24.03.1952 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸರಪಾಡಿಯ ಕೇಶವ ಕಾರಂತ ಹಾಗೂ ದಯಾವತಿ ಕಾರಂತ್ ಇವರ ಮಗನಾಗಿ ಸರಪಾಡಿ ಶಂಕರನಾರಾಯಣ ಕಾರಂತ್ ಅವರ ಜನನ. ಪಿಯುಸಿ ವರೆಗೆ ವಿದ್ಯಾಭ್ಯಾಸ.
1974ರಲ್ಲಿ ಧರ್ಮಸ್ಥಳ ಯಕ್ಷಗಾನ ಲಲಿತ ಕಲಾ ಕೇಂದ್ರದಲ್ಲಿ ಗುರುಗಳಾದ ಧರ್ಮಸ್ಥಳ ರಾಘವೇಂದ್ರ ತೋಳ್ಪಡಿತ್ತಾಯ ಹಾಗೂ ಸಂಗೀತ ಅಭ್ಯಾಸವನ್ನು ಕೊಕ್ಕಡ ಸುಬ್ರಾಯ ಆಚಾರ್ಯರಿಂದ ಕಲಿತು ಮುಂದೆ ಬಡಗಿನ ಭಾಗವತಿಕೆಯನ್ನು ನಾರಣಪ್ಪ ಉಪ್ಪೂರರಿಂದ ಅಭ್ಯಾಸ ಮಾಡಿದರು.
ತಂದೆ ಯಕ್ಷಗಾನ ಮೃದಂಗ ವಾದಕರು ಹಾಗೂ ಯಕ್ಷಗಾನದಲ್ಲಿ ಹಾಸ್ಯಗಾರ ವೇಷ ಮಾಡುತ್ತಿದ್ದರು. ಭಜನೆಯಲ್ಲಿ ಸೊಗಸಾಗಿ ಹಾಡುತ್ತಿದ್ದರು. ತಾಯಿ, ಅಜ್ಜಿ ಭಜನೆ ಹಾಡು ಶೋಭಾನೆ ಹಾಡು ಹಾಡುತ್ತಿದ್ದರು. ಕೆಲವು ಬಂಧುಗಳು ಧರ್ಮಸ್ಥಳಕ್ಕೆ ಹೋಗಿ ಭಾಗವತಿಕೆ ಕಲಿಯಲು ಪ್ರೇರಣೆ. ರಂಗಕ್ಕೆ ಹೋಗುವ ಮೊದಲು ಕಲಾವಿದರ ಜೊತೆ ಕೂತು ಚರ್ಚಿಸಿ ಹೋಗುತ್ತೇನೆ ಎಂದು ಹೇಳುತ್ತಾರೆ ಕಾರಂತರು.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ
ಕಾಲಕ್ಕೆ ಸರಿಯಾಗಿ ಯಕ್ಷಗಾನದಲ್ಲಿ ಬದಲಾವಣೆ ಆಗುತ್ತಾ ಇದೆ. ಕ್ಯಾನ್ಸರಿನಂತೆ ಬೆಳೆದಾಗ ವಿಮರ್ಶಕರು ಅದನ್ನು ಶಸ್ತ್ರ ಚಿಕಿತ್ಸೆ ಮಾಡುತ್ತಾರೆ. 1969-70 ರಲ್ಲಿ ಕೋಟ ಶಿವರಾಮ ಕಾರಂತರು ಮಾಡಿದ್ರು. ಈಗ ಪ್ರಭಾಕರ ಜೋಶಿಯಂತಹ ವಿದ್ವಾಂಸರು ಆ ಕೆಲಸ ಮಾಡುತ್ತಿದ್ದಾರೆ.
ಯಕ್ಷಗಾನ ಪರಂಪರೆ ಎಂದರೆ ಏನೆಂದು ಗೊತ್ತಿಲ್ಲ. ಯಾರ ಹಾಡುಗಳ ಮಟ್ಟು ಆರಿಸಬೇಕೆಂದು ನನಗೆ ಗೊತ್ತಾಗುವುದಿಲ್ಲ. ಸಂಪೂರ್ಣ ಪ್ರದರ್ಶನವನ್ನು ನೋಡುವ ಪ್ರೇಕ್ಷಕರು ಕಡಿಮೆ. ಹಗಲು ಎಲ್ಲರಿಗೂ ಅವರವರ ಉದ್ಯೋಗ ಇದೆ. ಹೆಚ್ಚಿನವರು ಪ್ರಬುದ್ಧರು.
