Subscribe to Updates

    Get the latest creative news from FooBar about art, design and business.

    What's Hot

    ತುಳು ಭವನದಲ್ಲಿ ‘ದಸರಾ ಬಹುಭಾಷಾ ಕವಿಗೋಷ್ಠಿ” | ಅಕ್ಟೋಬರ್ 15

    October 13, 2026

    2026ರ ಹಾಸನದ ಮಾಣಿಕ್ಯ ಪ್ರಕಾಶನದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ

    October 13, 2026

    ಮೈಸೂರಿನಲ್ಲಿ ‘ಕವಿ-ಕಾವ್ಯ-ಕುಂಚ-ಗಾಯನ’ | ಅಕ್ಟೋಬರ್ 16

    October 13, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಚತುರ್ಕನ್ಯೆಯರ ರಮಣೀಯ ಗೆಜ್ಜೆ -ಹೆಜ್ಜೆ ಸಂಭ್ರಮ | ಅಕ್ಟೋಬರ್ 18
    Bharathanatya

    ಚತುರ್ಕನ್ಯೆಯರ ರಮಣೀಯ ಗೆಜ್ಜೆ -ಹೆಜ್ಜೆ ಸಂಭ್ರಮ | ಅಕ್ಟೋಬರ್ 18

    October 13, 2026No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಬಹುಮುಖ ಪ್ರತಿಭೆಯ, ಸೃಜನಶೀಲ – ನೃತ್ಯ ಸಂಯೋಜಕಿ ಹಾಗೂ ಭರತನಾಟ್ಯ ಕಲಾವಿದೆಯಾಗಿ ಖ್ಯಾತರಾಗಿರುವ ‘ನೃತ್ಯ ಕಲಾನಿಧಿ’ ಗುರು ವಸುಂಧರಾ ಸಂಪತ್ ಕುಮಾರ್, ‘ನಟರಾಜ ನೃತ್ಯ ಶಾಲೆ’ಯ ಸಂಸ್ಥಾಪಕಿ ಮತ್ತು ನಿರ್ದೇಶಕಿ. ಕಳೆದ 46 ವರ್ಷಗಳಿಂದ ನೃತ್ಯಕ್ಷೇತ್ರದ ಸಾಧಕರಾದ ಇವರ ನುರಿತ ಗರಡಿಯಲ್ಲಿ ರೂಹುಗೊಂಡ ನಾಲ್ವರು ಕಲಾಮಣಿಗಳಾದ ಕು. ಆರಾಧನಾ, ಅವನಿ ಎಂ. ಭಾಸ್ಕರ್, ಜಾಹ್ನವಿ ಮತ್ತು ಎಸ್. ಸೃಷ್ಟಿ ಇವರು ದಿನಾಂಕ 18 ಅಕ್ಟೋಬರ್ 2026 ಭಾನುವಾರದಂದು ಸಂಜೆ ಗಂಟೆ 5-30ಕ್ಕೆ ಬೆಂಗಳೂರಿನ ಎ.ಡಿ.ಎ. ರಂಗಮಂದಿರದಲ್ಲಿ ತಮ್ಮ ಕಲಾತ್ಮಕ ನೃತ್ಯವನ್ನು ಪ್ರದರ್ಶಿಸಲು ವಿದ್ಯುಕ್ತವಾಗಿ ತಮ್ಮ ಹೆಜ್ಜೆ-ಗೆಜ್ಜೆಯ ಸಮಾರಂಭವನ್ನು ಆಚರಿಸಿಕೊಳ್ಳಲಿದ್ದಾರೆ.

    ಸಮಾರಂಭದಲ್ಲಿ ಗುರು ರೋಹಿಣಿ ಅನಂತ್- ಕ್ಲಾಸಿಕಲ್ ರಿದಮ್ಸ್ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ನಿರ್ದೇಶಕರು ಮತ್ತು ಖ್ಯಾತ ಲೇಖಕಿ- ರಂಗಕರ್ಮಿ, ಅಂಕಣಕಾರ್ತಿ ಮತ್ತು ನೃತ್ಯ ಹಾಗೂ ನಾಟಕಗಳ ವಿಮರ್ಶಕಿ ಶ್ರೀಮತಿ ವೈ.ಕೆ. ಸಂಧ್ಯಾ ಶರ್ಮ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ನರ್ತನಕ್ಕೆ ಸರ್ವಾಂಗೀಣ ಸುಂದರವಾದ ನೃತ್ಯಸಂಯೋಜನೆಯನ್ನು ಗುರು ವಸುಂಧರಾ ಸಂಪತ್ ಕುಮಾರ್ ರೂಪಿಸಿದ್ದು, ಅವರ ನೆಚ್ಚಿನ ಶಿಷ್ಯೆಯರಾದ ಈ ನಾಲ್ವರು ಉದಯೋನ್ಮುಖ ನೃತ್ಯ ಕಲಾವಿದೆಯರ ಕಣ್ಮನ ಸೆಳೆಯುವ ರಮಣೀಯ ನೃತ್ಯ ವೈಭವವನ್ನು ವೀಕ್ಷಿಸಲು ಎಲ್ಲ ಕಲಾರಸಿಕರಿಗೂ ಆದರದ ಸ್ವಾಗತ.

