ಬೆಂಗಳೂರು : ಗಂಧದ ಗುಡಿ ಕನ್ನಡ ಸಂಘ ಬೆಂಗಳೂರು ಮತ್ತು ಚೇತನ ಪ್ರತಿಷ್ಠಾನ ಧಾರವಾಡ ಇದರ ವತಿಯಿಂದ ನವಕರ್ನಾಟಕ ರಾಜ್ಯ ಸರಕಾರಿ ನೌಕರರ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು (ರಿ.) ಬೆಂಗಳೂರು ಇವರ ಸಹಯೋಗದೊಂದಿಗೆ ನೆಲಮಂಗಲ ಬೆಂಗಳೂರು ಗ್ರಾಮಾಂತರ ‘ಕನ್ನಡ ನುಡಿ ಸಮ್ಮೇಳನ’ವನ್ನು ದಿನಾಂಕ 12 ಜುಲೈ 2026ರಂದು ಬೆಳಿಗ್ಗೆ 10-00 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ.
ಕಾವ್ಯ ವಾಚನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ಕನ್ನಡ ನಾಡು ನುಡಿ, ಶಿಕ್ಷಣ, ಸಾಹಿತ್ಯ, ರಂಗ ಭೂಮಿ, ಸಿನಿಮಾ, ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರಿಗೆ ರಾಷ್ಟ್ರೀಯ ಗೌರವ, ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಹಿರಿಯ ಸಾಹಿತಿ ಡಾ. ಭೇರ್ಯ ರಾಮ್ ಕುಮಾರ್ ಇವರು ಈ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದು, ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಕೆ. ನಾಗರಾಜು ಇವರು ಉದ್ಘಾಟನೆ ಮಾಡಲಿದ್ದಾರೆ. ಲೇಖಕಿ ಶ್ರೀಮತಿ ಸುಮ ಬೆಳಗೆರೆ ಇವರ ಅಧ್ಯಕ್ಷತೆಯಲ್ಲಿ ಮುಕ್ತ ಕವಿಗೋಷ್ಠಿ ನಡೆಯಲಿದೆ.

