ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ಕಲಾಸಂಗಮ ಕ್ರಿಯೇಷನ್ಸ್ ಟ್ರಸ್ಟ್ (ರಿ.) ಆಯೋಜಿಸುವ ‘ಕರ್ಣಾಂತರಂಗ’ ಏಕವ್ಯಕ್ತಿ ಪ್ರಸ್ತುತಿಯನ್ನು ದಿನಾಂಕ 02 ಆಗಸ್ಟ್ 2026ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣ ನಯನ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಶಶಿಕಾಂತ ಯಡಹಳ್ಳಿ ರಚಿಸಿರುವ ನಾಟಕವನ್ನು ಈಶ್ವರ್ ದಲ ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದು, ಕಿಶೋರ್ ದಲ ಈ. ಇವರು ಅಭಿನಯಿಸಲಿದ್ದಾರೆ. ಕಲಾಸಂಗಮ ಕ್ರಿಯೇಷನ್ಸ್ ಟ್ರಸ್ಟ್ ಇದರ ಸಂಚಾಲಕರಾದ ಟಿ. ವೆಂಕಟೇಶ್ ಇವರು ಅಧ್ಯಕ್ಷತೆ ವಹಿಸಲಿದ್ದು, ವ್ಯವಸ್ಥಾಪಕ ನಿರ್ದೇಶನರಾದ ಡಾ. ಶಿವಶಂಕರ ಎನ್. ಇವರು ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಸಂಗೀತ ನಿರ್ದೇಶಕರಾದ ಸಂಗೀತ್ ಶ್ರೀನಿವಾಸ್ ಇವರನ್ನು ಸನ್ಮಾನಿಸಲಾಗುವುದು. ಮಧ್ಯಾಹ್ನ 2-30 ರಿಂದ ರಂಗ ಗೀತೆ, ಜಾನಪದ ಗೀತೆ, ಭಾವ ಗೀತೆ ಮತ್ತು ಸಂಗೀತ ಕಾರ್ಯಕ್ರಮ ನಡೆಯಲಿದೆ.

