ಮೂಲ್ಕಿ : ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ಹೋಬಳಿ ಹಾಗೂ ಚುಟುಕು ಸಾಹಿತ್ಯ ಪರಿಷತ್ ಮೂಲ್ಕಿ ತಾಲೂಕು ಇದರ ಜಂಟಿ ಆಶ್ರಯದಲ್ಲಿ ಹನಿಗವನ ಸಾಮ್ರಾಟ ಎಚ್. ಡುಂಡಿರಾಜ್ ಅವರೊಂದಿಗೆ ಮಾತು ಕತೆ ಕಾರ್ಯಕ್ರಮವನ್ನು ದಿನಾಂಕ 25 ಅಕ್ಟೋಬರ್ 2026ರಂದು ಸಂಜೆ 4-00 ಗಂಟೆಗೆ ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯ ಆವರಣದಲ್ಲಿರುವ ಪಂಚಾಯಿತ್ ಕಟ್ಟೆಯಲ್ಲಿ ಆಯೋಜಿಸಲಾಗಿದೆ.
ಡಾ. ಸುಧಾರಾಣಿ ಮಾತುಕತೆ ನಡೆಸಲಿದ್ದಾರೆ. ಇದೇ ಸಂದರ್ಭ ಆಯೋಜಿಸಿರುವ ಚುಟುಕು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಫಲಿತಾಂಶ : ಚುಟುಕು/ಹನಿಗವನ ಸ್ಪರ್ಧೆ ವಿಜೇತರು : ನರಸಿಂಹ ಭಟ್ ಏತಡ್ಕ (ಪ್ರ), ಸಹನಾ ಕಾಂತಬೈಲ್ (ದ್ವಿ), – ಸುರೇಶ್ ನಾಯ್ಸ್, ಉಡುಪಿ (ತೃ). ಮೆಚ್ಚುಗೆ ಪಡೆದವರು : ಡಾ. ಸುರೇಶ್ ನೆಗಳಗುಳಿ, ವಿಶ್ಲೇಶ್ ಕೆ. ಭಿಡೆ, ಲಕ್ಷ್ಮಿ ಪೆರ್ಮುದೆ, ವಿಶ್ವನಾಥ್ ಕುಲಾಲ್ ಮಿತ್ತೂರು, ಅಖಿಲಾ ರಾಜ್, ಚಂದ್ರಿಕಾ ಶೆಣೈ ಮುಳ್ಳೇರಿಯ, ಎಂ.ಎಸ್. ವೆಂಕಟೇಶ ಗಟ್ಟಿ, ರೇಖಾ ಕೆಂಚಿನಕೆರೆ, ಎಡ್ವರ್ಡ್ ಲೋಬೊ, ಗುಲಾಬಿ ಸುರತ್ಕಲ್. ವಿದ್ಯಾರ್ಥಿ ವಿಭಾಗ : ದೀಕ್ಷಾ ಸರ್ಕಾರಿ ಪದವಿಪೂರ್ವ ಕಾಲೇಜು ಮೂಲ್ಕಿ (ಪ್ರ), ಪಲ್ಲವಿ ಸರ್ಕಾರಿ ಪದವಿಪೂರ್ವ ಕಾಲೇಜು ಮೂಲ್ಕಿ (ದ್ವಿ), ಸಾನ್ವಿ, ಪಾಂಪೈ ಕಾಲೇಜು ಐಕಳ (ತೃ). ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷರಾದ ಉದಯಕುಮಾರ ಹಬ್ಬು, ಜೊಸ್ತಿ ಪಿಂಟೊ ತಿಳಿಸಿದ್ದಾರೆ.

