ಮಡಿಕೇರಿ : ಮಡಿಕೇರಿ ನಗರ ದಸರಾ ಸಮಿತಿ (ರಿ.), ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಸಹಯೋಗದಲ್ಲಿ ಕೊಡಗು ಜಾನಪದ ಪರಿಷತ್ ಇದರ ವತಿಯಿಂದ 6ನೇ ವರ್ಷದ ‘ಜಾನಪದ ದಸರಾ -2026’ ಕಾರ್ಯಕ್ರಮವನ್ನು ದಿನಾಂಕ 18 ಅಕ್ಟೋಬರ್ 2026ರಂದು ಬೆಳಗ್ಗೆ 9-00 ಗಂಟೆಗೆ ಮಡಿಕೇರಿ ಗಾಂಧಿ ಮೈದಾನ ಕಲಾ ಸಂಭ್ರಮ ವೇದಿಕೆಯಲ್ಲಿ ಆಯೋಜಿಸಲಾಗಿದೆ.
ಕೊಡಗು ಜಾನಪದ ಪರಿಷತ್ ಅಧ್ಯಕ್ಷರಾದ ಬಿ.ಜಿ. ಅನಂತಶಯನ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಶಾಸಕರಾದ ಡಾ. ಮಂತರ್ ಗೌಡ ಇವರು ಉದ್ಘಾಟನೆ ಮಾಡಲಿದ್ದಾರೆ. ಕೊಡಗು ಜಿಲ್ಲೆ ಜಿಲ್ಲಾಧಿಕಾರಿ ಎಸ್.ಜಿ. ಸೋಮಶೇಖರ್ ಇವರು ಜಾನಪದ ವಸ್ತು ಪ್ರದರ್ಶನ ಉದ್ಘಾಟನೆ ಮಾಡಲಿದ್ದಾರೆ. ಡೊಳ್ಳುಕುಣಿತ, ಪೂಜಾ ಕುಣಿತ, ವೀರಗಾಸೆ, ಕರಡಿ ಮಜಲು, ರಂಗ ಕುಣಿತ, ಕೊಡವ ಜಾನಪದ, ಅರೆಭಾಷೆ ಸ್ವರಮಾಲೆ, ಜಾನಪದ ಜಾಗೃತಿ ನಾಟಕ, ಜಾನಪದ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ.