1974-75 ರಿಂದ ಯಕ್ಷಗಾನದ ತಿರುಗಾಟ ಪ್ರಾರಂಭ
1975-76 ಕಡತೋಕ ಕೃಷ್ಣ ಭಾಗವತ ಮತ್ತು ಕೊಕ್ಕಡ ಸುಬ್ರಾಯ ಆಚಾರ್ ರ ಜೊತೆ, 1976-77 ರಿಂದ 1980-81ರ ತನಕ ಕಡತೋಕ ಮಂಜುನಾಥ ಭಾಗವತರ ಜೊತೆಗೆ ಸಂಗೀತಗಾರ + ಭಾಗವತಿಕೆ.
1992 – 93 ಪುತ್ತಿಗೆ ರಘುರಾಮ ಹೊಳ್ಳರ ಜೊತೆಗೆ. 1982 – 83 ಕಟೀಲು 3ನೇ ಮೇಳದಲ್ಲಿ, 1984 – 85 ಮೂಲ್ಕಿ ಮೇಳದಲ್ಲಿ (ಬಡಗು) ತಿರುಗಾಟ.
1986, 1987, 1988 ಕುಂಬಳೆ ಮೇಳ, 1994, 1995, 1996ರ ತಿರುಗಾಟ ಕಟೀಲು 4ನೇ ಮೇಳದಲ್ಲಿ.
1983-84, 1988-89 ಅಳದಂಗಡಿ ಮೇಳದಲ್ಲಿ ತಿರುಗಾಟ ಮಾಡಿದ ಅನುಭವ.
ನಂದನೇಶ್ವರ ಯಕ್ಷಗಾನ ಮಂಡಳಿ ಪಣಂಬೂರು, ಮೂಡಬಿದ್ರೆ ದೇವಾನಂದ ಭಟ್ರ ಸಂಘ, ಕದ್ರಿ ಹವ್ಯಾಸಿ ಬಳಗ, ಯಕ್ಷಗಾನ ಕಲಾರಂಗ ಉಡುಪಿ, ಯಕ್ಷಲಹರಿ (ರಿ) ಯುಗಪುರುಷ ಕಿನ್ನಿಗೋಳಿ, ಪಣಂಬೂರು ಶಶಿಧರ ಐತಾಳರ ಮನೆಯವರು ಹಾಗೂ ಹಲವು ಸಂಘ ಸಂಸ್ಥೆಗಳು ಇವರ ಸಾಧನೆಯನ್ನು ನೋಡಿ ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
1980 ರಲ್ಲಿ ಶ್ರೀಲಕ್ಷ್ಮೀ ಕಾರಂತ್ ಅವರೊಂದಿಗೆ ಮದುವೆ. ಅವರ ಅಣ್ಣ ನೀವಣೆ ಪಾಂಡುರಂಗ ಭಟ್ ಸಂಗೀತ ವಿದ್ವಾಂಸ, ಇನ್ನೊಬ್ಬ ಅಣ್ಣ ನೀವಣೆ ಗಣೇಶ ಭಟ್ ಹರಿಕಥಾ ವಿದ್ವಾಂಸರು.
ಸರಪಾಡಿ ಶಂಕರನಾರಾಯಣ ಕಾರಂತ್ ಹಾಗೂ ಶ್ರೀಲಕ್ಷ್ಮೀ ಕಾರಂತ್ ಅವರಿಗೆ ಮೂರು ಜನ ಮಕ್ಕಳು. ದೊಡ್ಡ ಮಗ ಕೇಶವಪ್ರಸಾದ ಪುರೋಹಿತ ಹಾಗೆಯೇ ಯಕ್ಷಗಾನ ಮೃದಂಗ ಬಾರಿಸುತ್ತಾರೆ. 2ನೇ ಮಗ ಹರಿಪ್ರಸಾದ್ ಕಾರಂತ್ ವಕೀಲ ಹಾಗೂ ಕಟೀಲು 4ನೇ ಮೇಳದಲ್ಲಿ ಭಾಗವತ, 3ನೇ ಮಗ ಗುರುಪ್ರಸಾದ ಯಕ್ಷಗಾನ ಹವ್ಯಾಸಿ ಕಲಾವಿದ ಹಾಗೂ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ.
ಶ್ರವಣ್ ಕಾರಂತ್ ಕೆ.,
ಶಕ್ತಿನಗರ, ಮಂಗಳೂರು