    ಕು. ಆರಾಧನಾ ಬಿ. ಬದರೀಶ್ : ಬದರೀಶ್ ಮತ್ತು ಎಚ್.ಎನ್. ಲಕ್ಷ್ಮಿಯವರ ಸುಪುತ್ರಿಯಾದ ಇವರು ಸುದರ್ಶನ್ ವಿದ್ಯಾಮಂದಿರದ 9ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿನಿ. ಭರತನಾಟ್ಯದಲ್ಲಿ ಜೂನಿಯರ್ ಪರೀಕ್ಷೆಯನ್ನು ಪೂರ್ಣಗೊಳಿಸಿ, ಗ್ರಿಫಿನ್ ಕಾಲೇಜ್ ಲಂಡನ್‌ನ ಭರತನಾಟ್ಯ ಪರೀಕ್ಷೆಯ ನಾಲ್ಕುಹಂತಗಳಲ್ಲಿ ತೇರ್ಗಡೆ ಹೊಂದಿದ್ದಾಳೆ. ಬ್ಯಾಡ್ಮಿಂಟನ್ ಇವಳ ಹವ್ಯಾಸವಾಗಿದ್ದು, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವನ್ನು ಹೆಮ್ಮೆಯಿಂದ ಪ್ರತಿನಿಧಿಸಿರುವ ಪ್ರತಿಭಾವಂತ ಆಟಗಾರ್ತಿ ಇವಳು. ‘ಸಿಐಡಿ’ (CID) ಮತ್ತು ಅಪರಾಧ ತನಿಖೆ (ಫೊರೆನ್ಸಿಕ್ ಇನ್ವೆಸ್ಟಿಗೇಷನ್) ಬಗ್ಗೆ ಇವಳಿಗೆ ತೀವ್ರ ಆಸಕ್ತಿಯಿದೆ.

    ಕು. ಅವನಿ ಎಂ. ಭಾಸ್ಕರ್ : ಎಂ.ಆರ್. ಭಾಸ್ಕರ್ ಮತ್ತು ಸಿ. ಸಹನಾ ಇವರ ಸುಪುತ್ರಿಯಾಗಿದ್ದು, ಯಶವಂತಪುರದ ರಾಷ್ಟ್ರೀಯ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ. ಇವಳು ಕರ್ನಾಟಕ ಮಂಡಳಿಯ ಜೂನಿಯರ್ ಭರತನಾಟ್ಯ ಪರೀಕ್ಷೆಯನ್ನು ಪ್ರಥಮ ದರ್ಜೆಯಲ್ಲಿ ಪೂರ್ಣಗೊಳಿಸಿದ್ದು, ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಸೀನಿಯರ್ ಪರೀಕ್ಷೆಯನ್ನು ಮುಗಿಸಿದ್ದಾಳೆ. ಗ್ರಿಫಿನ್ ಕಾಲೇಜ್ ಆಫ್ ಲಂಡನ್‌ನಿಂದ ಗೆಜ್ಜೆ ಪೂಜೆ -1 ಮತ್ತು ಡಾನ್ಸ್ ಡಾಕ್ಯುಮೆಂಟೇಶನ್ ಗ್ರೇಡ್ 3 ಅನ್ನು ಸಹ ಪೂರ್ಣಗೊಳಿಸಿದ್ದಾಳೆ. ಕ್ಲಬ್ ಟೂರ್ನಮೆಂಟ್‌ಗಳಲ್ಲಿ ಬಾಸ್ಕೆಟ್‌ಬಾಲ್ ಮತ್ತು ಸಿ.ಬಿ.ಎಸ್‌.ಇ. ಕೂಟಗಳಲ್ಲಿ ವಾಲಿಬಾಲ್ ಆಡುವ ಉತ್ಸಾಹಿ ಕ್ರೀಡಾಪಟು. ಕರ್ನಾಟಕ ಸಂಗೀತವನ್ನು ಸಹ ಕಲಿಯುತ್ತಿದ್ದು, ನಾಟಕ, ಕ್ರೋಚೆಟ್ ಮತ್ತು ನಿಟಿಂಗ್ ಮುಂತಾದ ಸೃಜನಶೀಲ ಚಟುವಟಿಕೆಗಳಲ್ಲಿ ನಿರತೆ.

