ಬೆಂಗಳೂರು : ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಆಯೋಜಿಸುವ 18ನೇ ವರ್ಷದ ‘ಕನ್ನಡ ಕಾವ್ಯ ಸಂಸ್ಕೃತಿ’ ಕಮ್ಮಟವು ದಿನಾಂಕ 29-06- 2024 ಹಾಗೂ 30-06-2024 ರಂದು ನಡೆಯಲಿದೆ.
ಎರಡು ದಿನಗಳ ಕಾಲ ಬೆಳಿಗ್ಗೆ ಘಂಟೆ 10.00ರಿಂದ ಸಂಜೆ ಘಂಟೆ 5:00ರವರೆಗೆ ಬೆಂಗಳೂರಿನ ವಿದ್ಯಾಪೀಠ ಸರ್ಕಲ್ ಮತ್ತು ಶ್ರೀನಿವಾಸನಗರದ ಸಮೀಪದಲ್ಲಿರುವ ವಿನಾಯಕ ವಿದ್ಯಾಸಂಸ್ಥೆಯ ಕೃಷ್ಣ ಅಯ್ಯರ್ ಪಿಯು ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ಈ ಕಮ್ಮಟದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಅಭಿಮಾನ ಹಾಗೂ ಆಸಕ್ತಿಯುಳ್ಳ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ವಲಯದ ಯುವ ಬರಹಗಾರರು ಭಾಗವಹಿಸಬಹುದು.
ಓದು, ಗ್ರಹಿಕೆ, ಬರಹದ ಹಿನ್ನೆಲೆಯಲ್ಲಿ ಆಯೋಜಿಸುವ ಈ ಕಾವ್ಯ ಸಂಸ್ಕೃತಿ ಕಮ್ಮಟದಲ್ಲಿ ಹಿರಿಯ ಸಾಹಿತಿಗಳು, ಸಂಸ್ಕೃತಿ ಚಿಂತಕರಿಂದ ಉಪನ್ಯಾಸ, ಸಂವಾದದ ಮೂಲಕ ಕನ್ನಡದ ಅನೇಕ ವಿಷಯ ವಿಚಾರಗಳ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸಲಾಗುವುದು.
ಆಸಕ್ತರು ಕಾರ್ಯಕ್ರಮ ಸಂಚಾಲಕರಾದ ಡಾ. ರಾಮಲಿಂಗೇಶ್ವರ (ಸಿಸಿರಾ).ಮೊ : 9448880985 ಹಾಗೂ ಶ್ರೀಮತಿ ಸುಮನಚಿನ್ಮಯಿ. ಮೊ : 9916079686 ಇವರನ್ನು ಸಂಪರ್ಕಿಸಬಹುದು. ಹೆಸರು ನೋಂದಾಯಿಸಲು ಕೊನೆಯ ದಿನಾಂಕ 16-06-2024 ಎಂದು ಸಂಸ್ಥೆಯ ಕಾರ್ಯದರ್ಶಿ ಸಿ. ಹೇಮಾವತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.