Subscribe to Updates

    Get the latest creative news from FooBar about art, design and business.

    What's Hot

    ‘ಕೀರ್ತನಾರೋಹಣ’ ಕರ್ನಾಟಕ ಶಾಸ್ತ್ರೀಯ ಸಂಗೀತದ ಸರಣಿ ಕಾರ್ಯಕ್ರಮ

    May 18, 2026

    ಸುರತ್ಕಲ್ಲಿನ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ‘ಶ್ರೀ ಕೃಷ್ಣ ತುಲಾಭಾರ’ ಕಥಾಕೀರ್ತನ | ಮೇ 20

    May 18, 2026

    ಬೆಂಗಳೂರಿನ ಕಲಾಗ್ರಾಮದಲ್ಲಿ ‘ದೃಶ್ಯ ನಾಟಕೋತ್ಸವ’ | ಮೇ 20

    May 18, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ‘ಕೀರ್ತನಾರೋಹಣ’ ಕರ್ನಾಟಕ ಶಾಸ್ತ್ರೀಯ ಸಂಗೀತದ ಸರಣಿ ಕಾರ್ಯಕ್ರಮ
    Music

    ‘ಕೀರ್ತನಾರೋಹಣ’ ಕರ್ನಾಟಕ ಶಾಸ್ತ್ರೀಯ ಸಂಗೀತದ ಸರಣಿ ಕಾರ್ಯಕ್ರಮ

    May 18, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬಂಟ್ವಾಳ : ಬಂಟ್ವಾಳ ತಾಲೂಕಿನ ನರಿಕೊಂಬು ಮಾಣಿಮಜಲು ಇಲ್ಲಿರುವ ‘ಕೀರ್ತನಾ ಸಂಗೀತ ಶಾಲೆ’ ಸುಮಾರು 20 ವರ್ಷಗಳಿಂದ ಸಂಗೀತ ತರಗತಿಗಳನ್ನು ನಡೆಸುತ್ತಾ, ಅನೇಕ ಪ್ರತಿಭಾನ್ವಿತರನ್ನು ಹಾಡುಗಾರರನ್ನಾಗಿ ಪರಿಚಯಿಸಿದ ಸಂಗೀತ ಶಾಲೆಯ ಗುರುಗಳು ವಿದ್ವಾನ್ ಶ್ರೀ ಕೃಷ್ಣ ಆಚಾರ್ಯ ಹಾಗೂ ವಿದುಷಿ ಶ್ರೀಮತಿ ರಜತಾ ಕೃಷ್ಣ ಆಚಾರ್ಯ ದಂಪತಿಗಳು. ಇವರು ತಮ್ಮ ಮನೆಯಲ್ಲಿ ‘ಕೀರ್ತನಾರೋಹಣ’ ಎನ್ನುವ ಸಂಗೀತ ಸರಣಿಯ ಮೂಲಕ ವಿದ್ಯಾರ್ಥಿಗಳಿಗೆ ವೇದಿಕೆಯನ್ನೊದಗಿಸುತ್ತಾ ಸಂಗೀತ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಈ ಸರಣಿಯ ಐದನೆಯ ಕಾರ್ಯಕ್ರಮವು ದಿನಾಂಕ 17 ಮೇ 2026ರಂದು ಕೀರ್ತನಾಲಹರಿ ಸಭಾಂಗಣದಲ್ಲಿ ನಡೆಯಿತು.

    ಮೊದಲಿಗೆ ಕಾರ್ಯಕ್ರಮ ನೀಡಿದ ಅನ್ವೇಶ್ ಅಂಬೆಕಲ್ಲು ಹಾಗೂ ಕ್ಷಿತಿ ಹಿಮಾನಿ ಇವರು ಕಚೇರಿಯನ್ನು ಅಭೋಗಿ ವರ್ಣದೊಂದಿಗೆ ಪ್ರಾರಂಭಿಸಿ, ನಂತರ ವಿವಿಧ ಕೃತಿಗಳಿಂದ ಮುಂದುವರೆಸಿ ಸುಮಾರು 45 ನಿಮಿಷಗಳ ಕಾರ್ಯಕ್ರಮವನ್ನು ದೇವರನಾಮದೊಂದಿಗೆ ಮುಕ್ತಾಯಗೊಳಿಸಿದರು. ನಂತರ ಅಭಿರಾಮ್ ಸೂರ್ಯಂಬೈಲು ಇವರು, ತನ್ನ ಒಂದೂಕಾಲು ಗಂಟೆಯ ಕಾರ್ಯಕ್ರಮದಲ್ಲಿ ಅಠಾಣ, ರೀತಿಗೌಳ, ಪಂತುವರಾಳಿ ಕೃತಿಗಳ ಪ್ರಸ್ತುತಿಯ ನಂತರ ಪ್ರಧಾನ ರಾಗವಾಗಿ ಭೈರವಿ ರಾಗದ ಬಾಲಗೋಪಾಲ ಕೃತಿಯನ್ನು ಆಯ್ದುಕೊಂಡರು. ಬಳಿಕ, ವೆಂಕಟಾಚಲ ನಿಲಯಂ ದೇವರನಾಮ, ಕೊನೆಗೆ ಬೃಂದಾವನ ಸಾರಂಗ ತಿಲ್ಲಾನದೊಂದಿಗೆ ಕಚೇರಿಯು ಮುಕ್ತಾಯಗೊಂಡಿತು. ವಿದ್ಯಾರ್ಥಿಗಳ ಪ್ರಸ್ತುತಿಯು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಹಿಮ್ಮೇಳದಲ್ಲಿ ವಿದ್ವಾನ್ ಬಾಲಕೃಷ್ಣ ಹೊಸಮನೆ ಮೃದಂಗ ಕಲಾವಿದರಾಗಿ, ಕುಮಾರಿ ಧನಶ್ರೀ ಶಬರಾಯ ಇವರು ವಯೋಲಿನ್ ಸಹಕಾರ ನೀಡಿದರು. ‎

    baikady Music roovari
    Share. Facebook Twitter Pinterest LinkedIn Tumblr WhatsApp Email
    Previous Articleಸುರತ್ಕಲ್ಲಿನ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ‘ಶ್ರೀ ಕೃಷ್ಣ ತುಲಾಭಾರ’ ಕಥಾಕೀರ್ತನ | ಮೇ 20
    roovari

    Add Comment Cancel Reply


    Related Posts

    ಸುರತ್ಕಲ್ಲಿನ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ‘ಶ್ರೀ ಕೃಷ್ಣ ತುಲಾಭಾರ’ ಕಥಾಕೀರ್ತನ | ಮೇ 20

    May 18, 2026

    ಬೆಂಗಳೂರಿನ ಕಲಾಗ್ರಾಮದಲ್ಲಿ ‘ದೃಶ್ಯ ನಾಟಕೋತ್ಸವ’ | ಮೇ 20

    May 18, 2026

    ಚಿಣ್ಣರ ಬೇಸಿಗೆ ಶಿಬಿರದ ಸಮಾರೋಪದಲ್ಲಿ ‘ವಿಶ್ವಕಲಾ ಸಿಂಧು’ ಹಾಗೂ ‘ಭಾವನಾ ಪುರಸ್ಕಾರ’ ಪ್ರದಾನ

    May 18, 2026

    ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ತಾಲೂಕು ಘಟಕದಿಂದ 40ನೇ ಸಾಹಿತ್ಯ ಪಯಣ ಹೆಜ್ಜೆ

    May 18, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.