    ಕು. ಜಾಹ್ನವಿ : ತನ್ನ 2ನೆಯ ವಯಸ್ಸಿನಿಂದಲೇ ನೃತ್ಯ ಕಲಿಯುತ್ತಿದ್ದು, ಇವಳು ಆನಂದ ಕುಮಾರ್ ಮತ್ತು ಸೃಷ್ಟಿ ಇವರ ಸುಪುತ್ರಿ, 14 ವರ್ಷದ ಇವಳು, ಮಲ್ಲೇಶ್ವರದ ಕ್ಲುನಿ ಕಾನ್ವೆಂಟ್ ನಲ್ಲಿ 9ನೇ ತರಗತಿಯ ವಿದ್ಯಾರ್ಥಿನಿ. ಭರತನಾಟ್ಯದಲ್ಲಿ ಜೂನಿಯರ್ ನೃತ್ಯ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದು, ಲಂಡನ್‌ನ ಗ್ರಿಫಿನ್ ಕಾಲೇಜಿನಿಂದ ಗ್ರೇಡ್ 4 ಪ್ರಮಾಣಪತ್ರವನ್ನು ಹೊಂದಿದ್ದಾಳೆ. ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಂತಹ ಪ್ರತಿಷ್ಠಿತ ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದು, ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಲಂಡನ್‌ನ ಕಾರ್ಯಕ್ರಮ – ‘ಭರತ ವಾರಿಧಿ’ಯಲ್ಲಿ ಭಾಗವಹಿಸಿದ್ದಾಳೆ. ‘ದಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್’ನಲ್ಲಿ ಪ್ರಥಮ ಸೋಪಾನ ಶ್ರೇಣಿ ಮತ್ತು ಮಾದರಿ ವಿಶ್ವಸಂಸ್ಥೆ (Model United Nations), ಬರವಣಿಗೆ, ಹಸ್ತಪ್ರತಿ ಮತ್ತು ಒಲಿಂಪಿಯಾಡ್ ಸ್ಪರ್ಧೆಗಳಲ್ಲಿ ಇವಳಿಗೆ ಮನ್ನಣೆಗಳು ದೊರೆತಿವೆ. ಚಿತ್ರಕಲೆ, ಸೈಕ್ಲಿಂಗ್, ಈಜು, ಟೆನ್ನಿಸ್, ಬ್ಯಾಡ್ಮಿಂಟನ್, ಪ್ರಯಾಣ, ಓದುವುದು ಮತ್ತು ಅಡುಗೆ ಮಾಡುವುದು ಇವಳ ಹವ್ಯಾಸಗಳು.

    ಸೃಷ್ಟಿ ಎಸ್. : ಶ್ರೀಮತಿ ರೂಪಾ ಮತ್ತು ಸುರೇಶರ ಸುಪುತ್ರಿಯಾಗಿದ್ದು, ಇವಳು ಆರ್ಕಿಡ್ಸ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ವಿದ್ಯಾರ್ಥಿನಿ. ಇವಳು, ಜೂನಿಯರ್ ನೃತ್ಯ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ನೃತ್ಯದ ಜೊತೆಗೆ, ಈಜು ಮತ್ತು ಸಂಗೀತ ಇವಳ ಹವ್ಯಾಸಗಳು.

    ನಾಲ್ವರೂ ಶ್ರೀಮತಿ ವಸುಂಧರಾ ಇವರಲ್ಲಿ ಪಂದನಲ್ಲೂರು ಶೈಲಿಯ ಭರತನಾಟ್ಯವನ್ನು ಬಹು ಆಸಕ್ತಿಯಿಂದ ಕಲಿಯುತ್ತಿದ್ದು, ಮುಂದೆ ಇದೇ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈಯ್ಯುವ ಕನಸನ್ನು ಹೊತ್ತಿರುವ, ಈ ನಾಲ್ಕು ಉದಯೋನ್ಮುಖ ಕಲಾವಿದೆಯರಿಗೂ ಹಾರ್ದಿಕ ಅಭಿನಂದನೆಗಳು.

    *** ವೈ.ಕೆ. ಸಂಧ್ಯಾ ಶರ್ಮ

    ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.

    baikady bharatanatyam dance Music roovari
    Share. Facebook Twitter Pinterest LinkedIn Tumblr WhatsApp Email
    Previous Articleಉದ್ಘಾಟನೆಗೊಂಡ ‘ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2026’
    Next Article ಅಕಾಡೆಮಿ ಸಭಾಂಗಣದಲ್ಲಿ ‘ಕಾವ್ಯಾಂ ವ್ಹಾಳೊ- 19’ ಕೊಂಕಣಿ ಕವಿಗೋಷ್ಠಿ
    roovari

    Add Comment Cancel Reply


    Related Posts

    ತುಳು ಭವನದಲ್ಲಿ ‘ದಸರಾ ಬಹುಭಾಷಾ ಕವಿಗೋಷ್ಠಿ” | ಅಕ್ಟೋಬರ್ 15

    October 13, 2026

    2026ರ ಹಾಸನದ ಮಾಣಿಕ್ಯ ಪ್ರಕಾಶನದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ

    October 13, 2026

    ಮೈಸೂರಿನಲ್ಲಿ ‘ಕವಿ-ಕಾವ್ಯ-ಕುಂಚ-ಗಾಯನ’ | ಅಕ್ಟೋಬರ್ 16

    October 13, 2026

    ಹೂವಿನಕೋಲು ಅಭಿಯಾನದ ಎರಡನೇ ದಿನದ ಕಾರ್ಯಕ್ರಮ

    October 13, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.