ಬೆಂಗಳೂರು : ದೃಶ್ಯ (ರಿ.) ರಂಗತಂಡ ಪ್ರಸ್ತುತ ಪಡಿಸುವ ‘ದೃಶ್ಯ ನಾಟಕೋತ್ಸವ’ 2026 ವಿಚಾರ ಸಂಕಿರಣ, ರಂಗ ಗೌರವ ಮತ್ತು ನಾಟಕ ಪ್ರದರ್ಶನವನ್ನು ದಿನಾಂಕ 20 ಮೇ 2026ರಂದು ಬೆಳಿಗ್ಗೆ 10-00 ಗಂಟೆಗೆ ಬೆಂಗಳೂರಿನ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಮಾರಂಭವನ್ನು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಎಲ್.ಎನ್. ಮುಕುಂದ್ ರಾಜ್ ಇವರು ಉದ್ಘಾಟನೆ ಮಾಡಲಿದ್ದಾರೆ. ಶೇಕ್ಸ್ ಪಿಯರ್ ಇವರ ಬಗ್ಗೆ ನಡೆಯುವ ಗೋಷ್ಠಿ 1ರಲ್ಲಿ ‘ಶೇಕ್ಸ್ ಪಿಯರ್ ಕೃತಿಗಳ ಕುರಿತು’ ಕಿರುತೆರೆ ಹಾಗೂ ರಂಗಭೂಮಿ ಕಲಾವಿದರಾದ ಶ್ರೀಮತಿ ಲಕ್ಷ್ಮೀ ಚಂದ್ರಶೇಖರ್ ಇವರು, ‘ಶೇಕ್ಸ್ ಪಿಯರ್ ಕೃತಿಗಳಲ್ಲಿ ರೌದ್ರತೆ’ ಖ್ಯಾತ ರಂಗ ನಿರ್ದೇಶಕರಾದ ಜೋಸೆಫ್ ಜಾನ್ ಇವರು ಮತ್ತು ‘ಒಥೆರೋ ನಾಟಕದಲ್ಲಿ ಅಧಿಕಾರಶಾಹಿಯ ಚಹರೆ ಮತ್ತು ಸಂಚು’ ಸಹಾಯಕ ಪ್ರಾಧ್ಯಾಪಕರಾದ ಎನ್.ಸಿ. ಮಹೇಶ್ ಇವರು ವಿಷಯ ಮಂಡನೆ ಮಾಡಲಿದ್ದಾರೆ. ಭಾಸ ಇವರ ಬಗ್ಗೆ ನಡೆಯುವ ಗೋಷ್ಠಿ 2ರಲ್ಲಿ ‘ಭಾಸನ ನಾಟಕಗಳಲ್ಲಿ ಸ್ತ್ರೀ ಸಂವೇದನೆ’ ಸಂಸ್ಕೃತ ಪ್ರಾಧ್ಯಾಪಕರಾದ ಶ್ರೀಮತಿ ಶೋಭಾ, ‘ಭಾಸನ ನಾಟಕಗಳನ್ನು ಕುರಿತು’ ಉಪನ್ಯಾಸಕರಾದ ಡಾ. ಲಕ್ಷ್ಮೀ ಜಿ. ಪ್ರಸಾದ್ ಮತ್ತು ‘ಭಾಸನ ನಾಟಕಗಳ ಪ್ರಸ್ತುತತೆ’ ಡಾ. ಪ್ರಭುರಾಜ್ ಇವರು ವಿಷಯ ಮಂಡನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ನಟ ಶ್ರೀಯುತ ಸುರೇಶ್ ಎಂ., ಶ್ರೀಯುತ ಎಂ.ಡಿ. ದೇವರಾಜ್ ಮತ್ತು ರಂಗಕರ್ಮಿ ಡಾ. ಅಶ್ವತ್ಥನಾರಾಯಣ ಕೆ.ಪಿ. ಇವರುಗಳಿಗೆ ರಂಗ ಗೌರವ ನೀಡಲಾಗುವುದು. ಮಧ್ಯಾಹ್ನ 12-30 ಗಂಟೆಗೆ ಬಿ.ಎನ್.ಎಂ. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿಗಳಿಂದ ಪುರುಷೋತ್ತಮ್ ಆರ್. ಕಾಕಂಬಿ ಇವರ ನಿರ್ದೇಶನದಲ್ಲಿ ‘ಮಧ್ಯಮ ವ್ಯಾಯೋಗ’ ನಾಟಕ ಹಾಗೂ ಸಂಜೆ 7-00 ಗಂಟೆಗೆ ದೃಶ್ಯ (ರಿ.) ರಂಗತಂಡದವರಿಂದ ಶ್ರೀಮತಿ ದಾಕ್ಷಾಯಿಣಿ ಭಟ್ ಎ. ಇವರ ನಿರ್ದೇಶನದಲ್ಲಿ ‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’ ನಾಟಕ ಪ್ರದರ್ಶನ ನಡೆಯಲಿದೆ.

