ಮಂಗಳೂರು : ಭರತಾಂಜಲಿ (ರಿ.) ಕೊಟ್ಟಾರ ಇವರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ‘ಜಲ ತರಂಗ’ ಜುಗಲಬಂಧಿ ಮತ್ತು ನೃತ್ಯ ಪ್ರದರ್ಶನವನ್ನು ದಿನಾಂಕ 25 ಅಕ್ಟೋಬರ್ 2026ರಂದು ಸಂಜೆ 4-30 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದೆ.
ಕರ್ನಾಟಕ ಕಲಾಶ್ರೀ ವಿದುಷಿ ಶಶಿಕಲಾ ದಾನಿ ಹುಬ್ಬಳ್ಳಿ ಮತ್ತು ಡಾ. ಸುಜ್ಞಾನ ದಾನಿ ಬೆಂಗಳೂರು ಇವರಿಂದ ‘ಜಲ ತರಂಗ’ ಜುಗಲಬಂಧಿ, ಭರತಾಂಜಲಿಯ ಹಿರಿಯ ವಿದ್ಯಾರ್ಥಿಗಳಿಂದ ಥಿಮ್ಯಾಟಿಕ್ ಜಲಾಂಜಲಿ ಹಾಗೂ ಭರತಾಂಜಲಿಯ ವಿದ್ಯಾರ್ಥಿಗಳಿಂದ ‘ನೃತ್ಯಾಮೃತಂ 2026’ ನೃತ್ಯ ಪ್ರಸ್ತುತಿ ನಡೆಯಲಿದೆ.

