ಕಾಸರಗೋಡು : ಓದುವ ಮಾಸವ ಆಚರಣೆಯ ಅಂಗವಾಗಿ ಕಾಸರಗೋಡು ಜಿಲ್ಲಾ ಮಾಹಿತಿ ಕಚೇರಿಯು ಕಲೆಕ್ಟರೇಟ್ ಅಕ್ಷರ ಗಂಥಾಲಯದ ಸಹಯೋಗದೊಂದಿಗೆ ಜಿಲ್ಲೆಯ ಸರಕಾರಿ ನೌಕರರಿಗಾಗಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಈ ಸ್ಪರ್ಧೆಯು ದಿನಾಂಕ 08 ಜುಲೈ 2026ರಂದು ವಿದ್ಯಾನಗರ ಸಿವಿಲ್ ಸ್ಟೇಷನ್ ಜಿಲ್ಲಾ ಮಾಹಿತಿ ಕಚೇರಿ, ಪಿ.ಆರ್. ಚೇಂಬರ್‌ನಲ್ಲಿ ನಡೆಯಲಿದೆ. ಆಸಕ್ತ ಸರಕಾರಿ ನೌಕರರು ಹೆಸರು ನೋಂದಾಯಿಸಿಕೊಳ್ಳಲು ಹಾಗೂ ಹೆಚ್ಚಿನ ಮಾಹಿತಿಗಾಗಿ 04994 255145 ಕರೆ ಮಾಡಬಹುದು.
