ಮಂಗಳೂರು : ಮಂಗಳೂರಿನ ಕಲಾಸೂರ್ಯ ನೃತ್ಯಾಲಯ ಪ್ರಸ್ತುತ ಪಡಿಸುವ ನೃತ್ಯ ಸರಣಿ ‘ಕಲಾಭವ -15’ ಭರತನಾಟ್ಯ ಕಾರ್ಯಕ್ರಮವನ್ನು ದಿನಾಂಕ 15 ನವೆಂಬರ್ 2026ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ಜೈಲ್ ರೋಡ್, ಮೊದಲನೇ ಮಹಡಿ ಸುಬ್ರಹ್ಮಣ್ಯ ಸದನದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಂಗಳೂರಿನ ಸುಬ್ರಹ್ಮಣ್ಯ ಸಭಾದ ಕಾರ್ಯದರ್ಶಿ ಪಿ. ಉದಯಕುಮಾರ್ ರಾವ್ ಇವರು ಅಭ್ಯಾಗತರಾಗಿ ಭಾಗವಹಿಸಲಿದ್ದು, ವಿದ್ವಾನ್ ಬಿ. ದೀಪಕ್ ಕುಮಾರ್ ಇವರ ಶಿಷ್ಯೆಯರಾದ ವಿದುಷಿ ಅಪೂರ್ವ ಗೌರಿ, ವಿದುಷಿ ಅಕ್ಷತಾ, ವಿದುಷಿ ವಿಭಾಶ್ರೀ ಮತ್ತು ವಿದುಷಿ ಪ್ರಣಮ್ಯ ಪಾಲೆಚ್ಚಾರ್ ಇವರುಗಳು ನೃತ್ಯ ಪ್ರಸ್ತುತಿ ನೀಡಲಿದ್ದಾರೆ.

