ಕಾಸರಗೋಡು : ಎಡನೀರು ಮಠಾಧೀಶ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳ ಚಾತುರ್ಮಾಸ್ಯ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ಕೃತಿಗಳನ್ನು ಆಧರಿಸಿ ‘ಮಂಜುನಾದ’ 15ನೇ ಸಂಗೀತ ಕಚೇರಿಯು ಕಾಸರಗೋಡಿನ ಶ್ರೀ ಎಡನೀರು ಮಠದಲ್ಲಿ ದಿನಾಂಕ 20-08-2023ರಂದು ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ನೇತೃತ್ವದಲ್ಲಿ ನಡೆಯಿತು.
ಹಾಡುಗಾರಿಕೆಯಲ್ಲಿ ಉಷಾ ರಾಮಕೃಷ್ಣ ಭಟ್ ಮತ್ತು ಆಶ್ವೀಜಾ ಉಡುಪ, ವಯಲಿನ್ ನಲ್ಲಿ ಸುಪ್ರೀತಾ ಪಿ.ಎಸ್, ಮೃದಂಗದಲ್ಲಿ ಸುನಾದ ಕೃಷ್ಣ ಅಮೈ ಮತ್ತು ತಂಬೂರದಲ್ಲಿ ಸುಜಾತ ಎಸ್. ಭಟ್ ಸಹಕರಿಸಿದರು. ಕೃತಿಗಳ ಪ್ರಸ್ತುತಿಯು ಸಂಗೀತ ರಸಿಕರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.