ಕೋಟ: ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಹಾಗೂ ಕುಂದಗನ್ನಡದ ಆಶುಕವಿಯಾದ ಸಾಲಿಗ್ರಾಮ ಕಾರ್ತಟ್ಟು ನಿವಾಸಿ ಕಮಲಾ ನಾಯರಿ ಅಸೌಖ್ಯದಿಂದ ದಿನಾಂಕ 24-05-2024ನೇ ಶುಕ್ರವಾರ ನಿಧನ ಹೊಂದಿದರು. ಅವರಿಗೆ 94ವರ್ಷ ವಯಸ್ಸಾಗಿತ್ತು. ಮೃತರು ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ನೂರಾರು ಕುಂದಗನ್ನಡದ ಜಾನಪದ ಕಥೆಗಳು ಹಾಗೂ ಹಾಡುಗಳನ್ನು ಅಕ್ಷರ ಜ್ಞಾನ ಇಲ್ಲದ ಇವರು ಆಡುಮಾತಿನಲ್ಲಿ ಕಂಠಪಾಠದ ಮೂಲಕ ಕಟ್ಟಿಕೊಟ್ಟಿದ್ದರು. ಇವರ 130 ಕುಂದಗನ್ನಡದ ಕಥೆಗಳಿಗೆ ಬರಹರೂಪವನ್ನು ನೀಡಿ ಪುಸ್ತಕ ರೂಪದಲ್ಲಿ ಹೊರತರುವ ಕಾರ್ಯವನ್ನು ಹಿರಿಯ ಸಂಶೋಧಕಿ ಡಾ. ಗಾಯತ್ರಿ ನಾವಡ ಅವರು ಮಾಡಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿತ್ತು. ಸಾಹಿತ್ಯ ಕ್ಷೇತ್ರದಲ್ಲಿ ಇವರು ಮಾಡಿದ ಸಾಧನೆಯನ್ನು ಗುರುತಿಸಿ ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ, ಉಡುಪಿ ಜಿಲ್ಲಾ ಕ. ಸಾ. ಪ. ಪುರಸ್ಕಾರ, ಗಿಳಿಯಾರು ಜನಸೇವಾ ಟ್ರಸ್ಟ್‌ನ ಕುಂದಾಪ್ರ ಕನ್ನಡ ದಿನಾಚರಣೆ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿದೆ.
Subscribe to Updates
Get the latest creative news from FooBar about art, design and business.
ಆಡುಮಾತಿನ ಕುಂದಗನ್ನಡದ ಜಾನಪದ ಕಥೆ ಹಾಗೂ ಹಾಡುಗಾರ್ತಿ ಕಾರ್ತಟ್ಟು ನಿವಾಸಿ ಕಮಲಾ ನಾಯರಿ ನಿಧನ
No Comments1 Min Read