆಯು ದಿನಾಂಕ 28 ಜನವರಿ 2025ರಂದು ಆಯೋಜನೆಗೊಂಡಿತ್ತು.

    ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ “ಮಂಡ್ಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಳ್ಳುವ ಕೆಲವು ದಿನಗಳ ಹಿಂದಷ್ಟೇ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಗೆ ಭೇಟಿ ನೀಡಿ ಸುದೀರ್ಘವಾಗಿ ನನ್ನೊಂದಿಗೆ ಬೇಂದ್ರೆ ಕಾವ್ಯದ ನೆಲೆಗಳನ್ನು ಚರ್ಚಿಸಿದ್ದ ‘ಬೇಂದ್ರೆ ಕೃಷ್ಣಪ್ಪ’ ಎಂದೇ ಹೆಸರಾಗಿದ್ದ ಡಾ. ಜಿ. ಕೃಷ್ಣಪ್ಪ ಇನ್ನಿಲ್ಲ ಎನ್ನುವ ಸುದ್ದಿ ನಿಜಕ್ಕೂ ಆಘಾತಕಾರಿಯಾಗಿದೆ. ಡಾ. ಜಿ. ಕೃಷ್ಣಪ್ಪನವರ ‘ನಾಕುತಂತಿ ಒಂದು ಟಿಪ್ಪಣಿ’ ಮತ್ತು ‘ಬೇಂದ್ರ ಕಂಡ ಬೆಳಗು’ ಎರಡೂ ಪುಸ್ತಕಗಳು ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾದವು. ‘ನಾಕುತಂತಿ-50’ರ ಕುರಿತು ಸಾಹಿತ್ಯ ಸಮ್ಮೇಳನದಲ್ಲಿ ಅವರೇ ಮಾತನಾಡಬೇಕು ಎನ್ನುವುದು ನಮ್ಮ ಆಸೆಯಾಗಿತ್ತು, ಆದರೆ ಆರೋಗ್ಯದ ಸಮಸ್ಯೆ ಅವರನ್ನು ಮಂಡ್ಯಕ್ಕೆ ಬರದಂತೆ ತಡೆಯಿತು. ‘ನಿಮ್ಮ ಮಾತುಗಳ ವಿಡಿಯೋ ಕಳುಹಿಸಿ’ ಎಂದು ವಿನಂತಿಸಿಕೊಂಡೆ. ಮಗನ ಸಹಾಯ ಪಡೆದು ಹದಿಮೂರು ನಿಮಿಷಗಳ ವಿಡಿಯೋ ಕಳುಹಿಸಿದರು. ಅದನ್ನು ಸಮ್ಮೇಳನದಲ್ಲಿ ಪ್ರದರ್ಶನ ಮಾಡಿದೆವು. ಇದು ಅವರಿಗೆ ಬಹಳ ಸಂತೋಷವನ್ನು ಕೊಟ್ಟಿತ್ತು. ಬೇಂದ್ರೆ ಕಾವ್ಯದ ಮಾಂತ್ರಿಕತೆ ಹಿಡಿಯಬಲ್ಲ ಜಾದೂಗಾರ ಎನ್ನಿಸಿಕೊಂಡ ಇವರು ಕುವೆಂಪುರವರನ್ನು ಆಳವಾಗಿ ಓದಿಕೊಂಡಿದ್ದರು. ಕುವೆಂಪು ಪದಸಂಪತ್ತಿನ ಕುರಿತ ಅವರ ಅಂಕಣ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗುತ್ತಿತ್ತು. ‘ಜೈಮಿನಿ ಭಾರತ’, ‘ಗಿರಿಜಾ ಕಲ್ಯಾಣ’ಗಳನ್ನು ಹೊಸಗನ್ನಡಕ್ಕೆ ತಂದಿದ್ದ ಕೃಷ್ಣಪ್ಪನವರು ‘ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ- ಒಂದು ಅಧ್ಯಯನ’ ಎಂಬ ವಿಷಯದಲ್ಲಿ ಡಾಕ್ಟರೇಟ್ ಪಡೆದಿದ್ದರು” ಎಂದು ಕೃಷ್ಣಪ್ಪರವರ ಕೊಡುಗೆಗಳನ್ನು ವಿವರಿಸಿದರು.

    ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಎನ್.ಎಸ್. ಶ್ರೀಧರಮೂರ್ತಿಯವರು ಮಾತನಾಡಿ “ಉತ್ಕಟ ಸಾಹಿತ್ಯ ಪ್ರೇಮಿಯಾದ ಕೃಷ್ಣಪ್ಪನವರ ನೀಡುತ್ತಿದ್ದ ಹೊಳಹುಗಳು ಅದ್ಭುತ. ಅಕಾಡಮಿಕ್ ಜಾರ್ಗನ್ ಗಳನ್ನು ಮುರಿದು ಇವರು ವಿಮರ್ಶೆಯನ್ನು ಹೊಸ ರೂಪದಲ್ಲಿ ಕಟ್ಟಿದರು. ಇವರ ಮಾತುಗಳನ್ನು ಏಕಾಂತದಲ್ಲಿ ಹಲವು ಗಂಟೆಗಳನ್ನು ಕೇಳುವ ಅದೃಷ್ಟ ಹಾಗೂ ಹಲವು ಕೃತಿಗಳನ್ನು ಹಸ್ತಪ್ರತಿಯಲ್ಲಿಯೇ ಓದುವ ಸೌಭಾಗ್ಯ ನನಗೆ ದೊರಕಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಅವರ ತುಂಬು ಪ್ರೀತಿ ನನಗೆ ಅಖಂಡವಾಗಿ ಮೂವತ್ತು ವರ್ಷಗಳ ಕಾಲ ದೊರಕಿತ್ತು ಎನ್ನುವುದು ಈಗ ‘ಭುವನದ ಭಾಗ್ಯ’ ಎನ್ನಿಸುತ್ತದೆ” ಎಂದು ತಮ್ಮ ಒಡನಾಟದ ನೆನಪುಗಳನ್ನು ಹಂಚಿಕೊಂಡರು.

    ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಬಿ.ಎಂ. ಪಟೇಲ್ ಪಾಂಡು, ಕಾರ್ಯದರ್ಶಿಗಳಾದ ಡಾ. ಪದ್ಮಿನಿ ನಾಗರಾಜು, ನೇ.ಭ. ರಾಮಲಿಂಗ ಶೆಟ್ಟಿ ಮತ್ತು ಪರಿಷತ್ತಿನ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    commemoration Literature
    Share. Facebook Twitter Pinterest LinkedIn Tumblr WhatsApp Email
    Previous Articleಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಲಾಂಛನ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ
    Next Article ಮಂಗಳೂರಿನ ಡಾನ್ ಬೋಸ್ಕೋ ಹಾಲ್ ನಲ್ಲಿ ‘ಸಮರ್ಪಣ 2025’ | ಫೆಬ್ರವರಿ 01 ಮತ್ತು 02
    roovari

    Add Comment Cancel Reply


    Related Posts

    ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ‘ವಿವೇಕಸ್ಮೃತಿ’ ಉಪನ್ಯಾಸ ಕಾರ್ಯಕ್ರಮ

    June 12, 2025

    ಅಂತರಾಷ್ಟ್ರೀಯ ಮಟ್ಟದ ಬೂಕರ್ ಪ್ರಶಸ್ತಿ ಪುರಸ್ಕೃತರಾದ ದೀಪಾ ಭಾಸ್ತಿಯವರಿಗೆ ಗೌರವ ಸಮರ್ಪಣೆ

    June 12, 2025

    ಕವನ | ಮುಂಗಾರು ಮಳೆ

    June 12, 2025

    ವಿಶೇಷ ಲೇಖನ – ಮಹಾನ್ ವಿದ್ವಾಂಸ ಹೀ. ಚ. ಶಾಂತವೀರಯ್ಯ

    June 11, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.