ಬೆಂಗಳೂರು : ಸಂಸ ಥಿಯೇಟರ್ ಬೆಂಗಳೂರು ಇವರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರ ಸಹಕಾರದೊಂದಿಗೆ ‘ಸಂಸ ನಾಟಕೋತ್ಸವ’ವನ್ನು ದಿನಾಂಕ 3, 4 ಮತ್ತು 5 ಆಗಸ್ಟ್ 2026ರಂದು ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಆಯೋಜಿಸಲಾಗಿದೆ.
ದಿನಾಂಕ 03 ಆಗಸ್ಟ್ 2026ರಂದು ಸಂಜೆ 6-30 ಗಂಟೆಗೆ ಕಥೆಗಾರರಾದ ಡಾ. ಕೂಡ್ಲೂರು ವೆಂಕಟಪ್ಪ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ದೀಪಕ್ ಮೈಸೂರು ಇವರ ಸಾರಥ್ಯದಲ್ಲಿ ಸಂಚಲನ ಮೈಸೂರು ತಂಡ ‘ಭವ ಎನಗೆ ಹಿಂಗಿತು’ ನಾಟಕ ಸಿದ್ದೇಶ್ ಎಂ.ಆರ್. ಇವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.
ದಿನಾಂಕ 04 ಆಗಸ್ಟ್ 2026ರಂದು ಸಂಜೆ 6-00 ಗಂಟೆಗೆ ಸಭಾ ಕಾರ್ಯಕ್ರಮ, 6-30 ಗಂಟೆಗೆ ಸಂಸ ರಂಗಶಿಕ್ಷಣ ಕೇಂದ್ರ ಅಭಿನಯಿಸುವ ಮೂಕ ನಾಟಕ ‘ಫಿನಿಕ್ಸ್’ ಮತ್ತು 7-30 ಗಂಟೆಗೆ ರಂಗ ಸಂಗಮ ಸಾಂಸ್ಕೃತಿಕ ಸೇವಾ ಸಂಘ ರಿ. ರಾಯಚೂರು ಇವರು ಅಭಿನಯಿಸುವ ಐತಿಹಾಸಿಕ ನಾಟಕ ‘ಸಿಂಧೂರ ಲಕ್ಷ್ಮಣ’ ಪ್ರದರ್ಶನಗೊಳ್ಳಲಿದೆ.
ದಿನಾಂಕ 05 ಆಗಸ್ಟ್ 2026ರಂದು ಸಂಜೆ 6-45 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಾಂಸ್ಕೃತಿಕ ಕಲಾ ಕುಟೀರ ತಂಡ ಸಿದ್ಧರಾಮ ಕೊಪ್ಪಲ್ ಇವರ ನಿರ್ದೇಶನದಲ್ಲಿ ‘ಖಾಕಿಯೊಳಗಿನ ಸಂತ’ ನಾಟಕ ಪ್ರದರ್ಶನ ನಡೆಯಲಿದೆ.

