ಶಿವಮೊಗ್ಗ : ರಾಗ ರಂಜನಿ ಟ್ರಸ್ಟ್ (ರಿ.) ಶಿವಮೊಗ್ಗ ಪ್ರಸ್ತುತ ಪಡಿಸುವ ‘ವಾದ್ಯ ವಿಸ್ಮಯ’ ರಾಗದ ಫ್ಯೂಜ್ಹನ್ನೊಂದಿಗೆ ಗಾನ ರಸಾಯನ ಕಾರ್ಯಕ್ರಮವನ್ನು ದಿನಾಂಕ 14 ನವೆಂಬರ್ 2026ರಂದು ಸಂಜೆ ಗಂಟೆ 5-45ಕ್ಕೆ ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಶ್ರೀ ಪ್ರಹ್ಲಾದ್ ದೀಕ್ಷಿತ್ ಇವರ ಸಾರಥ್ಯದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ವಯೋಲಿನ್ ನಲ್ಲಿ ವಿದ್ವಾನ್ ಹೊಸಳ್ಳಿ ಕೆ. ವೆಂಕಟರಮಣ, ವೀಣೆಯಲ್ಲಿ ವಿದುಷಿ ವಿಜಯಲಕ್ಷ್ಮೀ ರಾಘು, ತಬಲದಲ್ಲಿ ರಾಘವೇಂದ್ರ ಪ್ರಭು, ಬೇಸ್ ಗಿಟಾರ್ ನಲ್ಲಿ ಫ್ರಾನ್ಸಿಸ್, ಕೀಬೋರ್ಡ್ ನಲ್ಲಿ ಜಾನ್ ವಿನಯ್, ಡೋಲಕ್ ನಲ್ಲಿ ಅವೀನ್ ತೇಲ್ಕರ್, ಹೊನ್ನೇಶ್ ಕುಮಾರ ಆರ್. ಇವರು ರಿದಂಪ್ಯಾಡ್ ನಲ್ಲಿ, ಶ್ರೇಯಸ್ ಬಿ.ಆರ್. ಇವರು ಮೃದಂಗದಲ್ಲಿ, ಶ್ರೀ ವತ್ಸ ಕೆ.ಎಸ್. ಭಾರದ್ವಾಜ್ ಕೊಳಲು, ಅನೋಕ್ ಇವರು ಗಿಟಾರ್ ಮತ್ತು ಕೆಲ್ವಿನ್ ಸತ್ಯಕುಮಾರ್ ಡ್ರಮ್ಸ್ ನಲ್ಲಿ ಸಹಕರಿಸಲಿದ್ದಾರೆ.

