ಕಾಸರಗೋಡು : ವಾಚನಾ ಮಾಸಾಚರಣೆಯ ಅಂಗವಾಗಿ ಕಾಸರಗೋಡು ಜಿಲ್ಲಾ ಮಾಹಿತಿ ಕಚೇರಿಯ ಆಶ್ರಯದಲ್ಲಿ ಕಲೆಕ್ಟರೇಟ್‌ನ ಅಕ್ಷರ ಗ್ರಂಥಾಲಯದ ಸಹಯೋಗದೊಂದಿಗೆ ಜಿಲ್ಲೆಯ ಸರಕಾರಿ ನೌಕರರಿಗಾಗಿ ಕವನ ವಾಚನಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಈ ಸ್ಪರ್ಧೆಯು ದಿನಾಂಕ 15 ಜುಲೈ 2026ರಂದು ಮಧ್ಯಾಹ್ನ ಗಂಟೆ 1-15ಕ್ಕೆ ಕಾಸರಗೋಡು ಸಿವಿಲ್ ಸ್ಟೇಷನ್ ನ ಜಿಲ್ಲಾ ಮಾಹಿತಿ ಕಚೇರಿಯ ಪಿ.ಆರ್ಿ. ಚೇಂಬರ್‌ನಲ್ಲಿ ನಡೆಯಲಿದೆ. ಆಸಕ್ತ ಸರಕಾರಿ ನೌಕರರು ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 04994 255145 ಕರೆ ಮಾಡಬಹುದು.
